Bengaluru: ಅನ್ನ ಕೊಟ್ಟ ಮನೆಗೆ ಕನ್ನ ಹಾಕಿ, ಸಹಚರರ ಜೊತೆ ಸಿಕ್ಕಿಬಿದ್ದ ಚಾಲಾಕಿ ಕಳ್ಳಿ!

By Gowthami K  |  First Published Apr 15, 2023, 10:34 PM IST

ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿ ಚಿನ್ನಾಭರಣ  ದೋಚಿದ್ದ ಕಳ್ಳಿಯ ಜೊತೆ ಆಕೆಯ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. 20 ಲಕ್ಷ ಮೌಲ್ಯದ 350 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.


ಬೆಂಗಳೂರು (ಏ.15): ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿ ಚಿನ್ನಾಭರಣ  ದೋಚಿದ್ದ ಕಳ್ಳಿಯ ಜೊತೆ ಆಕೆಯ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಬಂಧಿತರನ್ನು ಶೃತಿ, ಸೋಮಶೇಖರ್, ಸಿದ್ದೇಗೌಡ ಎಂದು ಗುರುತಿಸಲಾಗಿದೆ. ತಲಘಟ್ಟಪುರದ ತೇಜಸ್ ಎಂಬುವವರ ಮನೆಯಲ್ಲಿ ಎರಡೂವರೆ ವರ್ಷದಿಂದ‌  ಶೃತಿ ಕೆಸಕ್ಕಿದ್ದಳು. ಇದೇ ತಿಂಗಳ 6 ನೇ ತಾರೀಖು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದಳು. 350 ಗ್ರಾಂ ಚಿನ್ನ ಕಳ್ಳತನವಾದ ಬಗ್ಗೆ ಕೆಲಸದಾಕೆ ಶೃತಿ‌ ಮೇಲೆಯೇ ತೇಜಸ್ ದೂರು ನೀಡಿದ್ದರು. ವಿಚಾರಣೆ ವೇಳೆ ಶೃತಿ ಚಿನ್ನ ಕದ್ದಿರುವುದು ಬೆಳಕಿಗೆ ಬಂದಿದ್ದು, ಕದ್ದ ಚಿನ್ನಾಭರಣವನ್ನು ಸೋಮಶೇಖರ್, ಸಿದ್ದೇಗೌಡಗೆ ಕೊಟ್ಟಿರುವುದಾಗಿ ಶೃತಿ ಬಾಯಿಬಿಟ್ಟಿದ್ದಾಳೆ.  ಸೋಮಶೇಖರ್ ಹಾಗೂ ಸಿದ್ದೇಗೌಡ ಚಿನ್ನವನ್ನು ಗಿರವಿ ಇಟ್ಟಿದ್ದರು. ಬಂಧಿತ ಆರೋಪಿಗಳಿಂದ 20 ಲಕ್ಷ ಮೌಲ್ಯದ 350 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಸದ್ಯ ಮೂವರನ್ನೂ ಬಂಧಿಸಿರುವ ತಲಘಟ್ಟಪುರ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಅಂತಾರಾಜ್ಯ ಬೈಕ್‌ ಕಳ್ಳರ ಬಂಧನ:
ವಿಜಯಪುರ, ಹುಬ್ಬಳ್ಳಿ, ಧಾರವಾಡ, ಎಂ.ಕೆ. ಹುಬ್ಬಳ್ಳಿ, ಕಿತ್ತೂರು, ಮೀರಜ, ಖಾನಾಪುರ, ಬೈಲಹೊಂಗಲ, ಬೆಳಗಾವಿ, ಸವದತ್ತಿ, ಹಾವೇರಿ ಸೇರಿದಂತೆ 17 ಕಡೆಗಳಲ್ಲಿ ಕದ್ದ ಅಂತರ ಜಿಲ್ಲಾ ಮತ್ತು ಅಂತರ ರಾಜ್ಯದಲ್ಲಿ ಬೈಕ್‌ ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ದಾಂಡೇಲಿ ನಗರ ಠಾಣೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.

Tap to resize

Latest Videos

undefined

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣಾ ವ್ಯಾಪ್ತಿಯಲ್ಲಿ ಕಳೆದ ಶುಕ್ರವಾರರಂದು ರಾತ್ರಿ ಹಳಿಯಾಳ ರಸ್ತೆಯ ವೆಸ್ಟ್‌ ಕೋಸ್ಟ್‌ ಪೇಪರ್‌ ಮಿಲ್‌ ಗೇಟ್‌ ಹತ್ತಿರ ವಾಹನ ತಪಾಸಣಾ ವೇಳೆ ಅನುಮಾಸ್ಪದವಾಗಿ ಬೈಕಿನೊಂದಿಗೆ ಸಿಕ್ಕ ಆಪಾದಿತರನ್ನು ವಿಚಾರಿಸಿದಾಗ ಬೈಕ್‌ಗೆ ಸಂಬಂಧಿಸಿದ ದಾಖಲೆಗಳು ಇಲ್ಲದ ಕಾರಣ, ಇದು ಕಳ್ಳತನದ ಬೈಕ್‌ ಎಂದು ಅನುಮಾನಗೊಂಡು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿತರ ವಿಚಾರಣೆ ಮುಂದುವರಿಸಿದಾಗ ಈ ಬೈಕ್‌ ಸರಣಿ ಕಳ್ಳತನದ ಪ್ರಕರಣವನ್ನು ಬೆಳಕಿಗೆ ಬಂದಿದೆ.

VIJAYAPURA: ಮಗನಿಗೆ ಸರ್ಕಾರಿ ನೌಕರಿ ಸಿಕ್ಕ ಖುಷಿ, ಸಿಡಿ ಆಡಿ ಹರಕೆ ತೀರಿಸಲು ಹೋಗಿ ಮಹಿಳೆ ಬಲಿ!

ದಾಂಡೇಲಿ ತಾಲೂಕಿನ ಕೋಗಿಲಬನ ನಿವಾಸಿ ಶಾನವಾಜ ಶಬ್ಬೀರ್‌ ಅಹ್ಮದ ಬಸಾಪುರ(34) ಹಳೆದಾಂಡೇಲಿ ಇರ್ಷಾದ ಜಾಪರಸಾಬ್‌ ಚೌಧರಿ(27) ಪಟೇಲ್‌ ನಗರದ ಮುಸ್ತಾಕ್‌ ಅಹ್ಮದ ಮೂಲೆಮನೆ(41) ಬಂಧಿತ ಆರೋಪಿಗಳು.

 Bengaluru: ಪ್ರಿಯತಮೆ ಬರ್ತ್‌ಡೇ ಆಚರಿಸಿದ, ಬಳಿಕ ಕೇಕ್‌ ಕತ್ತರಿಸಿದ ಚೂರಿಯಿಂದಲೇ ಆಕೆಯ ಕತ್ತನ್ನು

ದಾಂಡೇಲಿ ಉಪ ವಿಭಾಗದ ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಬಿ.ಎಸ್‌. ಲೋಕಾಪುರ, ಪಿಎಸ್‌ಐಗಳಾದ ಐ.ಆರ್‌. ಗಡ್ಡೇಕರ್‌, ಪರಮಾನಂದ ಕೊಣ್ಣೂರ, ಎ.ಎಸ್‌.ಐ ಗಳಾದ ಬಸವರಾಜ ಒಕ್ಕುಂದ, ನಾರಾಯಣ ರಾಥೋಡ್‌ ಹಾಗೂ ಪೊಲೀಸ ಸಿಬ್ಬಂದಿಗಳಾದ ಮಂಜುನಾಥ ದೇವಮಟ್ಟಿ, ಭೀಮಪ್ಪ ಕದರಮಂಡಲಗಿ, ಮಂಜುನಾಥ ಶೆಟ್ಟಿ, ನಾಗರಾಜ ಬಮ್ಮಿಗಟ್ಟಿ, ಜಯನ ಗೌಡ, ಕೃಷ್ಣಾ ಬಿ, ಚಿನ್ಮಯ ಪತ್ತಾರ, ವಿನಾಯಕ ನಾಯ್ಕ, ಸದ್ದಾಂ ಸೈಯದ್‌, ದಶರಥ ಲಕ್ಮಾಪುರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

click me!