ಪ್ರೀತಿಸಿ ಮದುವೆಯಾದರೂ ವರದಕ್ಷಿಣೆ ಕಿರುಕುಳ ಕೊಟ್ಟ: ನಿನ್ನ ಪ್ರೀತಿ ಸಾಕೆಂದು ಕೊಂದೇಬಿಟ್ಟ.!

By Sathish Kumar KH  |  First Published Apr 5, 2023, 5:31 PM IST

ಜಾತಿ ಬೇಧವನ್ನು ಬದಿಗಿಟ್ಟು ಅಂತರ್ಜಾತಿ ಮದುವೆಯಾಗಿದ್ದ ವ್ಯಕ್ತಿ, ಒಂದು ವರ್ಷದೊಳಗೆ ಜಾತಿ ನಿಂದನೆ ಮತ್ತು ವರದಕ್ಷಿಣೆ ಕಿರುಕುಳ ಕೊಟ್ಟು ಪತ್ನಿಯ ಪ್ರಾಣವನ್ನೇ ತೆಗೆದಿದ್ದಾನೆ. 


ವರದಿ: ಕಿರಣ್.ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಏ.05): ನನಗೆ ನೀನೇ ಬೇಕು. ನಿನ್ನ ಬಿಟ್ಟು ಒಂದು ಕ್ಷಣವೂ ಇರಲಾರೆ ಎಂದು ಜಾತಿ ಬೇಧವನ್ನು ಬದಿಗಿಟ್ಟು ಮದುವೆಯಾಗಿದ್ದ ವ್ಯಕ್ತಿ ಈಗ ಜಾತಿ ನಿಂದನೆ ಮತ್ತು ವರದಕ್ಷಿಣೆ ಕಿರುಕುಳ ಕೊಟ್ಟು ಪತ್ನಿಯ ಪ್ರಾಣವನ್ನೇ ತೆಗೆದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಮದುವೆಯಾಗಿ ಸುಖ ಸಂಸಾರ ಮಾಡಬೇಕಿದ್ದ ಹುಡುಗಿ ಪ್ರೀತಿಸಿ ಮದುವೆಯಾದವನ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿರುವುದು ನೋಡಿದರೆ ಕರುಳು ಹಿಂಡುತ್ತದೆ. ಮಾನವೀಯತೆಯೇ ಇಲ್ಲವೇ ಎಂಬ ಆಕ್ರೋಶವಂತೂ ಉಕ್ಕುತ್ತದೆ. ಕಳೆದ ಒಂದು ವರ್ಷದ ಹಿಂದಷ್ಟೆ ಅಂತರ್ ಜಾತಿ ವಿವಾಹ ಆಗಿದ್ದ ಈ ಜೋಡಿ. ಮದುವೆ ಆದ್ಮೇಲೆ ಯುವತಿಗೆ ಜಾತಿ ನಿಂದನೆ ಮಾಡಿ ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾನೆಂದು ಮೃತ ಯುವತಿ ಸಂಬಂಧಿಕರಿಂದ ಗಂಭೀರ ಆರೋಪ ಕೇಳಿ ಬಂದಿದೆ.

Tap to resize

Latest Videos

ಸಾವನ್ನಪ್ಪಿದ ಯುವತಿಯನ್ನು ಪೂರ್ಣಿಮಾ (22) ಎಂದು ಗುರುತಿಸಲಾಗಿದೆ. ಪ್ರೀತಿಸಿದ ಹುಡುಗನನ್ನು ಮನೆಯವರ ವಿರೋಧದ ನಡುವೆಯೂ ಮದುವೆಯಾಗಿ ಚಿತ್ರದುರ್ಗ ಬಳಿಯ ಗಾರೇಹಟ್ಟಿ ಗ್ರಾಮದಲ್ಲಿ ವಾವಾಗಿದ್ದಳು. ಆದರೆ, ಒಂದು ವರ್ಷ ಕಳೆಯುವ ಮೊದಲೇ ಸಾವನ್ನಪ್ಪಿದ್ದು, ಆಕೆಯ ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ಈಕೆ ಸಾವಿನ ಸುದ್ದಿಯನ್ನು ಮೊದಲು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಮೃತ ದೇಹವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಆಸ್ಪತ್ರೆ ಶವಾಗಾರದ ಯವತಿ ಪೋಷಕರ ಆಕ್ರಂದ ಮುಗಿಲು ಮುಟ್ಟಿತ್ತು.

ಕೋಳಿ ಸಾರು ಖಾಲಿಯಾಗಿದ್ದಕ್ಕೆ ಜಗಳ, ಮಗನನ್ನೇ ಕೊಲೆಗೈದ ತಂದೆ!

ರಿಜಿಸ್ಟರ್‌ ಮ್ಯಾರೇಜ್‌ ಮಾಡಿದ್ದ ಪೋಷಕರು: ಕೋಟೆನಾಡು ಚಿತ್ರದುರ್ಗದಲ್ಲಿ ಕಳೆದ ಒಂದು ವರ್ಷದ ಹಿಂದಷ್ಟೇ ಪೂರ್ಣಿಮಾ ಹಾಗೂ ಆರೋಪಿ ಚಿತ್ರಲಿಂಗಪ್ಪ ಇಬ್ಬರು ಪರಸ್ಪರ ಇಷ್ಟ ಪಟ್ಟು ಪ್ರೀತಿಸಿ ಮದುವೆ ಅಗಿದ್ದರು. ಯುವತಿ ಛಲವಾದಿ ಹಾಗೂ ಯುವಕ ಯಾದವ ಸಮುದಾಯ ಆಗಿದ್ದರೂ ಕೂಡ ಹುಡುಗಿಯ ಕಡೆಯವರು ಇನ್ನೇನು ಮದುವೆ ಆಗಿದ್ದಾರೆ. ಹೇಗೋ ಸಂಸಾರ ಮಾಡಿಕೊಂಡು ಚೆನ್ನಾಗಿ ಇರಲಿ ಬಿಡು ಎಂದು ಇಬ್ಬರನ್ನು ರಿಜಿಸ್ಟರ್ ಮ್ಯಾರೇಜ್ ಮಾಡಿಸಿ ಬಿಟ್ಟಿದ್ದರು. ಆದರೆ ಕಳೆದ ಒಂದು ವರ್ಷದಿಂದಲೂ ಆರೋಪಿ ಚಿತ್ರಲಿಂಗ ಮಾತ್ತ ಪತ್ನಿ ಪೂರ್ಣಿಮಾ ಳಿಗೆ ಇನ್ನಿಲ್ಲದ ಚಿತ್ರಹಿಂಸೆ ಕೊಟ್ಟಿದ್ದಾನೆ.‌ 

ಅನಾರೋಗ್ಯದ ನಂತರ ಚಿತ್ರಹಿಂಸೆ ಆರಂಭ: ಇನ್ನು ಹುಡುಗನನ್ನು ನಂಬಿಕೊಂಡು ಅಪ್ಪ - ಅಮ್ಮನನ್ನು ಬಿಟ್ಟು ಜೀವನ ಮಾಡುವುದಾಗಿ ತಾಳಿ ಕಟ್ಟಿಸಿಕೊಮಡು ಬಂದ ಯುವತಿಗೆ ವರದಕ್ಷಿಣೆ ಹಾಗೂ ಜಾತಿ ನಿಂದನೆ ಮಾಡುವ ಮೂಲಕ ನಿತ್ಯ ಚಿತ್ರ ಹಿಂಸೆ ಕೊಟ್ಟಿದ್ದಾನೆ‌. ಪ್ರೀತಿಸಿ ಮದುವೆ ಆಗಬೇಕಾದರೆ ಇಲ್ಲದ ಜಾತಿ ವ್ಯವಸ್ಥೆ, ಇವನಿಗೆ ಮದುವೆ ಆದ್ಮೇಲೆ ಹೇಗೆ ಬಂತು. ಹೀಗೆ ನಿತ್ಯ ನಮ್ಮ ಹುಡುಗಿಗೆ ಚಿತ್ರಹಿಂಸೆ ಕೊಡುವ ಮೂಲಕ ಈಗ ಆಕೆಯ ಪರಾಣವನ್ನೇ ತೆಗೆದು ಶವವನ್ನಾಗಿ ಮಾಡಿದ್ದಾನೆ. ಅವನಿಗೆ ಕಠಿಣ ಶಿಕ್ಷಯೇ ಆಗಬೇಕು ಎಂದು ಮೃತ ಯುವತಿಯ ಕುಟುಂಬಸ್ಥರು ಪೊಲೀಸರ ಮುಂದೆ ಆರೋಪ ಮಾಡಿದ್ದಾರೆ.

ಕೊಲೆ ಆರೋಪದ ಬೆನ್ನಲ್ಲೇ ಆರೋಪಿ ಬಂಧನ: ಈ ಘಟನೆ ಕುರಿತು ಈಗಾಗಲೇ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯುವತಿಯ ಸಂಬಂಧಿಕರ ಆರೋಪದ ಮೇರಗೆ, ಆರೋಪಿಯ ವಿರುದ್ದ ವರದಕ್ಷಿಣೆ ಕಿರುಕುಳ ಹಾಗೂ ಅಟ್ರಾಸಿಟಿ, ಹತ್ಯೆ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಇನ್ನೂ ಈ ಬಗ್ಗೆ ಎಸ್ಪಿ ಅವರನ್ನೇ ವಿಚಾರಿಸಿದರೆ ಚಿತ್ರ ಲಿಂಗಪ್ಪನನ್ನು ಈಗಾಗಲೇ ದಸ್ತಗಿರಿ ಮಾಡಲಾಗಿದೆ. ಈ ಇಬ್ಬರು ಕಳೆದ ಒಂದು ವರ್ಷದ ಹಿಂದೆ ಅಂತರ್ ಜಾತಿ ವಿವಾಹ ಆಗಿದ್ದರು. ಈ ಘಟನೆ ಕುರಿತು ಸ್ಥಳೀಯವಾಗಿ ಪರಿಶೀಲನೆ ಮಾಡಿದಾಗ ಇಬ್ಬರು ಚೆನ್ನಾಗಿಯೇ ಸಂಸಾರ ಮಾಡ್ತಿದ್ದರು ಎನ್ನಲಾಗ್ತಿದೆ. 

ಸೌಂಡ್‌ ಕಡಿಮೆ ಮಾಡಿ ಎಂದ ಮನೆ ಮಾಲೀಕನನ್ನೇ ಹೊಡೆದು ಕೊಂದ ಟೆಕ್ಕಿಗಳು: ದುರಂತ ಸಾವು

ಪೊಲೀಸರಿಂದ ತನಿಖೆ ಆರಂಭ: ಕಳೆದ ಕೆಲವು ದಿನಗಳಿಂದ ಮೃತ ಯುವತಿಯು ಅನಾರೋಗ್ಯಕ್ಕೆ ತುತ್ತಾಗಿದ್ದ ಕಾರಣ ಈ ವಿಚಾರವಾಗಿ ಇಬ್ಬರು ಮಧ್ಯೆ ವೈಮನಸ್ಸು ಬಂದಿದೆ. ಈ ಬಗ್ಗೆ ತನಿಖೆ ಮಾಡ್ತಿದ್ದೀನಿ ಕೂಡಲೇ ಸತ್ಯಸತ್ಯತೆ ಹೊರ ಬರಲಿದೆ ಚಿತ್ರದುರ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ತಿಳಿಸಿದರು. ಒಟ್ಟಾರೆ ಪ್ರೀತಿ ಮಾಡುವಾಗ ನೀನೆ ಎಲ್ಲಾ ನೀ ಇಲ್ಲದೆ ಬೇರೆನೂ ಇಲ್ಲ ಎಂದು ಡವ್ ಮಾಡಿ ಪ್ರೀತಿ ಮಾಡೋರು ಮದುವೆ ಆದ್ಮೇಲೆ ಯಾಕೆ ಈ ರೀತಿ ಉಲ್ಟಾ ಹೊಡೆಯುತ್ತಾರೆ ಎಂಬುದೇ ವಿಪರ್ಯಾಸ. ಅದೇನೆ ಇರಲಿ ಯುವತಿ ಪೂರ್ಣಿಮಾ ಕೊಲೆಯೋ? ಆತ್ಮಹತ್ಯೆಯೋ? ಎಂಬುದು ಶೀಘ್ರವೇ ಬಹಿರಂಗವಾಗಿ ತಪ್ಪಿತಸ್ಥಿಗೆ ಕಠಿಣ ಶಿಕ್ಷೆ ಆಗಬೇಕಿದೆ.

click me!