ಹುಲಿ ದಾಳಿಗೆ ಮತ್ತೊಬ್ಬ ಯುವಕ ಬಲಿ: ಸೌದೆ ತರಲು ಹೋದವ ಮಸಣ ಸೇರಿದ

By Sathish Kumar KH  |  First Published Jan 22, 2023, 4:04 PM IST

ಕಾಡಿನಲ್ಲಿ ಕಟ್ಟಿಗೆಯನ್ನು ತರಲು ಹೋಗಿದ್ದ ಯುವಕನ ಮೇಲೆ ಹುಲಿ ದಾಳಿ ಮಾಡಿದ್ದು, ತಲೆಯನ್ನು ಸೀಳಿ ಹಾಕಿದೆ. ಆದರೆ, ಅದೃಷ್ಟವಶಾತ್‌ ಕಟ್ಟಿಗೆ ತರಲು ಹೋಗಿದ್ದ ಇತರರು ಅಲ್ಲಿಂದ ಓಡಿ ಹೋಗಿದ್ದು ಪ್ರಾಣ ಉಳಿಸಿಕೊಂಡಿದ್ದಾರೆ.


ಮೈಸೂರು (ಜ.22): ಮೈಸೂರಿನಲ್ಲಿ ಕಾಡು ಪ್ರಾಣಿ ದಾಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಕಾಡಿನಲ್ಲಿ ಕಟ್ಟಿಗೆಯನ್ನು ತರಲು ಹೋಗಿದ್ದ ಯುವಕನ ಮೇಲೆ ಹುಲಿ ದಾಳಿ ಮಾಡಿದ್ದು, ತಲೆಯನ್ನು ಸೀಳಿ ಹಾಕಿದೆ. ಆದರೆ, ಅದೃಷ್ಟವಶಾತ್‌ ಕಟ್ಟಿಗೆ ತರಲು ಹೋಗಿದ್ದ ಇತರರು ಅಲ್ಲಿಂದ ಓಡಿ ಹೋಗಿದ್ದು ಪ್ರಾಣ ಉಳಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ತೀವ್ರ ಹೆಚ್ಚಾಗಿದೆ. ಕಾಡು ಪ್ರಾಣಿಗಳಾದ ಹುಲಿ, ಚಿರತೆ, ಕರಡಿ, ಆನೆ ದಾಳಿಗೆ ತುತ್ತಾಗುವವರ ಸಂಖ್ಯೆಯೂ ಅತ್ಯಧಿಕವಾಗುತ್ತಿದೆ. ಇಷ್ಟು ದಿನ ಆನೆ ಮತ್ತು ಚಿರತೆ ದಾಳಿಯ ಪ್ರಮಾಣ ಹೆಚ್ಚಾಗಿದ್ದು, ಜನರಿಗೆ ತೀವ್ರ ಆತಂಕ ಕಾಡುತ್ತಿತ್ತು. ನಿನ್ನೆರಾತ್ರಿ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ 11 ವರ್ಷದ ಬಾಲಕ ಸಾವನ್ನಪ್ಪಿದ್ದನು. ಆದರೆ, ಇಂದು ಬೆಳಗ್ಗೆ ಎಚ್.ಡಿ. ಕೋಟೆ ತಾಲೂಕಿನ ಯುವಕನನ್ನು ಹುಲಿ ಬಲಿ ಪಡೆದುಕೊಂಡಿದೆ. 

Latest Videos

undefined

Mysuru: ಟಿ.ನರಸೀಪುರ ತಾಲೂಕಿನಲ್ಲಿ ನಿಲ್ಲದ ಚಿರತೆ ಹಾವಳಿ: 11 ವರ್ಷದ ಬಾಲಕ ಸಾವು

ಸೌದೆ ತರಲು ಹೋದ ಗುಂಪಿನ ಮೇಲೆ ದಾಳಿ: ಹುಲಿ ದಾಳಿಗೆ ಸಿಲುಕಿದ ಮೃತನನ್ನು ಮಂಜು ಅಲಿಯಾಸ್ ಬೆಟ್ಟದ ಹುಲಿ (18 ) ಎಂದು ಗುರುತಿಸಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳಿಯ ಬಳ್ಳೆ ಅರಣ್ಯದಲ್ಲಿ ಹುಲಿ ದಾಳಿ ನಡೆದು ಸಾವನ್ನಪ್ಪಿದ ಅವಘಡ ನಡೆದಿದೆ.  ಸೌದೆ (ಕಟ್ಟಿಗೆ)ಯನ್ನು ತರಲು ಕಾಡಿಗೆ ಹೋಗಿದ್ದ ಗುಂಪಿನ ಮೇಲೆ ಹುಲಿ ಹಠಾತ್ ಎರುಗಿದೆ. ಹುಲಿ ದಾಳಿಯ ವೇಳೆ ಸಿಲುಕಿದ ಯುವಕ ಮಂಜುವಿನ ತಲೆಯನ್ನು ಸೀಳಿದೆ. ಆದರೆ, ಅವರೊಂದಿಗೆ ಕಟ್ಟಿಗೆ ತರಲು ಹೋಗಿದ್ದ ಗುಂಪಿನ ಸದಸ್ಯರು ಚಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಮಂಜು ಮೇಲೆ ಮಾತ್ರ ಹುಲಿ ದಾಳಿ ಮಾಡಿ ಕೊಂದು ಹಾಕಿದ್ದು, ಆಶ್ಚರ್ಯಕರ ರೀತಿಯಲ್ಲಿ ಉಳಿದವರು ಪಾರಾಗಿದ್ದಾರೆ.

ಕುಟುಂಬದಲ್ಲಿ ಆಕ್ರಂದನ:  ಇನ್ನು ಹುಲಿ ದಾಳಿಯ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ದಾಳಿಗೊಳಗಾದ ಮಂಜುವಿನ ಪ್ರಾಣ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ಹುಲಿ ಮಂಜುನನ್ನು ಕೊಂದು ಹಾಕಿತ್ತು. ನಂತರ ಮೃತದೇಹವನ್ನು ಎಚ್‌.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಘಟನೆ ಕುರಿತು ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆದರೆ, ಮೃತ ಯುವಕನ ಕುಟುಂಬದಲ್ಲಿ ಆಕ್ರೋಶ ಮುಗಿಲು ಮುಟ್ಟಿತ್ತು. 

ಮಂಡ್ಯದಲ್ಲಿ ಹೆಚ್ಚಾಯ್ತು ಚಿರತೆಯ ಹಾವಳಿ: 500 ಗ್ರಾಮಗಳಲ್ಲಿ ಆತಂಕ

ನಿನ್ನೆ ರಾತ್ರಿ ಚಿರತೆ ಹಾವಳಿಗೆ ಬಾಲಕ ಬಲಿ: 
ಟಿ.ನರಸೀಪುರ (ಜ.22): ತಾಲೂಕಿನಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು, 11 ವರ್ಷದ ಬಾಲಕನನ್ನ ಬಲಿ ಪಡೆದು ದೇಹವನ್ನು ಚಿರತೆಯು ಹೊತ್ತೊಯ್ದಿರುವ ಘಟನೆ ತಾಲ್ಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಹೊರಳಹಳ್ಳಿ ಗ್ರಾಮದ ಜಯಂತ್ (11) ವರ್ಷ ಮೃತ ಬಾಲಕ. ಜಯಂತ್ ಶವಕ್ಕಾಗಿ ರಾತ್ರಿಯೆಲ್ಲಾ ಗ್ರಾಮಸ್ಥರು ಹುಡುಕಾಟ ನಡೆಸುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿಗಳು ಹೊರಳಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಮೃತ ವ್ಯಕ್ತಿಯ ಬಾಲಕನ ಶವ ಪತ್ತೆ ಹಚ್ಚುವ ಭರವಸೆಯನ್ನು ಡಿಸಿ ಕೆವಿ ರಾಜೇಂದ್ರ ನೀಡಿದ್ದು, ಇದೀಗ ಹೊರಳಹಳ್ಳಿ ಗ್ರಾಮದಲ್ಲಿ ಪ್ರಸ್ತುತ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ಮೃತ ಬಾಲಕ ದೇಹ ಪತ್ತೆ: ಘಟನಾ ಸ್ಥಳದಿಂದ 1 ಕಿಮೀ ದೂರದಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದ್ದು, ಬಾಲಕನ ದೇಹವನ್ನ ವ್ಯಾಘ್ರ ಚಿರತೆ ತಿಂದು ಹಾಕಿದೆ. ಇನ್ನು ತಾಲ್ಲೂಕಿನ ಜನತೆಯಲ್ಲಿ ಆತಂಕ  ಮನೆ ಮಾಡಿದ್ದು, ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

click me!