ವಿಜಯಪುರ: ಉರಿವ ಬೆಂಕಿಗೆ ವೃದ್ಧನ ಎಸೆದು ಕೊಲೆ ಯತ್ನ

By Kannadaprabha NewsFirst Published Mar 22, 2024, 9:06 AM IST
Highlights

ಹನುಮಂತ ಮಲಘಾಣ, ಲಕ್ಷ್ಮಣ ವಾಲೀಕಾರ ಹಾಗೂ ಪವನ ಆಸಂಗಿ ಬಂಧಿತ ಆರೋಪಿಗಳು. ಇನ್ನೂ ಮೂವರು ಪರಾರಿಯಾಗಿದ್ದಾರೆ. ಕಾರಜೋಳ ಗ್ರಾಮದ ಮಲ್ಲಪ್ಪ ಆಸಂಗಿ, ಹನುಮಂತ ಮಲಘಾಣ, ಸಂಗಪ್ಪಾ ವಾಲೀಕಾರ ಲಕ್ಷ್ಮಣ ವಾಲೀಕಾರ, ಸರಸ್ವತಿ ಆಸಂಗಿ, ಪವನ ಆಸಂಗಿ ಎಂಬುವವರಿಂದ ಕೊಲೆಗೆ ಯತ್ನ ಮಾಡಿದ್ದಾರೆ ಎಂದು ಆರು ಜನರ ಮೇಲೆ ದುಂಡಪ್ಪ ದೂರು ಸಲ್ಲಿಸಿದ್ದಾರೆ.

ವಿಜಯಪುರ(ಮಾ.22):  ಮೇವಿನ ಬಣಿವೆ ಸುಟ್ಟು ಹಾಕಿದ್ದಾನೆ ಎಂದು 70 ವರ್ಷದ ವೃದ್ಧನನ್ನು ಉರಿವ ಬೆಂಕಿಗೆ ಎಸೆದ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಮಾ.15ರಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ವೇಳೆ ವೃದ್ಧನಿಗೆ ಸುಟ್ಟಗಾಯಗಳು ಆಗಿವೆ. ಬಬಲೇಶ್ವರ ಕಾರಜೋಳ ಗ್ರಾಮದ ದುಂಡಪ್ಪ ಹರಿಜನ ಗಾಯಗೊಂಡಿರುವ ವೃದ್ಧ. ಘಟನೆ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಹನುಮಂತ ಮಲಘಾಣ, ಲಕ್ಷ್ಮಣ ವಾಲೀಕಾರ ಹಾಗೂ ಪವನ ಆಸಂಗಿ ಬಂಧಿತ ಆರೋಪಿಗಳು. ಇನ್ನೂ ಮೂವರು ಪರಾರಿಯಾಗಿದ್ದಾರೆ. ಕಾರಜೋಳ ಗ್ರಾಮದ ಮಲ್ಲಪ್ಪ ಆಸಂಗಿ, ಹನುಮಂತ ಮಲಘಾಣ, ಸಂಗಪ್ಪಾ ವಾಲೀಕಾರ ಲಕ್ಷ್ಮಣ ವಾಲೀಕಾರ, ಸರಸ್ವತಿ ಆಸಂಗಿ, ಪವನ ಆಸಂಗಿ ಎಂಬುವವರಿಂದ ಕೊಲೆಗೆ ಯತ್ನ ಮಾಡಿದ್ದಾರೆ ಎಂದು ಆರು ಜನರ ಮೇಲೆ ದುಂಡಪ್ಪ ದೂರು ಸಲ್ಲಿಸಿದ್ದಾರೆ.

ಬೆಂಗಳೂರು: ಸಿಗ್ನಲ್‌ ಜಂಪ್‌ ಮಾಡಿ ಕಾನ್‌ಸ್ಟೇಬಲ್‌ಗೆ ಹೊಡೆದ ಬೈಕ್‌ ಸವಾರ ಜೈಲಿಗೆ

ಏನಿದು ಘಟನೆ?:

ದುಂಡಪ್ಪ ತನ್ನ ಜಮೀನಿನಲ್ಲಿದ್ದ ಕಬ್ಬಿನ ರವದಿಗೆ ಬೆಂಕಿ ಹಚ್ಚಿದ್ದಾನೆ. ಆದರೆ, ಗಾಳಿ ರಭಸಕ್ಕೆ ಬೆಂಕಿ ಹಾರಿ ಪಕ್ಕದ ಜಮೀನಿನಲ್ಲಿದ್ದ ಮೇವಿನ ಬಣಿವೆಗೆ ಆವರಿಸಿದೆ. ಇದರಿಂದ ಮಲ್ಲಪ್ಪ ಆಸಂಗಿ ಎಂಬುವವರ ಜಮೀನಿನಲ್ಲಿದ್ದ ಮೇವಿನ ಬಣಿವೆ ಸುಟ್ಟು ಭಸ್ಮವಾಗಿದೆ. ಈ ಘಟನೆ ಕುರಿತು ದುಂಡಪ್ಪ ಹಾಗೂ ಮಲ್ಲಪ್ಪ ನಡುವೆ ಪರಸ್ಪರ ವಾಗ್ವಾದ ನಡೆದಿದೆ. ಈ ವೇಳೆ ವೃದ್ಧ ದುಂಡಪ್ಪ ಹರಿಜನ ಅವರು ಆಕಸ್ಮಿಕವಾಗಿ ಬೆಂಕಿ ಗಾಳಿಗೆ ಹಾರಿ ಬಂದು ಈ ಅವಘಡವಾಗಿದೆ. ನಿಮಗೆ ಪರಿಹಾರ ನೀಡುತ್ತೇನೆ. ಮೇವಿನ ಬದಲಾಗಿ ಮೇವು ನೀಡುತ್ತೇನೆ. ಇಲ್ಲವೇ ಸುಟ್ಟ ಮೇವಿಗೆ ಪರಿಹಾರ ನೀಡುತ್ತೇನೆ ಎಂದು ಹೇಳಿದರೂ ಸಿಟ್ಟಾದ ಮಲ್ಲಪ್ಪ ಹಾಗೂ ಆತನ ಸಂಬಂಧಿಕರು ನಮ್ಮ ಮೇವಿನ ಬಣಿವೆಗೆ ಬೆಂಕಿ ಹಾಕಿದ್ದಿಯಾ, ನಿನ್ನನ್ನು ಸುಟ್ಟು ಹಾಕುತ್ತೇವೆ ಎಂದು ವೃದ್ಧ ದುಂಡಪ್ಪನನ್ನು ಎತ್ತಿ ಉರಿಯುವ ಬೆಂಕಿಗೆ ಎಸೆದಿದ್ದಾರೆ. ಈ ವೇಳೆ ದುಂಡಪ್ಪನ ಬೆನ್ನು ಹಾಗೂ ಕೈಗಳಿಗೆ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿದ್ದು, ದುಂಡಪ್ಪ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರು ಜನರ ಮೇಲೆ ವೃದ್ಧ ದುಂಡಪ್ಪ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

click me!