
ಬೆಂಗಳೂರು(ಮಾ.29): ಇನ್‌ಸ್ಟಾಗ್ರಾಂನಲ್ಲಿ(Instagram) ಖಾತೆ ತೆರೆದು ಬಿಟ್ ಕಾಯಿನ್ (Crypto Currency) ವ್ಯವಹಾರದಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ಆಮಿಷವೊಡ್ಡಿ ಜನರಿಗೆ ಟೋಪಿ ಹಾಕುತ್ತಿದ್ದ ಓರ್ವ ಪದವಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಕಿಡಿಗೇಡಿಗಳು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದಾರೆ.
ಬೆಳಗಾವಿ(Belagavi) ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿ ಗ್ರಾಮದ ಕಿರಣ್ ಭರತೇಶ ಹಾಗೂ ಆರ್ಶದ್ ಮೊಹಿದ್ದೀನ್ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) 3 ಸಿಮ್ ಕಾರ್ಡ್‌ಗಳು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಅಲ್ಲದೆ ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ 40 ಸಾವಿರ ರು.ಗಳನ್ನು ಮುಟ್ಟುಗೋಲು ಹಾಕಲಾಗಿದೆ. ಇತ್ತೀಚಿಗೆ ಯಲಹಂಕದ 19 ವರ್ಷದ ಯುವಕನಿಗೆ ಲಾಭದಾಸೆ ತೋರಿಸಿ 20 ಸಾವಿರ ರು. ಪಡೆದು ಆರೋಪಿಗಳು ವಂಚಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಆರ್.ಸಂತೋಷ್ ರಾಮ್ ನೇತೃತ್ವದ ತಂಡವು, ಮೊಬೈಲ್ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮದುವೆಯಾಟ: 7 ಯುವಕರಿಗೆ ವಂಚಿಸಿದ ಕಿಲಾಡಿ ವಧು & ಗ್ಯಾಂಗ್ ಅಂದರ್
ವಂಚನೆ ನಡೆದದ್ದು ಹೇಗೆ?:
ಕಿರಣ್ ಹಾಗೂ ಆರ್ಶದ್ ಆತ್ಮೀಯ ಸ್ನೇಹಿತರು. ರಾಯಭಾಗ(Raibag) ತಾಲೂಕಿನಲ್ಲಿ ಆರ್ಶದ್ ಅಂತಿಮ ವರ್ಷದ ಬಿಎ ಓದುತ್ತಿದ್ದರೆ, ಕಿರಣ್ ಪದವಿ ಮುಗಿಸಿ ಕೆಲಸಕ್ಕೆ ಹುಡುಕಾಟ ನಡೆಸಿದ್ದ. ಮೂರು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ abhise-akwane ಎಂಬ ಖಾತೆ youngstcrpto treader ಮಿನಿಮಮ್ ಶೇ.60 ರಷ್ಟು ಪ್ರಾಫಿಟ್ ಎಂದು ಬರೆದುಕೊಂಡಿದ್ದರು.
ಈ ಖಾತೆಯ ಜಾಹೀರಾತು ಗಮನಿಸಿದ ಯಲಹಂಕದ ಯುವಕ, ಮಾ.17ರಂದು ಆರೋಪಿಗಳಿಗೆ ಮೆಸೇಜ್ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿದ ಅವರು, ಕೇವಲ 20 ನಿಮಿಷದಲ್ಲಿ ಲಾಭ ನೀಡುವುದಾಗಿ ನಂಬಿಸಿದ್ದಾರೆ. ಈ ಮಾತು ನಂಬಿದ ಸಂತ್ರಸ್ತನಿಂದ .26 ಸಾವಿರ ಹಣ ಪಡೆದು ಮೋಸ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ವಿಚಾರಣೆ ವೇಳೆ ಹಣದಾಸೆಗೆ ಈ ಕೃತ್ಯ ಎಸಗಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇನ್ನು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru Crime: ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿ ಸೋಗಲ್ಲಿ ಆನ್‌ಲೈನ್ ಧೋಖಾ..!
2 ತಿಂಗಳಲ್ಲೇ 3 ಲಕ್ಷ ರು. ಸಂಪಾದನೆ
ಎರಡು ತಿಂಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಬಿಟ್ ಕಾಯಿನ್(Bit Coin) ಟ್ರೇಡರ್ ಹೆಸರಿನಲ್ಲಿ ಖಾತೆ ತೆರೆದು ಜನರಿಗೆ ವಂಚಿಸಲು ಆರಂಭಿಸಿದ ಆರೋಪಿಗಳು, ಬೆಂಗಳೂರು ಸೇರಿದಂತೆ ಹಲವು ಕಡೆ ಜನರಿಗೆ ಟೋಪಿ ಹಾಕಿದ್ದಾರೆ. ಎರಡು ತಿಂಗಳಲ್ಲಿ 3 ಲಕ್ಷ ರು. ಸಂಪಾದನೆ ಮಾಡಿದ್ದು, ಅವರ ಖಾತೆಯಲ್ಲಿ 40 ಸಾವಿರ ರು. ಜಪ್ತಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಯಲಹಂಕದ ಯುವಕನಿಗೆ 20 ಸಾವಿರ ರು., ಜಯನಗರದ ಕಡೆ ಮತ್ತೊಬ್ಬನಿಗೆ 49 ಸಾವಿರ ರು. ವಂಚಿಸಿದ್ದರು. ಆದರೆ 500 ರು., ಒಂದು ಸಾವಿರ ರು. ಹೀಗೆ ಕಡಿಮೆ ಹಣ ಕಳೆದುಕೊಂಡವರು ದೂರು ಕೂಡಲು ಹಿಂದೇಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಟ್ಸ್, ಫಾಲೋವರ್ಸ್ ಹೆಚ್ಚಳ
ಜನರಿಗೆ ವಿಶ್ವಾಸ ಮೂಡಿಸುವ ಸಲುವಾಗಿ ಅಕ್ರಮವಾಗಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್ ಮಾತ್ರವಲ್ಲದೆ ಪೋಸ್ಟ್‌ಗೆ ಹಿಟ್ಸ್‌ಗಳನ್ನು ಅಕ್ರಮವಾಗಿ ಹೆಚ್ಚಿಸಿಕೊಂಡಿದ್ದರು. ಇದಕ್ಕಾಗಿ ಖಾಸಗಿ ಕಂಪನಿಗೆ ಪೋಸ್ಟ್ ಪ್ರತಿ ಲೈಕ್‌ಗೆ 5 ರಿಂದ 7 ರು. ವೆಚ್ಚ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ