
ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಳ್ಳಾರಿ (ಜೂ.3) : ಆಪ್ರಾಪ್ತೆ ಹುಡುಗಿಯೊಬ್ಬಳನ್ನು ಪ್ರೀತಿಸಿದ ತಪ್ಪಿಗೆ ಯುವಕನೊಬ್ಬನ ಜೀವನ ದುರಂತ ಅಂತ್ಯ ಕಂಡಿದೆ. ಪೋಷಕರ ವಿರೋಧದ ಮಧ್ಯೆ ಮನೆ ಬಿಟ್ಟು ಓಡಿ ಹೋದ ಪ್ರೇಮಿಗಳನ್ನು ಹುಡುಕಿದ ಪೋಷಕರು ಅವರನ್ನು ಬೇರ್ಪಡಿಸಿ ಅವರರವರ ಮನೆಗೆ ಕರೆದುಕೊಂಡು ಹೋಗ್ತಾರೆ. ಈ ವೇಳೆ ಹುಡುಗಿ ಕಡೆಯವರು ಯುವಕನ್ನು ಥಳಿಸಿ ವಿಡಿಯೋ ತೆಗೆದ ಹಿನ್ನೆಲೆ ಆ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಾವಿಗೆ ಆಪ್ರಾಪ್ತೆಯನ್ನು ಪ್ರೀತಿಸಿ ಕರೆದುಕೊಂಡು ಹೋದ ಯುವಕನು ಕಾರಣವೇ ? ಅಥವಾ ಹೊಡೆದು ವಿಡಿಯೋ ಮಾಡಿದ ಪೋಷಕರ ಕಡೆಯವರು ಕಾರಣವಾ ? ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಇದೊಂದು ರೀತಿಯ ಚಲುವಿನ ಚಿತ್ತಾರ ಸಿನಿಮಾದ ಲವ್ ಸ್ಟೋರಿಯ ಸಿನಿಮಾ ಕಥೆ. ಯಾಕಂದ್ರೆ, ಸಿನಿಮಾದಲ್ಲಿ ಮಾದರಿಯ ಘಟನೆಗಳೇ ಇಲ್ಲಿ ನಡೆದಿದ್ದು ಸಿನಿಮಾದ ಮಾದರಿಯಲ್ಲಿ ಇಲ್ಲಿಯೂ ಕತೆ ದುರಂತ ಅಂತ್ಯ ಕಂಡಿದೆ.
ತೋರಣಗಲ್ ಪೋಲಿಸ್ ಠಾಣೆ ವ್ಯಾಪ್ತಿಯ ಆಪ್ರಾಪ್ತ ಬಾಲಕಿ ಮತ್ತು ಸಂಡೂರು ತಾಲೂಕಿನ ತಿಮ್ಮಲಾಪುರ ಗ್ರಾಮದ ಗಂಗಾಧರ ಕಳೆದ ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಈ ವಿಷಯ ಮನೆಯಲ್ಲಿ ಗೊತ್ತಾಗಿ ಇಬ್ಬರನ್ನು ಬೇರೆ ಬೇರೆ ಇರುವಂತೆ ವಾರ್ನಿಂಗ್ ಮಾಡಿರುತ್ತಾರೆ. ಆದ್ರೇ, ಇನ್ನೇನು ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲು ಆಗೋದಿಲ್ಲ ಅನ್ನೋ ಸ್ಥಿತಿಗೆ ಬಂದಾಗ ಇಬ್ಬರು ಮನೆಬಿಟ್ಟು ಓಡಿ ಹೋಗ್ತಾರೆ. ಆಗ ಯುವತಿಯ ಪೋಷಕರು ತೋರಣಗಲ್ ಠಾಣೆಯಲ್ಲಿ ಕಿಡ್ನಾಪ್ ಯುವತಿ ಪ್ರಕಣವನ್ನು ದಾಖಲು ಮಾಡುತ್ತಾರೆ.
CHIKKAMAGALURU; ಸೋರುತ್ತಿರುವ ಶಾಲೆ, ಒದ್ದೆ ಪುಸ್ತಕವನ್ನು ಬಿಸಿಲಲ್ಲಿ ಒಣಗಿಸುವ ಮಕ್ಕಳು!
ಒಂದೆರಡು ದಿನಗಳ ನಂತರ ಕೂಡ್ಲಿಗಿ ತಾಲೂಕಿನ ಗ್ರಾಮವೊಂದರಲ್ಲಿ ಇಬ್ಬರು ಪತ್ತೆಯಾಗುತ್ತಾರೆ. ಆಗ ಯುವತಿಯನ್ನು ಕರೆದುಕೊಂಡು ಹೋದ ಪೋಷಕರು ಗಂಗಾಧರನಿಗೆ ಹಿಗ್ಗಾಮುಗ್ಗ ಥಳಿಸುತ್ತಾರೆ. ಅದನ್ನು ವಿಡಿಯೋ ಚಿತ್ರಣ ಕೂಡ ಮಾಡುತ್ತಾರೆ. ವಿಡಿಯೋ ವೈರಲ್ ಆಗೋ ಬೀತಿಯಿಂದ ಬೇಸತ್ತ ಗಂಗಾಧರ ಆತ್ಮಹತ್ಯೆಗೆ ಯತ್ನಿಸಿದ್ದು ಇದೀಗ ಸಾವನ್ನಪ್ಪಿದ್ದಾನೆ. ಮೃತನ ಸಂಬಂಧಿಕಾದ ಮಂಜುನಾಥ, ಸತೀಶ್, ಜಯಕ್ಕ ಆರೋಪಿಸಿದ್ದಾರೆ.
ಹಲ್ಲೇ ಮಾಡಿದ ಆರೋಪಿಗಳ ವಿರುದ್ಧವೂ ದೂರು: ಇನ್ನೂ ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಾದ್ರೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾರೆ ಅನ್ನೋದು ಕುಟುಂಬಸ್ಥರ ವಾದವಾಗಿದೆ. ಹೀಗಾಗಿ ಈ ಬಗ್ಗೆ ಕೂಡ್ಲಿಗಿ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಅಲ್ಲದೇ ಯುವತಿಯನ್ನು ಕರೆದುಕೊಂಡು ಹೋಗೋವಾಗ ಗಂಗಾಧರನನ್ನು ಥಳಿಸಿರೋದು ವಿಡಿಯೋ ಮಾಡಿದ್ದಾರೆ.
ವಿವಾದಗಳ ಸುಳಿಯಲ್ಲಿ Rohith Chakrathirtha, 2016ರ ಟ್ವೀಟ್ ಬಗ್ಗೆ ಭಾರೀ ಚರ್ಚೆ!
ಈ ವಿಡಿಯೋ ವೈರಲ್ ಆದ್ರೇ ಮರ್ಯದೆ ಹೋಗ್ತದೆ ಅನ್ನೋ ಕಾರಣಕ್ಕೆ ಗಂಗಾಧರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗಾಗಿ ಗಂಗಾಧರ ವಿಷ ಕುಡಿದಿರೋದಲ್ಲ ಆಪ್ರಾಪ್ತೆ ಬಾಲಕಿಯರ ಕಡೆಯವರೇ ಹೊಡೆದು ವಿಷ ಕುಡಿಸಿದ್ದಾರೆಂದು ಕೂಡ ಗಂಗಾಧರ ಕಡೆಯವರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪ್ರಕಣರ ದಾಖಲಾಗಿದ್ದು, ತನಿಖೆ ಮಾಡುತ್ತಿರೋದಾಗಿ ವಿಜಯನಗರ ಎಸ್ಪಿ ಅರುಣ್ ಕುಮಾರ ಮಾಹಿತಿ ನೀಡಿದ್ದಾರೆ.
ದುರಂತ ಅಂತ್ಯ ಕಂಡ ಪ್ರೇಮಿ: ತಮ್ಮ ಮನೆಯ ಆಪ್ರಾಪ್ತೆ ಯುವತಿಯನ್ನು ಕರೆದುಕೊಂಡು ಹೋದ್ರೇ ಯಾರಿಗಾದ್ರೂ ಆಕ್ರೋಶ ಬರುತ್ತದೆ ಹೊಡೆಯುತ್ತಾರೆ ಇದು ಸಾಮಾನ್ಯ. ಆದ್ರೇ ಅದನ್ನೆ ವಿಡಿಯೋ ಚಿತ್ರಿಕರಣ ಮಾಡಿರೋದು ಸರಿಯಲ್ಲ. ಆದೇನೇ ಇರಲಿ ವಯಸ್ಸಲ್ಲದ ವಯಸ್ಸಿನಲ್ಲಿ ಈ ರೀತಿ ಪ್ರೀತಿ ಪ್ರೇಮ ಎನ್ನುವ ವ್ಯಾಮೋಹಕ್ಕೆ ಸಿಲುಕಿದ್ರೆ, ದುರಂತ ಅಂತ್ಯ ಕಾಣಬೇಕಾಗುತ್ತದೆ ಅನ್ನೊದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ