ತೋಟವೊಂದರಲ್ಲಿ ಕಾಳು ಮೆಣಸು ಕುಯ್ಯಲು ಬಂದ ಕಾರ್ಮಿಕನ ಮೇಲೆ ವ್ಯಾಘ್ರ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ವಿರಾಜಪೇಟೆ ತಾಲ್ಲೂಕಿನ ಮೊದಲ ರುದ್ರಗುಪ್ಪೆ ಗ್ರಾಮದಲ್ಲಿ ನಡೆದಿದೆ.
ವರದಿ: ಪ್ರದೀಪ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ವಿರಾಜಪೇಟೆ (ಮಾ.28): ತೋಟವೊಂದರಲ್ಲಿ ಕಾಳು ಮೆಣಸು ಕುಯ್ಯಲು ಬಂದ ಕಾರ್ಮಿಕನ ಮೇಲೆ ವ್ಯಾಘ್ರ ದಾಳಿ (Tiger Attack) ನಡೆಸಿ ಹತ್ಯೆ ಮಾಡಿದ ಘಟನೆ ವಿರಾಜಪೇಟೆ ತಾಲ್ಲೂಕಿನ ಮೊದಲ ರುದ್ರಗುಪ್ಪೆ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಬಿಟ್ಟಾಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಡಂಗಾಲ, ಒಂದನೇ ರುದ್ರಗುಪ್ಪೆ ಕೊಂಗಂಡ ಗಣಪತಿ ಅಯ್ಯಪ್ಪ ಅವರ ಕಾಫಿ ತೊಟದ ಕಾರ್ಮಿಕ ಗಣೇಶ್ ಪುಟ್ಟು (29) ಹುಲಿ ದಾಳಿಗೆ ಬಲಿಯಾದ (Death) ವ್ಯಕ್ತಿ. ವಿರಾಜಪೇಟೆ ತಾಲ್ಲೂಕಿನ ಕಂಡಂಗಾಲ ರುದ್ರಗುಪ್ಪೆ ಕುಂದ ಭಾಗದಲ್ಲಿ ಕೆಲವು ತಿಂಗಳಿನಿಂದ ಹುಲಿಯಿಂದ ಜಾನುವಾರುಗಳ ಮೇಲೆ ದಾಳಿ ನಡೆದಿರುವ ಘಟನೆಯು ಮಾಸುವ ಮುನ್ನವೇ ಹುಲಿ ದಾಳಿಗೆ ಕಾರ್ಮಿಕನೊರ್ವನ ಮೇಲೆ ದಾಳಿ ನಡೆದು ಮೃತನಾದ ಘಟನೆ ನಡೆದಿದೆ.
ವಿರಾಜಪೇಟೆ ಗೊಣಿಕೊಪ್ಪ ಗದ್ದೆಮಾನಿ ನಿವಾಸಿ ಗಣೇಶ್ ಪುಟ್ಟು ಮತ್ತು ಸ್ನೇಹಿತ ರುದ್ರಗುಪ್ಪೆ ಗ್ರಾಮ ಕೊಂಗಂಡ ಅಯ್ಯಪ್ಪ ಅವರ ತೋಟಕ್ಕೆ ಕಾಳು ಮೆಣಸು ಕುಯ್ಯಲು ಆಗಮಿಸಿದ್ದಾರೆ. ಇಂದು ಬೆಳಗಿನಿಂದ ತೋಟದಲ್ಲಿ ಕಾಳು ಮೆಣಸು ಕೊಯ್ಯುವ ಕಾರ್ಯದಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಮಧ್ಯಾಹ್ನ ಸಮಯ ಸುಮಾರು 3:20ರ ವೇಳೆಯಲ್ಲಿ ಸ್ಥಳೀಯ ಕೊಂಗಂಡ ಬೋಪಣ್ಣ ಅವರ ಹಸುವಿನ ಮೇಲೆ ಹುಲಿಯೊಂದು ದಾಳಿ ಮಾಡಿದೆ ಸಾಕು ನಾಯಿಗಳು ಹುಲಿಯನ್ನು ನೋಡಿ ಸದ್ದು ಮಾಡಿದೆ ಇದರಿಂದ ಕುಪಿತವಾದ ಹುಲಿಯು ಸ್ಥಳದಿಂದ ತೆರಳಿದೆ.
Kolar: ದೊಡ್ಡ ಮಾರುಕಟ್ಟೆಗೆ ಜಾಗವಿಲ್ಲ: ರೈತರ ಗೋಳು ಕೇಳೋರಿಲ್ಲ!
ಅನತಿ ದೂರದಲ್ಲಿ ಕಾಳು ಮೆಣಸು ಕುಯ್ಯುತಿದ್ದ ಕಾರ್ಮಿಕರು ಹುಲಿಯನ್ನು ನೋಡಿ ಭಯದಿಂದ ಓಡಿಹೊಗಿಲು ಶ್ರಮಿಸಿದ್ದಾರೆ. ಒರ್ವ ಕಾರ್ಮಿಕ ಭಯದಿಂದ ಜೀವ ಉಳಿಸಿಕೊಳ್ಳಲು ಮರವೇರಿದ್ದಾನೆ. ಅದರೆ ಕಾರ್ಮಿಕ ಗಣೇಶ ನ ಮೇಲೆ ಹುಲಿಯು ಹಾಠತ್ ದಾಳಿ ನಡೆಸಿದೆ.ಹುಲಿಯ ದಾಳಿಯಿಂದ ರಕ್ಷಿಸಿಕೊಳ್ಳಲಾಗದೆ ಬಲಹೀನವಾಗಿದ್ದರು ಗಣೇಶ್. ವ್ಯಾಘ್ರನಿಂಧ ತೀವ್ರ ವಾಗಿ ಮಾರಣಾಂತಿಕ ಗಾಯಗಳಿಂದ ಗಾಯಗೊಂಡ ಗಣೇಶ್ ಅವರು ತನ್ನ ಪ್ರಾಣ ಕಳೆದುಕೊಂಡಿದ್ದಾರೆ. ತೋಟದ ಸನಿಹದಲ್ಲಿರುವ ಸ್ಥಳಿಯರು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ, ಪೊಲೀಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಅಗಮಿಸಿ ಪರಿಶೋದನೆ ಮಾಡಿದರು.
Vijayapura: 4 ತಿಂಗಳ ಹಸುಗೂಸಿನ ಜೊತೆಗೆ ಬಂದು ಪರೀಕ್ಷೆ ಬರೆದ ತಾಯಿ!
ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. 2000 ಇಸವಿಯಲ್ಲಿ ನಾಗರಹೊಳೆಯಲ್ಲಿ ಹುಲಿ ಯೋಜನೆ ಸ್ಥಾಪನೆ ಮಾಡಲಾಗಿದೆ. ಇದರಿಂದ ದಕ್ಷಿಣ ಕೊಡಗಿನ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳು ಓಡಾಡುವುದು ಸಾಮಾನ್ಯವಾಗಿದೆ. ಆದರೆ ಇತ್ತೀಚೆನ ಕೆಲ ತಿಂಗಳಲ್ಲಿ ಕುಮಟೂರು, ಶ್ರೀಮಂಗಲ, ಟಿ.ಶೆಟ್ಟಿಗೇರಿ, ನಿಟ್ಟೂರು, ಮತ್ತೂರು, ಬೆಳ್ಳೂರು, ಬಾಳೆಲೆ, ಕೋತೂರು, ಕುಟ್ಟ, ಕಾನೂರು, ಕೋಣಗೇರಿ, ಬೆಕ್ಕೆಸೊಡ್ಲೂರು, ಹೈಸೊಡ್ಲೂರು ಮುಂತಾದ ಪ್ರದೇಶಗಳಲ್ಲಿ ಹುಲಿ ಹಾವಳಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.