ಹೋಗಿದ್ದು 2 ಲಕ್ಷ ಕದಿಯಲು, ಸಿಕ್ಕಿದ್ದು 2 ಕೋಟಿ: ಹಣ ಸಿಕ್ಕ ಖುಷಿಯಲ್ಲಿ ಅಲ್ಲೇ ಎಣ್ಣೆ ಪಾರ್ಟಿ..!

Published : Apr 08, 2022, 06:59 AM ISTUpdated : Apr 08, 2022, 07:41 AM IST
ಹೋಗಿದ್ದು 2 ಲಕ್ಷ ಕದಿಯಲು, ಸಿಕ್ಕಿದ್ದು 2 ಕೋಟಿ: ಹಣ ಸಿಕ್ಕ ಖುಷಿಯಲ್ಲಿ ಅಲ್ಲೇ ಎಣ್ಣೆ ಪಾರ್ಟಿ..!

ಸಾರಾಂಶ

*   ಖತರ್ನಾಕ್‌ ಕಳ್ಳರ ಬಂಧನ *  ಲಾಯರ್‌ ಫೀಸ್‌ ಭರಿಸಲು ಕಳ್ಳತನ *  ಈ ಬಾಟಲಿ ಮೇಲಿನ ಬೆರಳಿಚ್ಚಿದ್ದ ಲಾಕ್‌  

ಬೆಂಗಳೂರು(ಏ.08):  ವಕೀಲರ ಶುಲ್ಕ ಭರಿಸಲು 2 ಲಕ್ಷಕ್ಕಾಗಿ ವಾಸ್ತು ಶಿಲ್ಪಿಯೊಬ್ಬರ ಮನೆಗೆ ಕನ್ನ ಹಾಕಿದ ಕಳ್ಳರಿಗೆ ಸಿಕ್ಕಿದ್ದು, ಬರೋಬ್ಬರಿ 2 ಕೋಟಿ. ಇದೇ ಖುಷಿಯಲ್ಲೇ ಆ ಮನೆಯಲ್ಲಿದ್ದ ವಿದೇಶಿ ಮದ್ಯ(Foreign Liquor) ಸೇವಿಸಿ ಕುಳಿದು ಕುಪ್ಪಳಿಸಿದ್ದರೂ. ಆದರೆ, ಕೊನೆಗೆ ಆ ಮದ್ಯದ ಬಾಟಲಿನ ಮೇಲೆ ಬೆರಳಚ್ಚುನಿಂದ ಈಗ ಆ ಇಬ್ಬರು ಖದೀಮರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ...!

ಸುಬ್ರಹ್ಮಣ್ಯಪುರದ ಇಟ್ಟಮಡುವಿನ ಸುನೀಲ್‌ ಕುಮಾರ್‌ ಅಲಿಯಾಸ್‌ ತೊರೆ ಹಾಗೂ ಮಾಗಡಿ ರಸ್ತೆಯ ಕೆಬ್ಬೆಹಳ್ಳಿಯ ದಿಲೀಪ್‌ ಬಂಧಿತರು(Arrest). ಆರೋಪಿಗಳಿಂದ(Accused) 1.76 ಕೋಟಿ ನಗದು ಹಾಗೂ .12 ಲಕ್ಷ ಮೌಲ್ಯದ 192 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ(ಪಶ್ಚಿಮ) ಸಂದೀಪ್‌ ಪಾಟೀಲ ತಿಳಿಸಿದ್ದಾರೆ.

Udupi: ಕರಾವಳಿಯಲ್ಲಿ ಮತ್ತೆ ಮುಂದುವರಿದ ಗೋಕಳ್ಳರ ಅಟ್ಟಹಾಸ

ಇತ್ತೀಚಿಗೆ ಕುಮಾರಸ್ವಾಮಿ ಲೇಔಟ್‌ನ ನಿವಾಸಿ ವಾಸ್ತು ಶಿಲ್ಪಿ ಸಂದೀಪ್‌ ಲಾಲ್‌ ಮನೆಯಲ್ಲೇ 2 ಕೋಟಿ ದೋಚಿ(Theft) ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್‌ ಶಿವಕುಮಾರ್‌, ಪಿಎಸ್‌ಐ ನಾಗೇಶ್‌ ನೇತೃತ್ವದ ತಂಡ, ಘಟನಾ ಸ್ಥಳದಲ್ಲಿ ಸಿಕ್ಕಿದ ಬೆರಳಚ್ಚು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಕಳ್ಳರನ್ನು ಪತ್ತೆ ಹಚ್ಚಿದ್ದಾರೆ.

ಹೊಂಚು ಹಾಕಿ ಕೃತ್ಯ:

ಕೊರೋನಾ(Coronavirus) ಹಿನ್ನೆಲೆಯಲ್ಲಿ ಸಂದೀಪ್‌ ಪೋಷಕರು ಪುತ್ರನಿಂದ ಪ್ರತ್ಯೇಕವಾಗಿ ಇಸ್ರೋ ಲೇಔಟ್‌ನಲ್ಲಿ ನೆಲೆಸಿದ್ದರು. ಕೆಲಸದ ನಿಮಿತ್ತ ಮಾ.27ರಂದು ಸಂದೀಪ್‌ ಚೆನ್ನೈಗೆ(Chennai) ತೆರಳಿದ್ದರು. ಪುತ್ರ ಹೊರ ಹೋಗಿದ್ದ ಕಾರಣ ತಂದೆ ಮೋಹನ್‌ ಲಾಲ್‌ ಆತನ ಮನೆಗೆ ಬೆಳಗ್ಗೆ ಬಂದು ಸಂಜೆ ವರೆಗೆ ಇದ್ದು ತಮ್ಮ ಮನೆಗೆ ಮರಳುತ್ತಿದ್ದರು. ಅಂತೆಯೇ ಮಾ.28ರಂದು ಸಹ ಮೋಹನ್‌, ಮಗನ ಮನೆಗೆ ಬಂದು ಹೋದ ನಂತರ ಅವರ ಮನೆಗೆ ಸುನೀಲ್‌, ದಿಲೀಪ್‌ ಕನ್ನ ಹಾಕಿದ್ದರು ಎಂದು ಪೊಲೀಸರು(Police) ಹೇಳಿದ್ದಾರೆ.

ಮಂಡ್ಯದ ಸುನೀಲ್‌ ವೃತ್ತಿಪರ ಮನೆಗಳನಾಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ 7 ಪ್ರಕರಣಗಳು ದಾಖಲಾಗಿವೆ. ಗಾಂಜಾ ಮಾರಾಟ ಪ್ರಕರಣದಲ್ಲಿ ದಿಲೀಪ್‌ ಜೈಲು(Jail) ಸೇರಿದ್ದ. ಆಗ ಆತನಿಗೆ ಸುನೀಲ್‌ ಪರಿಚಯವಾಗಿದ್ದು, ಈ ಗೆಳೆತನದಲ್ಲೇ ಜೈಲಿನಿಂದ ಹೊರಬಂದ ಬಳಿಕ ಮನೆಗಳ್ಳತನಕ್ಕಿಳಿದಿದ್ದರು. ಜಾಮೀನು ಪಡೆದು ಹೊರ ಬಂದ ಆರೋಪಿಗಳು, ತಮ್ಮ ವಕೀಲರಿಗೆ ಶುಲ್ಕ ಭರಿಸಲು ಸಾಲ ಮಾಡಿದ್ದರು. ಆದರೆ, ಸಾಲ ತೀರಿಸಲು ಸಂಕಷ್ಟಕ್ಕೆ ತುತ್ತಾದ ಅವರು, ಕೊನೆಗೆ ಮನೆಗಳ್ಳತನಕ್ಕೆ ಯೋಜಿಸಿದ್ದರು.

Uttara Kannada: ಕುಡುಕರನ್ನು ಹಿಡಿಯಲು ಹೋದ ಪೊಲೀಸರಿಗೆ ಸಿಕ್ತು 17 ಲಕ್ಷ ರೂ..!

ಸಜ್ಜೆ ಮೇಲಿನ ಬ್ಯಾಗಲ್ಲಿ 2 ಕೋಟಿ:

ಆಗ ಕುಮಾರಸ್ವಾಮಿ ಲೇಔಟ್‌ ಸುತ್ತಮುತ್ತ ಸುತ್ತಾಡಿದಾಗ ಸಂದೀಪ್‌ ಮನೆ ಕಣ್ಣಿಗೆ ಬಿದ್ದಿದೆ. ಪ್ರತಿದಿನ ಬೆಳಗ್ಗೆ ಬಂದು ಸಂಜೆ ಲಾಲ್‌ ಹೋಗುವುದನ್ನು ಗಮನಿಸಿದ ಆರೋಪಿಗಳು, ಕೊನೆಗೆ ಆ ಮನೆಗೆ ಕನ್ನ ಹಾಕಲು ಸಂಚು ರೂಪಿಸಿದ್ದರು. ಅಂತೆಯೇ ಮಾ.28ರಂದು ಮನೆ ಬೀಗ ಮುರಿದು ಒಳ ನುಗ್ಗಿದ ಖದೀಮರು, ಮನೆಯೆಲ್ಲ ಜಾಲಾಡಿದ್ದಾರೆ. ಆದರೆ ಚಿಲ್ಲರೆ ಕಾಸು ಹಾಗೂ ವಿದೇಶಿ ಮದ್ಯ ಮಾತ್ರ ಸಿಕ್ಕಿದ್ದರಿಂದ ನಿರಾಸೆಗೊಂಡಿದ್ದಾರೆ. ಇನ್ನೇನು ಮನೆಯಿಂದ ಹೊರಡಬೇಕು ಎನ್ನುವಾಗ ಚೀಲಕ ಹಾಕಿದ್ದ ಕೋಣೆಯೊಂದು ಅವರ ಕಣ್ಣಿಗೆ ಬಿದ್ದಿದೆ. ಆಗ ಕೋಣೆ ಬಾಗಿಲು ತೆರೆದು ಸಜ್ಜೆ ಮೇಲಿದ್ದ ಮೂರು ಬ್ಯಾಗ್‌ಗಳನ್ನು ತೆರೆದಾಗ ಅವರಿಗೆ ಅಚ್ಚರಿಯಾಗಿದೆ. 500 ಮುಖಬೆಲೆಯ ಕಂತೆ ಕಂತೆ ನೋಟುಗಳು ಕಂಡು ಸಂತೋಷಗೊಂಡಿದ್ದಾರೆ. ಆ ಖುಷಿಯಲ್ಲೇ ಮದ್ಯ ಸೇವಿಸಿ ಸಂಭ್ರಮಿಸಿ, ಪರಾರಿಯಾಗಿದ್ದರು. ಕೊನೆಗೆ ಮನೆಗೆ ಬಂದು ಹಣ ಹಂಚಿಕೊಂಡಿದ್ದರು. ಈ ಹಣದಲ್ಲಿ 192 ಗ್ರಾಂ ಚಿನ್ನ(Gold) ಖರೀದಿಸಿದ್ದರು. ಮಹದೇಶ್ವರ ಬೆಟ್ಟಕ್ಕೆ ಹೋಗಿ ದಿಲೀಪ್‌ ವಿಶೇಷ ಪೂಜೆ ಸಲ್ಲಿಸಿದ್ದ.

ಸುಳಿವು ಕೊಟ್ಟ ಬೆರಳಚ್ಚು

ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮದ್ಯದ ಬಾಟಲು ಸೇರಿದಂತೆ ಮನೆಯಲ್ಲಿ ಬೆರಳಚ್ಚು ಮುದ್ರೆ ಸಂಗ್ರಹಿಸಿದರು. ಬಳಿಕ ಆ ಬೆರಳಚ್ಚು ಮಾದರಿಯನ್ನು ಹಳೇ ಕಳ್ಳರ ಬೆರಳಚ್ಚಿಗೆ ಹೋಲಿಸಿದಾಗ ಸುನೀಲ್‌ ಮಾಹಿತಿ ಸಿಕ್ಕಿದೆ. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದಾಗ ಆರೋಪಿಗಳು ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು