ತಾಯಿಯಾಗೋ ಕನಸು ಕಂಡಿದ್ದ ಮಹಿಳೆ ಜೀವನದಲ್ಲಿ ವಿಧಿಯಾಟ: ಒಂದೇ ದಿನ ತಾಯಿ-ಮಗು ಸಾವು

By Suvarna News  |  First Published Feb 15, 2022, 9:37 AM IST

*  ಹುಟ್ಟಿದ ಆರೇ ತಿಂಗಳಿಗೆ ಮಗು ಸಾವು
*  ಬೆಂಗಳೂರಿನ ಎಸ್ ಜಿ ಪಾಳ್ಯದ ತಾವರೆಕೆರೆಯಲ್ಲಿ ನಡೆದ ಘಟನೆ
*  ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ತಾಯಿ


ಬೆಂಗಳೂರು(ಫೆ.15):  ತಾಯಿಯಾಗುವ ಕನಸು ಕಂಡಿದ್ದ ಮಹಿಳೆಯ ಜೀವನದಲ್ಲಿ ವಿಧಿಯಾಟವೇ ಬೇರೆಯಾಗಿತ್ತು ಅನ್ಸುತ್ತೆ. ಹೌದು,  ಹುಟ್ಟಿದ ಆರೇ ತಿಂಗಳಿಗೆ ಮಗು ಸಾವನ್ನಪ್ಪಿದ್ದರಿಂದ ತಾಯಿ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಎಸ್ ಜಿ ಪಾಳ್ಯದ ತಾವರೆಕೆರೆಯಲ್ಲಿ ನಿನ್ನೆ(ಸೋಮವಾರ) ನಡೆದಿದೆ. 

ಮಂಡ್ಯ(Mandya) ಮೂಲದ ಪಲ್ಲವಿ ಎಂಬಾಕೆಯೇ ಆತ್ಮಹತ್ಯೆ(Suicide)  ಮಾಡಿಕೊಂಡ ದುರ್ದೈವಿಯಾಗಿದ್ದಾಳೆ.  ಒಂದೇ ದಿನ ತಾಯಿ(Mother) ಮಗು(Child) ಸಾವನ್ನಪ್ಪಿರುವುದು(Death) ಮಾತ್ರ ದೊಡ್ಡ ದುರಂತವಾಗಿದೆ. ಪಲ್ಲವಿ ನಿನ್ನೆ ಡೆತ್ ನೋಟ್(Deathnote) ಬರೆದಿಟ್ಟು ಸಾವನಪ್ಪಿದ್ದಾಳೆ. ಸಿದ್ದು ಎಂಬಾತನ ಜೊತೆ ಕಳೆದ ನಾಲ್ಕು ವರ್ಷಗಳಿಂದ ಪಲ್ಲವಿ ವಿವಾಹ ಮಾಡಿಕೊಡಲಾಗಿತ್ತು. ಈ ಬಳಿಕ ಗರ್ಭಿಣಿಯಾದ ಪಲ್ಲವಿಗೆ ಗರ್ಭಪಾತವಾಗಿತ್ತು. ಬಳಿಕ ಮಗು ಆಸೆ ಕಂಡವರಿಗೆ ಎರಡನೇ ಮಗು ಜನಿಸಿತ್ತು. ಆದರೆ ಹುಟ್ಟಿದ ಮಗುವಿಗೆ ಹೃದಯದಲ್ಲಿ ರಂಧ್ರ ಇರೋದು ಪತ್ತೆಯಾಗಿತ್ತು. 

Latest Videos

undefined

ಸಾಲದ ಶೂಲ... ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಾಪಾರಿ ಕುಟುಂಬ, ಪತ್ನಿ ಸಾವು

ಆಸ್ಪತ್ರೆಯೊಂದರಲ್ಲಿ ಕೆಲಸಕ್ಕಿದ್ದ ತಂದೆಯಿಂದ ಮಗು ಬದುಕಿಸಲು ಸಾಕಷ್ಟು ಪರದಾಡಿದ್ದರು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಮಲಗಿದ್ದ ವೇಳೆ ಮಗು ಮೃತಪಟ್ಟಿತ್ತು. ಬಳಿಕ ಮಗು ಕಳೆದುಕೊಂಡ ನೋವಿನಲ್ಲಿ ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಕೆಲಸಕ್ಕೆ ತೆರಳಿದ್ದ ಪತಿ ಸಂಜೆ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಪೊಲೀಸರಿಗೆ(Police) ಮಾಹಿತಿ ನೀಡದೇ ಊರಿಗೆ ಮೃತದೇಹಗಳ(Deadbody) ಕರೆದುಕೊಂಡು ಹೊಗಲು‌ ಮುಂದಾಗಿದ್ದರು. ನಂತರ ಸಾವಿನ ಹಿಂದೆ ಕೊಲೆ ಆರೋಪದ ಹಿನ್ನಲೆಯಲ್ಲಿ ಮೃತರ ಕುಟುಂಬಸ್ಥರು ತಡವಾಗಿ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. 

ಈ ಸಂಬಂಧ ಸುದ್ದಗುಂಟೆ ಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಮೇರೆಗೆ ಪೊಲೀಸರು ಕುಟುಂಬಸ್ಥರ ತನಿಖೆಯನ್ನ ಆರಂಭಿಸಿದ್ದಾರೆ. 

ವಿಷ ಸೇವಿಸಿದ ವ್ಯಕ್ತಿ ಸಾವು

ಪುತ್ತೂರು(Puttur): ಕೆಲ ದಿನಗಳ ಹಿಂದೆ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥಗೊಂಡು ಮಂಗಳೂರು(Mangaluru) ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪಡುವನ್ನೂರು ಗ್ರಾಮದ ಸಜಂಕಾಡಿ ನಿವಾಸಿ ಆಟೋ ರಿಕ್ಷಾ ಚಾಲಕ ವಿನಯ ಕುಮಾರ್‌(23) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ವಿನಯ ಕುಮಾರ್‌ ಅವರು ಫೆ.5ರಂದು ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರು ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.

ಕಾರ್ಕಳ: ಬಾವಿಗೆ ಹಾರಿ ಆತ್ಮಹತ್ಯೆ

ಕಾರ್ಕಳ(Karkala): ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ಕಸಬದ ನೆಕ್ಲಾಜೆ ಬಳಿ ಫೆ.13 ರಂದು ನಡೆದಿದೆ.

Suicide Cases: ತೊಕ್ಕೊಟ್ಟಿನ ಪ್ರಸಿದ್ಧ ಆರ್ಕಿಟೆಕ್ಟ್ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

ಪ್ರೇಮಾರಾವ್‌ (80) ಮೃತಪಟ್ಟವರು. ಅನಾರೋಗ್ಯದಿಂದ(Illness) ಬಳಲುತ್ತಿದ್ದ ಪ್ರೇಮರಾವ್‌ ಸ್ಥಳೀಯ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಫೆ. 13ರಂದು ಮಧ್ಯಾಹ್ನ ಪಕ್ಕದ ಮನೆಗೆ ಹೋದವರು ಬಳಿಕ ನಾಪತ್ತೆಯಾಗಿದ್ದರು. ಮನೆಯವರು ಹುಡುಕಾಡಿದಾಗ ಮನೆಯ ಹಿಂಬದಿಯ ಬಾವಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಅವರನ್ನು ಮೇಲಕ್ಕೆತ್ತಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿದಾಗ ಪ್ರೇಮಾರಾವ್‌ ಮೃತಪಟ್ಟಿರುವುದು ದೃಢಪಟ್ಟಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನಸಿಕ ಖಿನ್ನತೆ: ಲಾರಿ ಚಾಲಕ ನೇಣಿಗೆ ಶರಣು

ಪೀಣ್ಯ ದಾಸರಹಳ್ಳಿ: ಆರೋಗ್ಯದಲ್ಲಿ ಏರುಪೇರಾದ ಕಾರಣ ಮಾನಸಿಕ ಖಿನ್ನತೆಗೊಳಗಾಗಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾದನಾಯಕಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮಾಕಳಿಯಲ್ಲಿ ನಡೆದಿದೆ.

ಆಂಧ್ರಪ್ರದೇಶದ ಚಿತ್ತೂರು ಮೂಲದವರಾದ ಆನಂದ್‌(26), ಮಾಕಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸ್ವಂತ ಲಾರಿ ಇಟ್ಟುಕೊಂಡಿದ್ದ ಆನಂದ್‌ಗೆ 2 ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥವಾಗಿತ್ತು. ಆದರೆ, ಆರೋಗ್ಯದಲ್ಲಿ ಏರುಪೇರಾಟ ಕಾರಣ ವೈದ್ಯರು ವಾಹನ ಚಲಾಯಿಸದಂತೆ ಸಲಹೆ ನಿಡಿದ್ದರು. ಇದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಆನಂದ್‌, ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!