ಕಲಬುರಗಿ: ಜೈಲಿನಲ್ಲಿರುವ ಗೆಳೆಯನಿಗೆ ಗಾಂಜಾ ಸರಬರಾಜು ಮಾಡಲು ಯತ್ನ, ಇಬ್ಬರು ವಶ

Published : Aug 06, 2023, 09:45 PM IST
ಕಲಬುರಗಿ: ಜೈಲಿನಲ್ಲಿರುವ ಗೆಳೆಯನಿಗೆ ಗಾಂಜಾ ಸರಬರಾಜು ಮಾಡಲು ಯತ್ನ, ಇಬ್ಬರು ವಶ

ಸಾರಾಂಶ

ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವಿಚಾರಣಾಧೀನ ಕೈದಿ ಅಜಯ್‌ ಶರಣಪ್ಪ ಎಂಬಾತನಿಗೆ ಗಾಂಜಾ ಮತ್ತು ನಶೆ ಬರುವ ಪೇಪರ್‌ ಸರಬರಾಜು ಮಾಡಲು ಯತ್ನಿಸಿ ಸಿಕ್ಕಿ ಬಿದ್ದ ಮಹ್ಮದ್‌ ಪೈಜಾನ್‌ ಮತ್ತು ಅಬ್ದುಲ್‌ ರಹಮಾನ್‌ ಜರಡಿ.

ಕಲಬುರಗಿ(ಆ.06):  ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಗೆಳೆಯನಿಗೆ ಗಾಂಜಾ ಮತ್ತು ನಶೆ ಬರುವ ಪೇಪರ್‌ (ಟ್ರಿಪರ್‌) ಸರಬರಾಜು ಮಾಡಲು ಯತ್ನಿಸಿದ ಇಬ್ಬರನ್ನು ಜೈಲು ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಮಹ್ಮದ್‌ ಪೈಜಾನ್‌ ಮತ್ತು ಅಬ್ದುಲ್‌ ರಹಮಾನ್‌ ಜರಡಿ ಎಂಬುವವರೆ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವಿಚಾರಣಾಧೀನ ಕೈದಿ ಅಜಯ್‌ ಶರಣಪ್ಪ ಎಂಬಾತನಿಗೆ ಗಾಂಜಾ ಮತ್ತು ನಶೆ ಬರುವ ಪೇಪರ್‌ ಸರಬರಾಜು ಮಾಡಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ.

ಕಲಬುರಗಿ: ಜೈಲಿನಲ್ಲಿದ್ದ ಪತಿಗೆ ಗಾಂಜಾ ಸರಬರಾಜಿಗೆ ಯತ್ನಿಸಿದ ಪತ್ನಿ..!

ಕೈದಿ ಅಜಯ್‌ ಶರಣಪ್ಪನನ್ನು ಭೇಟಿಯಾಗಿ ಎರಡು ಜೀನ್ಸ… ಪ್ಯಾಂಟ್‌ ನೀಡಲು ಮಹ್ಮದ್‌ ಪೈಜಾನ್‌ ಮತ್ತು ಅಬ್ದುಲ್‌ ರಹಮಾನ್‌ ಜರಡಿ ಸಂದರ್ಶನ ಚೀಟಿಯೊಂದಿಗೆ ಜೈಲಿಗೆ ಹೋಗಿದ್ದರು. ಈ ವೇಳೆ ಅವರು ತಂದಿದ್ದ ಜೀ®್ಸ… ಪ್ಯಾಂಟ್‌ ಪರಿಶೀಲಿಸಿದಾಗ ಪ್ಯಾಂಟ್‌ನ ಒಳಗಡೆ ಪಟ್ಟಿಯಲ್ಲಿ ಕೈಯಿಂದ ಹೊಲಿಗೆ ಹಾಕಿದ್ದ ದಪ್ಪನೆಯ ವಸ್ತು ಪತ್ತೆಯಾಗಿದೆ. ಹೊಲಿಗೆ ಬಿಚ್ಚಿ ಪರಿಶೀಲಿಸಿದಾಗ ಅದರಲ್ಲಿ 20 ಗ್ರಾಂ.ಗಾಂಜಾ ಮತ್ತು ನಶೆ ಬರುವ ಪೇಪರ್‌ ಪತ್ತೆಯಾಗಿದೆ. ತಕ್ಷಣವೇ ಇಬ್ಬರು ಆರೋಪಿಗಳನ್ನು ಜೈಲು ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ.

ನಂತರ ಇಬ್ಬರು ಆರೋಪಿಗಳನ್ನು ಕೇಂದ್ರ ಕಾರಾಗೃಹದ ಕೆಎಸ್‌ಐಎಸ್‌ಎಫ್‌ ಪಿಐ ವಿಶ್ವನಾಥ ಪಾಟೀಲ ಮತ್ತು ಜೈಲರ್‌ ವಿಶ್ವನಾಥ ಪಾಟೀಲ ಅವರು ಫರಹತಾಬಾದ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ. ಇಬ್ಬರು ಆರೋಪಿಗಳ ವಿರುದ್ಧ ಫರಹತಾಬಾದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಇತ್ತೀಚೆಗೆ ಮಹಿಳೆಯೊಬ್ಬಳು ಜೈಲಿನಲ್ಲಿರುವ ಪತಿಗೆ ಇದೇ ರೀತಿ ಗಾಂಜಾ ಸರಬರಾಜಲು ಯತ್ನಿಸಿ ಪರಾರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!