ಹಾವಿನ ತಲೆ ಕಚ್ಚಿ ಹಿಂಸಿಸಿ ಕೊಂದ ದುರುಳರು: ವಿಡಿಯೋ ವೈರಲ್‌ ಬೆನ್ನಲ್ಲೇ ಮೂವರ ಅರೆಸ್ಟ್‌

By BK Ashwin  |  First Published Apr 6, 2023, 3:46 PM IST

ತಮಿಳುನಾಡಿನ ಕೈನೂರು ನಿವಾಸಿಗಳಾದ ಮೋಹನ್, ಸೂರ್ಯ ಮತ್ತು ಸಂತೋಷ್ ಎಂಬ ಮೂವರು ವ್ಯಕ್ತಿಗಳು ಸರೀಸೃಪವನ್ನು ಹಿಂಸಿಸಿ ಕೊಂದು ಕೃತ್ಯವನ್ನು ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಡಿಯೋದಲ್ಲಿ ಮೋಹನ್ ಹಾವನ್ನು ಹಿಡಿದಿರುವುದನ್ನು ನೋಡಬಹುದು, ಅದು ತನ್ನ ಕೈಗೆ ಕಚ್ಚಿದೆ ಎಂದು ಆತ ಹೇಳಿಕೊಂಡಿದ್ದು, ಅದಕ್ಕೆ ಆತ ಸೇಡು ತೀರಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.


ರಾಣಿಪೇಟೆ (ಏಪ್ರಿಲ್ 6, 2023): ಭಾರತದಲ್ಲಿ, ಮನುಷ್ಯ ಮತ್ತು ಹಾವನ್ನು ಒಳಗೊಂಡ ಹಲವಾರು ವಿಲಕ್ಷಣ ಘಟನೆಗಳು ನಾವು ಊಹಿಸುವುದಕ್ಕಿಂತ ಹೆಚ್ಚಾಗಿ ಬೆಳಕಿಗೆ ಬರುತ್ತವೆ. ಇಂತಹದೊಂದು ಘಟನೆ ಇದೀಗ ತಮಿಳುನಾಡಿನಲ್ಲಿ ವರದಿಯಾಗಿದೆ. ರಾಣಿಪೇಟ್ ಜಿಲ್ಲೆಯಲ್ಲಿ ಹಾವನ್ನು ಹಿಡಿದು, ಅದರ ತಲೆಯನ್ನು ಕಚ್ಚಿ, ಘಟನೆಯನ್ನು ರೆಕಾರ್ಡ್ ಮಾಡಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಈ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಳಿಕ ಪರಿಸರ ಕಾರ್ಯಕರ್ತರು ವನ್ಯಜೀವಿ ಅಪರಾಧ ನಿಯಂತ್ರಣ ಅಧಿಕಾರಿಗಳನ್ನು ಎಚ್ಚರಿಸಿದ್ದು, ನಂತರ ಇವರನ್ನು ಬಂಧಿಸಲಾಗಿದೆ.

ತಮಿಳುನಾಡಿನ ಕೈನೂರು ನಿವಾಸಿಗಳಾದ ಮೋಹನ್, ಸೂರ್ಯ ಮತ್ತು ಸಂತೋಷ್ ಎಂಬ ಮೂವರು ವ್ಯಕ್ತಿಗಳು ಸರೀಸೃಪವನ್ನು ಹಿಂಸಿಸಿ ಕೊಂದು ಕೃತ್ಯವನ್ನು ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಡಿಯೋದಲ್ಲಿ ಮೋಹನ್ ಹಾವನ್ನು ಹಿಡಿದಿರುವುದನ್ನು ನೋಡಬಹುದು, ಅದು ತನ್ನ ಕೈಗೆ ಕಚ್ಚಿದೆ ಎಂದು ಆತ ಹೇಳಿಕೊಂಡಿದ್ದು, ಅದಕ್ಕೆ ಆತ ಸೇಡು ತೀರಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.

Tap to resize

Latest Videos

ಇದನ್ನು ಓದಿ: ಚೆನ್ನೈ ದೇಗುಲದ ಬಳಿಯ ಟ್ಯಾಂಕ್‌ನಲ್ಲಿ ಮುಳುಗಿ ಐವರ ದಾರುಣ ಸಾವು: ಮೃತದೇಹಗಳು ಪತ್ತೆ
 
ಇನ್ನಿಬ್ಬರು ಹಾವನ್ನು ಬಿಡುವಂತೆ ಒತ್ತಾಯಿಸಿದರೂ ಮೋಹನ್ ನಿರಾಕರಿಸಿ ಹಾವಿನ ತಲೆಯನ್ನು ಕಚ್ಚಿದ್ದಾನೆ. ಇನ್ನು, ಹಾವಿನ ರಕ್ತಸ್ರಾವದ ದೇಹ ಮತ್ತು ಬೇರ್ಪಟ್ಟ ತಲೆಯ ಕ್ಲೋಸ್-ಅಪ್ ಅನ್ನು ಚಿತ್ರಿಸುವಾಗ ಮೂವರೂ ನಗುವುದನ್ನು ಕೇಳಬಹುದು. ಘಟನೆಯ ನಂತರ ಆರ್ಕಾಟ್ ರೇಂಜರ್‌ಗೆ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಅವರು ಶಂಕಿತರನ್ನು ಬಂಧಿಸಿದರು. ಇನ್ನು, ಆರೋಪಿಗಳ ವಿರುದ್ಧ ಪ್ರಾಣಿಹಿಂಸೆ ಹಾಗೂ ಕಾಡುಪ್ರಾಣಿಯನ್ನು ಕೊಂದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಇನ್ನು, ಈ ರೀತಿಯ ಘಟನೆಗಳು ನಡೆದಿರೋದು ಇದೇ ಮೊದಲಲ್ಲ.

ಹಾವನ್ನೇ ಕಚ್ಚಿ ಕೊಂದ ಬುಡಕಟ್ಟು ವ್ಯಕ್ತಿ
 2021 ರಲ್ಲಿ, ಒಡಿಶಾದ ಜಾಜ್‌ಪುರ ಜಿಲ್ಲೆಯ ದೂರದ ಹಳ್ಳಿಯಲ್ಲಿ 45 ವರ್ಷದ ಬುಡಕಟ್ಟು ವ್ಯಕ್ತಿಯೊಬ್ಬರು ಸರೀಸೃಪ ಆತನನ್ನು ಕಚ್ಚಿದ ನಂತರ, ಆತ ಹಾವನ್ನೇ ಕಚ್ಚಿ ಸಾಯಿಸಿದ್ದರು ಎಂದು ವರದಿಯಾಗಿತ್ತು. ಹಾವನ್ನು ಕೊಂದ ಬಳಿಕ ಶವವನ್ನು ತನ್ನ ಗ್ರಾಮಕ್ಕೆ ಕೊಂಡೊಯ್ದು ತನ್ನ ಪತ್ನಿಗೆ ನಡೆದ ಘಟನೆಯನ್ನು ತಿಳಿಸಿದ್ದರು.

ಇದನ್ನೂ ಓದಿ: ಅಯ್ಯೋ ಪಾಪ..! 3 ತಿಂಗಳ ಕಂದಮ್ಮನನ್ನು ಕೊಂದು ನೇಣು ಬಿಗಿದುಕೊಂಡ ದಂಪತಿ

ದನಗಡಿ ಬ್ಲಾಕ್ ವ್ಯಾಪ್ತಿಯ ಸಾಲಿಜಂಗ ಪಂಚಾಯತ್ ವ್ಯಾಪ್ತಿಯ ಗಂಭಾರಿಪಾಟಿಯ ಗ್ರಾಮದ ಕಿಶೋರ್ ಭದ್ರ ಅವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಅವರ ಕಾಲಿಗೆ ಹಾವು ಕಚ್ಚಿದೆ. ಭದ್ರ ಹಾವನ್ನು ಹಿಡಿದು ಕಚ್ಚಿ ಸಾಯಿಸಿದ್ದರು ಎಂದು ತಿಳಿದುಬಂದಿತ್ತು.

ಸೇಡು ತೀರಿಸಿಕೊಳ್ಳಲು ಹಾವಿನ ತಲೆ ಕಚ್ಚಿದೆ
ಇನ್ನು, ಇದೇ ರೀತಿ 2018 ರಲ್ಲಿ, ಉತ್ತರ ಪ್ರದೇಶದ ಹರ್ದೋಯ್‌ನಲ್ಲಿ ವ್ಯಕ್ತಿಯೊಬ್ಬ ಹಾವಿನ ತಲೆಯನ್ನು ಕಚ್ಚಿ ಅದನ್ನು ಅಗಿದು ಉಗುಳಿದ್ದರು. ಹಾವು ಕಚ್ಚಿದ್ದರಿಂದ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿರುವುದಾಗಿ ಸೋನೆಲಾಲ್ ಹೇಳಿಕೊಂಡಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು. ಆದರೆ ವೈದ್ಯರಿಗೆ ಆತನ ಮೇಲೆ ಯಾವುದೇ ಕಚ್ಚಿದ ಗುರುತುಗಳು ಪತ್ತೆಯಾಗಿರಲಿಲ್ಲ.

ಇದನ್ನೂ ಓದಿ: ಮದ್ವೆಗೆ ಗಿಫ್ಟ್‌ ಕೊಟ್ಟ ಮ್ಯೂಸಿಕ್‌ ಸಿಸ್ಟಂನಲ್ಲಿ ಬಾಂಬ್‌..! ವಧುವಿನ ಎಕ್ಸ್ ಬಾಯ್‌ಫ್ರೆಂಡ್‌ ಅಂದರ್‌

click me!