
ನವದೆಹಲಿ (ಫೆ.15): ಇಲ್ಲಿನ ತಿಲಕ್‌ನಗರದಲ್ಲಿರುವ ಮನೆಯೊಂದಕ್ಕೆ ಗ್ಯಾಸ್ ಏಜೆನ್ಸಿಯವ ಎಂದು ಹೇಳಿಕೊಂಡು ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ 87 ವರ್ಷದ ಹಾಸಿಗೆ ಹಿಡಿದಿರುವ ವೃದ್ಧೆಯ ಮೇಲೆ ಅತ್ಯಾಚಾರ (Rape) ಎಸಗಿರುವ ಅಮಾನುಷ ಘಟನೆ ನಡೆದಿದೆ. ಈ ಕುರಿತು ದೆಹಲಿ ಪೊಲೀಸ್ (Delhi Police) ಅನ್ನು ಟ್ಯಾಗ್ ಮಾಡಿ ಟ್ವೀಟ್ (Tweet) ಮಾಡಿರುವ ವ್ಯಕ್ತಿಯೊಬ್ಬರು ‘ನನ್ನ ಸ್ನೇಹಿತರ 87 ವರ್ಷದ ಅಜ್ಜಿಯ ಮೇಲೆ ಅತ್ಯಚಾರ ನಡೆಸಲಾಗಿದೆ. ಅವರು ಗಾಯಗೊಂಡಿದ್ದಾರೆ. ಆದರೆ ತಿಲಕ್‌ನಗರದ ಪೊಲೀಸರು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ’ಎಂದು ಟ್ವೀಟ್ ಮಾಡಿದ್ದಾರೆ.
ಈ ನಡುವೆ, ಈ ಕುರಿತು ಪೊಲೀಸ್ ಸ್ಟೇಶನ್‌ಗೆ (Police Station) ದೂರು ನೀಡಿದಾಗ ಪೊಲೀಸರು ಎಫ್‌ಐಆರ್ (FIR) ದಾಖಲಿಸದೇ ತಡ ಮಾಡಿದರು ಎಂದು ಮನೆಯವರು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ತಳ್ಳಿಹಾಕಿರುವ ಪೊಲೀಸರು ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ‘ಮೊದಲು ಕೇವಲ ಮೊಬೈಲ್ ಕಳ್ಳತನವಾಗಿರುವುದಾಗಿ ಮಾತ್ರ ದೂರು ನೀಡಿದ್ದರು. ಈಗ ಲೈಂಗಿಕ ದೌರ್ಜನ್ಯ (Sexual Harassment) ನಡೆದಿರುವುದಾಗಿ ಹೇಳಿದ್ದಾರೆ. ದೂರು ದಾಖಲಿಸಿಕೊಳ್ಳಲಾಗಿದೆ. ತನಿಖೆ ಆರಂಭಿಸಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.
ಹೆಂಡತಿ ತಂಗಿಯನ್ನೇ ಗರ್ಭಿಣಿಯನ್ನಾಗಿಸಿದ ಭೂಪ, ಕಾಮುಕನ ನೀಚ ಕೃತ್ಯ ಬಯಲು
ಕೆಲಸ ನೀಡುವ ನೆಪದಲ್ಲಿ ಅತ್ಯಾಚಾರ: ಯುವತಿಗೆ ಕೆಲಸದ ಆಮಿಷವೊಡ್ಡಿ ಆಕೆಯನ್ನು ದೆಹಲಿಯಿಂದ (Delhi) ರಾಜಸ್ಥಾನಕ್ಕೆ (Rajasthan) ಕರೆಸಿಕೊಂಡ ನಾಲ್ವರು ದುರುಳರು ಸಾಮೂಹಿಕ ಅತ್ಯಾಚಾರವೆಸಗಿ (Rape) ಆಕೆಯನ್ನು ಹೋಟೆಲ್ (Hotel) ಮೇಲಿನಿಂದ ಕೆಳಗೆ ನೂಕಿದ ಘಟನೆ ನಡೆದಿದೆ.
ಸಂದರ್ಶನದ ನೆಪದಲ್ಲಿ ದಿಲ್ಲಿಯಿಂದ ಆಕೆಯನ್ನು ಚುರುವಿನ ಹೋಟೆಲ್‌ಗೆ ದುರುಳರು ಕರೆಸಿಕೊಂಡಿದ್ದಾರೆ. ಮೇಲ್ಛಾವಣಿ ಮೇಲೆ ಆಕೆಯ ಕಾಲು-ಕೈಗೆ ಹಗ್ಗ ಕಟ್ಟಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಮೇಲಿನಿಂದ ನೂಕಿದ್ದಾರೆ. ಸುದೈವವಶಾತ್ ಆಕೆಯ ಕೈಗೆ ಕಟ್ಟಿದ ಹಗ್ಗ ಕಂಬಕ್ಕೆ ಸಿಕ್ಕಿಕೊಂಡು ಬಚಾವಾಗಿದ್ದಾಳೆ.
ಈ ಘಟನೆ ಕುರಿತು ಭಾನುವಾರ 25 ವರ್ಷದ ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ಮಾಡಿದ ಆರೋಪದಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಾದ ದೇವೇಂದ್ರ ಸಿಂಗ್, ವಿಕ್ರಂ ಸಿಂಗ್, ಭವಾನಿ ಸಿಂಗ್ ಮತ್ತು ಸುನೀಲ್ ರಜಪೂತ್‌ರನ್ನು ವಶಕ್ಕೆ (Arrest) ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು (Police) ಹೇಳಿದ್ದಾರೆ.
ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡುವ ಹಕ್ಕಿದೆ: ಉತ್ತರಾಖಂಡ ಹೈಕೋರ್ಟ್
ಬಾಲಕಿ ಮೇಲೆ ಎರಗಿದ ಕಾಮಾಂಧ: ಏನೂ ಅರಿಯದ ಕಂದಮ್ಮನ ಮೇಲೆ ಈ ಪಾಪಿ ಕ್ರೌರ್ಯ (Sexual Harassment) ಮೆರೆದಿದ್ದಾನೆ. 11 ವರ್ಷದ ಹುಡುಗಿ ಮೇಲೆ ಅತ್ಯಾಚಾರವೆಸಿದ (Rape) 23 ವರ್ಷದ ಕಿರಾತಕ ಆಕೆಯನ್ನು ಗ್ರಾಮದ ಟ್ಯಾಂಕ್ ವೊಂದರಲ್ಲಿ ಎಸೆದಿದ್ದ. ಹಾಸನ (Hassan) ತಾಲೂಕಿನಿಂದ ಘಟನೆ ವರದಿಯಾಗಿದೆ. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮನೆ ಬಳಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿದ ಪಕ್ಕದ ಮನೆಯ ಕೀರ್ತಿ ಸಾಗರ್ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಈತನ ದಾಳಿಯಿಂದ ಬಾಲಕಿ ಅಸ್ವಸ್ಥಗೊಂಡಿದ್ದಾಳೆ. ಯಾರಿಗೂ ಗೊತ್ತಾಗಬಾರದು ಎಂದು ಟ್ಯಾಂಕ್ ವೊಂದಕ್ಕೆ ಎಸೆದಿದ್ದಾನೆ. ಆದರೆ ಅಲ್ಲಿ ಸಮೀಪ ಕೆಲಸ ಮಾಡುತ್ತಿದ್ದ ಗ್ರಾಮಸ್ಥರೊಬ್ಬರು ಆಕಸ್ಮಿಕವಾಗಿ ಇದನ್ನು ಗಮನಿಸಿ ಬಾಲಕಿಯ ರಕ್ಷಣೆ ಮಾಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಪೋಷಕರು ಸ್ಥಳಕ್ಕೆ ಧಾವಿಸಿದ್ದು, ಆಕೆಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆಕೆ ಆಟವಾಡುತ್ತಿದ್ದಾಗ ಗಿಫ್ಟ್ ನೀಡುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದೆ ಎಂದು ತನ್ನ ತಪ್ಪನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ