ರಾಜಸ್ಥಾನದ ಅಜ್ಮಿರ್ ಹಾಗೂ ಬಿಲವಾಡ ಮೂಲದ ಮೂರು ಜನ ನಟೋರಿಯಸ್ ದರೋಡೆಕೋರರನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ (ಮಾ.20): ರಾಜಸ್ಥಾನದ ಅಜ್ಮಿರ್ ಹಾಗೂ ಬಿಲವಾಡ ಮೂಲದ ಮೂರು ಜನ ನಟೋರಿಯಸ್ ದರೋಡೆಕೋರರನ್ನು (Notorious Gangsters) ಬಂಧಿಸುವಲ್ಲಿ (Arrest) ಹುಬ್ಬಳ್ಳಿಯ (Hubballi) ಕೇಶ್ವಾಪುರ ಠಾಣೆಯ ಪೊಲೀಸರು (Police) ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಬರೋಬ್ಬರಿ 7.5 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಲೈಟ್ ಬಲೂನ್ ಮಾರಾಟದದ ಸೋಗಿನಲ್ಲಿ ರೈಲ್ವೆ ಮೂಲಕ ರಾಜ್ಯಕ್ಕೆ ಆಗಮಿಸಿದ್ದ ನಟೋರಿಸ್ ದರೋಡೆಕೋರರು.
ಹುಬ್ಬಳ್ಳಿ ಧಾರವಾಡ, ಬೆಳಗಾವಿ ಸೇರಿದಂತೆ ಇತರೆ ನಗರದಲ್ಲಿ ಸಂಚರಿಸಿ, ಬೀಗ ಹಾಕಿದ ಮನೆಗಳನ್ನು ಗುರುತಿಸಿ ದರೋಡೆ ಮಾಡುತ್ತಿದ್ದರು. ಹುಬ್ಬಳ್ಳಿಯ ಕೇಶ್ವಾಪುರ ಮತ್ತು ಗೋಕುಲ ರಸ್ತೆಯ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಬೆಳಗಾವಿ ಜಿಲ್ಲೆಯ ಟಿಳಕವಾಡಿ ಠಾಣಾ ವ್ಯಾಪ್ತಿಯ ನಡೆದಿದ್ದ ಮೂರು ಮನೆಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಒಂದು ವಾರದಿಂದ ರಾಜಸ್ಥಾನ ಕ್ಕೆ ತೆರಳಿ ಕಾರ್ಯಚರಣೆ ನಡೆಸಿದ್ದ ಕೇಶ್ವಾಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ ನೇತೃತ್ವದ ತಂಡ ಮೂರು ಜನ ದರೋಡೆಕೋರರನ್ನು ಬಂಧಿಸಿ, ಅವರಿಂದ 171 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದೆ.
Greater Noida ಕುಡಿಯೋದ್ ಬಿಡು ಎಂದಿದ್ದಕ್ಕೆ ಅಕ್ಕನಿಗೆ ಗುಂಡಿಕ್ಕಿ ಕೊಂದ!
ಹೆಂಡ್ತಿಗೆ 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಇಜಾಜ್ ಅರೆಸ್ಟ್: ನಗರದ ಹುಡ್ಕೋ ಬಡಾವಣೆ ನಿವಾಸಿ ಅಪೂರ್ವಾ ಪುರಾಣಿಕ ಅಲಿಯಾಸ್ ಅರ್ಫಾಬಾನು ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪತಿ ಇಜಾಜ್ ಶಿರೂರನನ್ನು ಶುಕ್ರವಾರ ಹುಬ್ಬಳ್ಳಿಯಲ್ಲಿ (Hubball) ಬಂಧಿಸಲಾಗಿದೆ (Arrest) ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ಅಪೂರ್ವಾ ಸ್ಕೂಟಿ ಕಲಿಯಲು ಎಂದು ಪಕ್ಕದ ಮನೆಯ ಹುಡುಗನೊಂದಿಗೆ ಲಾಯನ್ ಸ್ಕೂಲ್ ಪ್ಲೆ ಗ್ರೌಂಡ್‌ಗೆ ಹೋದಾಗ ಪತಿ ಇಜಾಜ್ ಗುರುವಾರ ಹಲ್ಲೆ (Assault) ಮಾಡಿದ್ದ. ಘಟನೆಯಲ್ಲಿ ಮುಖ, ತಲೆ, ಭುಜ, ಕೈ, ಬೆನ್ನಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ಬರೋಬ್ಬರಿ 23 ಸಾರಿ ಮಚ್ಚು ಬೀಸಿದ್ದರಿಂದ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಆಕೆಯನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದ. ಬೆಳಗ್ಗೆ ವಾಕ್‌ಗೆ ಬಂದಿದ್ದ ಕೆಲವರ ಸಹಾಯದಿಂದ ಅಪೂರ್ವಾಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ (KIMS) ದಾಖಲಿಸಲಾಗಿದೆ.
ಘಟನೆ ಹಿನ್ನೆಲೆ: ಅಪೂರ್ವಾ ಅಲಿಯಾಸ್ ಅರ್ಫಾ ಬಾನು ನಾಲ್ಕು ವರ್ಷದ ಹಿಂದೆ ಹುಬ್ಬಳ್ಳಿ ಮೂಲದ ಇಜಾಜ್‌ನನ್ನು ಪ್ರೇಮಿಸಿ ವಿವಾಹವಾಗಿದ್ದಳು (Love Marriage). ಅಪೂರ್ವಾ ಕಾಲೇಜು ಕಲಿಯುತ್ತಿದ್ದಾಗ ಇಜಾಜ್ ತನ್ನ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಆಟೋ ಓಡಿಸ್ಕೊಂಡಿದ್ದ. ಆಗಾಗ ಆಟೋದಲ್ಲಿ ಓಡಾಡ್ತಿದ್ದ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಬ್ರಾಹ್ಮಣ ಕುಟುಂಬದವಳಾದ ಅಪೂರ್ವಾ ಕುಟುಂಬದ ವಿರೋಧದ ನಡುವೆಯೂ 2018ರಲ್ಲಿ ಇಜಾಜ್‌ನನ್ನು ಮದುವೆಯಾಗಿಯಾದ್ದಳು. ನಂತರ ಅರ್ಫಾಬಾನು ಆಗಿ ಹೆಸರು ಬದಲಾಯಿಸಿಕೊಂಡಳು. ಮದುವೆಯಾದ ಹೊಸತರಲ್ಲಿ ಎಲ್ಲ ಸರಿಯಾಗೇ ಇತ್ತು.
ಇಜಾಜ್‌ಗೆ 2ನೇ ಮದುವೆ: ಇಜಾಜ್‌ಗೆ ಇದು ಎರಡನೇ ಮದುವೆ. ಆತನ ಮೊದಲ ಹೆಂಡತಿಗೆ ಮೂರು ಮಕ್ಕಳು ಇದ್ದಾರೆ. ಮೊದಲ ಹೆಂಡತಿ ವಿಚಾರವನ್ನು ಇಜಾಜ್ ಗುಟ್ಟಾಗೇ ಇಟ್ಟಿದ್ದ. ನಂತರದ ದಿನಗಳಲ್ಲಿ ಅಪೂರ್ವಾಳಿಗೆ ತನ್ನ ಗಂಡನ ಮೊದಲನೇ ಮದುವೆ ವಿಷಯ ಗೊತ್ತಾಗಿದೆ. ಇದು ತಿಳಿದ ನಂತರ ಆಗಾಗ ಸಣ್ಣ-ಪುಟ್ಟ ಜಗಳವಾಗುತ್ತಿತ್ತು. ಮುಸ್ಲಿಂ(Muslim) ಪದ್ಧತಿ ಪಾಲಿಸು, ಬುರ್ಕಾ ಧರಿಸುವಂತೆ ಒತ್ತಡ ಹಾಕುತ್ತಿದ್ದನಂತೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಅಪೂರ್ವಾ ತನ್ನ ಗಂಡನ ಮನೆ ಹುಬ್ಬಳ್ಳಿಯಿಂದ ತನ್ನ ತವರು ಮನೆಗೆ ಬಂದು ಇಲ್ಲಿಯೇ ಇದ್ದಳು. ತವರು ಮನೆಯಲ್ಲಿದ್ದರೂ ಇಜಾಜ್‌ನಿಂದ ಮತ್ತಷ್ಟು ಕಿರಿಕಿರಿ ಶುರುವಾಗಿತ್ತು.
Bengaluru Crime: ಮದ್ಯದ ಅಮಲಿನಲ್ಲಿ ಪೊಲೀಸರಿಗೇ ಗುದ್ದಿದ ಬೈಕ್ ಸವಾರ..!
ಅಪೂರ್ವಾ ತನ್ನ ತಾಯಿ ಸಹಾಯ ಪಡೆದು ವಿಚ್ಛೇದನಕ್ಕೆ (Divorce) ಅರ್ಜಿ ನೀಡಿದ್ದಳು. ಇದೇ ಕಾರಣಕ್ಕೆ ಮತ್ತಷ್ಟು ಕೋಪಗೊಂಡಿದ್ದ ಇಜಾಜ್ ಬೆಳಗಿನ ಜಾವ ಮಚ್ಚಿನಿಂದ ಹಲ್ಲೆ ಮಾಡಿ ಸಾಯಿಸುವ ಪ್ಲಾನ್ ಮಾಡಿದ್ದ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಬಂದಿದ್ದ ಹಿಂದೂ ಪರ ಸಂಘಟನೆ (Pro-Hindu Organization) ಕಾರ್ಯಕರ್ತರು, ಇದೊಂದು ಲವ್ ಜಿಹಾದ್ (Love Jihad) ಪ್ರಕರಣ. ಇಜಾಜ್ ಬಂಧನದ ಜೊತೆಗೆ ಲವ್ ಜಿಹಾದ್ ಹಿಂದಿರುವವರನ್ನು ಬಂಧಿಸಬೇಕು ಎಂದು ಶ್ರೀರಾಮಸೇನೆ ಸಂಚಾಲಕ ರಾಜು ಖಾನಪ್ಪನವರ ಮತ್ತಿತರರು ಆಗ್ರಹಿಸಿದ್ದಾರೆ.