
ಬೆಂಗಳೂರು(ಮಾ.20): ಸ್ಟೀಲ್ ಡಬ್ಬಿಗಳಲ್ಲಿ ಅಕ್ರಮವಾಗಿ ವಿದೇಶಕ್ಕೆ ಸಾಗಿಸುತ್ತಿದ್ದ ಸುಮಾರು 9.23 ಕೋಟಿ ರು. ಮೌಲ್ಯದ 46.7 ಕೆ.ಜಿ. ತೂಕದ ಎಫಿಡ್ರೇನ್ ಮಾದಕವಸ್ತುವನ್ನು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಂಟೆಲಿಜೆನ್ಸ್ ಅಧಿಕಾರಿಗಳು(Customs Intelligence Officers) ಶನಿವಾರ ಜಪ್ತಿ ಮಾಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಇಂಟೆಲಿಜೆನ್ಸ್ ಅಂಡ್ ಇನ್‌ವೆಸ್ಟಿಗೇಷನ್ ಘಟಕ ಮತ್ತು ಏರ್ ಕಾರ್ಗೊ ಕಮಿಷನರೇಟ್ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಕ್ಸ್‌ಪೋರ್ಟ್ ಶೆಡ್‌ನಲ್ಲಿ ಸರಕುಗಳ ತಪಾಸಣೆ ಮಾಡುವಾಗ ಈ ಮಾದಕವಸ್ತು ಸಿಕ್ಕಿದೆ. ಚೆನ್ನೈ ಮೂಲದ ರಫ್ತುದಾರನೊಬ್ಬ ಊಟದ ಸ್ಟಿಲ್ ಡಬ್ಬಿಗಳಲ್ಲಿ ಈ ಮಾದಕವಸ್ತು ತುಂಬಿ ಆಸ್ಪ್ರೇಲಿಯಾಗೆ ರಫ್ತು ಮಾಡಲು ಮುಂದಾಗಿದ್ದ ಎಂಬುದು ತಿಳಿದು ಬಂದಿದೆ. ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್ ಮೂಲಗಳು ತಿಳಿಸಿವೆ.
Drugs Racket in Karnataka: 'ಡ್ರಗ್ಸ್ ಪೆಡ್ಲರ್‌ಗಳ ಎನ್‌ಕೌಂಟರ್ ಮಾಡಿ'
ಕುರ್ಕುರೆ, ಚಕ್ಕುಲಿ ಪ್ಯಾಕೆಟಲ್ಲಿ ಡ್ರಗ್ಸ್ ತುಂಬಿಸಿ ಮಾರಾಟ..!
ಬೆಂಗಳೂರು: ಖಾದ್ಯ ತಿನಿಸು ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಗ್ರಾಹಕರಿಗೆ(Customers) ಮಾರಾಟ ಮಾಡುತ್ತಿದ್ದ ಚಾಲಾಕಿ ಪೆಡ್ಲರ್‌ವೊಬ್ಬ ಸಿಸಿಬಿ ಪೊಲೀಸರ(CCB Police) ಬಲೆಗೆ ಬಿದ್ದ ಘಟನೆ ಮಾ.10 ರಂದು ನಡೆದಿತ್ತು. ಮೈಕೋ ಲೇಔಟ್ ಸಮೀಪದ ನಿವಾಸಿ ಗೋಳಕ್ ಬೆಹೇರಾ ಬಂಧಿತ(Arrest). ಆರೋಪಿಯಿಂದ(Accused) 8 ಲಕ್ಷ ಮೌಲ್ಯದ ಗಾಂಜಾ(Marijuana) ಹಾಗೂ .60 ಸಾವಿರ ನಗದು ಜಪ್ತಿ ಮಾಡಲಾಗಿದೆ. ಒಡಿಶಾ ಮೂಲದ ಗೋಳಕ್, ಕಳೆದ ಎಂಟು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ. ತನ್ನೂರಿನಿಂದ ಗಾಂಜಾ ತಂದು ನಗರದಲ್ಲಿ ಆರೋಪಿ ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ತನ್ನೂರಿನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಗಾಂಜಾವನ್ನು ಆರೋಪಿ, ಚಕ್ಕುಲಿ, ಕುರ್ಕುರೆ ಹೀಗೆ ತಿನಿಸುಗಳ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಗ್ರಾಹಕರಿಗೆ ಪೂರೈಸುತ್ತಿದ್ದ. ನಗರದಲ್ಲಿ(Bengaluru) ನೆಲೆಸಿರುವ ಒಡಿಶಾ ಮೂಲದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಆತ ದಂದೆ ನಡೆಸುತ್ತಿದ್ದ. ತಲಾ 5 ಗ್ರಾಂಗೆ ಕಾರ್ಮಿಕರಿಗೆ .500ಗೆ ಮಾರುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
Drugs Racket in Bengaluru: ಯುವ ಜೋಡಿ ಸೇರಿ ಮೂವರ ಬಂಧನ: 7.76 ಕೋಟಿ ರು. ಡ್ರಗ್ಸ್ ವಶ
ಈ ದಂಧೆಗೆ ವಿವಿಧ ಕಂಪನಿಗಳ ಖಾದ್ಯ ತಿನಿಸುಗಳ ಕವರ್‌ಗಳನ್ನು ಆತ ಸಂಗ್ರಹಿಸುತ್ತಿದ್ದ. ಬಳಿಕ ಅವುಗಳಲ್ಲಿ ಗಾಂಜಾ ತುಂಬಿ ಸೆಲ್ಲೊ ಟೆಪ್ ಹಾಕಿ ಪ್ಯಾಕ್ ಮಾಡಿದ ನಂತರ ಆತ, ಒಡಿಶಾದಿಂದ ನಗರಕ್ಕೆ ರೈಲಿನಲ್ಲಿ ಸಾಗಿಸುತ್ತಿದ್ದ. ಮೇಲ್ನೋಟಕ್ಕೆ ಖಾದ್ಯ ತಿನಿಸು ಪೊಟ್ಟಣಗಳಂತೆ ಕಾಣುತ್ತಿದ್ದರಿಂದ ಸಲುಭವಾಗಿ ರೈಲಿನ ಪಯಣದ ವೇಳೆ ಪೊಲೀಸರನ್ನು ಸಹ ಆರೋಪಿ ಸುಲಭವಾಗಿ ಕಣ್ತಪ್ಪಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಾಂಜಾ ಚಾಕ್ಲೆಟ್ ಮಾರುತ್ತಿದ್ದ ಒಡಿಶಾ ಮೂಲದ ಇಬ್ಬರು ಅರೆಸ್ಟ್
ಬೆಂಗಳೂರು: ಗಾಂಜಾ(Marijuana) ಚಾಕ್ಲೆಟ್ ಮಾರಾಟ ಮಾಡುತ್ತಿದ್ದ ಒಡಿಸ್ಸಾ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳನ್ನು ಮಹದೇವಪುರ ಠಾಣೆ ಪೊಲೀಸರು(Police) ಬಂಧಿಸಿದ ಘಟನೆ ಮಾ.04 ರಂದು ನಡೆದಿತ್ತು.
ಒಡಿಸ್ಸಾದ ಬಿನಕಾಪುರ ಗ್ರಾಮದ ಪ್ರದೀಪ್ ಕುಮಾರ್ ರಾವುತ್(33) ಮತ್ತು ಬಾಸುದೇವ್ ಗ್ರಾಮದ ಎಸ್.ಕೆ.ಸಜಾನ್ ಆಲಿ (27) ಬಂಧಿತರು. ಆರೋಪಿಗಳಿಂದ(Accused) 2 ಲಕ್ಷ ಮೌಲ್ಯದ ಒಂದು ಕೆ.ಜಿ.ಗಾಂಜಾ, 18 ಕೆ.ಜಿ. ತೂಕದ 3200 ಗಾಂಜಾ ಚಾಕ್ಲೆಟ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಎ.ನಾರಾಯಣಪುರದ ಮಹದೇವಪುರ ರಿಂಗ್ ರಸ್ತೆಯ ಮೇಲ್ಸೇತುವೆ ಕೆಳಗೆ ಇಬ್ಬರು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ