Bengaluru Crime: ಕೆಲಸದಾಸೆ ತೋರಿಸಿ ವಿದೇಶಕ್ಕೆ ಸಾಗಿಸುತ್ತಿದ್ದ 17 ಮಹಿಳೆಯರ ರಕ್ಷಣೆ

Published : Apr 08, 2022, 06:13 AM ISTUpdated : Apr 08, 2022, 06:22 AM IST
Bengaluru Crime: ಕೆಲಸದಾಸೆ ತೋರಿಸಿ ವಿದೇಶಕ್ಕೆ ಸಾಗಿಸುತ್ತಿದ್ದ 17 ಮಹಿಳೆಯರ ರಕ್ಷಣೆ

ಸಾರಾಂಶ

*   ಕೆಲಸದಾಸೆ ತೋರಿಸಿ ದುಬೈಗೆ ಯುವತಿಯರ ಸಾಗಾಟ  *   ಡ್ಯಾನ್ಸ್‌ ಬಾರ್‌ಗಳಿಗೆ ಸಾಗಣೆ, ಅನೈತಿಕ ಚಟುವಟಿಕಗಳಿಗೂ ಬಳಕೆ *   ಮಾನವ ಕಳ್ಳಸಾಗಣೆ ಗ್ಯಾಂಗ್‌ ಸೆರೆ  

ಬೆಂಗಳೂರು(ಏ.08):  ವಿದೇಶದಲ್ಲಿ ಉದ್ಯೋಗಾದಾಸೆ ತೋರಿಸಿ ದುಬೈನ ಡ್ಯಾನ್ಸ್‌ ಬಾರ್‌ಗಳಿಗೆ ಯುವತಿಯರನ್ನು(Women) ಸಾಗಿಸುತ್ತಿದ್ದ ಮಾನವ ಕಳ್ಳ ಸಾಗಾಣಿಕೆ ಜಾಲವೊಂದನ್ನು ಭೇದಿಸಿದ ಸಿಸಿಬಿ, ಈ ಸಂಬಂಧ ಈವೆಂಟ್‌ ಮ್ಯಾನೇಜ್‌ಮೆಂಟ್‌ ಆಯೋಜಕ, ಡಿಜೆ ಹಾಗೂ ಆರ್ಟಿಸ್ಟ್‌ ಏಜೆಂಟ್‌ ಸೇರಿದಂತೆ ಏಳು ಮಂದಿಯನ್ನು ಸೆರೆ ಹಿಡಿದಿದ್ದಾರೆ.

ಕೊಪ್ಪಳ(Koppal) ತಾಲೂಕಿನ ಕಂಪಲಿ ಗ್ರಾಮದ ಬಸವರಾಜು ಶಂಕರಪ್ಪ ಕಳಸದ್‌ ಅಲಿಯಾಸ್‌ ಬಸವರಾಜು ಕಳಸದ್‌, ಮೈಸೂರಿನ ನಜರಬಾದ್‌ನ ಆದರ್ಶ ಅಲಿಯಾಸ್‌ ಆದಿ, ತಮಿಳುನಾಡಿನ ಸೇಲಂನ ರಾಜೇಂದ್ರ ನಾಚಿಮುತ್ತು, ಚೆನ್ನೈನ ಮಾರಿಯಪ್ಪನ್‌, ಟಿ.ಅಶೋಕ್‌, ಎಸ್‌.ರಾಜೇವ್‌ ಗಾಂಧಿ ಹಾಗೂ ಜೆ.ಪಿ.ನಗರದ ಆರ್‌.ಚಂದ್ರು ಬಂಧಿತರು. ಆರೋಪಿಗಳಿಂದ ವಿದೇಶಕ್ಕೆ ಕಳುಹಿಸಲು ಸಜ್ಜುಗೊಳಿಸಿದ್ದ 17 ಮಹಿಳೆಯರನ್ನು ರಕ್ಷಿಸಲಾಗಿದೆ. ಅಲ್ಲದೆ 7 ಮೊಬೈಲ್‌ಗಳು ಹಾಗೂ .1.06 ಲಕ್ಷ ಜಪ್ತಿಯಾಗಿದೆ.

Suvarna FIR: ಬೈಕ್ ರೇಸ್ ಹುಚ್ಚು.... ಮಾಜಿ ಕಾರ್ಪೋರೇಟರ್ ಗಂಡನ ಥ್ರಿಲ್ಲಿಂಗ್ ಕಿಡ್ನಾಪ್ ಸ್ಟೋರಿ!

ಕೆಲ ದಿನಗಳ ಹಿಂದೆ ಬಾತ್ಮೀದಾರರ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಸಿಸಿಬಿಯ(CCB) ಮಹಿಳಾ ಸುರಕ್ಷತಾ ದಳದ ಇನ್ಸ್‌ಪೆಕ್ಟರ್‌ ಹಜರೇಶ್‌ ಕಿಲ್ಲೇದಾರ್‌ ನೇತೃತ್ವದ ತಂಡವು, ಮೊಬೈಲ್‌ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಮಾನವ ಕಳ್ಳ ಸಾಗಾಣಿಕೆ ಜಾಲದ ಸದಸ್ಯರನ್ನು ಬಂಧಿಸಿದ್ದಾರೆ(Arrest) ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಮಿಷವೊಡ್ಡಿ ವಂಚನೆ:

ಈ ಏಳು ಮಂದಿ ಆರೋಪಿಗಳು(Accused), ಚಲನಚಿತ್ರಗಳಿಗೆ ಸಹನಟ-ನಟಿಯರು, ನೃತ್ಯಗಾರರನ್ನು ಪೂರೈಸುವ ವ್ಯವಹಾರ ಮತ್ತು ಮನರಂಜನಾ ಕಾರ್ಯಕ್ರಮಗಳ ಆಯೋಜನೆ ದಂಧೆಯಲ್ಲಿ ತೊಡಗಿದ್ದರು. ಆಗ ಬಡತನದ ಹಿನ್ನೆಲೆಯ ಯುವತಿಯರನ್ನು ಪರಿಚಯಿಸಿಕೊಂಡು ಅವರಿಗೆ ವಿದೇಶದಲ್ಲಿ ಕೆಲಸಕ್ಕೆ ಸೇರಿದರೆ ಕೈ ತುಂಬಾ ಸಂಪಾದನೆ ಮಾಡಬಹುದು ಎಂದು ಆಮಿಷವೊಡ್ಡುತ್ತಿದ್ದರು. ತಮ್ಮ ಮಾತಿಗೆ ಒಪ್ಪಿದ ಯುವತಿಯರಿಗೆ ದುಬೈನಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿ ಕಳುಹಿಸುತ್ತಿದ್ದರು. ಬಳಿಕ ದುಬೈನಲ್ಲಿ ಡ್ಯಾನ್ಸ್‌ ಬಾರ್‌ಗಳಲ್ಲಿ(Dance Bar) ಕೆಲಸಗಳಿಗೆ ಮಾತ್ರವಲ್ಲದೆ ಅನೈತಿಕ ಚಟುವಟಿಕೆಗಳಿಗೆ ಆ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

25ರಿಂದ 30 ಸಾವಿರ: 

ದುಬೈ(Dubai) ಡ್ಯಾನ್ಸ್‌ ಬಾರ್‌ಗೆ ಯುವತಿಯರನ್ನು ಸಾಗಾಣಿಕೆಯಲ್ಲಿ ದಂಧೆಕೋರರಿಗೆ ವಿಪರೀತ ಹಣ ಸಿಕ್ಕಿದೆ. ತಲಾ ಯುವತಿಗೆ ಆರೋಪಿಗಳಿಗೆ .25 ರಿಂದ .30 ಸಾವಿರ ಹಣವು ದುಬೈನ ವ್ಯಕ್ತಿಗಳಿಂದ ಸಂದಾಯವಾಗಿದೆ. ಅಲ್ಲದೆ, ಮೊದಲ ಬಾರಿಗೆ ದುಬೈ ತೆರಳುವ ಯುವತಿಯರಿಂದ ಸಹ ಈ ಆರೋಪಿಗಳು ಪಾಸ್‌ ಪೋರ್ಟ್‌ ಖರ್ಚು ವೆಚ್ಚ ಎಂದು ಹೇಳಿ ಮುಂಗಡವಾಗಿ .50 ರಿಂದ .75 ಸಾವಿರ ವರೆಗೆ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru: ಹಣಕ್ಕಾಗಿ ಮಗನಿಗೆ ಬೆಂಕಿ ಇಟ್ಟ ಕ್ರೂರಿ ತಂದೆ: ಚಿಕಿತ್ಸೆ ಫಲಿಸದೆ ಮಗ ಸಾವು

ದುಬೈಗೆ 95 ಮಹಿಳೆಯರ ಸಾಗಾಟ!

ಮೂರು ವರ್ಷಗಳಿಂದ ಈ ಮಾನವ ಕಳ್ಳ ಸಾಗಾಣಿಕೆ ಜಾಲವು ಕಾರ್ಯನಿರ್ವಹಿಸಿದ್ದು, ಇದುವರೆಗೆ ದುಬೈಗೆ 95 ಮಹಿಳೆಯರನ್ನು ಕಳುಹಿಸಿರುವ ಬಗ್ಗೆ ತನಿಖೆಯಲ್ಲಿ ಮಾಹಿತಿ ಸಿಕ್ಕಿದೆ. ವಿದೇಶಕ್ಕೆ ತೆರಳಿರುವ ಮಹಿಳೆಯರ ಪತ್ತೆಗೆ ತನಿಖೆ ಮುಂದುವರೆದಿದೆ. ಈ ಮಾನವ ಕಳ್ಳ ಸಾಗಾಣಿಕೆ ಜಾಲವು ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಪಂಜಾಬ್‌ ರಾಜ್ಯಗಳಲ್ಲಿ ಕೃತ್ಯ ಎಸಗಿದೆ. ಚಲನಚಿತ್ರಗಳ ಸಹ ಕಲಾವಿದರು ಹಾಗೂ ನೃತ್ಯಗಾರ್ತಿಯರನ್ನು ಗುರಿಯಾಗಿಸಿ ಆರೋಪಿಗಳು ಗಾಳ ಹಾಕಿದ್ದಾರೆ. ಇವರಿಗೆ ವಿದೇಶದ ವ್ಯಕ್ತಿಗಳ ಜೊತೆ ನಿರಂತರ ಸಂಪರ್ಕವಿತ್ತು ಎಂದು ಪೊಲೀಸರು(Police) ಹೇಳಿದ್ದಾರೆ.

2 ಕೋಟಿ ಕಳ್ಳತನ ಮಾಡಿದ್ದ ಖದೀಮರ ಬಂಧನ: ಬಚ್ಚಿಟ್ಟಿದ್ದ ಹಣ ಪೊಲೀಸ್ ವಶಕ್ಕೆ

ಬೆಂಗಳೂರು: ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ಅಪರೂಪದ ಕಳ್ಳತನವೊಂದು (Robbery) ನಡೆದಿದೆ. 2 ಲಕ್ಷ ಕದಿಯಲು ಹೋದವರಿಗೆ ಸಿಕ್ಕಿದ್ದು, ಮೂಟೆಯಲ್ಲಿದ್ದ 2 ಕೋಟಿ ಹಣ. ಆದರೆ ಅದನ್ನು ಅನುಭವಿಸುವ ಮುನ್ನವೇ ಕುಮಾರಸ್ವಾಮಿ ಲೇಔಟ್ ಪೊಲೀಸರ (Police) ಅತಿಥಿ ಆಗಿದ್ದಾರೆ. ಸುನಿಲ್ ಕುಮಾರ್ ಹಾಗೂ ದಿಲೀಪ್ ಎಂಬುವರನ್ನು ಬಂಧಿಸಿದ್ದು, ಇವರಿಂದ 1.76  ಕೋಟಿ ನಗದು ಹಾಗೂ 12 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ‌‌.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ