ಅಕ್ರಮವಾಗಿ ಸರ್ಕಾರಿ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಬಂಡೆ ಸಿಡಿಸಲು ಜಿಲಿಟಿನ್ ಬಳಸಿದ ಆರೋಪದ ಮೇರೆಗೆ ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು (ಜು.14): ಅಕ್ರಮವಾಗಿ ಸರ್ಕಾರಿ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಬಂಡೆ ಸಿಡಿಸಲು ಜಿಲಿಟಿನ್ ಬಳಸಿದ ಆರೋಪದ ಮೇರೆಗೆ ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಣಸಮಾರನಹಳ್ಳಿ ಹಾಗೂ ಸೊಣ್ಣಪ್ಪನ ಗ್ರಾಮಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಯಲಹಂಕ ತಾಲೂಕಿನ ತಹಶೀಲ್ದಾರ್ ಅನಿಲ್ ಅರೋಳಿಕರ್ ದೂರು ನೀಡಿದ್ದು, ಅದರನ್ವಯ ಮಾಜಿ ಸಚಿವ ಮುನಿರತ್ನ, ಆನಂದನ್, ವಿ.ಗಣೇಶ್ ಹಾಗೂ ರಾಧಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅನುಮತಿಯಿಲ್ಲ: ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಹುಣಸಮಾರನಹಳ್ಳಿ ಗ್ರಾಮದ ಸರ್ವೇ ನಂ.179ರಲ್ಲಿ ಸರ್ಕಾರಿ ಕರಾಬು ಬಂಡೆ ಪ್ರದೇಶವಿದೆ. ಈ ಜಮೀನಿನ ಪಕ್ಕದ ಸರ್ವೇ ನಂ.177/3, 178/1-2-3, 179 ಹಾಗೂ ಸೊಣ್ಣಪ್ಪನಹಳ್ಳಿ ಗ್ರಾಮದ ಸರ್ವೇ ನಂ.34/1-2-3 ಹಾಗೂ ಸರ್ವೇ ನಂ.17/7-8-9 ಜಮೀನಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಹಾಗೂ ಬಂಡೆ ಸಿಡಿಸಲು ಜಿಲೆಟಿನ್ ಬಳಸುತ್ತಿದ್ದಾರೆ ಎಂದು ಆರೋಪಿಸಿ ಪ್ರಾದೇಶಿಕ ಆಯುಕ್ತರಿಗೆ ಜೈ ಭೀಮ್ ಸೇನೆ ಸಂಘಟನೆ ಕಾರ್ಯಕರ್ತರು ದೂರು ನೀಡಿದ್ದರು. ಈ ದೂರಿನ ಬಗ್ಗೆ ತನಿಖೆ ನಡೆಸುವಂತೆ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದರು.
ಟ್ಯೂಷನ್‌ಗೆ ಹೊರಟಿದ್ದ ಬಾಲಕಿ ಅಪಹರಣ ಯತ್ನ: ಆರೋಪಿ ಬಂಧನ
ಪೊಲೀಸ್ ನೋಟಿಸ್: ಮೂರು ದಿನದೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಮುನಿರತ್ನ ಸೇರಿ, ನಾಲ್ವಲು ಆರೋಪಿಗಳಿಗೂ ಪೊಲೀಸರು ನೋಟೀಸ್ ನೀಡಿದ್ದು, ಗಣಿಗಾರಿಕೆ ನಡೆಸಲು ಇರುವ ದಾಖಲೆಗಳನ್ನೂ ಒದಗಿಸುವಂತೆ ಹೇಳಿದ್ದಾರೆ.
ಎಂಜಿನಿಯರ್ ಮೇಲೆ ಹಲ್ಲೆಗೆ ಸಿಡಿದೆದ್ದ ಸರ್ಕಾರಿ ನೌಕರರು: ಚಿತ್ರದುರ್ಗ ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಎಂಜಿನಿಯರ್ ಮೇಲೆ ನಡೆದ ತೀವ್ರ ಹಲ್ಲೆ ಪ್ರಕರಣಕ್ಕೆ ಸರ್ಕಾರಿ ನೌಕರರು ಸಿಡಿದೆದ್ದಿದ್ದಾರೆ. ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ನೌಕರರು ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಮನವಿ ಸಲ್ಲಿಸಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಲೋಕೋಪಯೋಗಿ ಇಲಾಖೆ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಪಿಎಂಜಿಎಸ್‌ವೈ ಉಪ ವಿಭಾಗದ ಸಹಾಯಕ ಇಂಜಿನಿಯರ್ ಜಿ.ಎಂ.ನಾಗರಾಜ್ ಕಳೆದ ಸೋಮವಾರ ಕಸವನಹಳ್ಳಿ ರಸ್ತೆ ಕಾಮಗಾರಿ ಪರಿಶೀಲಿಸುತ್ತಿದ್ದಾಗ ಹಲ್ಲೆ ಮಾಡಲಾಗಿದೆ. ಗ್ರಾಮದ ವೀರಕರಿಯಪ್ಪ ಸೇರಿ ಏಳು ಮಂದಿ ಇಂಜಿನಿಯರ್ ಜೊತೆ ವಾಗ್ವಾದಕ್ಕಿಳಿದು ನಂತರ ಕಲ್ಲಿನಿಂದ ಬಲವಾಗಿ ಹೊಡೆದಿದ್ದಾರೆ. ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತ ಸ್ರಾವವಾಗಿ ನಿತ್ರಾಣಗೊಂಡಿದ್ದ ನಾಗರಾಜು ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಈ ರೀತಿ ದಾಳಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಎಚ್.ಡಿ.ಕುಮಾರಸ್ವಾಮಿಗೆ ಒಕ್ಕಲಿಗರು ಬೆಳೆಯೋದು ಇಷ್ಟವಿಲ್ಲ: ಸಚಿವ ಚಲುವರಾಯಸ್ವಾಮಿ
ಎಂಜಿನಿಯರ್ ಮೇಲಿನ ಹಲ್ಲೆಗೆ ಇಡೀ ಸರ್ಕಾರಿ ನೌಕರರ ಸಮೂಹ ಬೆಚ್ಚಿ ಬಿದ್ದಿದೆ. ಏಕಾಏಕಿ ದಾಳಿ ಮಾಡಿದರೆ ಅಭಿವೃದ್ಧಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕಾಮಗಾರಿ ನಡೆಯುತ್ತಿದ್ದು ಇದೇ ಪ್ರವೃತ್ತಿ ಮುಂದುವರಿದರೆ ಅಧಿಕಾರಿಗಳಾರೂ ಹಳ್ಳಿಗಳಿಗೆ ಹೋಗಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗುತ್ತದೆ ಎಂದರು. ಹಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲು ಮಾಡಲಾಗಿದೆ. ಇಲ್ಲಿಯವರೆಗೂ ಆರೋಪಿ ಬಂಧಿಸಿಲ್ಲ. ರಾಜ್ಯ ಸರ್ಕಾರ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ತಿಮ್ಮಾರೆಡ್ಡಿ ಆಗ್ರಹಿಸಿದರು.