ವಿಡಿಯೋ ರೆಕಾರ್ಡ್ ಮಾಡಿ ಮನೆಯೊಳಗೆ ಪ್ರವೇಶಿಸಿ ಮಹಿಳೆಗೆ ಕಿರುಕುಳ, ಡೆಲಿವರಿ ಬಾಯ್ ಅರೆಸ್ಟ್!

By Suvarna NewsFirst Published Dec 2, 2022, 4:50 PM IST
Highlights

ಕೊರಿಯಾ ಯುವತಿಗೆ ಲೈವ್ ವಿಡಿಯೋ ವೇಳೆಯೆ ಮುಂಬೈನಲ್ಲಿ ಕಿರುಕುಳ ನೀಡಿದ ಪ್ರಕರಣದ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಹಿಳೆಗೆ ಪಾರ್ಸೆಲ್ ನೀಡುವಾಗ ಕಿರುಕುಳ ನೀಡಿದ ಡೆಲಿವರಿ ಬಾಯ್ ಅರೆಸ್ಟ್ ಮಾಡಲಾಗಿದೆ.

ಮುಂಬೈ(ನ.02): ದಕ್ಷಿಣ ಕೊರಿಯಾದ ಯ್ಯೂಟೂಬರ್ ಯುವತಿಗೆ ಬೀದಿಯಲ್ಲಿ ಕಿರಿಕುಳ ನೀಡಿದ ಘಟನೆ ಮುಂಬೈನಲ್ಲಿ ವರದಿಯಾಗಿತ್ತು. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡಿತ್ತು ಭಾರತಕ್ಕೆ ತೀವ್ರ ಹಿನ್ನಡೆ ತಂದ ಈ ಘಟನೆ ಬೆನ್ನಲ್ಲೇ ಮುಂಬೈನಲ್ಲಿ ಮತ್ತೊಂದು ಕಿರುಕುಳ ಘಟನೆ ವರದಿಯಾಗಿದೆ. ಡೆಲಿವರಿ ಬಾಯ್ ಶೆಹಜಾದೆ ಶೇಕ್ ಮಹಿಳೆಗೆ ಕಿರುಕುಳ ನೀಡಿದ್ದಾನೆ. ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ ಆಕೆಯ ಮನೆಯೊಳಗೆ ಪ್ರವೇಶಿಸಿದ್ದಾನೆ. ಈ ಪ್ರಕರಣ ಸಂಬಂಧ ಡೆಲಿವರಿ ಬಾಯ್ ಶೆಹಜಾದೆ ಶೇಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಡೆಲಿವರಿ ಬಾಯ್ ಶೆಹಜಾದೆ ಶೇಕ್ ಪಾರ್ಸೆಲ್ ನೀಡಲು ಮಹಿಳೆಯ ವಿಳಾಸಕ್ಕೆ ತೆರಳಿದ್ದಾನೆ. ಪಾರ್ಸೆಲ್ ನೀಡುವ ಮುನ್ನ ತನ್ನ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸಿದ್ದಾನೆ. ಪಾರ್ಸೆಲ್ ಸ್ವೀಕರಿಸಲು ಮನೆಯೊಂದ ಹೊರಬಂದ ಮಹಿಳೆ ವಿಡಿಯೋ ರೆಕಾರ್ಡ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಆದರೆ ಶೆಹಜಾದೆ ಶೇಕ್ ಯಾವ ಮಾತಿಗೂ ಕೇರ್ ಮಾಡದೆ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ.

 

ಕ್ಲಿನಿಕಲ್ಲಿ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ವೈದ್ಯನ ವಿರುದ್ಧ ಪೋಕ್ಸೋ ಕೇಸ್‌

ಮಹಿಳೆ ವಿರೋಧ ವ್ಯಕ್ತಪಡಿಸಿ ಇಲ್ಲಿಂದ ತೆರಳುವಂತೆ ಎಚ್ಚರಿಕೆ ನೀಡಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಶೆಹಜಾದೆ ಶೇಕ್ ಮಹಿಳೆಯನ್ನು ತಳ್ಳಿ ಮನೆಯೊಳಗೆ ಪ್ರವೇಶಿಸಿದ್ದಾನೆ. ಬಳಿಕ ಮಹಿಳೆಯ ಅಪ್ಪಿಕೊಳ್ಳಲು ಯತ್ನಿಸಿದ್ದಾನೆ. ಇದರಿಂದ ಭಯಭೀತಗೊಂಡ ಮಹಿಳೆ ಕಿರುಚಾಡಲು ಆರಂಭಿಸಿದ್ದಾಳೆ. ಈ ವೇಳೆ ಡೆಲಿವರಿ ಬಾಯ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಘಟನೆ ಕುರಿತು ಮುಂಬೈ ಪೊಲೀಸರಿಗೆ ದೂರು ನೀಡಿದ ಮಹಿಳೆ ರಕ್ಷಣೆ ಕೋರಿದ್ದಾಳೆ. ತಕ್ಷಣ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಡೆಲಿವರಿ ಬಾಯ್ ಅರೆಸ್ಟ್ ಮಾಡಿದ್ದರೆ. ಮುಂಬೈನ ಖಾರ್ ವಲಯದಲ್ಲಿ ಈ ಘಟನೆ ನಡೆದಿದೆ. ನವೆಂಬರ್ 30ಕ್ಕೆ ಈ ಘಟನೆ ನಡೆದಿತ್ತು. ಎರಡೇ ದಿನಕ್ಕೆ ಆರೋಪಿ ಶೆಹಜಾದೆ ಶೇಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. 

ಮುಂಬೈ ರೋಡಲ್ಲಿ ಕೊರಿಯಾ ಯೂಟ್ಯೂಬರ್‌ಗೆ ಲೈಂಗಿಕ ಕಿರುಕುಳ
ದಕ್ಷಿಣ ಕೊರಿಯಾದ ಯೂಟ್ಯೂಬರ್‌ ಒಬ್ಬಳಿಗೆ ಮುಂಬೈನ ಜನನಿಬಿಡ ರಸ್ತೆಯಲ್ಲೇ ಇಬ್ಬರು ಯುವಕರು ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ಕುರಿತ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಮೊಬೀನ್‌ ಚಾಂದ್‌ ಮತ್ತು ಮೊಹಮ್ಮದ್‌ ನಖೀಬ್‌ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

ಕೇರಳದಲ್ಲಿ 30 ವರ್ಷಗಳಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಿರುಕುಳ, ಮಾಜಿ ಶಿಕ್ಷಕಿಕನ ಬಂಧನ

ದಕ್ಷಿಣ ಕೊರಿಯಾ ಮೂಲದ ಹ್ಯೋಜೆಯಾಂಗ್‌ ಪಾರ್ಕ್ ಎಂಬಾಕೆ ಭಾರತ ಪ್ರವಾಸದಲ್ಲಿದ್ದು, ಬುಧವಾರ ಸಂಜೆ ಮುಂಬೈ ವೈಶಿಷ್ಟ್ಯತೆ ಬಗ್ಗೆ ಖಾರ್‌ನಲ್ಲಿ 1000ಕ್ಕೂ ಹೆಚ್ಚು ಪ್ರೇಕ್ಷಕರ ಮುಂದೆ ಯೂಟ್ಯೂಬ್‌ ಲೈವ್‌ಸ್ಟ್ರೀಂ ಮಾಡುತ್ತಿದ್ದಳು. ಆಗ ಒಬ್ಬ ಯುವಕ ಬಂದು ಆಕೆಯ ಸೊಂಟ ಹಿಡಿಯುತ್ತಾನೆ. ಮುತ್ತು ಕೊಡಲೂ ಯತ್ನಿಸುತ್ತಾನೆ. ಇದನ್ನು ವಿರೋಧಿಸಿದರೂ ಆತ ಸುಮ್ಮನಾಗಲ್ಲ. ಬಳಿಕ ಬೈಕ್‌ನಲ್ಲಿ ಆತನ ಸ್ನೇಹಿತ ಅದೇ ಸ್ಥಳಕ್ಕೆ ಬರುತ್ತಾನೆ. ‘ಲಿಫ್‌್ಟಕೊಡ್ತೇವೆ ಬಾ’ ಎಂದು ಹಾಗೂ ‘ಫೋನ್‌ ನಂಬರ್‌ ಕೊಡು’ ಪಾರ್ಕ್ಗೆ ಒತ್ತಾಯಿಸುತ್ತಾರೆ. ಆದರೆ ಇದಕ್ಕೆ ಪಾರ್ಕ್ ನಿರಾಕರಿಸುತ್ತಾಳೆ. ಲೈವ್‌ ಸ್ಟ್ರೀಂ ಅನ್ನು 1000ಕ್ಕೂ ಹೆಚ್ಚು ಜನ ನೋಡುತ್ತಿದ್ದರು ಎನ್ನಲಾಗಿದೆ. ಬಳಿಕ ಪಾರ್ಕ್ ಕೂಡ ಟ್ವೀಟರ್‌ನಲ್ಲಿ ಘಟನೆಯ ವಿಡಿಯೋವನ್ನು ಹಾಕಿದ್ದಾಳೆ. ಆದರೆ ದೂರು ನೀಡಲು ಪಾರ್ಕ್ ಹಿಂದೇಟು ಹಾಕಿದ್ದರಿಂದ ಸ್ವಯಂಪ್ರೇರಿತರಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

click me!