ಮೃತದೇಹ ತರಲು ಆಸ್ಪತ್ರೆಗೆ ಹೊರಟವರು ಮಸಣ ಸೇರಿದ್ರು..!

By Ravi Nayak  |  First Published Aug 22, 2022, 11:04 AM IST
  • ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಮೂರು ಕಡೆ ಪ್ರತ್ಯೇಕ ಅಪಘಾತ ಸಂಭವಿಸಿವೆ. 
  • ಮೃತದೇಹ ತರಲು ಆಸ್ಪತ್ರೆಗೆ ಹೊರಟವರು ಮಸಣ ಸೇರಿದ್ರು..!

ಹುಬ್ಬಳ್ಳಿ (ಆ.22): ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಸಾವಿಗೀಡಾದ ಸಂಬಂಧಿಯೊಬ್ಬರ ಮೃತದೇಹ ತೆಗೆದುಕೊಂಡು ಬರಲು ಹೊರಟಿದ್ದ ಕ್ರೂಸರ್ ವಾಹನಕ್ಕೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಮೂರು ಜನ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ರಾಮನಾಳ ಕ್ರಾಸ್ ಬಳಿ ನಡೆದಿದೆ. ಹಳಿಯಾಳ(Haliyala) ತಾಲೂಕಿನ ನಂದಿಗಟ್ಟ(Nandigatta) ಗ್ರಾಮದಿಂದ ಹೊರಟಿದ್ದ ಕ್ರೂಸರ್ ವಾಹನ, ರಾಮನಾಳ ಕ್ರಾಸ್(Ramanala Cross) ಬಳಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ನಂದಿಗಟ್ಟದ ಶಿವನಗೌಡ ಪಾಟೀಲ(Shivanagowda Patil), ಅಮೃತ ಪಾಟೀಲ(Amruta Patil) ಸಾವಿಗೀಡಾಗಿದ್ದಾರೆ. ಚಾಲಕ ಮಾರುತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ‌. ಅಪಘಾತದಲ್ಲಿ ದೇವೆಂದ್ರ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದು.  ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಅಪರಿಚಿತ ವಾಹನ ಡಿಕ್ಕಿ: ಪತ್ನಿ ಸಾವು, ಪತಿ ಗಂಭೀರ

Tap to resize

Latest Videos

ಅಪಘಾತದ ರಭಸಕ್ಕೆ ಕ್ರೂಸರ್ ವಾಹನ ಎರಡು ತುಂಡಾಗಿದೆ. ಸ್ಥಳಕ್ಕೆ ಕಲಘಟಗಿ ಠಾಣೆ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿತು ಸಿದ್ದು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪಘಾತದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಾವು

ಚಿಂತಾಮಣಿ: ನಗರದ ಶ್ರೀ ಲಕ್ಷ್ಮೀ ವಿದ್ಯಾ ಸಂಸ್ಥೆಯ ವಿಕ್ರಮ್‌ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಅಶೋಕ್‌ ರೆಡ್ಡಿಯವರು ಶನಿವಾರ ಸಂಭವಿಸಿದ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರು ದ್ವಿಚಕ್ರ ವಾಹನದಲ್ಲಿ ಚೇಳೂರು ವೃತ್ತದಿಂದ ಕಾಲೇಜಿನ ಬಳಿ ಹೋಗುತ್ತಿದ್ದಾಗ ಕ್ಯಾಂಟರ್‌ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಕೋಲಾರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಪಲ್ಟಿ: ಚಾಲಕ ಸಾವು

 ಬೆಳ್ಳಂಬೆಳಗ್ಗೆ ಶಾಲಾ ಬಸ್‌ ಅಪಘಾತವಾಗಿ ಇಬ್ಬರು ಚಾಲಕರು ಮೃತಪಟ್ಟಘಟನೆ ಬೆನ್ನಲ್ಲೇ ಭಾನುವಾರ ಬೆಳಗ್ಗೆ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಕಾರು ಅಪಘಾತವಾಗಿ ಚಾಲಕನೋರ್ವ ಮೃತಪಟ್ಟಘಟನೆ ಸಂಭವಿಸಿದೆ.

ರಾಜ್ಯದ 2 ಕಡೆ ಪ್ರತ್ಯೇಕ ಅಪಘಾತ; ಜವರಾಯನ ಅಟ್ಟಹಾಸಕ್ಕೆ ನಾಲ್ವರು ಬಲಿ

ಅಥಣಿ ಪೊಲೀಸ್‌ ಠಾಣಾ ವ್ಯಾಪ್ತಿಯ ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಪಕ್ಕದ ಆಲದ ಮರ ಹತ್ತಿರ ಇಂದು ಬೆಳಗ್ಗೆ ಭೀಕರ ಕಾರು ಅಪಘಾತ ಸಂಭವಿಸಿದ್ದು, ಮೃತಪಟ್ಟವ್ಯಕ್ತಿಯನ್ನು ಜಮಖಂಡಿ ತಾಲೂಕಿನ ತಮದಡ್ಡಿ ಗ್ರಾಮದ ಸುರೇಂದ್ರ ಮಲ್ಲಣ್ಣವರ (60) ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಅಥಣಿ ತಾಲೂಕಿನ ಐನಾಪುರ ಗ್ರಾಮಕ್ಕೆ ಕಾಮಾಲೆ ಔಷಧ ತಗೆದುಕೊಂಡು ಬರುವಾಗ ಈ ಅವಘಡ ಸಂಭವಿಸಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಸು. 200 ಅಡಿ ದೂರ ಗೋವಿನ ಜೋಳದ ತೋಟದಲ್ಲಿ ಪಲ್ಟಿಯಾಗಿ ಬಿದ್ದಿದೆ. ಏರ್‌ಬ್ಯಾಗ್‌ ಬಿಚ್ಚಿದ್ದರೂ ಚಾಲಕ ಸಾವನ್ನಪ್ಪಿದ್ದು ದುರದೃಷ್ಟಕರ. ಈ ಪ್ರಕರಣ ಅಥಣಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

click me!