ವಿಧವೆಗೆ ಬಾಳು ಕೊಡುವುದಾಗಿ ಪೊಲೀಸಪ್ಪನಿಂದ ಮಹಾ ಮೋಸ: ಮೂರು ಬಾರಿ ಗರ್ಭಪಾತ.!

By Sathish Kumar KH  |  First Published Apr 6, 2023, 2:17 PM IST

ಕೊಪ್ಪಳ ಮೂಲದ ಭಾರತೀಯ ಮೀಸಲು ಪಡೆ (ಐಆರ್‌ಬಿ) ಪೊಲೀಸ್‌ ನಿಮ್ಮನ್ನೇ ಮದುವೆಯಾಗುತ್ತೇನೆ ಎಂದು ನಂಬಿಸಿ ವಿಧವೆ ಮಹಿಳೆಯೊಬ್ಬರಿಗೆ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.


ಕೊಪ್ಪಳ (ಏ.06): ಕೊಪ್ಪಳ ಮೂಲದ ಭಾರತೀಯ ಮೀಸಲು ಪಡೆ (ಐಆರ್‌ಬಿ) ಪೊಲೀಸ್‌ ನಿಮ್ಮನ್ನೇ ಮದುವೆಯಾಗುತ್ತೇನೆ ಎಂದು ನಂಬಿಸಿ ಮಹಿಳೆಯೊಬ್ಬರಿಗೆ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ, ಈಕೆ ವಿಧವೆಯಾಗಿದ್ದರೂ ಮೋಸ ಮಾಡಿದ್ದಾನೆ ಎನ್ನುವುದೇ ಪೊಲೀಸಪ್ಪನ ನೀಚ ಕಾರ್ಯ, ಮಾನವೀಯತೆಯನ್ನು ಅಣಕಿಸುವಂತಿದೆ.

ಕೊಪ್ಪಳದ ಐಆರ್‌ಬಿ ಪೊಲೀಸ್ ಯಮನೂರಪ್ಪ ಸುಬ್ಬಾಲಿ ಎಂಬಾತನಿಂದ ಮೋಸವಾಗಿದೆ ಎಂಬ ಆರೋಪ ಕೇಳಿಬಂದಿದೆ. ಕುಸುಮಾ ಮೋಸ ಹೋದ ಮಹಿಳೆಯಾಗಿದ್ದಾರೆ. ಐಆರ್‌ಬಿ ಪೊಲೀಸ್ ಕಾನ್ಸ್‌ಟೇಬಲ್ ಯಮನೂರಪ್ಪ ತನಗೆ ಸರ್ಕಾರಿ ನೌಕರಿಯಿದೆ. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ಮದುವೆಯಾಗಿ ಬಾಳು ಕೊಡುತ್ತೇನೆ ಎಂದು ಪುಸಲಾಯಿಸಿ 5 ವರ್ಷ ಸಂಸಾರವನ್ನು ನಡೆಸಿದ್ದಾನೆ. ಈ ನಡುವೆ ಐದು ವರ್ಷದ ಸಂಸಾರದ ವೇಳೆ ವಿಚ್ಛೇದಿತ ಮಹಿಳೆ ಗರ್ಭಿಣಿಯಾಗಿದ್ದರೂ ಮದುವೆ ಆಗುವವರೆಗೂ ಮಗು ಮಾಡಿಕೊಳ್ಳುವುದು ಬೇಡವೆಂದು 3 ಬಾರಿ ಗರ್ಭಪಾತ ಮಾಡಿಸಿದ್ದಾನೆ. ಆದರೆ, ಈಗ ಬೇರೊಂದು ಮದುವೆಯಾಗಲು ಸಿದ್ಧತೆ ನಡೆಸಿದ್ದು, ಸಂತ್ರಸ್ತ ಮಹಿಳೆ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾಳೆ.

Tap to resize

Latest Videos

undefined

Bengaluru: ವಿಚ್ಛೇದನದ ಬಳಿಕ ಒಂಟಿ ಹೆಣ್ಣಿನ ಬಾಳಿಗೆ ಸಂಗಾತಿಯಾದ, ಕೊಂದು ಗುರುತೇ ಸಿಗದಂತೆ ಸುಟ್ಟ!

ಸದ್ಯಕ್ಕೆ 4ನೇ ಬಾರಿ ಗರ್ಭಿಣಿ: ಇನ್ನು ಪ್ರತಿಬಾರಿ ಗರ್ಭಪಾತ ಮಾಡಿಸುವಾಗಲೂ ನಿನ್ನನ್ನು ಮದುವೆ ಆಗುತ್ತೇನೆ. ಮದುವೆಯಾದ ನಂತರ ಮಗು ಮಾಡಿಕೊಳ್ಳೋಣ. ಈಗ ಈ ಗರ್ಭವನ್ನು ತೆಗೆಸಿಬಿಡೋಣ ಎಂದು ತಾನೇ ಮುಂದೆ ನಿಂತು ಗರ್ಭಪಾತ ಮಾಡಿಸಿದ್ದಾನೆ. ನಾಲ್ಕನೇ ಬಾರಿಗೆ ಈಗ ಗರ್ಭ ಧರಿಸಿದ ಮಹಿಳೆಗೆ ಈಗಲೂ ಗರ್ಭಪಾತ ಮಾಡಿಸಲು ಮುಂದಾಗಿದ್ದಾನೆ. ಆದರೆ, ಪೊಲೀಸಪ್ಪನ ಅಸಲಿ ಆಟ ಈಗ ಬಯಲಾಗಿದ್ದು, ತನ್ನನ್ನು ಬಿಟ್ಟು ಬೇರೊಬ್ಬಳೊಂದಿಗೆ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸುಳಿವು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳದೇ ಆತನ ಮಗುವನ್ನು ಹೊಟ್ಟೆಯಲ್ಲಿ ಹೊತ್ತುಕೊಂಡು ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ.

5 ವರ್ಷ ಸಂಸಾರ - 3 ಬಾರಿ ಗರ್ಭಪಾತ ಮಾಡಿಸಿದ್ದ ಪೊಲೀಸಪ್ಪ: ಇನ್ನು ಕೊಪ್ಪಳದ ಗ್ರಾಮವೊಂದರ ನಿವಾಸಿ ಆಗಿರುವ ಸಂತ್ರಸ್ತ ಮಹಿಳೆ ಕುಸುಮಾ ತನ್ನ ಮೊದಲ ಗಂಡನ ಅಕಾಲಿಕ ಮರಣದ ನಂತರ, ಎರಡನೆ ಮದುವೆಯಾಗಿದ್ದಳು. ಆದರೆ, ಎರಡನೆ ಮದುವೆಯ ಬಳಿಕ ಮೊದಲ ಗಂಡನ ಆಸ್ತಿ ತರುವಂತೆ ಕಿರುಕುಳದ ಹಿನ್ನೆಲೆ ಗಂಡನಿಂದ ಡೈವರ್ಸ ಪಡೆದು ಪ್ರತ್ಯೇಕವಾಗಿ ವಾಸವಾಗಿದ್ದಳು. ವಿಚ್ಚೇದನದ ಬಳಿಕ ಒಂಟಿಯಾಗಿ ವಾಸವಾಗಿದ್ದ ಮಹಿಳೆಗೆ ಸಾಂತ್ವನ ಹೇಳುನ ನೆಪದಲ್ಲಿ ಪರಿಚಯವಾದ ಪೊಲೀಸ್‌ ಯಮನೂರಪ್ಪ ತಾನೊಬ್ಬ ಅನಾಥನೆಂದು ಹೇಳಿಕೊಂಡಿದ್ದನು. ಇನ್ನು ಮಹಿಳೆಗೆ ಬಾಳು ಕೋಡೊದಾಗಿ ಮಹಿಳೆಯ ಮಗುವಿನ ಜವಾಬ್ದಾರಿ ಹೊರುವುದಾಗಿ ನಂಬಿಸಿದ್ದನು.

ಪೊಲೀಸನ ಕುಟುಂಬದಿಂದ ಮಹಿಳೆಗೆ ಕೊಲೆ ಬೆದರಿಕೆ: ಕೊಪ್ಪಳದ ಹಿಟ್ನಾಳ ಗ್ರಾಮದಲ್ಲಿ ಪೊಲೀಸ್‌ ಯಮನೂರಪ್ಪ ಪುಟ್ಟದೊಂದು ಮನೆಯನ್ನು ಮಾಡಿ ಮಹಿಳೆಯೊಂದಿಗೆ ಸಂಸಾರ ನಡೆಸಿದ್ದನು. ಆದರೆ, ಈಗ ಬೇರೆ ಮದುವೆಗೆ ಪೊಲೀಸಪ್ಪ ಮುಂದಾಗಿದ್ದಾನೆ. ಈಗ ಪೊಲೀಸಪ್ಪನಿಂದ ಮೋಸ ಹೋಗಿ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾಳೆ. ಇದರ ನಡುವೆಯೂ ಆಕೆಗೆ ಗರ್ಭಪಾತ ಮಾಡಿಸಬೇಕು ಎಂದು ಪೊಲೀಸ್‌ ಯಮನೂರಪ್ಪ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾನೆ. ಜೊತೆಗೆ, ಯಮನೂರಪ್ಪನ ಕುಟುಂಬದಿಂದ ಮಹಿಳೆಗೆ ಕೊಲೆ ಬೆದರಿಕೆಯೂ ಕೇಳಿಬಂದಿದೆ. ಇನ್ನು ಸಂತ್ರಸ್ತ ಮಹಿಳೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾಳೆ.

ಪ್ರೀತಿಸಿ ಮದುವೆಯಾದರೂ ವರದಕ್ಷಿಣೆ ಕಿರುಕುಳ ಕೊಟ್ಟ: ನಿನ್ನ ಪ್ರೀತಿ ಸಾಕೆಂದು ಕೊಂದೇಬಿಟ್ಟ.!

ಬಟ್ಟೆ ಅಂಗಡಿ ಇಟ್ಟುಕೊಂಡವಳ ಪುಸಲಾಯಿಸಿ ಪೊಲೀಸ್: ಬಟ್ಟೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಳು. ಇಬ್ಬರ ಮಧ್ಯೆ ಪರಿಚಯವಾಗಿತ್ತು. ಆ ಪರಿಚಯ ಕೆಲ ದಿನ ಕಳೆಯುವಷ್ಟರಲ್ಲೆ ಪ್ರೀತಿಗೆ ತೀರುಗಿ ಒಟ್ಟಿಗೆ ಬಾಳೋಕೆ ಶುರುಮಾಡಿದ್ದರು. ನಿನ್ನನ್ನ ಮದುವೆಯಾಗ್ತಿನಿ ಅಂತ ಆಕೆಯನ್ನ ನಂಬಿಸಿ ಸಂಸಾರ ಶುರು ಮಾಡಿದ್ದ. ಐದು ವರ್ಷಗಳ ಕಾಲ ಒಟ್ಟಿಗೆ ಬದುಕಿ ಸಧ್ಯ ಆಕೆಗೆ ಕೈಕೊಟ್ಟಿದ್ದಾನೆ. ಕೇಳಿದರೆ ಕೊಲೆ ಮಾಡೋ ಬೇದರಿಕೆ ಹಾಕ್ತಿದ್ದಾನೆ. ಹೀಗಾಗೇ ದಿಕ್ಕು ತೋಚದ ಆಕೆ ಠಾಣೆ ಮೆಟ್ಟಲೇರಿದ್ದಾಳೆ. ಪೊಲೀಸಪ್ಪನ ಲವ್ವಡವ್ವಿ ಕಹಾನಿ ಸಧ್ಯ ಎಸ್ಪಿ ಕಚೇರಿಗೂ ತಲುಪಿದೆ. ಮದುವೆಯಾಗೋದಾಗಿ ನಂಬಿಸಿ ಗರ್ಭವತಿ ಮಾಡಿದ ಕಾಖಿ ಮಾತ್ರ ಕಣ್ಮರೆಯಾಗಿದ್ದಾನೆ. ಸದ್ಯ ಎಲ್ಲವನ್ನೂ ಪಡೆದುಕೊಂಡು ನೀನು ಬೇಡ ಎಂತಿರೋ ಪೊಲೀಸಪ್ಪನಿಂದ ನ್ಯಾಯ ಕೊಡಿಸಿ ಅಂತ ಈ ಮಹಿಳೆ ಪೊಲೀಸ್‌ ಠಾಣೆಗಳಿಗೆ ಅಲೆಯುತ್ತಿದ್ದಾಳೆ.

click me!