
ಪಾನ್ ಶಾಪ್‌ನಲ್ಲಿ ದಾಂಧಲೆ ನಡೆಸಿ ಮಾಲೀಕ ಸೇರಿಂದತೆ ಮೂವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮೂವರು ನೌಕಾಪಡೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಮುಂಬೈನಲ್ಲಿ ಘಟನೆ ನಡೆದಿದ್ದು, ಎಂಎಆರ್ ಮಾರ್ಗ್ (MRA Marg) ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೋಟೆಯ ಚಾಹಾ ಹೌಸ್ ಬಳಿಯ (Chaha House in Fort) ಕಟ್ಟಡದ ನಿವಾಸಿಯೊಬ್ಬರು ತಮ್ಮ ವಸತಿ ಪ್ರದೇಶದ ಬಳಿ ಮದ್ಯಪಾನ ಮಾಡುವುದನ್ನು ನಿಲ್ಲಿಸುವಂತೆ ಮನವಿ ಮಾಡಿದಾಗ ಸಿಟ್ಟಿಗೆದ್ದ ನೌಕಾಪಡೆದ ಉದ್ಯೋಗಿಗಳು ಆತನ ಮೇಲೆ ಹಲ್ಲೆ ಮಾಡಿದ್ದಾರೆ.
(ಜೂನ್1)ಬುಧವಾರ ರಾತ್ರಿ 9.30 ರಿಂದ 10 ಗಂಟೆಯ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರುದಾರ ರಾಜೇಂದ್ರ ಪಾಟೀಲ್ ಸಿಗರೇಟ್ ಎಳೆಯುವ ಸಲುವಾಗಿ ತಮ್ಮ ಕಟ್ಟಡದಿಂದ ಕೆಳಗಿಳಿದು ಬಂದು ಸಿಗರೇಟು ಸೇವಿಸುತ್ತಿದ್ದರು. ಈ ವೇಳೆ ತಮ್ಮ ಕಟ್ಟಡದ ಬಳಿ ಆರು ಭಾರತೀಯ ನೌಕಾಪಡೆಯ ಸಿಬ್ಬಂದಿ ಕುಳಿತು ಮದ್ಯ ಸೇವಿಸುತ್ತಿರುವುದನ್ನು ಅವರು ಗಮನಿಸಿದ್ದಾರೆ.
INS Ranvir Explosion ಭಾರತೀಯ ನೌಕಾಪಡೆಯ INS ರಣ್‌ವೀರ್‌ನಲ್ಲಿ ಸ್ಫೋಟ, ಮೂವರು ಅಧಿಕಾರಿಗಳ ಸಾವು!
ಬಳಿಕ ತಮ್ಮ ಇಬ್ಬರು ಗೆಳೆಯರಾದ ಶಾಮ್ ಶಿಂಧೆ(Sham Shinde) ಮತ್ತು ದೀಪಕ್ ಸುಲಾರೆ (Deepak Sulare) ಅರೊಂದಿಗೆ ನೌಕಾಪಡೆ ಸಿಬ್ಬಂದಿ ಬಳಿ ತೆರಳಿ ಇಲ್ಲಿ ಮದ್ಯಪಾನ ಮಾಡುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಇದರಿಂದ ಕೋಪಗೊಂಡ ಅವರು ಜಗಳವಾಡಿದ್ದಾರೆ. ಇವರ ಜಗಳ ನೋಡಿ ಸುತ್ತಮುತ್ತಲಿನ ಜನ ದಾರಿಹೋಕರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ನೌಕಾಪಡೆ ಉದ್ಯೋಗಿಗಳು ಅಲ್ಲಿಂದ ತೆರಳಿದ್ದಾರೆ.
ಆದರೆ 30 ನಿಮಿಷಗಳ ನಂತರ ವಾಪಸ್ ಬಂದ ಅವರು ಪಾನ್ ಅಂಗಡಿಯ ಮಾಲೀಕನೂ ಆಗಿರುವ ರಾಜೇಂದ್ರ ಪಾಟೀಲ್ ಸೇರಿದಂತೆ ಇತರ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಜಗಳವನ್ನು ನಿಲ್ಲಿಸಲು ರಾಜೇಂದ್ರ ಪಾಟೀಲ್ ಗೆಳೆಯನಾದ ಶಾಮ್ ಶಿಂಧೆ ಮಧ್ಯಪ್ರವೇಶಿಸಿದಾಗ, ಆತನ ಮೇಲೆ ನಾಲ್ಕರಿಂದ ಐದು ಜನರು ಹಲ್ಲೆ ಮಾಡಿದ್ದಾರೆ. ಅಲ್ಲದೇ ನನ್ನನ್ನು ನೆಲದ ಮೇಲೆ ತಳ್ಳಿ ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ ಎಂದು ಪಾಟೀಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮೋಟರ್ ಕದ್ದಿದ್ದಾನೆಂದು ಕೈ ಕಟ್ಟಿಬಡಿದು ಕಾರ್ಮಿಕನ ಹತ್ಯೆ
ಇದೇ ವೇಳೆ ಎಂಆರ್‌ಎ ಮಾರ್ಗ ಪೊಲೀಸರ ಗಸ್ತು ವಾಹನ ಸ್ಥಳಕ್ಕೆ ಬಂದಿದ್ದು, ಇದನ್ನು ನೋಡಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಸಿಕ್ಕಿಬಿದ್ದ ಶಿವಂ ಮುಖೇಶ್ ಎಂಬಾತನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ವಿಚಾರಣೆ ವೇಳೆ ಮುಖೇಶ್ (Mukesh) ತನ್ನ ಜೊತೆ ಇದ್ದ ಇತರ ಇಬ್ಬರಾದ ನಿತಿನ್ ಸಿಂಗ್ (Nitin Singh) ಮತ್ತು ಸುರೇಂದ್ರ ಎಹ್ಲಾವತ್ (Surendra Ehlavat) ಅವರ ಹೆಸರು ಹೇಳಿದ್ದು, ನಂತರ ಪೊಲೀಸರು ಅವರನ್ನೂ ಕೂಡ ಬಂಧಿಸಿದ್ದಾರೆ. ಆರೋಪಿಗಳನ್ನು ಜೂನ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೌಕಾಪಡೆಯ ಸಿಬ್ಬಂದಿಯ ದಾಳಿಗೆ ಒಳಗಾದ ಪಾಟೀಲ್ ಅವರ ತೊಡೆಗೆ ನಾಲ್ಕು ಹೊಲಿಗೆ ಹಾಕಲಾಗಿದ್ದು, ಎಡಗೈ ಮೂಳೆ ಮುರಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 325 (ಸ್ವಯಂಪ್ರೇರಿತವಾಗಿ ಘೋರವಾದ ಗಾಯವನ್ನುಂಟುಮಾಡುವುದು), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 427 (ಐವತ್ತು ರೂಪಾಯಿಗಳ ಹಾನಿಯನ್ನುಂಟು ಮಾಡುವ ಕಿಡಿಗೇಡಿತನ), 143 (ಶಿಕ್ಷೆ), 147 (ಗಲಭೆ) ಮತ್ತು 149 (ಪ್ರತಿ ಸದಸ್ಯನ ವಿರುದ್ಧ) ಕಾನೂನುಬಾಹಿರ ಸಭೆ ಸಾಮಾನ್ಯ ವಸ್ತುವಿನ ವಿಚಾರದಲ್ಲಿ ಮಾಡಿದ ಅಪರಾಧದಲ್ಲಿ ತಪ್ಪಿತಸ್ಥ) ಅಡಿ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ