ಹೋಮ್‌ ವರ್ಕ್‌ ಮಾಡಿಸದ ಗಂಡನ ಮೇಲಿನ ಕೋಪಕ್ಕೆ, ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ

Published : Jun 21, 2023, 07:08 PM ISTUpdated : Jun 21, 2023, 07:23 PM IST
ಹೋಮ್‌ ವರ್ಕ್‌ ಮಾಡಿಸದ ಗಂಡನ ಮೇಲಿನ ಕೋಪಕ್ಕೆ, ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ

ಸಾರಾಂಶ

ಮನೆಯಲ್ಲಿ ಮಕ್ಕಳಿಗೆ ಗಂಡ ಶಾಲೆಯಲ್ಲಿ ಕೊಟ್ಟಿದ್ದ ಹೋಮ್‌ ವರ್ಕ್‌ ಮಾಡಿಸಿಲ್ಲವೆಂದು ಕೋಪಗೊಂಡ ಹೆಂಡತಿ, ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾಳೆ.

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್

ಕೋಲಾರ (ಜೂ.21): ಅವರಿಬ್ಬರು ಸಾರಿಗೆ ಸಂಸ್ಥೆ ನೌಕರರು, 13 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅನೋನ್ಯವಾಗಿಯೇ ಇದ್ದವರ ಮಧ್ಯೆ ಆಗಾಗ ಸಣ್ಣ ಪುಟ್ಟ ಗಲಾಟೆ, ಮನಸ್ತಾಪಗಳು ಇತ್ತು. ಹಿರಿಯರು ಹಲವು ಬಾರಿ ಸರಿಮಾಡಿಕೊಂಡು ಹೋಗುವಂತೆ ಬುದ್ದಿವಾದ ಹೇಳಿದ್ದರು. ಆದರೆ ನಿನ್ನೆ ಅದೇನಾಯ್ತೋ ಗೊತ್ತಿಲ್ಲ ಡೆತ್ ನೋಟ್ ಬರೆದಿಟ್ಟು ಮಕ್ಕಳನ್ನು ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮನೆಯಲ್ಲಿ ಮೂರು ಸಾವುಗಳನ್ನು ನೆನೆದು ಕಣ್ಣೀರಿಡುತ್ತಿರುವ ಕುಟುಂಬಸ್ಥರು, ತಾನು ಆತ್ಮಹತ್ಯೆ ಮಾಡಿಕೊಂಡು ತನ್ನಿಬ್ಬರ ಮಕ್ಕಳನ್ನು ಸಾಯಿಸಿರುವ ತಾಯಿಯ ದೃಶ್ಯ.  ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ತಾಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ. ಹೌದು ಕುಟುಂಬ ಕಲಹ ಹಿನ್ನೆಲೆ ತನ್ನ ಪತಿಯೊಂದಿಗೆ ಗಲಾಟೆ ಮಾಡಿಕೊಂಡ ಪತ್ನಿ ಡೆತ್ ನೋಟ್ ಬರೆದಿಟ್ಟು ತನ್ನಿಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲ್ಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ ನಡೆದಿದೆ.

ಶಾಲಾ ಬಾಲಕಿಯ ಮೈ ಮುಟ್ಟಿದ ಕ್ಷೇತ್ರ ಶಿಕ್ಷಣಾಧಿಕಾರಿಗೆ 5 ವರ್ಷ ಜೈಲು

ಸಣ್ಣ ಪುಟ್ಟ ಜಗಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣು: ನಿನ್ನೆ ಸಂಜೆ 6 ಗಂಟೆಯ ಸುಮಾರಿಗೆ ತನ್ನ ಇಬ್ಬರು ಮಕ್ಕಳೊಂದಿಗೆ 26 ವರ್ಷದ ತಾಯಿ ಸುಗುಣ, ಮಕ್ಕಳಾದ 9 ವರ್ಷದ ಪ್ರೀತಂಗೌಡ ಹಾಗೂ 6 ವರ್ಷದ ನಿಶಿತಾಗೌಡ ಸಾವಿಗೆ ಶರಣಾಗಿದ್ದಾರೆ. ಸರ್ಕಾರಿ ಸಾರಿಗೆ ಸಂಸ್ಥೆಕೋಲಾರದಲ್ಲಿ ಪತಿ ಮುರಳಿ ಸೆಕ್ಯೂರಿಟಿ ಗಾರ್ಡ್ ಹಾಗೂ ಪತ್ನಿ ಸುಗುಣ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. 13 ವರ್ಷಗಳ ಹಿಂದೆ ಉಪ್ಪುಕುಂಟೆ ಗ್ರಾಮದ ಮುರಳಿಯನ್ನ ಗಿರನಹಳ್ಳಿಯ ಸುಗುಣ ವಿವಾಹವಾಗಿದ್ದರು. ಅನೋನ್ಯವಾಗಿಯೇ ಇದ್ದ ಇಬ್ಬರು ಸಹ ಆಗಾಗ ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆಯಾಗಿ ಊಟ ಬಿಟ್ಟು ಮುನಿಸಿಕೊಳ್ಳುತ್ತಿದ್ದ ಪ್ರಸಂಗಗಳು ನಡೆಯುತಿತ್ತು. ಎಂದಿನಂತೆ ನಿನ್ನೆ ಮಧ್ಯಾಹ್ನ ಸೆಕೆಂಡ್ ಶಿಫ್ಟ್ ಕೆಲಸಕ್ಕೆ ಪತಿ ಮುರಳಿ ತೆರಳುತ್ತಿದಂತೆ ತಾನು ಮೊದಲೆ ಅಂದುಕೊಂಡಂತೆ ಸುಗುಣ ತನ್ನ ಇಬ್ಬರು ಮಕ್ಕಳನ್ನ ಕೊಂದು ತಾನೂ ನೇಣು ಸಹ ಬಿಗಿದುಕೊಂಡು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  

ಹೋಮ್‌ ವರ್ಕ್‌ ಮಾಡಿಸಿಲ್ಲವೆಂದು ಜಗಳ: ಇತ್ತೀಚೆಗೆ ಸುಗುಣ ತಂದೆ ಮೃತ ಪಟ್ಟಿದ್ದರು. 3 ದಿನದ ಹಿಂದೆಯಷ್ಟೇ ತಿಥಿ ಕಾರ್ಯ ಮುಗಿಸಿ ಇಬ್ಬರು ವಾಪಸ್ ಮನೆಗೆ ಬಂದಿದ್ದರು. ರಾತ್ರಿ ನಿದ್ದೆ ಇಲ್ಲ ಅನ್ನೋ ಕಾರಣಕ್ಕೆ ಮಲಗಿದ್ದ ಮುರಳಿ ಜೊತೆಗೆ ಮಕ್ಕಳಿಗೆ ಹೋಂ ವರ್ಕ್ ಹೇಳಿ ಕೊಟ್ಟಿಲ್ಲ ಎಂದು ಪತಿಯೊಂದಿಗೆ ಗಲಾಟೆ ಮಾಡಿಕೊಂಡು ಮೂರು ದಿನದಿಂದ ಊಟ ಸಹ ಮಾಡದೆ ಕೋಪ ಬೆಳೆಸಿಕೊಂಡಿದ್ದಳು. ಈ ವೇಳೆ ಮುರಳಿ ತನ್ನ ಪತ್ನಿ ಸುಗುಣಾಗೆ ಹೊಡೆದಿದ್ದಾನೆ. ಸುಗುಣ ತನ್ನ ಪತಿಯ ಮೇಲಿನ ಕೋಪ ಹಾಗೂ ಹಠಕ್ಕೆ ಬಿದ್ದು ತನ್ನ ಗಂಡ ಹಾಗೂ ಅತ್ತೆ ಮಾವ ಕಿರುಕುಳ ನನಗೆ ನೀಡುತ್ತಿದ್ದಾರೆ ಎಂದು ಡೆತ್ ನೋಟ್ ಬರೆದು ಬಳಿಕ ತನ್ನ ಅಣ್ಣನಿಗೆ ವಾಟ್ಸಾಪ್ ಮೆಸೇಜ್ ಮಾಡಿದ್ದಾಳೆ.

ಮಾದಕ ವ್ಯಸನಿ ಯುವಕನನ್ನು ಕೊಲೆ ಮಾಡಿ ದೇವರಮನೆಯಲ್ಲಿ ಎಸೆದ ದುಷ್ಕರ್ಮಿಗಳು

ಪತಿ ಮೇಲಿನ ಕೋಪಕ್ಕೆ ಮಕ್ಕಳನ್ನು ಕೊಂದ ಪಾಪಿ ತಾಯಿ: ಅಣ್ಣನಿಗೆ ವಾಟ್ಸಾಪ್‌ ಮೆಸೇಸ್‌ ಮಾಡಿದ ನಂತರ ತನ್ನಿಬ್ಬರು ಮಕ್ಕಳಿಗೆ ನೇಣು ಹಾಕಿ ತಾನೂ ನೇಣು ಬಿಗಿದಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿಯ ಮೇಲಿನ ಕೋಪಕ್ಕೆ ತನ್ನಿಬ್ಬರ ಮಕ್ಕಳನ್ನ ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಧ್ಯ 6 ಮಂದಿ ಮೇಲೆ‌ ಪ್ರಕರಣ ದಾಖಲು ಮಾಡಲಾಗಿದೆ‌.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. 

ಒಟ್ಟಿನಲ್ಲಿ ಗಂಡ ಹೆಂಡತಿ ಗಲಾಟೆ ಉಂಡು ಮಲಗೋ ತನಕ ಅನ್ನೋ ಮಾತಿತ್ತು. ಆದ್ರೆ ಗಲಾಟೆಯನ್ನ ದೊಡ್ಡದು ಮಾಡಿಕೊಂಡು ಮಕ್ಕಳ ಜೀವ ತೆಗೆದಿದ್ದು ಮಾತ್ರ ದುರಂತ. ಇಬ್ಬರ ಮಧ್ಯೆ ಗಲಾಟೆ, ಮನಸ್ತಾಪ, ಪತಿಯ ಮೇಲಿನ ಕೋಪಕ್ಕೆ ಬಾಳಿ ಬದುಕಬೇಕಿದ್ದ ಪುಟ್ಟ ಮಕ್ಕಳನ್ನ ಕೊಂದು ತಾನು ಆತ್ಮಹತ್ಯೆಗೆ ಶರಣಾಗಿದ್ದು ಮಾತ್ರ ವಿಪರ್ಯಾಸ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ