* ಚಿಕ್ಕಬಳ್ಳಾಪುರ: ಗೀತಂ ಯುನಿವರ್ಸಿಟಿಯಲ್ಲಿ ಉಗಾಂಡ ಮೂಲದ ವಿದ್ಯಾರ್ಥಿನಿ ಸಾವು
* ಬಹು ಮಹಡಿ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು,
* ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ
ವರದಿ: ರವಿಕುಮಾರ್ ವಿ
ದೇವನಹಳ್ಳಿ, (ಏ.28) ಪ್ರತಿಷ್ಠಿತ ಗೀತಂ ವಿವಿಯಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ಉಗಾಂಡ ಮೂಲದ ವಿದ್ಯಾರ್ಥಿನಿ ಹಸೀನಾ ಸಾವನ್ನಪ್ಪಿದ್ದು, ಕಾಲೇಜು ರಣರಂಗವಾಗಿ ಮಾರ್ಪಟ್ಟಿತ್ತು. ವಿವಿಯಲ್ಲಿ ಅಂತಿಮ ವರ್ಷದ ಎಂಜನಿಯರ್ ಪದವಿ ಓದುತ್ತಿದ್ದ ಹಸೀನಾ ಬಟ್ಟೆಯನ್ನು ತೆಗದುಕೊಳ್ಳಲು ಹೋದಾಗ ಕಾಲು ಜಾರಿ 6ನೇ ಮಹಡಿಯಿಂದ ಬಿದ್ದಿದ್ದಾಳೆ.
ಕೂಡಲೇ ಆಕೆಯನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೇ ಹಸೀನಾ ಸಾವನ್ನಪ್ಪಿದ್ದಾಳೆ.. ಇದರಿಂದ ಆಕ್ರೋಶಗೊಂಡ ಹಾಸ್ಟೆಲ್ ನ ವಿದ್ಯಾರ್ಥಿಗಳು ಕಲ್ಲೂ ತೂರಾಟ ನಡೆಸಿದ್ದಾರೆ. ಕೆಲವು ಕಟ್ಟಡಗಳ ಗ್ಲಾಸ್ ಪುಡಿ ಪುಡಿ ಮಾಡಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಕೂಡಲೇ ಸ್ಥಳಕ್ಕೆ ಆಗಮಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪರಿಸ್ಥಿತಿ ನಿಯಂತ್ರಸಿದ್ದಾರೆ. ಅಲ್ಲದೇ ಆಕ್ರೋಶಿತ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದ್ದಾರೆ.
Doddaballapura: ಗೀತಂ ವಿವಿ ಹಾಸ್ಟೇಲ್ ಮಹಡಿಯಿಂದ ಬಿದ್ದು ಉಗಾಂಡ ಮೂಲದ ವಿದ್ಯಾರ್ಥಿನಿ ಸಾವು
ಬಟ್ಟೆ ತೆಗದುಕೊಳ್ಳಲು ಹೋಗಿ ಪ್ರಾಣ ಬಿಟ್ಟ ಹಸೀನಾ
ಗೀತಂ ವಿವಿಯ ಹಾಸ್ಟೆಲ್ನಲ್ಲಿದ್ದ ಉಗಾಂಡ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಸೀನಾ 7ನೇ ಮಹಡಿಯಲ್ಲಿ ರೂಂನಲಿದ್ದಳು. ತನ್ನ ವೇಲ್ 6ನೇ ಮಹಡಿಯ ಶೀಟ್ ಮೆಲೆ ಬಿದ್ದಿದೆ. ಆ ಬಟ್ಟೆಯನ್ನ ಎತ್ತಿಕೊಳ್ಳಲು ತೆರಳಿದ್ದಳು ಈ ವೇಳೆ ಕಾಲು ಶೀಟ್ ಮೇಲೆ ಇಟ್ಟು ಬಟ್ಟೆಯನ್ನ ಎತ್ತಿಕೊಳ್ಳುವಾಗಬ ಆಯಾ ತಪ್ಪಿ 6 ನೇ ಮಹಡಿಯಿಂದ ನೆಲಕ್ಕೆ ಬಿದ್ದಿದ್ದಾಳೆ. ಈ ವೇಳೆ ವಿದ್ಯಾರ್ಥಿನಿಯನ್ನ ಬೆಂಗಳೂರಿನ ಹೆಬ್ಬಾಳದ ಮಣಿಪಾಲ್ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಹಸೀನಾ ಮೃತಪಟ್ಟಿದ್ದಾಳೆ.
ಹಸೀನಾ ಸಾವಿನ ಸುದ್ದಿ ಕೇಳಿ ಕೆರಳಿದ ವಿದ್ಯಾರ್ಥಿಗಳು
ಚಿಕಿತ್ಸೆ ಫಲಕಾರಿಯಾಗದೇ ಹಸೀನಾ ಸಾವನ್ನಪ್ಪತಿದ್ದಂತೆ ಇತ್ತ ವಿವಿಯಲ್ಲಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕಾಲೇಜಿನಲ್ಲಿ ದಂಧಾಲೆ ನಡೆಸಿ ಕಲ್ಲು ತೂರಾಟ ನಡೆಸಿದ್ದಾರೆ. ಜತೆಗೆ ಕಾಲೇಜಿನ ಸೆಕ್ಯೂರಿಟಿ ಕೌಂಟರ್ ಸೇರಿದಂತೆ ಹಲವೆಡೆ ಗ್ಲಾಸ್ಗಳನ್ನ ಪುಡಿ ಪುಡಿ ಮಾಡಿದ್ದಾರೆ. ಯುವಕ, ಯುವತಿಯರ ಹಾಸ್ಟೆಲ್ ವಿವಿ ಆವರಣದಲ್ಲೆ ಇದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಹಸೀನಾ ಸಾವು ಸುದ್ದಿ ಕೇಳಿ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ
ಗೀತಂ ವಿವಿಯ ಆವರಣದಲ್ಲಿ ಹಸೀನಾ ಸಾವಿನ ಬಳಿಕ ವಿದ್ಯಾರ್ಥಿಗಳು ರೊಚ್ಚಿಗೆದ್ದು ಸಾಕಷ್ಟು ಗಲಾಟೆ ಮಾಡಿದ್ದರು. ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ ಪಿ ವಂಶೀಕೃಷ್ಣ, ದೊಡ್ಡಬಳ್ಳಾಪುರ ತಹಶೀಲ್ದಾರ್ ಮೋಹನ್ ಕುಮಾರಿ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹಸೀನಾ ಸಾವು ಆಕಸ್ಮಿಕವಾಗಿ ಆಗಿದೆ. ಹಾಸ್ಟೆಲ್ ನಲ್ಲಿ ಕೆಲವೊಂದು ಲೋಪಗಳು ಇವೆ, ಮುಂದೆ ಇಂತಹ ಅನಾಹುತಗಳು ಆಗದಂತೆ ಎಚ್ಚರವಹಿಸಲು ನ್ಯೂನ್ಯತೆಗಳನ್ನು ಸರಿಪಡಿಸಲು ಆಡಳಿತ ಮಂಡಳಿಗೆ ಪತ್ರ ಬರೆಯೋದಾಗಿ ಹೇಳಿದರು.
ನಾಲ್ಕು ದಿನಗಳ ಹಿಂದೆಯೋ ಕ್ಯಾಂಪಸ್ ನಲ್ಲಿ ಹೊಡೆದಾಟ
ಕಳೆದ ನಾಲ್ಕು ದಿನಗಳಿಂದ ಗೀತಂ ಯುನಿವರ್ಸಿಟಿಯಲ್ಲಿ ತೆಲುಗು ಹಾಗೂ ಕನ್ನಡಿಗ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. 23 ರಂದು ನಡೆದ ಐಪಿಎಲ್ ಆರ್ಸಿಬಿ ಹಾಗೂ ಸನ್ರೈಸ್ ಹೈದರಾಬಾದ್ ಮ್ಯಾಚ್ನಲ್ಲಿ ಆರ್ಸಿಬಿ ಅಲೌಟ್ ಆಗಿತ್ತು. ಈ ವೇಳೆ ತೆಲುಗು ವಿದ್ಯಾರ್ಥಿ ಆರ್ಸಿಬಿ ಗೆಲ್ಲೋದಿಲ್ಲ ಅಂತಾ ವಾಟ್ಸಪ್ ಮೆಸೇಜ್ ಹಾಕಿದ್ದು, ಕನ್ನಡಿಗರ ವಿದ್ಯಾರ್ಥಿಗಳನ್ನ ಕೆರೆಳಿಸಿದ್ದರಂತೆ. ಹೀಗಾಗಿ ಕನ್ನಡಿಗ ವಿದ್ಯಾರ್ಥಿ ತೆಲುಗು ವಿದ್ಯಾರ್ಥಿಗಳಿಗೆ ಅಸಭ್ಯ ಪದಬಳಕೆ ಮೇಸೆಜ್ ಹಾಕಿದ್ದು, ಅಂದು ತೆಲುಗು ಹಾಗೂ ಕನ್ನಡಿಗ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಎರಡು ಗುಂಪುಗಳು ಕ್ಯಾಂಪಸ್ ನಲ್ಲಿ ಹೊಡೆದಾಡಿಕೊಂಡಿದ್ದರು. ಬಳಿಕ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಗಲಾಟೆಯಿಂದ ರಜೆ ಘೋಷಣೆ
ಉಗಾಂಡ ವಿದ್ಯಾರ್ಥಿನಿ ಕಟ್ಟಡ ಮೇಲಿಂದ ಬಿದ್ದು ಸಾವನ್ನಪ್ಪುತ್ತಿದ್ದಂತೆ, ಕಾಲೇಜು ಆವರಣ ರಣರಂಗವಾಗಿ ಮಾರ್ಪಟ್ಟಿದ್ದು, ಪಿಠೋಪಕರಣಗಳು ಕೂಡ ವಿದ್ಯಾರ್ಥಿಗಳು ದ್ವಂಸಮಾಡಿದ್ದರು. ಹೀಗಾಗಿ ಕಾಲೇಜಿನಲ್ಲಿ ತರಗತಿಗಳನ್ನು ರದ್ದು ಮಾಡಿದ ಆಡಳಿತ ಮಂಡಳಿ ರಜೆಯನ್ನ ಘೋಷಣೆ ಮಾಡಿತ್ತು. ಅಲ್ಲದೇ ಕ್ಯಾಂಪಸ್ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.