
ಬೆಂಗಳೂರು (ಏ.5): ಪ್ರಿಯಕರನಿಂದಲೇ ಮಹಿಳೆ ಕೊಲೆ ನಡೆದಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯನ್ನು ಕೊಂದು ಇಡೀ ದೇಹವನ್ನು ಪ್ರಿಯಕರ ಸುಟ್ಟು ಹಾಕಿದ್ದಾನೆ. ಎಲೆಕ್ಟ್ರಾನಿಕ್ ಸಿಟಿಗೆ ಸಮೀಪದ ಸಂಪಿಗೆನಗರದಲ್ಲಿ ಈ ಘಟನೆ ನಡೆದಿದ್ದು, ಮಂಜುಳಾ(32) ಕೊಲೆಯಾದ ಮಹಿಳೆಯಾಗಿದ್ದಾಳೆ. ನಾರಾಯಣ( 42) ಪ್ರೇಯಸಿಯನ್ನು ಕೊಂದ ಆರೋಪಿಯಾಗಿದ್ದಾನೆ. ಪತಿ ಜೊತೆ ವಿಚ್ಛೇದನ ಪಡೆದ ಬಳಿಕ ಆರೋಪಿ ನಾರಾಯಣನ ಜೊತೆ ಮಂಜುಳಾ ವಾಸವಿದ್ದಳು. ಕಳೆದ ಹತ್ತು ವರ್ಷಗಳಿಂದ ನಾರಾಯಣನ ಜೊತೆ ಸಂಸಾರ ನಡೆಸುತ್ತಿದ್ದಳು. ಮಂಜುಳಾ ಅಪಾರ್ಟ್ಮೆಂಟ್ ಒಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು. ಆದ್ರೆ ಇತ್ತೀಚೆಗೆ ಮಂಜುಳಾ ಬಗ್ಗೆ ನಾರಾಯಣ ಅನುಮಾನಪಡುತ್ತಿದ್ದ. ಅಪಾರ್ಟ್ಮೆಂಟ್ ನಿವಾಸಿ ಜೊತೆ ಅಕ್ರಮ ಸಂಬಂಧ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದ ಮಾತ್ರವಲ್ಲ ಅಪಾರ್ಟ್ಮೆಂಟ್ ಕೆಲಸ ಬಿಡುವಂತೆ ಗಲಾಟೆ ಮಾಡುತ್ತಿದ್ದ.
ಆದರೆ ಮಂಜುಳಾ ಕೆಲಸ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು. ಇದಕ್ಕೆ ಆಕ್ರೋಶಗೊಂಡ ನಾರಾಯಣ ಮಂಜುಳಾನ್ನು ಕೊಲೆ ಮಾಡಿದ್ದಾನೆ. ಮಾರ್ಚ್ 29 ರಂದು ಮಾತನಾಡುವ ನೆಪದಲ್ಲಿ ಕರೆದೊಯ್ದು ಕೊಲೆ ಮಾಡಿದ್ದಾನೆ. ಇಬ್ಬರು ಯಾವಾಗಲೂ ಸೇರುತ್ತಿದ್ದ ಜಾಗದಲ್ಲಿಯೇ ಕೊಲೆ ಮಾಡಿ ಆಕೆಯ ಇಡೀ ದೇಹವನ್ನು ಸುಟ್ಟಿದ್ದಾನೆ. ಗುರುತೇ ಸಿಗದಂತೆ ಮಂಜುಳಾ ದೇಹ ಸುಟ್ಟು ಕರಕಲಾಗಿದೆ. ಕೊಲೆ ನಡೆದ ಸ್ಥಳದಲ್ಲಿ ತಲೆ ಬುರುಡೆ ಮತ್ತು ಬೆನ್ನು ಮೂಳೆ ಮಾತ್ರ ಪತ್ತೆಯಾಗಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಪೊಲೀಸರ ಶೋಧ ನಡೆಸುತ್ತಿದ್ದಾರೆ.
ಕೋಳಿ ಸಾರು ಖಾಲಿಯಾಗಿದ್ದಕ್ಕೆ ಜಗಳ, ಮಗನನ್ನೇ ಕೊಲೆಗೈದ ತಂದೆ!
ತಮ್ಮನ ಅಕ್ರಮ ಸಂಬಂಧ ಬೆಂಗಳೂರಿನ ಅಣ್ಣನನ್ನು ಕಾರಲ್ಲಿ ಕಟ್ಟಿ ಬೆಂಕಿ ಹಚ್ಚಿ ಹತ್ಯೆ!
ಚಿತ್ತೂರು: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಅಣ್ಣನನ್ನು ಆಕೆಯ ಮನೆಯವರು ಕಾರಿನಲ್ಲಿ ಕಟ್ಟಿಪೆಟ್ರೋಲ್ ಸುರಿದು ಕೊಂದಿರುವ ಭೀಕರ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ವಿವಾಹಿತ ಮಹಿಳೆಯ ಕುಟುಂಬದವರು ಹುಡುಗನ ಅಣ್ಣನನ್ನು ಕಾರಿನಲ್ಲಿ ಕಟ್ಟಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಂತರ ಕಾರನ್ನು ಪ್ರಪಾತಕ್ಕೆ ದೂಡಲು ಯತ್ನಿಸಿದ್ದರು. ಆದರೆ ವಿಫಲವಾಗಿ ಕಾರು ಅಲ್ಲೇ ಸುಟ್ಟು ಭಸ್ಮವಾಗಿದೆ.
ಬಿಜೆಪಿ ಮುಖಂಡ YOGESH GOWDA ಹತ್ಯೆ ಪ್ರಕರಣ, ಬಿರಾದಾರ್ ಮಾಫಿ ಸಾಕ್ಷಿಗೆ ಹೈಕೋರ್ಟ್ ಒಪ್ಪಿಗೆ
ನಂತರ ಸ್ಥಳಿಯರು ಪೊಲೀಸರ ಗಮನಕ್ಕೆ ತಂದು ತನಿಖೆ ನಡೆಸುತ್ತಿದ್ದಾರೆ. ಮೃತನ ತಮ್ಮ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಇದನ್ನು ವಿರೋಧಿಸಿದ್ದ ಮಹಿಳೆಯ ಕುಟುಂಬದವರು ಆತನ ಅಣ್ಣನಿಗೆ ವಿಷಯ ತಿಳಿಸಿ, ಪುನಃ ಮರುಕಳಿಸದಂತೆ ಎಚ್ಚರಿಸಿದ್ದರು. ಆದರೆ ಇದಲ್ಲಿ ವಿಫಲನಾಗಿದ್ದ ಅಣ್ಣನನ್ನು ಈ ರೀತಿಯಾಗಿ ಕೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ