Bengaluru Crime: ಕೆಲಸ ಕೊಡಿಸೋದಾಗಿ ಹಣ ಪಡೆದು ವಂಚನೆ: ಮೂವರ ಬಂಧನ

Suvarna News   | Asianet News
Published : Feb 15, 2022, 12:10 PM ISTUpdated : Feb 15, 2022, 01:00 PM IST
Bengaluru Crime: ಕೆಲಸ ಕೊಡಿಸೋದಾಗಿ ಹಣ ಪಡೆದು ವಂಚನೆ: ಮೂವರ ಬಂಧನ

ಸಾರಾಂಶ

*   ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಕೊಡಿಸೋದಾಗಿ ಪೋಸ್ಟ್ ಮಾಡುತ್ತಿದ್ದ ಆರೋಪಿಗಳು *   ಹಣ ಪಡೆದು ನಕಲಿ ಜಾಬ್ ಆಫರ್ ಲೆಟರ್ ನೀಡುತ್ತಿದ್ದ ಖದೀಮರು *   ಖತರ್ನಾಕ್‌ ಅಂತರ್ ರಾಜ್ಯ ಬೈಕ್‌ ಕಳ್ಳರ ಬಂಧನ  

ಬೆಂಗಳೂರು(ಫೆ.15):  ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸೋದಾಗಿ ವಂಚಿಸುತ್ತಿದ್ದ(Fraud) ಗ್ಯಾಂಗ್‌ವೊಂದರ ಕಿಂಗ್ ಪಿನ್ ಸೇರಿ ಮೂವರನ್ನು ನಗರದ ಸಂಪಿಗೆಹಳ್ಳಿ ಪೊಲೀಸರು(Police) ಬಂಧಿಸಿದ್ದಾರೆ.  ಕಾಳಿ ಪ್ರಸಾದ್ ರಾತ್ ಅಲಿಯಾಸ್ ಕಾಳಿ, ಅಭಿಜಿತ್ ಅರುಣ ನೆಟಕೆ, ಅಭಿಷೇಕ್ ಮೊಹಂತಿ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು(Accused) ಸಾಮಾಜಿಕ ಜಾಲತಾಣಗಳಲ್ಲಿ(Social Media) ಉದ್ಯೋಗ(Job) ಕೊಡಿಸೋದಾಗಿ ಪೋಸ್ಟ್ ಮಾಡುತ್ತಿದ್ದರು. ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿನ ಮಾನ್ಯತಾ ಟೆಕ್ ಪಾರ್ಕ್ ಕಂಪನಿಗಳ ಹೆಸರು ಹಾಗೂ ಲೋಗೋ ದುರ್ಬಳಕೆ ಮಾಡಿಕೊಂಡು ಅಮಾಯಕರಿಗೆ ವಂಚಿಸುತ್ತಿದ್ದರು. ಐಬಿಎಂ, ಕಾಗ್ನಿಜೆಂಟ್ ಸೇರಿದಂತೆ ಹಲವು ಕಂಪನಿಗಳಲ್ಲಿ ಕೆಲಸ ಕೊಡಿಸೋದಾಗಿ ಫೇಸ್‌ಬುಕ್(Facebook), ಲಿಂಕ್ಡ್‌ಇನ್‌ನಲ್ಲಿ ಜಾಹೀರಾತು ನೀಡುತ್ತಿದ್ದರು. 

Bengaluru Crime: ಮಿಲಿಟರಿಯಲ್ಲಿ ಕೆಲಸದಾಸೆ ತೋರಿಸಿ ವಂಚನೆ: ನಕಲಿ ಸೇನಾಧಿಕಾರಿ ಬಂಧನ

ಸಂಪರ್ಕಿಸಿದವರ ಬಳಿ ಹಣ ಪಡೆದು ನಕಲಿ ಜಾಬ್ ಆಫರ್ ಲೆಟರ್ ನೀಡುತ್ತಿದ್ದರು. ನಂತರ ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಕಚೇರಿಗೆ ಹೋಗುವಂತೆ ಹೇಳಿ ವ್ಯಕ್ತಿಯೊಬ್ಬರ ಹೆಸರನ್ನ ಹೇಳಿ ಸಂಪರ್ಕಿಸುವಂತೆ ಕಳುಹಿಸುತ್ತಿದ್ದರು. ಅಲ್ಲಿ ಹೋದಾಗ ತಾವು ವಂಚನೆಗೊಳಗಾಗಿರೋದು ತಿಳಿದು ಬರುತ್ತಿತ್ತು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಬಾಡಿಗೆ ಹಾಗೂ ಲೀಸ್ ಮನೆ ಕೊಡಿಸೋದಾಗಿ ಸಹ ಆರೋಪಿಗಳು ವಂಚಿಸಿದ್ದರು. ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಸದ್ಯ ಬಂಧಿತ ಆರೋಪಿಗಳ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿಗಳ ವಿರುದ್ಧ ಮಹಾರಾಷ್ಟ್ರದಲ್ಲೂ(Maharashtra) ವಂಚನೆ ಪ್ರಕರಣಗಳು ದಾಖಲಾಗಿರುವುದು ಪೊಲೀಸರು ತನಿಖೆಯಿಂದ ಬೆಳಕಿಗೆ ಬಂದಿದೆ. 

ಖತರ್ನಾಕ್‌ ಅಂತರ್ ರಾಜ್ಯ ಬೈಕ್‌ ಕಳ್ಳರ ಬಂಧನ

ಇನ್ನು ಮತ್ತೊಂದು ಕೇಸ್‌ನಲ್ಲಿ ಬೈಕ್ ಕಳ್ಳತನಕ್ಕೆ(Bike Theft)  ಹೊಂಚು ಹಾಕಿ ಕುಳಿತಿದ್ದಾಗಲೇ ಪೊಲೀಸರು ಖದೀಮರ ಹೆಡೆಮುರಿ ಕಟ್ಟಿದ ಘಟನೆ ನಗರದಲ್ಲಿ ನಡೆದಿದೆ. ಕೋಣನಕುಂಟೆ ಠಾಣೆಯ ಪೊಲೀಸರು ಭರ್ಜರಿ ಬೇಟೆಯಾಡುವ ಮೂಲಕ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. 

Bengaluru Crime: ‘ಅದೃಷ್ಟದ ಚೊಂಬು’ ತೋರಿಸಿ ಕೋಟಿಗಟ್ಟಲೇ ಟೋಪಿ..!

ಬಂಧಿತರನ್ನ ಶ್ರೀನಿವಾಸ(25), ವಿಕ್ರಮ್(23), ಸಲೀಂ(21), ಬಸಪ್ಪ(22) ಎಂದು ಗುರುತಿಸಲಾಗಿದೆ. ಬೈಕ್ ಕಳ್ಳತನಕ್ಕೆ ಹೊಂಚು ಹಾಕಿ ಕುಳಿತಿದ್ದಾಗಲೇ ಖದೀಮರನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಮನೆ ಮುಂದೆ ಹಾಗೂ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಹ್ಯಾಂಡಲ್ ಮುರಿದು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳು ಕದ್ದ ಬೈಕ್ ಸ್ನೇಹಿತರಿಗೆ ಮಾರಾಟ ಮಾಡಿ ಮೋಜು ಮಸ್ತಿ ಮಾಡ್ತಿದ್ದರು. ಬಂಧಿತರಿಂದ ಒಟ್ಟು 18 ಬೈಕ್‌ಗನಳನ್ನ ವಶಪಡಿಸಿಕೊಂಡಿದ್ದಾರೆ. 

ಪೊಲೀಸರ ಸೋಗಿನಲ್ಲಿ ವಂಚನೆ!

ಹೊಸಪೇಟೆ: ನಗರದ ಟಿಬಿ ಡ್ಯಾಂ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ಸೋಗಿನಲ್ಲಿ ವಂಚಿಸಿ 2.10 ಲಕ್ಷ ಮೌಲ್ಯದ 50 ಗ್ರಾಂ. ಮಾಂಗಲ್ಯ ಸರವನ್ನು ಕಳ್ಳರು ಸೋಮವಾರ ಬೆಳಗ್ಗೆ 10.20ರ ಹೊತ್ತಿಗೆ ಕದ್ದೊಯ್ದಿದ್ದಾರೆ.

ನಗರದ ಟಿಬಿ ಡ್ಯಾಂ ನಿವಾಸಿ ಜಯಲಕ್ಷ್ಮೇ ಎಂಬವರು ತನ್ನ ಪತಿ ನರಸಿಂಹಲು ಜತೆಗೆ ಬೈಕ್‌ನಲ್ಲಿ ಕೊಪ್ಪಳದ ಹೊಸಲಿಂಗಾಪುರಕ್ಕೆ ತೆರಳುತ್ತಿದ್ದಾಗ, ಟಿಬಿ ಡ್ಯಾಂನ ಫಿಶ್‌ ಮಾರ್ಕೆಟ್‌ ಬಳಿ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಆಗಮಿಸಿ, ಈ ಭಾಗದಲ್ಲಿ ಕಳ್ಳತನ ಹೆಚ್ಚಾಗುತ್ತಿದೆ. ನಾವು ಆಂಧ್ರಪ್ರದೇಶ ಪೊಲೀಸರು. ಕೊರಳಲ್ಲಿನ ಚಿನ್ನದ ಮಾಂಗಲ್ಯಸರವನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬೇಕು ಎಂದಿದ್ದಾರೆ. ಇದನ್ನು ನಂಬಿದ ಜಯಲಕ್ಷ್ಮೇ ತನ್ನ ಬ್ಯಾಗ್‌ನಲ್ಲಿ ಮಾಂಗಲ್ಯ ಸರ ಇಟ್ಟಿದ್ದಾರೆ. ಆಗ ಅವರಲ್ಲಿ ಒಬ್ಬ ಸರಿಯಾಗಿ ಇಟ್ಟಿಲ್ಲಮ್ಮ ಎನ್ನುತ್ತಾ ಬ್ಯಾಗ್‌ ತೆಗೆದುಕೊಂಡು, ಇಲ್ಲಿ ಇಡಬಾರದಮ್ಮ ಎನ್ನುತ್ತಾ ಬ್ಯಾಗ್‌ನ ಇನ್ನೊಂದು ಬದಿಯಲ್ಲಿ ಇಟ್ಟಂತೆ ಮಾಡಿ, ಮೋಸದಿಂದ ಮಾಂಗಲ್ಯ ಸರ ಕದ್ದೊಯ್ದಿದ್ದಾನೆ ಎಂದು ಜಯಲಕ್ಷ್ಮೇ ಅವರು ದೂರಿದ್ದಾರೆ. ಈ ಕುರಿತು ಟಿಬಿ ಡ್ಯಾಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!