ಹುಬ್ಬಳ್ಳಿ: ಮಹಜರು ಮಾಡುವ ವೇಳೆ ರೌಡಿ ಹಲ್ಲೆ, ಕೂದಲೆಳೆಯ ಅಂತರದಲ್ಲಿ ಪಾರಾದ ಸಬ್ಇನ್ಸಪೆಕ್ಟರ್‌

By Girish Goudar  |  First Published Nov 26, 2023, 9:08 AM IST

ರೌಡಿ ಸತೀಶ್ ಗುನ್ನಾ ಎಂಬಾತನೇ PSI ವಿನೋದ ದೊಡ್ಡಲಿಂಗಪ್ಪನವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ನಟೋರಿಯಸ್ ಸತೀಶ್ ಗುನ್ನಾ ಕಲ್ಲಿನಿಂದ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯ PSI ದೊಡ್ಡಲಿಂಗಪ್ಪನವರ ಅವರು ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 


ಹುಬ್ಬಳ್ಳಿ(ನ.26):  ಮಹಜರು ಮಾಡುವ ವೇಳೆ ರೌಡಿಶೀಟರ್‌ವೊಬ್ಬ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಕಾಲಿಗೆ ಗುಂಡೇಟು ತಿಂದ ಘಟನೆ ನಗರದಲ್ಲಿ ನಿನ್ನೆ(ಶನಿವಾರ) ನಡೆದಿದೆ. ಈ ವೇಳೆ ಪೊಲೀಸರು ನಡೆಸಿದ ಫೈರಿಂಗ್‌ನಲ್ಲಿ ಸಬ್ಇನ್ಸಪೆಕ್ಟರ್‌ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ರೌಡಿ ಸತೀಶ್ ಗುನ್ನಾ ಎಂಬಾತನೇ PSI ವಿನೋದ ದೊಡ್ಡಲಿಂಗಪ್ಪನವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ನಟೋರಿಯಸ್ ಸತೀಶ್ ಗುನ್ನಾ ಕಲ್ಲಿನಿಂದ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯ PSI ದೊಡ್ಡಲಿಂಗಪ್ಪನವರ ಅವರು ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Tap to resize

Latest Videos

ಬೆಂಗಳೂರು: ಟೈರ್‌ ಪಂಕ್ಚರ್‌ ಮಾಡಿ 25 ಲಕ್ಷದ ಚಿನ್ನ ಎಗರಿಸಿದ ಖದೀಮನ ಬಂಧನ

ಏನಿದು ಪ್ರಕರಣ?: 

ನಿನ್ನೆ(ಶನಿವಾರ) ಸಂಜೆ ನಟೋರಿಯಸ್ ರೌಡಿ ಸತೀಶ್ ಗುನ್ನಾನನ್ನ ಸಿನಿಮೀಯ ರೀತಿಯಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದರು. ಕೋರ್ಟ್ ವಾರೆಂಟ್ ಹಿನ್ನೆಲೆಯಲ್ಲಿ ರೌಡಿ ಸತೀಶ್ ಗುನ್ನಾ ಬಂಧಿಸಲು ಪೊಲೀಸರು ತೆರಳಿದ್ದರು. ರೌಡಿ ಸತೀಶ್ ಗುನ್ನಾ ಸ್ಟೇಷನ್ ರಸ್ತೆಯಲ್ಲಿ ಗೇಟವೇ ಬಾರ್‌ನಲ್ಲಿ‌ ಕೂತಿದ್ದ, ಪೊಲೀಸರು ಬಂಧಿಸಲು ತೆರಳುತ್ತಿದ್ದಂತೆ ಸತೀಶ್ ಗುನ್ನಾ ತಲ್ವಾರ್ ಹಿಡಿದು ಪೊಲೀಸರ ಮೇಲೆ‌ ದಾಳಿ ಮಾಡಿದ್ದನು. ಸಿನಿಮಾ ರೀತಿಯಲ್ಲಿ ರೌಡಿ ಸತೀಶ್ ಗುನ್ನಾನನ್ನ ಪೊಲೀಸರು ಬಂಧಿಸಿದ್ದರು. ರೌಡಿ ಸತೀಶ್ ಗುನ್ನಾನನ್ನ ಅರೆಸ್ಟ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಸಂಜೆ ಹುಬ್ಬಳ್ಳಿಯ ಸ್ಟೇಷನ್ ರಸ್ತೆಯ ಗೇಟ್ ವೇ ಬಾರ್‌ನಲ್ಲಿ ರೌಡಿ ಸತೀಶ್ ಗುನ್ನಾನನ್ನ ಪೊಲೀಸರು ಬಂಧಿಸಿದ್ದರು. ಬಂಧನದ ಬಳಿಕ ರಾತ್ರಿ‌ ಪೊಲೀಸರು ಮಹಜರುಗೆ ತೆರಳಿದ್ದರು. ಆ ವೇಳೆ ಪೊಲೀಸರ‌ ಮೇಲೆ ಪ್ರತಿರೋಧ ತೋರಿ ಸಬ್ ಇನ್ಸಪೆಕ್ಟರ್ ವಿನೋದ‌ ಮೇಲೆ‌ ಕಲ್ಲಿನಿಂದ ಹಲ್ಲೆ ಮಾಡಿದ್ದನು. ಇದರಿಂದಾಗಿ ಸತೀಶ್ ಗುನ್ನಾ ಮೇಲೆ ಸಬ್ ಇನ್ಸಪೆಕ್ಟರ್ ರಫೀಕ್ ತಹಶಿಲ್ದಾರ್‌ ಫೈರಿಂಗ್‌ ಮಾಡಿದ್ದರು.

ರೌಡಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಕಮಿಷನರ್‌ 

ಹುಬ್ಬಳ್ಳಿ-ಧಾರವಾಡ ಕಮಿಷನರ್‌ರಿಂದ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಳೆದ ಹದಿನೈದು ದಿನಗಳಿಂದ ಅವಳಿ ನಗರದಲ್ಲಿ ಪೋಲೀರು ಖಡಕ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಕಮಿಷನರ್ ರೇಣುಕಾ ಸುಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. 

ಕುಡಿದ ನಶೆಯಲ್ಲಿ ಕುಡುಕರಿಬ್ಬರ ಗಲಾಟೆ; ಕೊಲೆಯಲ್ಲಿ ಅಂತ್ಯ!

ಆರೋಪಿ ಮೇಲೆ ಐದು ಪ್ರಕರಣಗಳಿವೆ. ಸತೀಶ್ ಗುನ್ನಾ ನಟೋರಿಯಸ್ ರೌಡಿ ಶೀಟರ್‌ನಾಗಿದ್ದಾನೆ. ಆರೋಪಿ ಬಂಧನಕ್ಕೆ ಕೋರ್ಟ್ ವಾರೆಂಟ್ ಇತ್ತು. ಎರಡು ವರ್ಷಗಳಿಂದ ಆರೋಪಿ ಸತೀಶ್ ಗುನ್ನಾ ತಲೆ ಮರೆಸಿಕೊಂಡಿದ್ದನು. ಪುಡಿ ರೌಡಿ, ನಟೋರಿಯಸ್ ರೌಡಿಗಳ ಮೇಲೆ ಬಿಗಿ ಹಿಡಿತ ಇಟ್ಟಿದ್ದೇವೆ. ವಾರೆಂಟ್ ಕಾರ್ಯಗತ ಮಾಡಲು ಪೊಲೀಸರು ಹೋಗಿದ್ದರು. ಆ ಸಂದರ್ಭದಲ್ಲಿ ರೌಡಿ ಸತೀಶ್ ಗುನ್ನಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ್ದನು. ಇಲ್ಲಿ ಸಿಕ್ಕ ತಲ್ವಾರ್ ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. 

ರಾತ್ರಿ 9 ಗಂಟೆ ಸುಮಾರಿಗೆ ಸ್ಥಳ ಮಹಜರು ಮಾಡೋಕೆ ಪೊಲೀಸರು ತೆರಳಿದ್ದರು. ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ನೇತೃತ್ವದಲ್ಲಿ ತಂಡ ತೆರಳಿತ್ತು. ಪಿಎಸ್ಐ ವಿನೋದ ಮೇಲೆ ಸತೀಶ್ ಗುನ್ನಾ ಕಲ್ಲಿನಿಂದ  ದಾಳಿ ಮಾಡಿದ್ದನು. ಹೀಗಾಗಿ ಇನ್ಸಪೆಕ್ಟರ್ ರಫೀಕ್ ತಹಶೀಲ್ದಾರ್ ಮೂರು ಸುತ್ತು ಗುಂಡು ಹಾರಿಸಿದ್ದರು. ಗಾಳಿಯಲ್ಲಿ ಎರಡು ಹಾರಿಸಿ, ಒಂದು ಗುಂಡು ಕಾಲಿಗೆ ಹಾರಿಸಿದ್ದರು. 

click me!