
ಕೊಚ್ಚಿನ್(ಮೇ 09) ಇದೊಂದು ವಿಚಿತ್ರದಲ್ಲಿ ವಿಚಿತ್ರ ಪ್ರಕರಣ. ಅತ್ತೆಯ (Mother-in-law) ಅಕ್ರಮ ಸಂಬಂಧ (Illicit relationship) ಬಯಲು ಮಾಡಿದ್ದಕ್ಕೆ ಸೊಸೆ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ. ಕೇರಳದ (Kerala) ತ್ರಿಸ್ಸೂರ್ ಜಿಲ್ಲೆಯ ಕೊರಟ್ಟಿಯಿಂದ ಘಟನೆ ವರದಿಯಾಗಿದೆ. ಪೆರಂಬೂರು ಮೂಲದ ವೈಷ್ಣವಿ ಹಲ್ಲೆಗೆ ಒಳಗಾದವರು.
ವೈಷ್ಣವಿ ಅಂತಿಮ ವರ್ಷದ ಸಿವಿಲ್ ವಿದ್ಯಾರ್ಥಿನಿ. ದಾಳಿಯಿಂದ ಗಂಭೀರ ಗಾಯಗೊಂಡಿರುವ ವೈಷ್ಣವಿ ಆಸ್ಪತ್ರೆಯಲ್ಲಿ(Hospital) ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈಷ್ಣವಿ ಕೊರಟ್ಟಿಯ ಪಲಪಲ್ಲಿ ಮೊಜಿಕಿಲಂನ ಮುಕೇಶ್ ಎಂಬುವರನ್ನು ಆರು ತಿಂಗಳ ಹಿಂದೆ ವಿವಾಹವಾಗಿದ್ದರು. ಇದಾದ ಕೆಲವೇ ದಿನದಲ್ಲಿ ಅತ್ತೆಯ ಅಕ್ರಮ ಸಂಬಂಧದ ವಿಚಾರ ಗೊತ್ತಾಗಿದೆ. ಸಂಗತಿಯನ್ನು ಬಯಲು ಮಾಡಿದ್ದಕ್ಕೆ ಅತ್ತೆಯ ಪ್ರಿಯಕರ ವೈಷ್ಣವಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಹಲ್ಲೆ ಮಾಡಿದ ಅತ್ತೆಯ ಪ್ರಿಯಕರ ಮನೆಯಿಂದ ಮೂರು ಕಿಮೀ ದೂರದಲ್ಲಿ ನೆಲೆಸಿದ್ದಾನೆ. ಆತ ಮನೆಗೆ ಬರುವುದನ್ನು ತಡೆಯಲು ವೈಷ್ಣವಿ ಯತ್ನ ಮಾಡಿದ್ದೇ ಹಲ್ಲೆ ಮಾಡಲು ಮೂಲ ಕಾರಣ. ಮನೆಯವರ ಜತೆ ಮಾತನಾಡುತ್ತಿದ್ದ ನಿಂತಿದ್ದ ವೈಷ್ಣವಿ ಮುಖಕ್ಕೆ ಬಲವಾಗಿ ಹೊಡೆದಿದ್ದಾನೆ. ಪತ್ತಿ ರಕ್ಷಣೆಗೆ ಬಂದ ಮುಕೇಶ್ ಮೇಲೆಯೂ ಹಲ್ಲೆ ಮಾಡಿದ್ದಾನೆ. ಅತ್ತೆ ಮತ್ತು ಪತಿಯ ಸಹೋದರನಿಂದಲೂ ಕಿರುಕುಳ ಆಗುತ್ತಿತ್ತು ಎಂದು ವೈಷ್ಣವಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಪತ್ನಿ ಅನುಭವಿಸಿದ ನರಕ ಯಾತನೆಯನ್ನು ಪತಿ ಸೋಶಿಯಲ್ ಮೀಡಿಯಾ (Social Media) ಪೇಜ್ ನಲ್ಲಿ ಬರೆದಿದ್ದು ಜನರು ಸಹ ಆಕ್ರೋಶ ಭರಿತರಾಗಿ ಪ್ರತಿಕ್ರಿಯೆ ನೀಡಿದ್ದು ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಹಲ್ಲೆ ಮಾಡಿದ ಆರೋಪಿ ತಲೆ ಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.
ಮದುವೆಯಾದ ದಿನದಿಂದಲೇ ಅತ್ತೆಯ ಅಕ್ರಮ ಸಂಬಂಧದ ವಿಚಾರ ಗೊತ್ತಾಗಿತ್ತು. ಇದೇ ಕಾರಣಕ್ಕೆ ಮನೆಯಲ್ಲಿ ಒಂದೆರಡು ಸಾರಿ ಮನಸ್ತಾಪಗಳು ಆಗಿದ್ದವು. ಮರ್ಯಾದೆಗೆ ಅಂಜಿ ಪ್ರಕರಣ ಹೊರಗೆ ಬಂದಿರಲಿಲ್ಲ. ಆದರೆ ಅತ್ತೆಯ ಬಾಯ್ ಫ್ರೆಂಡ್ ನಿರಂತರವಾಗಿ ಮನೆಗೆ ಆಗಮಿಸಲು ಶುರುಮಾಡಿದ್ದನ್ನು ಸೊಸೆ ವಿರೋಧಿಸಿದ್ದಳು. ಮನೆಯಲ್ಲಿ ಈಕೆಯ ಗಂಡ ಇಲ್ಲದಿರುವಾಗ ಹಿಂಸೆ ನೀಡುತ್ತಿದ್ದರು. ಈ ಎಲ್ಲ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಗಂಡ ಬರೆದಿದ್ದಾರೆ.
ಹೆತ್ತ ಮಗನನ್ನೇ ಕೊಲ್ಲಿಸಿದಳು: ಕೊಪ್ಪಳ ಜಿಲ್ಲೆಯ (Koppal District) ಯುವಕನ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಿರುವು ಸಿಕ್ಕಿದ್ದು, ತನ್ನ ಪಲ್ಲಂಗದಾಟಕ್ಕೆ ಅಡ್ಡಿಯಾಗಿದ್ದಾನೆಂದು ಹೆತ್ತ ಮಗನನ್ನೆ ತಾಯಿ ಕೊಲೆ ಮಾಡಿಸಿದ್ದು ಗೊತ್ತಾಗಿತ್ತು.
ಗ್ರಾಪಂ ಸದಸ್ಯ ಮತ್ತು ಹಿರಿ ಮನನೊಂದಿಗೆ ಸೇರಿಕೊಂಡ ತಾಯಿ ತನ್ನ ಸಣ್ಣ ಮಗನನ್ನೆ ಕೊಲೆ ಮಾಡಿ ತಾಯಿ ಹೂತು ಹಾಕಿದ್ದಾಳು. ಅನೈತಿಕ ಸಂಭಂದಕ್ಕೆ ಅಡ್ಡಿಯಾಗುತ್ತಾನೆಂದು ತಾಯಿಯೇ ಮಗನನ್ನು ಕೊಲೆ ಮಾಡಿದ್ದಳು
Murder In Belagavi ಇಬ್ಬರನ್ನು ಬಿಟ್ಟು ಮೂರನೇ ಮದ್ವೆಯಾದ, ಆಕೆಯಿಂದಲೇ ಜೀವ ತೆತ್ತ
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮ್ಯಾದರಡೊಕ್ಕಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿತ್ತು. ಮ್ಯಾದರಡೊಕ್ಕಿ ಗ್ರಾಮದ ಯುವಕ ಬಸವರಾಜ್ ದೋಟಿಹಾಳ ಜನವರಿ 16 ರಂದು ಕಾಣೆಯಾಗಿದ್ದ. ಬಗ್ಗೆ ತಾವರಗೇರಾ ಠಾಣೆಯಲ್ಲಿ ಬಸವರಾಜ್ ನಾಪತ್ತೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ರೋಚಕ ಮಾಹಿತಿ ಸಿಗುತ್ತಾ ಹೋದವು.
ಅಮರಮ್ಮ ಹಾಗೂ ಗ್ರಾಪಂ ಸದಸ್ಯ ಅಮರೇಶ್ ಕಂದಗಲ್ ನಡುವೆ ಅನೈತಿಕ ಸಂಭಂದ (illicit relationship) ಇತ್ತು. ಇದಕ್ಕೆ ಅಮರಮ್ಮ ಮಗ ಬಸವರಾಜ್ ಅಡ್ಡಿಯಾಗಿದ್ದ. ಈ ಹಿನ್ನೆಲೆಯಲ್ಲಿ ಸಣ್ಣ ಮಗನನ್ನೇ ಹತ್ಯೆ ಮಾಡುವ ನಿರ್ಧಾರಕ್ಕೆ ತಾಯಿ ಬಂದಿದ್ದಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ