Hubballi; ಮೂವರು ಖತರ್ನಾಕ್ ಬೈಕ್ ಕಳ್ಳರು ಬಂಧನ, ಹಳೆಯ ಬೈಕ್ ಗಳೇ ಇವರ ಟಾರ್ಗೆಟ್!

By Gowthami K  |  First Published Dec 2, 2022, 9:55 PM IST

ಹುಬ್ಬಳ್ಳಿಯ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಬೈಕ್ ಗಳ ಕಳ್ಳತನ ಮಾಡುತ್ತಿದ್ದ ಮೂರು ಜನ ಖತರ್ನಾಕ್ ಬೈಕ್ ಕಳ್ಳರನ್ನ ಬಂಧಿಸುವಲ್ಲಿ  ಕೇಶ್ವಾಪೂರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ‌. ಒಟ್ಟು 09 ಮೋಟರ್ ಸೈಕಲಗಳನ್ನು ಕಳ್ಳತನ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದು ಆ ಒಂಬತ್ತು ಮೋಟರ ಸೈಕಲಗಳನ್ನು ಜಪ್ತಿ ಮಾಡಲಾಗಿದೆ.


ಹುಬ್ಬಳ್ಳಿ (ಡಿ.2): ಹುಬ್ಬಳ್ಳಿಯ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಬೈಕ್ ಗಳ ಕಳ್ಳತನ ಮಾಡುತ್ತಿದ್ದ ಮೂರು ಜನ ಖತರ್ನಾಕ್ ಬೈಕ್ ಕಳ್ಳರನ್ನ ಬಂಧಿಸುವಲ್ಲಿ  ಕೇಶ್ವಾಪೂರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ‌.  ಹುಬ್ಬಳ್ಳಿಯ ರೈಲ್ವೆ ಯೂನಿಯನ್‌ ಆಫೀಸ್ ಹತ್ತಿರ ಲಾಕ್ ಮಾಡಿ ನಿಲ್ಲಿಸಿದ ಮೋಟರ ಸೈಕಲಗಳು ಮೇಲಿಂದ ಮೇಲೆ ಕಳ್ಳತನವಾಗುತ್ತಿದ್ದ ಬಗ್ಗೆ ಪ್ರಕರಣಗಳು ಕೇಶ್ವಾಪೂರ ಠಾಣೆಯಲ್ಲಿ ದಾಖಲಾಗಿದ್ದವು. ಪ್ರಕರಣದ ಜಾಡು ಹಿಡಿದು ಹೊರಟ ಕೇಶ್ವಾಪೂರ ಪೊಲೀಸರು ಮೂವರು ಬೈಕ್ ಕಳ್ಳರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಕೇಶ್ವಾಪೂರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ ಹಂಚನಾಳ ನೇತೃತ್ವದ ತಂಡ ಮೂವರು ಆರೋಪಿತರನ್ನು ಹಿಡಿದು ವಿಚಾರಿಸಿದಾಗ ಆರೋಪಿತರು ಒಟ್ಟು 09 ಮೋಟರ್ ಸೈಕಲಗಳನ್ನು ಕಳ್ಳತನ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದು ಆ ಒಂಬತ್ತು ಮೋಟರ ಸೈಕಲಗಳನ್ನು ಜಪ್ತಿ ಮಾಡಲಾಗಿದೆ.

Latest Videos

undefined

ಇನ್ನೂ ಆರೋಪಿತರು ಹಳೇ ವಾಹನಗಳಿಗೆ ಕಾಗದ ಪತ್ರಗಳು ಸರಿಯಾಗಿ ಇರುವುದಿಲ್ಲ. ಅವುಗಳನ್ನು ಕಳ್ಳತನ ಮಾಡಿದರೆ ಮಾಲಿಕರು ಠಾಣೆಯಲ್ಲಿ ದೂರು ನೀಡುವದಿಲ್ಲ ಎಂದು ಹಳೇ ವಾಹನಗಳನ್ನೆ ನಕಲಿ ಕೀ ಬಳಿಸಿ ಕಳ್ಳತನ ಮಾಡುತ್ತಿದ್ದರು ಎಂಬುವಂತ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಕುರಿತು ಪೊಲೀಸರು ಮತ್ತಷ್ಟು ತನಿಖೆ ಕೈಗೊಂಡಿದ್ದಾರೆ.

ಕ್ಲಾಸ್‌ರೂಂನಲ್ಲಿ ಕೂಡಿ ಹಾಕಿ 13 ವರ್ಷದ ವಿದ್ಯಾರ್ಥಿನಿ ಮೇಲೆ ಸಹಪಾಠಿಗಳಿಂದ ಗ್ಯಾಂಗ್ ರೇಪ್! 

ದ್ವಿಚಕ್ರ ವಾಹನ ಕಳ್ಳನ ಬಂಧ​ನ
ರಾಮನಗರ : ಜಿಲ್ಲೆಯ ಹಲ​ವೆಡೆ ದ್ವಿಚಕ್ರ ವಾಹ​ನ​ಗ​ಳನ್ನು ಕಳವು ಮಾಡು​ತ್ತಿದ್ದ ಆರೋ​ಪಿ​ಯನ್ನು ಬಂಧಿಸಿ​ರುವ ಪೊಲೀ​ಸರು 2.64 ಲಕ್ಷ ರುಪಾಯಿ ಮೌಲ್ಯದ 5 ದ್ವಿಚಕ್ರ ವಾಹ​ನ​ಗ​ಳನ್ನು ವಶ ಪಡಿ​ಸಿ​ಕೊಂಡಿ​ದ್ದಾರೆ. ಕನ​ಕ​ಪುರ ತಾಲೂಕು ಗಟ್ಟಿ​ಗುಂದ ಗ್ರಾಮದ ಗೋಪಾಲ ನಾಯ್ಕ ಅಲಿ​ಯಾಸ್‌ ಚಾರ್ಲಿ ಬಂಧಿತ ಆರೋಪಿ. ಈತ ರಾಮ​ನ​ಗರ ಗ್ರಾಮಾಂತರ ಠಾಣೆ ವ್ಯಾಪ್ತಿ​ಯಲ್ಲಿ 2, ಕೋಣ​ನ​ಕುಂಟೆ, ಹೆಣ್ಣೂರು ಹಾಗೂ ಕನ​ಕ​ಪುರ ಪುರ ಠಾಣೆ ವ್ಯಾಪ್ತಿ​ಯಲ್ಲಿ ತಲಾ ಒಂದು ದ್ವಿಚಕ್ರ ವಾಹ​ನ ಕಳವು ಮಾಡಿ​ದ್ದನು. ರಾಮ​ನ​ಗರ ಗ್ರಾಮಾಂತರ ಠಾಣೆ ಪೊಲೀ​ಸರು ಕಾರ್ಯಾ​ಚ​ರಣೆ ನಡೆಸಿ ಆರೋಪಿ ಗೋಪಾಲ ನಾಯ್ಕ​ನನ್ನು ಬಂಧಿಸಿ 5 ದ್ವಿಚಕ್ರ ವಾಹ​ನ​ಗ​ಳನ್ನು ವಶ ಪಡಿ​ಸಿ​ಕೊ​ಳ್ಳು​ವಲ್ಲಿ ಯಶ​ಸ್ವಿ​ಯಾ​ಗಿ​ದ್ದಾರೆ.

ವಿಜಯಪುರ: 3 ತಿಂಗಳಲ್ಲಿ 21 ಆನ್‌ಲೈನ್‌ ವಂಚನೆ ಪ್ರಕರಣ ದಾಖಲು 

ಕೋಲಾರದಲ್ಲಿ ಕಳ್ಳರ ಕಾಟ: ನಗರದ ಟೇಕಲ್‌ ರಸ್ತೆಯ ಮಿನಿ ಹೋಟೆಲ್‌ ವೃತ್ತದಲ್ಲಿ ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಸಂಬಂಧಿಕರಿಗೆ ಸೇರಿದ ಹೊಸ ಕಟ್ಟಡದಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಕಳ್ಳರು ಕಟ್ಟಡಕ್ಕೆ ನುಗ್ಗಿ ಕೂಲಿ ಕಾರ್ಮಿಕನೊಬ್ಬನ 5000 ರು. ನಗದು, ಮೊಬೈಲ್‌ ಫೋನ್‌ ಕದ್ದಿದ್ದಾರೆ. ಅದೇ ಪ್ರದೇಶದಲ್ಲಿ ಹೊಸದಾಗಿ ಪ್ರಾರಂಭವಾಗಿರುವ ದಿನಪತ್ರಿಕೆ ಹಾಗೂ ಡಿಜಿಟಲ್‌ ಚಾನೆಲ್‌ ಕಾರ್ಯಾಲ, ಲಾಯರ್‌ ಕೃಷ್ಣ ಕಚೇರಿ ಹಾಗೂ ಮನೆಯೊಂದರ ಬೀಗ ಮುರಿಯಲು ಕಳ್ಳರು ಯತ್ನಿಸಿದ್ದಾರೆ. ನಗರ ಪೋಲಿಸ್‌ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಒಂದೇ ಪ್ರದೇಶದಲ್ಲಿ ಸರಣಿ ಕಳ್ಳತನಕ್ಕೆ ದುಷ್ಕರ್ಮಿಗಳು ಯತ್ನಿಸಿರುವುದು ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ.

click me!