
ಬೆಂಗಳೂರು(ಏ.16): ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಮನೆ ಕೆಲಸದಾಳು ಹಾಗೂ ಆಕೆಯ ಇಬ್ಬರು ಸಹಚರರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನಕಪುರ ರಸ್ತೆಯ ತಿಪ್ಪಸಂದ್ರದ ಶ್ರುತಿ, ಆಕೆಯ ಸ್ನೇಹಿತರಾದ ಸೋಮಶೇಖರ್ ಹಾಗೂ ಸಿದ್ದೇಗೌಡ ಅಲಿಯಾಸ್ ದೇವರಾಜು ಬಂಧಿತರಾಗಿದ್ದು, ಆರೋಪಿಗಳಿಂದ 20 ಲಕ್ಷ ಮೌಲ್ಯದ 350 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕನಕಪುರ ರಸ್ತೆಯ ನಾರಾಯಣ ನಗರದ ನಿವಾಸಿ ಸಾಫ್ಟ್‌ವೇರ್ ಎಂಜಿನಿಯರ್ ತೇಜಸ್ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಶಂಕೆ ಮೇರೆಗೆ ಟೆಕ್ಕಿ ಮನೆಯ ಕೆಲಸದಾಳವನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ.
Bengaluru: ಪ್ರಿಯತಮೆ ಬರ್ತ್‌ಡೇ ಆಚರಿಸಿದ, ಬಳಿಕ ಕೇಕ್ ಕತ್ತರಿಸಿದ ಚೂರಿಯಿಂದಲೇ ಆಕೆಯ ಕತ್ತನ್ನು ಸೀಳಿದ!
ಮೂರುವರೆ ವರ್ಷಗಳಿಂದ ತೇಜಸ್ ಮನೆಯಲ್ಲಿ ಶ್ರುತಿ ಕೆಲಸ ಮಾಡುತ್ತಿದ್ದಳು. ಆಗ ಮನೆ ಮಾಲಿಕರ ಆರ್ಥಿಕ ವಹಿವಾಟಿನ ಬಗ್ಗೆ ತಿಳಿದುಕೊಂಡ ಆಕೆ, ಮನೆಯೊಡತಿಯ ಚಿನ್ನಾಭರಣ ಕಳವು ಮಾಡಲು ಸಂಚು ರೂಪಿಸಿದ್ದಳು. ಅಂತೆಯೇ ಮಾ.25ರಂದು ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಮರಳಿದ ನಂತರ ಒಡವೆಗಳನ್ನು ಬೀರುವಿನಲ್ಲಿಟ್ಟು ತೇಜಸ್ ಪತ್ನಿ ಸುಚರಿತಾ ಬೀಗ ಹಾಕಿದ್ದರು. ಮರು ದಿನ ಮನೆ ಕೆಲಸಕ್ಕೆ ಬಂದ ಶ್ರುತಿ, ಮನೆಯೊಡತಿಗೆ ಗೊತ್ತಾಗದಂತೆ ಬೀರುವಿನ ಬೀಗ ತೆರೆದು ಚಿನ್ನಾಭರಣ ಕಳವು ಮಾಡಿದ್ದಳು. ಇತ್ತೀಚೆಗೆ ಕಾರ್ಯಕ್ರಮಕ್ಕೆ ಹೋಗಲು ಆಭರಣ ಧರಿಸಲು ಬೀರು ತೆರೆದಾಗ ಕಳ್ಳತನ ಸಂಗತಿ ಗೊತ್ತಾಗಿದೆ. ಈ ಕಳ್ಳತನವನ್ನು ಮನೆ ಕೆಲಸದಾಳು ಶ್ರುತಿ ಮಾಡಿರಬಹುದು ಎಂದು ಶಂಕಿಸಿ ಪೊಲೀಸರಿಗೆ ತೇಜಸ್ ದಂಪತಿ ದೂರು ನೀಡಿದ್ದರು.
ತೇಜಸ್ ಮನೆಯಲ್ಲಿ ಆಭರಣ ಕಳವು ಮಾಡಿದ ಬಳಿಕ ಅವುಗಳನ್ನು ತನ್ನ ಸ್ನೇಹಿತರಾದ ಸೋಮಶೇಖರ್ ಮತ್ತು ಸಿದ್ದೇಗೌಡ ಮೂಲಕ ಅಡಮಾನ ಇಟ್ಟು ಆಕೆ ಹಣ ಪಡೆದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ