ದೇವಸ್ಥಾನದಲ್ಲಿ ಇಷ್ಟದ ಹಾಡು ಹಾಕದ್ದಕ್ಕೆ ಇಬ್ಬರು ಭಕ್ತರಿಂದ ಯುವಕನಿಗೆ ಹಲ್ಲೆ!

By Kannadaprabha News  |  First Published Apr 6, 2023, 11:23 AM IST

ತಮ್ಮಿಷ್ಟದ ಹಾಡುಗಳನ್ನು ಹಾಕಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪೆಂಡಾಲ್‌ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಇಬ್ಬರು ಭಕ್ತರು ಹಲ್ಲೆ ನಡೆಸಿದ ಘಟನೆ ಪಟ್ಟಣದ ಶಿಡೇನೂರ ರಸ್ತೆಯಲ್ಲಿರುವ ಸೀತಾಪತಿ ಹಾಗೂ ಢಾಕು ಮಹಾರಾಜರ ದೇವಸ್ಥಾನದ ಆವರಣದಲ್ಲಿ ನಡೆದಿದೆ.


ಬ್ಯಾಡಗಿ (ಏ.6) : ತಮ್ಮಿಷ್ಟದ ಹಾಡುಗಳನ್ನು ಹಾಕಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪೆಂಡಾಲ್‌ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಇಬ್ಬರು ಭಕ್ತರು ಹಲ್ಲೆ ನಡೆಸಿದ ಘಟನೆ ಪಟ್ಟಣದ ಶಿಡೇನೂರ ರಸ್ತೆಯಲ್ಲಿರುವ ಸೀತಾಪತಿ ಹಾಗೂ ಢಾಕು ಮಹಾರಾಜರ ದೇವಸ್ಥಾನದ ಆವರಣದಲ್ಲಿ ನಡೆದಿದೆ.

ಗುಂಡೇನಹಳ್ಳಿ ಗ್ರಾಮದ(Gundenahalli village) ಶಿವಪುರ ತಾಂಡಾದ ರಮೇಶ ಲಮಾಣಿ(Ramesh lamani) (28) ಹಲ್ಲೆಗೆ ಒಳಗಾದವರು. ಪ್ರತಿ ವರ್ಷದಂತೆ ಪಟ್ಟಣದ ಹೊರವಲಯದಲ್ಲಿರುವ ಶಿಡೇನೂರ ರಸ್ತೆಯ ಸಿತಾಪತಿ ಮತ್ತು ಢಾಕು ಮಹಾರಾಜರ ದೇವಸ್ಥಾನ(Daku maharaj temple)ದ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿಯಾಗಿ ಪೆಂಡಾಲ್‌ ಹಾಗೂ ಮೈಕ್‌ಸೆಟ್‌ ಹಾಕಲಾಗಿತ್ತು. ಈ ವೇಳೆ ಗಗನ ಬಣಕಾರ ಮತ್ತು ಪ್ರವೀಣ್‌ ಲಮಾಣಿ ಎಂಬಿಬ್ಬರು ತಮಗಿಷ್ಟವಾದ ಹಾಡು ಹಾಕುವಂತೆ ರಮೇಶ ಲಮಾಣಿಗೆ ಒತ್ತಾಯಿಸಿದ್ದಾರೆ.

Tap to resize

Latest Videos

undefined

ಕ್ಷುಲ್ಲಕ ಕಾರಣಕ್ಕೆ ಯುವಕರ ಮೇಲೆ ಪೊಲೀಸರ ಹಲ್ಲೆ

ಇದಕ್ಕೆ ನಿರಾಕರಿಸಿದ ರಮೇಶ ಮೇಲೆ ಕಬ್ಬಿಣದ ರಾಡ್‌ಗಳಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ಕುರಿತಂತೆ ಬ್ಯಾಡಗಿ ಪೊಲೀಸ್‌ ಠಾಣೆ(Byadagi police station)ಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಡಿಜೆ ಮೈಕ್‌ ಸೌಂಡ್‌ ಸಿಸ್ಟಮ್‌ ಸಲುವಾಗಿ ರಮೇಶ ಲಮಾಣಿ ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾಗಿ ಪ್ರವೀಣ ತಾಯಿ ಪ್ರತಿದೂರು ನೀಡಿದ್ದಾರೆ. ಎರಡು ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಮುಂದುವರಿಸಿದ್ದಾರೆ.

ಪ್ರಥಮ ಪಿಯುಸಿ ಫೇಲ್; ವಿದ್ಯಾರ್ಥಿ ಆತ್ಮಹತ್ಯೆ?

ಬ್ಯಾಡಗಿ: ಯುವಕನೊಬ್ಬ ನೇಣು ಬಿಗಿದುಕೊಂಡು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. 

Breaking: ಪರೀಕ್ಷೆ ವೇಳೆಯಲ್ಲಿಯೇ ಕೊಡಗಿನ 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರಮೋದ ಮುತ್ತಯ್ಯ ಕೋಟಿಹಾಳ(Pramod muttaiah Kotihala) (17) ಮೃತನು. ಹಾವೇರಿ ಸಿಂದಗಿಮಠದ ಕಾಲೇಜಿ(Sindagi mutt collage haveri)ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ಇತ್ತೀಚೆಗೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ ಪ್ರಮೋದ. ಪ್ರಥಮ ಪಿಯುಸಿಯಲ್ಲೇ ಫೇಲ್ ಆಗಿದ್ದಕ್ಕೆ ತುಂಬಾ ಖಿನ್ನತೆಯಿಂದ ಬಳಲಿದ್ದ ವಿದ್ಯಾರ್ಥಿ. ಸಹಪಾಠಿಗಳೆಲ್ಲರೂ ಪಾಸ್ ಆಗಿದ್ದಾರೆಂಬುದು ಇನ್ನಷ್ಟು ಅವಮಾನಿತನಾಗಿದ್ದೇನೆಂದೆನಿಸಿ ಇದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ವಿದ್ಯಾರ್ಥಿ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ವಿಷಯ ತಿಳಿದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ(Virupakshappa Bellary) ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

click me!