ಕಲಬುರಗಿ: ರೌಡಿಸಂನಲ್ಲಿ ಹೆಸರು ಮಾಡಲು ಬಸ್‌ ಚಾಲಕನ ಕೊಲೆ..!

By Kannadaprabha News  |  First Published May 20, 2023, 11:41 AM IST

ಮೇ 11ರ ಸಿಟಿ ಬಸ್‌ ನಿಲ್ದಾಣದಲ್ಲಿನ ಚಾಲಕನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು, ರೌಡಿಸಂನಲ್ಲಿ ಬೆಳೆಯುವ ಹುಂಬುತನದಿಂದ ಕೊಲೆಗೆ ಮುಂದಾದೇವೆಂದು ಹಂತಕರ ಹೇಳಿಕೆ, 20 ಹಾಗೂ 23 ವರ್ಷದ ನವ ತರುಣರಿಂದಲೇ ಇಂತಹ ಕುಕೃತ್ಯ- ಅಮಾಯಕನ ಕಗ್ಗೊಲೆ 


ಕಲಬುರಗಿ(ಮೇ.20): ರೌಡಿಸಂನಲ್ಲಿ ಹೆಸರು ಮಾಡಬೇಕು, ಜನ ತಮ್ಮನ್ನು ರೌಡಿಗಳೆದು ಗುರುತಿಸಿ ಹೆದರಬೇಕು ಎಂಬಿತ್ಯಾದಿ ಹುಬುತನದ ವಿಚಾರಗಳನ್ನೇ ತಲೆಯಲ್ಲಿ ತುಂಬಿಕೊಂಡು ಎಲ್ಲರು ನೋಡುತ್ತಿದ್ದಂತೆಯೇ ಹಾಡುಹಗಲೇ ಕಲಬುರಗಿ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಮೇ 11ರಂದು ಅಮಾಯಕ ಬಸ್‌ ಚಾಲಕ ನಾಗಯ್ಯ ಮಠಪತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಹಂತಕರನ್ನು ಕಲಬುರಗಿ ಪೊಲೀಸರು ಕೊನೆಗೂ ಸೆರೆ ಹಿಡಿದಿದ್ದಾರೆ.

ಕಲಬುರಗಿ ತಾಲ್ಲೂಕಿನ ತೊಂಡಕಲ್‌ ಗ್ರಾಮದ, ಹಾಲವಸ್ತಿ ನಿಪ್ಪಾಣಿಯ ಭೀಮಾಶಂಕರ ಅಲಿಯಾಸ್‌ ಜೈಭೀಮ ತಂದೆ ಶರಣಪ್ಪ ಕಟ್ಟಿಮನಿ (23) ಮತ್ತು ಜೋಗೂರ ಗ್ರಾಮದ ಬಸವರಾಜ ತಂದೆ ರಮೇಶ ಪರಪ್ಪಗೋಳ (20) ಎಂಬುವವರನ್ನು ಬ್ರಹ್ಮಪುರ ಠಾಣೆಯ ಪೊಲೀಸರು ಬಂಧಿಸಿ ವಶಕ್ಕೆ ಪಡೆದು, ವಿಚಾರಣೆ ನಡೆಸಿದ ನಂತರ ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Tap to resize

Latest Videos

undefined

ತೀರ್ಥಹಳ್ಳಿಯಲ್ಲಿ ಡಬ್ಬಲ್ ಮರ್ಡರ್: ಹಣಕ್ಕಾಗಿ ಕೂಲಿ ಕಾರ್ಮಿಕರ ಬರ್ಬರ ಕೊಲೆ!

ರೌಡಿಸಂನಲ್ಲಿ ಬೆಳೆಯಬೇಕು ಎಂಬ ಹುಬುತನದಿಂದಲೇ ತಾವು ಈ ಕೊಲೆ ಮಾಡಿದ್ದಾಗಿಯೂ, ಕೊಲೆಯಾದವನ ಜೊತೆ ತಮ್ಮದೇನು ತಕರಾರಿಲ್ಲವೆಂದು, ಹಾಗೇ ಎಲ್ಲರು ಬೆಚ್ಚಿ ಈಬಳಬೇಕು ಎಂಬ ಉದ್ದೇಶದಿಂದಲೇ ಕೊಲೆ ಮಾಡಿದ್ದಾಗಿ ಹಂತಕರು ವಿಚಾರಮೆಯಲ್ಲಿ ಬಾಯಿಬಿಟ್ಟಿದ್ದಾರೆ.

ತಮ್ಮನ್ನು ನೋಡಿ ಜನ ಭಯ ಭೀತರಾಗಬೇಕು, ರೌಡಿಸಂನಲ್ಲಿ ಹೆಸರು ಮಾಡಬೇಕು, ರೌಡಿಗಳು ಎಂದು ಜನ ತಮ್ಮ ಗುಂಪನ್ನು ಗುರುತಿಸುವಂತಾಗಬೇಕು, ಅದಕ್ಕೇ ನಾವು ಕೊಲೆ ಮಾಡಲು ಮುಂದಾದೇವು, ನಮ್ಮ ಈ ಉದ್ದೇಶ ಸಾಧಿಸಲು ಯಾರಾದರೇನಂತೆ? ಸಿಟಿ ಬಸ್‌ ನಿಲ್ದಾಣದ ಬಳಿ ನಾವು ಜನ ನೋಡುತ್ತಿರುವಂತೆಯೇ ಕೊಲೆ ಮಾಡಿದ್ದೇವೆ’ ಎಂದು ಸೆರೆ ಸಿಕ್ಕಿರುವ ಇಬ್ಬರೂ ಕಿರಾತಕರು ವಿಚಾರಣೆ ಕಾಲದಲ್ಲಿ ನೀಡಿದ ಹೇಳಿಕೆ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.

ಕೊಲೆ ಮಾಡಿದ ಸಂಗತಿ ಫೇಸ್ಬುಕ್‌ನಲ್ಲಿ ಅಪಲೋಡ್‌ ಮಾಡಿದ್ದರು:

ಬಸ್‌ ಚಾಲಕ ನಾಗಯ್ಯ ಮಠಪತಿಯನ್ನ ಕೊಲೆ ಮಾಡಿದ್ದಾಗಿ ಈ ಕಿರಾತಕರು ತಾವು ಮಾಡಿರುವ ಘನಂದಾರಿ ಕೆಲಸದ ಪ್ರಚಾರ ಗಿಟ್ಟಿಸಲು, ಅದರಿಂದ ಪರೋಕ್ಷವಾಗಿ ಇತರರೆಲ್ಲರೂ ಹೆದರಲಿ ಎಂದು ತಮ್ಮ ಕೊಲೆಗಡುಕತನದ ಕೆಲಸದ ವಿವರಗಳನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್‌ನಲ್ಲಿಯೂ ಹಾಕಿ ಗಮನ ಸೆಳೆದಿದ್ದಾರೆ. ಈ ಸಂಗತಿ ಪೊಲೀಸರು ವಿಚಾರಣೆಯಲ್ಲಿ ಪತ್ತೆ ಹಚ್ಚಿ ಇದೇ ಜಾಡಿನಲ್ಲಿ ಹಂತಕರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ಮಾಡುವ ಮುನ್ನ ಆರೋಪಿಗಳು ವಿಪರೀತ ಮದ್ಯ ಸೇವನೆ ಮಾಡಿದ್ದರು. ಆಜಾದಪುರದ ಕುರಿಗಾಹಿ ದಿನೇಶ ಎಂಬಾತನ ಜೊತೆ ಕಿರಿಕಿರಿ ಮಾಡಿಕೊಂಡಿದ್ದರು. ಆತನ ಕೊಲೆ ಮಾಡಲೆಂದು ನಗರದ ಸಿಟಿ ಬಸ್‌ ನಿಲ್ದಾಣದ ಬಳಿ ಮೇ 10 ಮತ್ತು 11ರಂದು ಹೊಂಚು ಹಾಕಿ ಕಾಯುತ್ತ ಕುಳಿತಿದ್ದರು. ಆತ ಬಾರದೇ ಇದ್ದಾಗ ಬಸ್‌ ಚಾಲಕ ನಾಗಯ್ಯ ಮಠಪತಿ ಅವರನ್ನು ಕಂಡಕ್ಟರ್‌ ಎಂದು ತಪ್ಪಾಗಿ ತಿಳಿದು ಆತನ ಬಳಿ ಹಣ ಇರಬಹುದೆಂದು ತಿಳಿದು ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.

ವಿಚ್ಛೇದನಕ್ಕೆ 1 ಕೋಟಿ ಕೇಳಿದ ಪತ್ನಿ, ಸುಪಾರಿ ಕಿಲ್ಲರ್‌ಗೆ ಕೊಲೆ ಡೀಲ್‌ ಒಪ್ಪಿಸಿದ 71ರ ಅಜ್ಜ!

ಸದರ್‌ ಕೊಲೆ ಪ್ರಕರಣದ ವಿಚಾರಣೆ, ತನಿಖೆಗೆ ಬ್ರಹ್ಮಪುರ ಪೊಲೀಸ್‌ ಠಾಣೆ ಇನ್ಸಪೆಕ್ಟರ್‌ ಸಚೀನ್‌ ಚಲವಾದಿ ನೇತೃತ್ವದಲ್ಲಿ ಪಿಎಸ್‌ಐ ಅಶೋಕ ನಿಡೋದೆ, ಎಎಸ್‌ಐ ಮಹೆಬೂಬಸಾಬ್‌, ಸಿಬ್ಬಂದಿ ಶಿವಪ್ರಕಾಶ, ಕೇಶುರಾಯ, ರಾಮು ಪವಾರ, ಸಂತೋಷ, ನವೀನಕುಮಾರ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಕೊಲೆ ಮಾಡಿ ಪರಾರಿಯಾಗಿದ್ದ ಹಂತಕರನ್ನು ಪತ್ತೆ ಹಚ್ಚಿ ಬಂಧಿಸಿರುವ ಬ್ರಹ್ಮಪುರ ಪೊಲೀಸರ ಕೆಲಸಕ್ಕೆ ಕಮೀಷ್ನರ್‌ ಚೇತನ್‌ ಕುಮಾರ್‌, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಚಂದ್ರಪ್ಪಾ, ದಕ್ಷಿಣ ಉಪ ವಿಭಾಗದ ಎಸಿಪಿ ಭೂತೇಗೌಡ ವಿ.ಎಸ್‌. ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಾದರೂ ಕಲಬುರಗಿ ನಗರ ಪೊಲೀಸ್‌ ಎಚ್ಚೆತ್ತುಕೊಳ್ಳುವುದೆ?

ಕಲಬುರಗಿ ಮಹಾ ನಗರದಲ್ಲಿ ಇಂತಹ ಅಪರಾಧ ಪ್ರರಣಗಲು ದಿನಕಳೆದಂತೆ ಹೆಚ್ಚುತ್ತಿದ್ದೂರ ನಿರೀಕ್ಷೆಯಂತೆ ಬಿಗಿ ಕ್ರಮ ಇಲ್ಲಿನ್ನೂ ಮರೀಚಿಕೆಯಾಗಿವೆ. ನಗರದಲ್ಲಿ ರೌಡಿ ಗುಂಪುಗಳು ಮತ್ತೆ ಸಕ್ರೀವಾಗುತ್ತಿರೋದು ಇಂತಹ ಪ್ರಕರಣಗಲು ಆಗಾಗ ಎಚ್ಚರಿಕೆ ಗಂಟೆಯಂತೆ ಹೇಳುತ್ತಿದ್ದರೂ ಪೊಲೀಸರು ತಮ್ಮ ಪಾಡಿಗೆ ತಾವಿದ್ದಂತಿದೆ. ರೌಡಿಗಳ ಮಟ್ಟಹಾಕಲು ನಾವು ಯಾವುದಕ್ಕೂ ಸಿದ್ಧ ಎಂಬ ಖಡಕ್‌ ಸಂದೇಶ ರವಾನಿಸುವಲ್ಲಿ ನಗರ ಪೊಲೀಸರು ಅದ್ಯಾಕೆ ಹಿಂದೆ ಮುಂದೆ ನೋಡುತ್ತಿದ್ದಾರೋ? ಎಂದು ಜನರೇ ಏಕಳುವಂತಾಗಿದೆ. ರೌಡಿಗಳು ಬಾಲ ಬಿಚ್ಚದಂತೆ ಅವರ ಬಾಲಕ್ಕೇ ಕತ್ತರಿ ಪ್ರಯೋಗ ಯಾವಾಗ? ಎಂದು ನಗರವಸಿಗಳು ಕಾಯುತ್ತಿದ್ದಾರೆ. ಇದಕ್ಕೆಲ್ಲ ಕಲಬುರಗಿ ನಗರ ಪೊಲೀಸರು ತಮ್ಮ ರೌಡಿ ನಿಗ್ರಹ ಕ್ರಮಗಳಿಂದಲೇ ಉತ್ತರ ನೀಡಬೇಕಷ್ಟೆ.

click me!