
ಹೊನ್ನಾವರ (ಏ.6) : ತಾಲೂಕಿನ ನಗರೆ ಮಾರಿಮನೆಯ ಗಗನ ರವಿ ನಾಯ್ಕ (21) ಗೋವಾದ ಬೀಚ್ ವೊಂದರ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.
ರಾಮನವಮಿ ದಿನ(Ramanavami)ದಂದು ಮನೆಯಿಂದ ಹೊನ್ನಾವರ ಜಾತ್ರೆಗೆ ಹೋಗುತ್ತೇನೆ ಎಂದು ಮೂರು ಜನ ಸ್ನೇಹಿತರೊಂದಿಗೆ ಮನೆಯಲ್ಲಿ ಹೇಳದೇ ಗೋವಾಗೆ ಹೋಗಿದ್ದನು ಎನ್ನಲಾಗಿದೆ. ನೆರೆ ರಾಜ್ಯ ಗೋವಾ ಹೋದ ಬಳಿಕ ಮನೆಗೆ ಬೇರೊಂದು ಸಂಖ್ಯೆಯಿಂದ ಕರೆ ಮಾಡಿ ಸಂಬಂಧಿಕರ ಮನೆಯಲ್ಲಿ ಇರುವುದಾಗಿ ತಿಳಿಸಿದ್ದ. ಜೊತೆಗಿದ್ದ ಸ್ನೇಹಿತರು ವಾಪಾಸ್ ಬಂದ ಬಳಿಕ ಈತನು ಗೋವಾದಲ್ಲೇ ಇರದೇ ಮನೆಗೆ ಬಾರದ ಮಗನನ್ನು ಮನೆಯವರು ಹುಡುಕುತ್ತಾ ಇರುವಾಗ ಮೃತ ಪಟ್ಟಿರುವುದು ಬೆಳಕಿಗೆ ಬಂದಿದೆ.
ಅಯ್ಯೋ ಪಾಪ..! 3 ತಿಂಗಳ ಕಂದಮ್ಮನನ್ನು ಕೊಂದು ನೇಣು ಬಿಗಿದುಕೊಂಡ ದಂಪತಿ
ಈ ಕುರಿತು ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಹರೆಯದ ಹುಡುಗನ ಸಾವಿಗೆ ಅಸಲಿ ಕಾರಣವೇನು? ಜೊತೆಗಿದ್ದ ಸ್ನೇಹಿತರಿಗೆ ಈತ ಹೇಳಿದ್ದು ಏನು? ಅಸಲಿಗೆ ಅಲ್ಲಿ ನಡೆದಿದ್ದೇನು ಎನ್ನುವ ಹತ್ತು ಹಲವು ಅನುಮಾನಗಳಿಗೆ ಉತ್ತರ ಸೂಕ್ತ ತನಿಖೆಯಿಂದ ದೊರೆಯಬೇಕಿದೆ. ಪುತ್ರನನ್ನು ಕಳೆದುಕೊಂಡ ಆತನ ಕುಟುಂಬದ ದುಃಖ, ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯುವಕ ಕುಟುಂಬಕ್ಕೆ ಒಬ್ಬನೆ ಮಗನಾಗಿದ್ದ, ತಂದೆ ಸಾಕಷ್ಟುಜಮೀನು ಹೊಂದಿದ್ದು ಕೃಷಿ ಬೇಸಾಯ ಜೊತೆಗೆ ಉಧ್ಯಮದಲ್ಲೂ ತೊಡಗಿಕೊಂಡಿದ್ದರು. .
ಮದುವೆಯಾಗಿದ್ರೂ ಅಪ್ರಾಪ್ತೆ ವಿದ್ಯಾರ್ಥಿನಿಗೆ ತಾಳಿ ಕಟ್ಟಿದ ಟೀಚರ್: ಕಾಮುಕ ಶಿಕ್ಷಕನ ಬಂಧನ
ಪತಿ- ಪತ್ನಿ ನೇಣಿಗೆ ಶರಣು
ಹೊನ್ನಾವರ: ತಾಲೂಕಿನ ಬೈಲಗದ್ದೆ ಸಮೀಪ ಮನೆಯ ಕೋಣೆಯಲ್ಲಿ ಪತಿ- ಪತ್ನಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ವರದಿಯಾಗಿದೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಪತಿ, ಪತ್ನಿ ಮನನೊಂದು ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವೆಂಕ್ಟತಿಮ್ಮಪ್ಪ ನಾಯ್ಕ(65) ಹಾಗೂ ಗೋಪಿ ವೆಂಕ್ಟನಾಯ್ಕ(60) ಎಂಬುವವರೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಮನೆಯಲ್ಲಿ ಯಾರು ಇಲ್ಲದ ವೇಳೆ ಅಡಿಗೆ ಕೋಣೆಯ ಜಂತಿಗೆ ಇಬ್ಬರೂ ಒಟ್ಟಿಗೆ ಸೇರಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ