ಟ್ರಾನ್ಸ್‌ಫಾರ್ಮರ್ ಸ್ಟೋಟ ಪ್ರಕರಣ: ಇಬ್ಬರು ಬೆಸ್ಕಾಂ ಇಂಜಿನಿಯರ್‌ಗಳ ಬಂಧನ

Published : Mar 28, 2022, 10:36 PM IST
ಟ್ರಾನ್ಸ್‌ಫಾರ್ಮರ್ ಸ್ಟೋಟ ಪ್ರಕರಣ: ಇಬ್ಬರು ಬೆಸ್ಕಾಂ ಇಂಜಿನಿಯರ್‌ಗಳ ಬಂಧನ

ಸಾರಾಂಶ

ನಗರದ ಉಲ್ಲಾಳದ ಬಳಿ ಟ್ರಾನ್ಸ್‌ಫಾರ್ಮರ್ ಸ್ಟೋಟ ಪ್ರಕರಣದಲ್ಲಿ ಇಬ್ಬರು ಬೆಸ್ಕಾಂ ಇಂಜಿನಿಯರ್‌ಗಳನ್ನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 23ರಂದು ಮಧ್ಯಾಹ್ನ ಟ್ರಾನ್ಸ್‌ಫಾರ್ಮರ್ ಸ್ಟೋಟದ ಬೆಂಕಿಯಲ್ಲಿ ಸಿಲುಕಿ ತೀವ್ರ ಗಾಯಗೊಂಡಿದ್ದರು.

ಬೆಂಗಳೂರು (ಮಾ.28): ನಗರದ ಉಲ್ಲಾಳದ ಬಳಿ ಟ್ರಾನ್ಸ್‌ಫಾರ್ಮರ್ ಸ್ಟೋಟ (Transformer Explodes) ಪ್ರಕರಣದಲ್ಲಿ ಇಬ್ಬರು ಬೆಸ್ಕಾಂ ಇಂಜಿನಿಯರ್‌ಗಳನ್ನ ಜ್ಞಾನಭಾರತಿ ಪೊಲೀಸರು (Police) ಬಂಧಿಸಿದ್ದಾರೆ (Arrest). ಮಾರ್ಚ್ 23ರಂದು ಮಧ್ಯಾಹ್ನ ಟ್ರಾನ್ಸ್‌ಫಾರ್ಮರ್ ಸ್ಟೋಟದ ಬೆಂಕಿಯಲ್ಲಿ ಸಿಲುಕಿ ತೀವ್ರ ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಜ್ಞಾನ ಭಾರತಿ ಪೊಲೀಸರು ಕರ್ತವ್ಯ ನಿರ್ಲಕ್ಷ್ಯ ಹಿನ್ನಲೆ ಇಬ್ಬರು ಇಂಜಿನಿಯರ್‌ಗಳನ್ನ ಬಂಧಿಸಿದ್ದಾರೆ. ಬ್ಯಾಡರಹಳ್ಳಿ ವಿಭಾಗದ ಸಹಾಯಕ ಇಂಜಿನಿಯರ್ ದಿನೇಶ್ ಹಾಗೂ ಕಿರಿಯ ಇಂಜಿನಿಯರ್ ಬಂಧಿತ ಅಧಿಕಾರಿಗಳು. 

ಅಲ್ಲದೆ ಇನ್ನೂ ಯಾರೆಲ್ಲಾ ಅಧಿಕಾರಿಗಳ ಕರ್ತವ್ಯ ಲೋಪ ಇದೆ ಎಂಬ ಬಗ್ಗೆ ಬೆಸ್ಕಾಂಗೆ ಪತ್ರ ಬರೆದು ಮಾಹಿತಿ ಕೋರಲಾಗಿದೆ. ಮೆಂಟೆನೆನ್ಸ್ ಹಾಗೂ ಸೂಪರ್‌ವಿಷನ್ ಮಾಡಬೇಕಿದ್ದ ಅಧಿಕಾರಿಗಳನ್ನ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಶಿವರಾಜ್ ಹಾಗು ಅವರ ಪುತ್ರ ಚೈತನ್ಯ ಸಾವನ್ನಪ್ಪಿದ್ದರು. ಮಗಳ ಮದುವೆ ಬಟ್ಟೆ ಖರೀದಿಗೆ ಹೋಗಿ ವಾಪಸ್ ಬರುವ ವೇಳೆ ಟ್ರಾನ್ಸ್‌ಫಾರ್ಮರ್ ಸ್ಟೋಟವಾಗಿ ದುರ್ಮರಣಕ್ಕೆ ತುತ್ತಾಗಿದ್ದರು. ಸದ್ಯ ಇಬ್ಬರು ಬೆಸ್ಕಾಂ ಅಧಿಕಾರಿಗಳನ್ನ ಅರೆಸ್ಟ್ ಮಾಡಲಾಗಿದ್ದು, ಇನ್ನೂ ಕೆಲ ಅಧಿಕಾರಿಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.

Transformer Blast: ಬೇಜವಾಬ್ದಾರಿ ಬೆಸ್ಕಾಂ ವಿರುದ್ಧ ಆಕ್ರೋಶ, ಉಲ್ಲಾಳದಲ್ಲಿ ಬಿಗುವಿನ ವಾತಾವರಣ

ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸ್ಫೋಟ: ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ರಸ್ತೆ ಬದಿಯ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು  (Transformer Explodes)ಸ್ಕೂಟರ್‌ನಲ್ಲಿ ಹೋಗುತ್ತಿದ್ದವರಿಗೆ ಬೆಂಕಿ ತಾಕಿದ ಪರಿಣಾಮ ತಂದೆ ಮೃತಪಟ್ಟು (Death), ಮಗಳು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಗರದ (Bengaluru) ಉಲ್ಲಾಳ ಬಳಿಯ ಮಂಗನಹಳ್ಳಿ ಕ್ರಾಸ್‌ ಸಮೀಪ ಬುಧವಾರ ನಡೆದಿದೆ. ಮಂಗನಹಳ್ಳಿ ನಿವಾಸಿ ಶಿವರಾಜ್‌ (55) ಮೃತ ದುರ್ದೈವಿ. ಈ ಘಟನೆಯಲ್ಲಿ ಗಾಯಗೊಂಡಿರುವ ಮೃತರ ಪುತ್ರಿ ಚೈತನ್ಯ (19) ವಿಕ್ಟೋರಿಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ನಿಶ್ಚಿತಾರ್ಥಕ್ಕೆ ಕಲ್ಯಾಣ ಮಂಟಪ ಬುಕ್‌ ಮಾಡಿ ಮಗಳ ಜತೆ ಶಿವರಾಜ್‌ ಮನೆಗೆ ಮರಳುವಾಗ ಈ ಘಟನೆ ನಡೆದಿದೆ. ಗಾಯಾಳುಗಳನ್ನು ರಕ್ಷಿಸಿ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಗಳ ಮದುವೆ ಸಂಭ್ರಮ: ಸೆಕ್ಯೂರಿಟಿ ಗಾರ್ಡ್‌ ಶಿವರಾಜ್‌ ಅವರು, ತಮ್ಮ ಪತ್ನಿ ಮತ್ತು ಮಗಳ ಜತೆ ಮಂಗನಹಳ್ಳಿಯಲ್ಲಿ ನೆಲೆಸಿದ್ದರು. ದ್ವಿತೀಯ ಪಿಯುಸಿ ಓದುತ್ತಿದ್ದ ಚೈತನ್ಯಳಿಗೆ ಇತ್ತೀಚಿಗೆ ಮದುವೆ ನಿಶ್ಚಯವಾಗಿತ್ತು. ಶಿವರಾಜ್‌ ದಂಪತಿಗೆ ಚೈತನ್ಯ ಒಬ್ಬಳೇ ಮಗಳು. ಪುತ್ರಿ ಮದುವೆಯನ್ನು ಸಡಗರದಿಂದ ಮಾಡಲು ಯೋಜಿಸಿದ್ದ ಅವರು, ಬುಧವಾರ ಮಧ್ಯಾಹ್ನ ಮನೆ ಹತ್ತಿರ ನಿಶ್ಚಿತಾರ್ಥಕ್ಕಾಗಿ ಕಲ್ಯಾಣ ಮಂಟಪ ಬುಕ್‌ ಮಾಡಲು ಮಗಳನ್ನು ಕರೆದುಕೊಂಡು ಹೋಗಿದ್ದರು. ಮುಂದಿನ ತಿಂಗಳ ಮೊದಲ ವಾರದಲ್ಲಿ ನಿಶ್ಚಿತಾರ್ಥದ ದಿನಾಂಕ ಸಹ ಗೊತ್ತಾಗಿತ್ತು. ಕಲ್ಯಾಣ ಮಂಟಪ ಬುಕ್‌ ಮಾಡಿ ಸ್ಕೂಟರ್‌ನಲ್ಲಿ ತಂದೆ-ಮಗಳು ಮನೆಗೆ ಮರಳುತ್ತಿದ್ದರು. 

Transformer Blast: ಬೇಜವಾಬ್ದಾರಿ ಬೆಸ್ಕಾಂ ವಿರುದ್ಧ ಸ್ಥಳೀಯರ ಆಕ್ರೋಶ

ಆ ವೇಳೆ ರಸ್ತೆ ಬದಿಯ ಟ್ರಾನ್ಸ್‌ಫಾರ್ಮರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಟ್ರಾನ್ಸ್‌ಫಾರ್ಮರ್‌ನಿಂದ ಸ್ಫೋಟದಿಂದ ಸಿಡಿದ ಬೆಂಕಿ ಕಿಡಿಗಳು ತಂದೆ-ಮಗಳಿಗೆ ತಾಕಿದೆ. ಇದರಿಂದ ಅವರಿಗೆ ಬೆಂಕಿ ಹೊತ್ತಿಕೊಂಡು ಅಗ್ನಿ ಜ್ವಾಲೆಗೆ ಶಿವರಾಜ್‌ ಹಾಗೂ ಚೈತನ್ಯ ಸಿಲುಕಿದ್ದಾರೆ. ಕೂಡಲೇ ತಂದೆ-ಮಗಳ ಚೀರಾಟ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಬೆಡ್‌ಶೀಟ್‌ ಅನ್ನು ಹೊದಿಸಿ ತಂದೆ-ಮಗಳಿಗೆ ಹೊತ್ತಿದ್ದ ಬೆಂಕಿಯನ್ನು ಆರಿಸಿದ ಸಾರ್ವಜನಿಕರು, ಬಳಿಕ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!