Sexual Harassment: ಯುವತಿ ಬಾಳಲ್ಲಿ ಆಟ ಆಡಿದ ಕಾಮುಕ ತುಮಕೂರು ಮಾಜಿ ಕಾರ್ಫೊರೇಟರ್ .. ಈ ಸಾವು ನ್ಯಾಯವೇ!

Published : Mar 09, 2022, 07:20 PM ISTUpdated : Mar 09, 2022, 07:26 PM IST
Sexual Harassment: ಯುವತಿ ಬಾಳಲ್ಲಿ ಆಟ ಆಡಿದ ಕಾಮುಕ ತುಮಕೂರು ಮಾಜಿ ಕಾರ್ಫೊರೇಟರ್ .. ಈ ಸಾವು ನ್ಯಾಯವೇ!

ಸಾರಾಂಶ

* ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ * ಮಾಜಿ ಕಾರ್ಪೋರೇಟರ್ ಹಾಗೂ ಚರ್ಚ್ ಕಮಿಟಿ ಸದಸ್ಯ ರಾಜೇಂದ್ರಕುಮಾರ್ ಆರೋಪಿ *  ತುಮಕೂರಿನ ಸಿ.ಎಸ್.ಐ ವೆಸ್ಲಿ ಚರ್ಚ್ ನಲ್ಲಿ ಸಭಾಪಾಲನ ಸದಸ್ಯನಾಗಿದ್ದ  ರಾಜೇಂದ್ರಕುಮಾರ್ * 2013ರಿಂದ 2018ರ ಅವಧಿಯಲ್ಲಿ ತುಮಕೂರು ಪಾಲಿಕೆಯ ನಾಮಿನಿ ಸದಸ್ಯನಾಗಿದ್ದ ರಾಜೇಂದ್ರಕುಮಾರ್

ತುಮಕೂರು(ಮೇ 09)  ಮಗಳು ಸಾವನ್ನಪ್ಪಿ (Death) ಒಂದು ವಾರಗಳೇ ಕಳೆದಿತ್ತು .ಮಗಳ ಸಾವು ಸಹಜ ಸಾವು ಅಂದುಕೊಂಡಿದ್ದ ತಾಯಿಗೆ ಮಗಳ ಮೊಬೈಲ್ (Mobile) ಕೊಟ್ಟ ಸುಳಿವು ಒಂದು ಕ್ಷಣ ಆಕೆಯನ್ನ ಬೆಚ್ಚಿಬಿಳಿಸಿತ್ತು. ಪೊಲೀಸರ (Karnataka Police) ತನಿಖೆಯಲ್ಲಿ ಮಗಳ ಸಾವಿನ ರಹಸ್ಯ ಬಯಲಾಗಿತ್ತು. ಇದೆಲ್ಲದ ಪರಿಣಾಂ  ಮಾಜಿ ಕಾರ್ಪೊರೇಟರ್ ಬಂಧನವಾಗಿದೆ.

ಈ ಮಹಾನುಭವನ ಹೆಸರು ರಾಜೇಂದ್ರಕುಮಾರ್ ತುಮಕೂರಿನ ಮಾಜಿ ಕಾರ್ಪೊರೇಟರ್... 18 ವರ್ಷದ ಯುವತಿಯನ್ನ ಅತ್ಯಾಚಾರ ಎಸಗಿ ಕೊಲೆ ಮಾಡಿರೋ ಆರೋಪದಡಿ ತುಮಕೂರು ಟೌನ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮಂಗಳೂರಲ್ಲಿ ಸ್ಟುಡೆಂಟ್ಸ್ ಬಳಸಿಕೊಂಡು ವೇಶ್ಯಾವಾಟಿಕೆ 

ಗಂಡನನ್ನ ಬಿಟ್ಟು ಬಂದಿದ್ದ ಕ್ರಿಶ್ಚಿಯನ್ ಸಮುದಾಯದ ಮಹಿಳೆ ಮಗಳ ಜೊತೆ ತುಮಕೂರಿನಲ್ಲಿ ವಾಸವಾಗಿದ್ದರು.. ತುಮಕೂರಿನ ಡಿಸಿ ಕಚೇರಿ ಬಳಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು.  5 ವರ್ಷಗಳ ಹಿಂದೆ ತಮ್ಮ ಸಮುದಾಯದ ಹೆಸರೇಳಿಕೊಂಡು ತುಮಕೂರಿನ ಮಾಜಿ ಕಾರ್ಪೋರೇಟರ್ ರಾಜೇಂದ್ರಕುಮಾರ್ ಪರಿಚಯವಾಗಿದ್ದ. ಕಳೆದ ಎರಡು ವರ್ಷಗಳ ಹಿಂದೆ ಕರೋನಾ ಕಿಟ್ ವಿತರಿಸೋ ವೇಳೆ ಮನೆಗೆ ಬಂದಿದ್ದ ರಾಜೇಂದ್ರಕುಮಾರ್ ಮನೆಯಲ್ಲಿ ತಾಯಿ ಮಗಳು ಇರೋದನ್ನ ಗಮನಿಸಿದ್ದ.  ಅದು ಹೇಗೋ ಮನೆಯಲ್ಲಿದ್ದ ಯುವತಿಯನ್ನು ಮರಳು ಮಾಡಿ ನಿರಂತರ ದೌರ್ಜನ್ಯ ಎಸಗುತ್ತಲೇ ಬಂದಿದ್ದ.   ಯುವತಿ ಗರ್ಭವತಿಯಾಗುತ್ತಿದ್ದಂತೆ ಯುವತಿಗೆ ಗರ್ಭನಿರೋಧಕ ಮಾತ್ರೆ ನೀಡಿ‌ ಯುವತಿಯಿಂದ ತಪ್ಪಿಸಿಕೊಳ್ಳೊಕೆ ಯತ್ನಿಸಿದ್ದ..

ಗರ್ಭ ನಿರೋಧಕ‌ ಮಾತ್ರೆ ನುಂಗಿದ ಯುವತಿಗೆ ಸೈಡ್ ಎಫೆಕ್ಟ್ ಆಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ..‌ಈ ವೇಳೆ ಆಕೆಯನ್ನ ತಮಗೆ ಪರಿಚಯಸ್ಥ ವೈದ್ಯರ ಬಳಿ ಕರೆದೊಯ್ದ ರಾಜೇಂದ್ರಕುಮಾರ್ ಯುವತಿಗೆ ಯಾವ್ದೊ ಖಾಯಿಲೆಯಾಗಿದೆ ಅಂತ ಬಿಂಬಿಸಿ ಕೇಸ್ ಮುಚ್ಚಿ ಹಾಕೋಕೆ.. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದ.. ಆಸ್ಪತ್ರೆಗೆ ದಾಖಲಾದ ಎರಡೇ ದಿನಕ್ಕೆ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.. ಈ ವೇಳೆ ಯುವತಿಯ ಮೃತದೇಹವನ್ನ ತುಮಕೂರಿಗೆ ತರದೇ ಬೆಂಗಳೂರಿನ ಶಾಂತಿನಗರ ಬಳಿಯಿರೋ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮುಗಿಸಿ ಕೈತೊಳೆದು ಕೊಂಡು ಇನ್ನುಂದೆ ಹಾಯಾಗಿರಬಹುದು ಅಂದುಕೊಂಡಿದ್ದ..

ಇನ್ನು ತಮ್ಮ ಮಗಳು ಖಾಯಿಲೆಯಿಂದ ಸಾವನ್ನಪ್ಪಿದ್ದಾಳೆ ಅಂದು ಕೊಂಡಿದ್ದ ತಾಯಿಗೆ ಮಗಳು ಸಾವನ್ನಪ್ಪಿ ಒಂದು ವಾರದ ಬಳಿಕ ಆಕೆಯ ಮೊಬೈಲ್ ಪರಿಶೀಲನೆ ನಡೆಸಿದಾಗ ಮಗಳ ಸಾವಿನ ರಹಸ್ಯ ಬೆಳಕಿಗೆ ಬಂದಿದೆ.. ಮಗಳ ಮೊಬೈಲ್‌ ನಲ್ಲಿದ್ದ ಆಡಿಯೋ, ವಿಡಿಯೋ, ಹಾಗೂ ಪೋಟೋಗಳನ್ನ ನೋಡಿದ ತಾಯಿಗೆ ಮಗಳು ಖಾಯಿಲೆಯಿಂದ ಸಾವನ್ನಪ್ಪಿಲ್ಲ ಕೊಲೆಯಾಗಿದೆ ಅನ್ನೋದು ಕನ್ಫಮ್ ಆಗಿದೆ... ಈ ವೇಳೆ ಆರೋಪಿ ರಾಜೇಂದ್ರಕುಮಾರ್ ಬಳಿ ಹಿಗ್ಯಾಕೆ ಮಾಡ್ದೆ ಅಂತ ಕೆಳೋಕೆ  ಹೋದಾಗ ನನ್ನ ಬಗ್ಗೆ ದೂರು ಕೊಟ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.

ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತುಮಕೂರು ಟೌನ್ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.‌ ಪ್ರಕರಣ ದಾಖಲಿಸಿಕೊಂಡ ತುಮಕೂರು ಪೊಲೀಸರು ಆರೋಪಿ ರಾಜೇಂದ್ರಕುಮಾರ್ ಬಂಧಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. 

ಕೇರಳ ಪ್ರಕರಣ:  ಅತ್ತೆಯ ಅಕ್ರಮ ಸಂಬಂಧ  ಬಯಲು ಮಾಡಿದ್ದಕ್ಕೆ ಸೊಸೆ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ.  ಕೇರಳದ  ತ್ರಿಸ್ಸೂರ್ ಜಿಲ್ಲೆಯ ಕೊರಟ್ಟಿಯಿಂದ ಘಟನೆ ವರದಿಯಾಗಿದೆ. ಪೆರಂಬೂರು ಮೂಲದ ವೈಷ್ಣವಿ ಹಲ್ಲೆಗೆ ಒಳಗಾದವರು. ವೈಷ್ಣವಿ ಅಂತಿಮ ವರ್ಷದ ಸಿವಿಲ್ ವಿದ್ಯಾರ್ಥಿನಿ.  ದಾಳಿಯಿಂದ ಗಂಭೀರ ಗಾಯಗೊಂಡಿರುವ ವೈಷ್ಣವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ನಿಗೆ ಎದುರಾದ ಘೋರ ಸ್ಥಿತಿಯನ್ನು ಪತಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 
 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!