
ಬೆಂಗಳೂರು(ಮಾ.22): ಆಹಾರ ಪದಾರ್ಥಗಳ ತಯಾರಿಕಾ ಕಾರ್ಖಾನೆಗೆ ನುಗ್ಗಿ ಮಾನವ ಹಕ್ಕುಗಳ ರಕ್ಷಣ ಸಮಿತಿ ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ ಎಂದು ಹೇಳಿಕೊಂಡು ಹಣ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೆಲಮಂಗಲದ ರವಿಚಂದ್ರ (48), ರಮೇಶ್ (45) ಮತ್ತು ಪವನ್ ಕುರ್ಮಾ(40) ಬಂಧಿತರು. ಆರೋಪಿಗಳಿಂದ 1,879 ರು. ನಗದು ಮತ್ತು ಮಹೇಂದ್ರ ಬಲೇರೋ ವಾಹನ ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು ಇತ್ತೀಚೆಗೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಆಹಾರ ಪದಾರ್ಥಗಳ ತಯಾರಿಕಾ ಕಾರ್ಖಾನೆಗೆ ನುಗ್ಗಿ ಕಾರ್ಮಿಕರು ತಲೆಗೆ ಯಾವುದೇ ಟೋಪಿ ಧರಿಸದೆ ಕೆಲಸ ಮಾಡುತ್ತಿರುವುದು ಅಪರಾಧ ಎಂದು ಬೆದರಿಸಿ, ₹15 ಸಾವಿರಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ ₹10 ಸಾವಿರ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಸಿಗ್ನಲ್ ಜಂಪ್ ಮಾಡಿ ಕಾನ್‌ಸ್ಟೇಬಲ್‌ಗೆ ಹೊಡೆದ ಬೈಕ್ ಸವಾರ ಜೈಲಿಗೆ
ಘಟನೆ ವಿವರ:
ಆರೋಪಿಗಳು ಮಾನವ ಹಕ್ಕುಗಳ ರಕ್ಷಣಾ ಸಮಿತಿ ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ ಎಂಬ ನಕಲಿ ಸಂಘಟನೆ ಕಟ್ಟಿಕೊಂಡಿದ್ದರು. ತಾವು ಬಳಸುವ ಬೊಲೆರೋ ವಾಹನಕ್ಕೆ ಸಂಘಟನೆಯನಾಮಫಲಕಅಳವಡಿಸಿಕೊಂಡುಓಡಾಡುತ್ತಿದ್ದರು. ಮಾ.18ರಂದು ಸಂಘಟನೆ ಹೆಸರಿನಲ್ಲಿ ಆಹಾರ ಪದಾರ್ಥಗಳ ತಯಾರಿಕಾ ಕಾರ್ಖಾನೆಗೆ ನುಗ್ಗಿ ಪರಿಶೀಲನೆ ನಡೆಸಿದ್ದರು.
ಈ ವೇಳೆ ಕೆಲ ಕಾರ್ಮಿಕರು ತಲೆ ಕೂದಲು ಉದುರದಂತೆ ರಕ್ಷಣೆಗೆ ಟೋಪಿ ಧರಿಸದಿರುವುದು ಕಂಡು ಬಂದಿದೆ. ಇದೇ ಕಾರಣ ಮುಂದಿಟ್ಟುಕೊಂಡ ಆರೋಪಿಗಳು ಕಾರ್ಖಾನೆಯಲ್ಲಿ ಸ್ವಚ್ಛತೆ ಇಲ್ಲ. ಕಾರ್ಮಿಕರು ತಲೆಗೆ ಟೋಪಿ ಧರಿಸಿಲ್ಲ. ಕಾನೂನು ಪ್ರಕಾರ ಇದು ಅಪರಾಧವಾಗುತ್ತದೆ. ಈ ಬಗ್ಗೆ ಪ್ರಕರಣ ದಾಖಲಿಸುವುದಾಗಿ ಕಾರ್ಖಾನೆ ಮಾಲೀಕರನ್ನು ಬೆದರಿಸಿದ್ದಾರೆ.
ಬೆಂಗಳೂರು: ಕುಡಿಯಲು ನೀರು ಕೇಳಿ ಮಹಿಳೆ ಕೈ ಹಿಡಿದು ಎಳೆದ ಸ್ವಿಗ್ಗಿ ಬಾಯ್
ಒಮ್ಮೆ 6 ಸಾವಿರ ರು., ಮತ್ತೆ 4 ಸಾವಿರ ರು. ಸುಲಿಗೆ
ಪ್ರಕರಣ ದಾಖಲಿಸದೆ ಬಿಡಬೇಕಾದರೆ, ₹15 ಸಾವಿರ ನೀಡಬೇಕು ಎಂದು ಬೇಡಿಕೆ ಇರಿಸಿದ್ದಾರೆ. ಬಳಿಕ 56 ಸಾವಿರ ಪಡೆದು ಪರಾರಿಯಾಗಿದ್ದಾರೆ. ಮಾ.20ರಂದು ಮತ್ತೆ ಕಾರ್ಖಾನೆಗೆ ಬಂದಿರುವ ಆರೋಪಿಗಳು ಬಾಕಿ ₹9 ಸಾವಿರ ಕೊಡುವಂತೆ ದಬಾಯಿಸಿದ್ದಾರೆ. ಆಗ ಕ4 ಸಾವಿರ ಪಡೆದು ಪರಾರಿಯಾಗಿದ್ದಾರೆ. ಈ ವೇಳೆ ಅನುಮಾನಗೊಂಡ ಕಾರ್ಖಾನೆ ಮಾಲೀಕರು ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಪ್ರಕರಣದಾಖಲಿಸಿಕೊಂಡಪೊಲೀಸರು, ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ನಕಲಿ ಸಂಘಟನೆ ಕಟ್ಟಿಕೊಂಡು ಇದೇ ರೀತಿ ಬೆದರಿಸಿ ಹಲವರಿಂದ ಹಣ ಸುಲಿಗೆ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ. ಹೆಚ್ಚಿನ ತನಿಖೆಯಿಂದ ಮತ್ತಷ್ಟು ಸುಲಿಗೆ ಪ್ರಕರಣಗಳು ಬೆಳಕಿಗೆ ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ