ಖಚಿತ ಮಾಹಿತಿ ಮೇರೆಗೆ ರಾಜೇಂದ್ರನಗರ ಮುಖ್ಯರಸ್ತೆಯಲ್ಲಿ ಪ್ಯಾಸೆಂಜರ್ ಆಟೋದಲ್ಲಿ ಗಾಂಜಾವನ್ನು ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, ಅಟೋ ಮತ್ತು 5 ಕೆ.ಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ನಂತರ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ನಾಯ್ಡುನಗರದ ಮತ್ತೊಬ್ಬ ಅರೋಪಿಯ ಮನೆಯಲ್ಲಿದ್ದ 46 ಕೆ.ಜಿ 420 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈಸೂರು(ಆ.05): ಗಾಂಜಾ ಸಾಗಾಣಿಕೆ ಮಾಡುತ್ತಿದ್ದ 3 ಜನ ಆರೋಪಿಗಳನ್ನು ಮೈಸೂರಿನ ಸಿಸಿಬಿ ಘಟಕದ ಪೊಲೀಸರು ಬಂಧಿಸಿ, 21 ಲಕ್ಷ ಮೌಲ್ಯದ 51 ಕೆ.ಜಿ 420 ಗ್ರಾಂ ತೂಕದ ಗಾಂಜಾ ಮತ್ತು ಒಂದು ಪ್ಯಾಸೆಂಜರ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ರಾಜೇಂದ್ರನಗರ ಮುಖ್ಯರಸ್ತೆಯಲ್ಲಿ ಪ್ಯಾಸೆಂಜರ್ ಆಟೋದಲ್ಲಿ ಗಾಂಜಾವನ್ನು ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, ಅಟೋ ಮತ್ತು 5 ಕೆ.ಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ನಂತರ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ನಾಯ್ಡುನಗರದ ಮತ್ತೊಬ್ಬ ಅರೋಪಿಯ ಮನೆಯಲ್ಲಿದ್ದ 46 ಕೆ.ಜಿ 420 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
undefined
ಬೆಂಗಳೂರು: ಪೊಲೀಸರ ಕಂಡು ಓಡಿದವರ ಬೈಕ್‌ನಲ್ಲಿ ಗಾಂಜಾ, ಡ್ಯಾಗರ್ ಪತ್ತೆ..!
ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಎಸ್. ಜಾಹ್ನವಿ, ಸಿಸಿಬಿ ಘಟಕದ ಎಸಿಪಿ ಎಸ್.ಎನ್. ಸಂದೇಶ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಜಿ. ಶೇಖರ್, ಎಸ್‌ಐಗಳಾದ ಕಿರಣ್ ಅರ್ಜುನ್ ಹಂಪಿಹೊಳಿ, ಮಾರುತಿ ಅಂತರಗಟ್ಟಿ, ಎಎಸ್‌ಐ ಅಸ್ಗರ್ ಖಾನ್, ಜಗದೀಶ್ ಮತ್ತು ಸಿಬ್ಬಂದಿ ಸಲೀಂ ಪಾಷ, ರಾಮಸ್ವಾಮಿ, ಪ್ರಕಾಶ್, ಉಮಾಮಹೇಶ್, ಸುರೇಶ್, ಮಹೇಶ್, ರವಿಶಂಕರ್, ಲಕ್ಷ್ಮೀಕಾಂತ, ನರಸಿಂಹರಾಜ, ಚಂದ್ರಶೇಖರ್, ಗೋವಿಂದ, ಮೋಹನರಾಧ್ಯ, ರವಿ, ಶಿವಕುಮಾರ್ ಈ ದಾಳಿ ನಡೆಸಿದ್ದಾರೆ.