ಡ್ರಗ್ಸ್‌ ಕೇಸ್‌: ನಿರ್ಮಾಪಕನ ಪಾರ್ಟಿಯಲ್ಲಿ ನಾನು ಡ್ರಗ್ಸ್‌ ಸೇವಿಸಿಲ್ಲ, ಟಾಲಿವುಡ್‌ ನಟ ತಾನೀಶ್‌

Kannadaprabha News   | Asianet News
Published : Mar 18, 2021, 08:14 AM IST
ಡ್ರಗ್ಸ್‌ ಕೇಸ್‌: ನಿರ್ಮಾಪಕನ ಪಾರ್ಟಿಯಲ್ಲಿ ನಾನು ಡ್ರಗ್ಸ್‌ ಸೇವಿಸಿಲ್ಲ,  ಟಾಲಿವುಡ್‌ ನಟ ತಾನೀಶ್‌

ಸಾರಾಂಶ

ಡ್ರಗ್ಸ್‌ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಸ್ಯಾಂಡ​ಲ್‌​ವು​ಡ್‌ ನಿರ್ಮಾ​ಪಕ ಶಂಕರ್‌ ಗೌಡ ಅವ​ರನ್ನು ವಿಚಾ​ರಣೆ ನಡೆ​ಸ​ಲಾ​ಗಿತ್ತು| ಈ ವೇಳೆ ಸ್ಯಾಂಡ​ಲ್‌​ವು​ಡ್‌, ಟಾಲಿ​ವುಡ್‌, ಬಾಲಿ​ವುಡ್‌ ನಂಟಿನ ಬಗ್ಗೆ ಬಾಯಿ​ಬಿ​ಟ್ಟಿದ್ದ ಶಂಕರ್‌ ಗೌಡ| ಈ ಹಿನ್ನೆ​ಲೆ​ಯಲ್ಲಿ ತಾನೀ​ಶ್‌ಗೆ ನೋಟಿಸ್‌| 

ಬೆಂಗಳೂರು(ಮಾ.18): ಡ್ರಗ್ಸ್‌ ಪ್ರಕ​ರಣ ಸಂಬಂಧ ತೆಲುಗು ಸಿನಿಮಾ ನಟ ತಾನೀಶ್‌ ಎಂಬು​ವ​ವ​ರನ್ನು ಗೋವಿಂದ​ಪುರ ಪೊಲೀ​ಸರು ಬುಧ​ವಾರ ವಿಚಾ​ರಣೆ ನಡೆ​ಸಿ​ದ್ದಾ​ರೆ.

ಈ ಹಿಂದೆ ಇದೇ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಸ್ಯಾಂಡ​ಲ್‌​ವು​ಡ್‌ ನಿರ್ಮಾ​ಪಕ ಶಂಕರ್‌ ಗೌಡ ಅವ​ರನ್ನು ವಿಚಾ​ರಣೆ ನಡೆ​ಸ​ಲಾ​ಗಿತ್ತು. ಈ ವೇಳೆ ಸ್ಯಾಂಡ​ಲ್‌​ವು​ಡ್‌, ಟಾಲಿ​ವುಡ್‌, ಬಾಲಿ​ವುಡ್‌ ನಂಟಿನ ಬಗ್ಗೆ ಬಾಯಿ​ಬಿ​ಟ್ಟಿದ್ದರು. ಈ ಹಿನ್ನೆ​ಲೆ​ಯಲ್ಲಿ ತಾನೀ​ಶ್‌ಗೆ ನೋಟಿಸ್‌ ಕೊಡ​ಲಾ​ಗಿ​ತ್ತು.

ಸಿಕ್ಕಿಬಿದ್ದ ಡ್ರಗ್ಸ್‌ಕೇಸ್ ಕಿಂಗ್‌ಪಿನ್, ಟಾಲಿವುಡ್ ನಟ ತನುಷ್‌ಗೂ ಸಂಕಷ್ಟ

ಈ ಸಂಬಂಧ ಬುಧ​ವಾರ ಮಧ್ಯಾಹ್ನ ತಾನೀಶ್‌ ವಿಚಾ​ರ​ಣೆಗೆ ಹಾಜ​ರಾ​ಗಿದ್ದು, ತಡರಾತ್ರಿ ವರೆಗೆ ವಿಚಾ​ರಣೆ ನಡೆ​ಸ​ಲಾ​ಗಿದೆ. ಬಳಿಕ ಅವರ ರಕ್ತದ ಮಾದರಿ ಮತ್ತು ಮೂತ್ರ​ದ ಸ್ಯಾಂಪಲ್‌ ಪಡೆದು ವೈದ್ಯ​ಕೀಯ ಪರೀ​ಕ್ಷೆಗೆ ಕಳು​ಹಿ​ಸ​ಲಾ​ಗಿ​ದೆ.

ವಿಚಾ​ರಣೆ ಸಂದ​ರ್ಭ​ದಲ್ಲಿ ಬೆಂಗ​ಳೂ​ರಿನ ಸಂಜ​ಯ್‌​ನ​ಗ​ರ​ದಲ್ಲಿ ನಿರ್ಮಾ​ಪಕ ಶಂಕರ್‌ ಗೌಡ ಅವರ ಕಚೇ​ರಿ​ಯಲ್ಲಿ ನಡೆ​ಯು​ತ್ತಿದ್ದ ಪಾರ್ಟಿಗೆ ಹಾಜ​ರಾ​ಗು​ತ್ತಿದ್ದೆ. ಈ ವೇಳೆ ಕೆಲ​ವರು ಡ್ರಗ್ಸ್‌ ಸೇವಿ​ಸು​ತ್ತಿ​ದ್ದರು. ಆದರೆ, ತಾನೂ ಡ್ರಗ್ಸ್‌ ಸೇವನೆ ಮಾಡು​ತ್ತಿ​ರ​ಲಿಲ್ಲ ಎಂದು ಹೇಳಿ​ಕೆ ನೀಡಿ​ದ್ದಾರೆ. ಹೀಗಾಗಿ ಗುರು​ವಾರ ಮತ್ತೊಮ್ಮೆ ವಿಚಾ​ರ​ಣೆಗೆ ಹಾಜ​ರಾ​ಗ​ಬೇ​ಕೆಂದು ನೋಟಿಸ್‌ ಕೊಟ್ಟು ಕಳು​ಹಿ​ಸ​ಲಾ​ಗಿ​ದೆ ಎಂದು ಮೂಲ​ಗಳು ತಿಳಿ​ಸಿ​ವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ನಕಲಿ ಕ್ಯೂಆರ್​ ಕೋಡ್​ಗೆ ಬಲಿಯಾಗದಿರಿ ಎಚ್ಚರ! ಯಾಮಾರಿದ್ರೆ ಅಕೌಂಟ್​ ಖಾಲಿ: ನಕಲಿ ಗುರುತಿಸುವುದು ಹೇಗೆ?