ವಿದ್ಯಾರ್ಥಿನಿಯರ ಆಶ್ಲೀಲ ವೀಡಿಯೋ ಪ್ರಕರಣ, ಸಮಗ್ರ ತನಿಖೆ ಸಿಟಿ ರವಿ ಒತ್ತಾಯ

By Suvarna News  |  First Published Jul 26, 2023, 7:30 PM IST

ಉಡುಪಿ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರ ಆಶ್ಲೀಲ ವೀಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ನ್ನೇ ದಾಖಲಿಸಿರಲಿಲ್ಲ. ಸಂಸ್ಥೆಯವರು ಪೊಲೀಸರಿಗೆ ದೂರು ಕೊಟ್ಟ ಕೂಡಲೇ ಎಫ್ಐಆರ್ ದಾಖಲಿಸಬೇಕಿತ್ತು.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜು.26): ಉಡುಪಿ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರ ಆಶ್ಲೀಲ ವೀಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ನ್ನೇ ದಾಖಲಿಸಿರಲಿಲ್ಲ. ಸಂಸ್ಥೆಯವರು ಪೊಲೀಸರಿಗೆ ದೂರು ಕೊಟ್ಟ ಕೂಡಲೇ ಎಫ್ಐಆರ್ ದಾಖಲಿಸಬೇಕಿತ್ತು. ಆಪಾಧಿತರನ್ನು ಬೆನ್ನು ಹತ್ತುವ ಬದಲು ಆಪಾಧಿತರ ಬಗ್ಗೆ ಟ್ವೀಟ್ ಮಾಡಿದವರನ್ನು ಬೆನ್ನು ಹತ್ತಿರುವುದು ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಈ ಬಗ್ಗೆ ಸಮಗ್ರ ತನಿಖೆ ಆಗಲಿ, ಆರೋಪ ಸತ್ಯವಾಗಿದ್ದಲ್ಲಿ ಅಪಾಯಕಾರಿಯಾದದ್ದು, ಅವರ ಜಾಲ ಎಲ್ಲೆಲ್ಲಿ ಕೆಲಸ ಮಾಡುತ್ತಿದೆ ಎನ್ನುವ ಬಗ್ಗೆ ಪಾರದರ್ಶಕ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ನಡುವೆ  ಉಡುಪಿಯ ಖಾಸಗಿ ಕಾಲೇಜಿನ ವಾಶ್ ರೂಂನಲ್ಲಿ ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿನಿಯರು ಹಿಡನ್ ಕ್ಯಾಮೆರಾ ಹಾಕಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ನಂಬಬೇಡಿ ಎಂದು ಉಡುಪಿ ಜಿಲ್ಲಾ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Tap to resize

Latest Videos

undefined

ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆ: 
ಉಗ್ರ, ಸಮಾಜ ಘಾತುಕ, ಕಾನೂನು ಬಾಹಿರ ಘಟನೆಗಳಲ್ಲಿ ಭಾಗಿ ಆದವರನ್ನ ಅಮಾಯಕರು ಎಂದು ಪರಿಗಣಿಸಿ ಅವರನ್ನು ಕೇಸ್ನಿಂದ ಕೈಬಿಡಲು ಹೊರಟಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದಷ್ಟೇ ಅಲ್ಲ, ದೇಶದ ಸಮಗ್ರತೆಗೂ ಅಪಾಯಕಾರಿ ಎಂದರು.ಕೆಜೆಹಳ್ಳಿ, ಡಿಜೆಹಳ್ಳಿ ಪ್ರಕರಣದ ಆರೋಪಿಗಳ ವಿರುದ್ಧದ ಪ್ರಕರಣ ಕೈಬಿಡುವಂತೆ ಶಾಸಕ ತನ್ವೀರ್ ಶೇಠ್ ಸರ್ಕಾರಕ್ಕೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಡಿಜೆಹಳ್ಳಿ, ಕೆಜಿಹಳ್ಳಿ ಪ್ರಕರಣದಲ್ಲಿ ಇಡೀ ಊರಿಗೆ ಬೆಂಕಿ ಹಾಕಿ 250 ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟು ಹಾಕಿ, ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿ ರಾಜ್ಯ ಇತಿಹಾದಲ್ಲೇ ಭೀಕರ ಘಟನೆ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಹರ್ಷ ಕೊಲೆ ನಂತರದ ಗಲಭೆ, ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿ ಆಗಿರುವರನ್ನು ಕಾಂಗ್ರೆಸ್ ನವರು ಅಮಾಯಕರು ಎಂದು ಪರಿಗಣಿಸುವುದು ಅಪಾಯಕಾರಿ ಎಂದರು.

BENGALURU: ಕೆ.ಆರ್.ಪುರ- ಬೈಯಪ್ಪನಹಳ್ಳಿಗೆ ಮೊದಲ ಮೆಟ್ರೋ ಸಂಚಾರ ಯಶಸ್ವಿ

ಇಂತಹ ರಾಜಕಾರಣದ ಆಟ ಖಂಡನೀಯ ನಿಮ್ಮ ಓಲೈಕೆ ರಾಜನೀತಿ ಪರಿಣಾಮ 2013 ರಿಂದ 2018ರ ವರೆಗೆ 32 ಕ್ಕೂ ಹೆಚ್ಚು ಜನ ಹಿಂದೂ ಸಂಘಟನೆ ಕಾರ್ಯಕರ್ತರ ಕೊಲೆಗೆ ಕಾರಣವಾಯಿತು. ಅಂದು ಮಾಡಿದ ತಪ್ಪನ್ನೇ ಮತ್ತೆ ಮಾಡಲು ಹೊರಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಒಳಗೊಂಡಂತೆ ಎಲ್ಲರೀತಿಯ ಹೋರಾಟವನ್ನೂ ಮಾಡುತ್ತೇವೆ. ಗೃಹ ಸಚಿವರು ಒಳ್ಳೆದು ಯಾವುದು ಕೆಟ್ಟದ್ದು ಯಾವುದೆಂದು ಅರ್ಥಮಾಡಿಕೊಳ್ಳದ ಸ್ಥಿತಿಗೆ ಬಂದಿರುವುದು ದುರ್ದೈವ. ನಿಮಗೆ ಓಟ್ ಹಾಕಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಎಲ್ಲಾ ಅಪರಾಧವನ್ನೂ ಮನ್ನಿಸಲು ಸಾಧ್ಯವೇ, ರಾಜ್ಯ, ದೇಶದ ಮೇಲೆ ಏನು ಪರಿಣಾಮ ಆಗುತ್ತದೆ ಎಂದು ಗೊತ್ತಾ ಎಂದು ಪ್ರಶ್ನಿಸಿದ್ದಾರೆ.ನಿಮ್ಮ ಅಮಾಯಕತೆ ರಾಜ್ಯವನ್ನು ಅಸಹಾಯಕತೆಗೆ ದೂಡಬಾರದು. ಈ ವಿಷಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಮತ್ತು ಸಂವಿಧಾನ ರಕ್ಷಿಸುವ ಜವಾಬ್ದಾರಿಯೂ ನಿಮ್ಮ ಮೇಲಿದೆ ಎನ್ನುವುದನ್ನು ಮರೆಯಬಾರದು ಎಂದರು.

ಸರ್ಕಾರದ ವಿರುದ್ಧ ಪತ್ರ ಬರೆಯುವುದು ಲಘುವಾಗಿ ಪರಿಗಣಿಸುವ ಸಂಗತಿಯಲ್ಲ: 
ಬಹುಮತ ಇರುವ, 135 ಶಾಸಕರು ಗೆದ್ದಿರುವ ಸಂದರ್ಭದಲ್ಲಿ ತಮ್ಮದೇ ಪಕ್ಷದ ಹಿರಿಯ ಶಾಸಕರು ಸರ್ಕಾರದ ವಿರುದ್ಧ ಪತ್ರ ಬರೆಯುವುದು ಲಘುವಾಗಿ ಪರಿಗಣಿಸುವ ಸಂಗತಿಯಲ್ಲ, ಕಾಂಗ್ರೆಸ್‌ ಹಿರಿಯ ಶಾಸಕರು ಸರ್ಕಾರದ ಮೇಲೆ ಬರೆದ ಪತ್ರ ಎರಡು ದಿನದಿಂದ ಸುದ್ದಿ ಮಾಡುತ್ತಿದೆ. ಕೇವಲ 2 ತಿಂಗಳ ಒಳಗೆ ತನ್ನದೇ ಶಾಸಕರ ಕೋಪಕ್ಕೆ ಬಹುಮತ ಪಡೆದ ಸರ್ಕಾರ ಗುರಿಯಾಗಿರುವುದು ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ನಿದರ್ಶನ ಎಂದರು.ಸಚಿವರಿಗೆ ಕಾಮಗಾರಿ ಪಟ್ಟಿ ಕೊಟ್ಟರೆ ಮಧ್ಯವರ್ತಿಗಳು ಹಣದ ಬೇಡಿಕೆ ಇಡುತ್ತಾರೆ ಎನ್ನುವ ಸಂಗತಿ ಈ ಸರ್ಕಾರ ದಲ್ಲಾಳಿಗಳ ಕೈಗೆ ವ್ಯವಹಾರ ಒಪ್ಪಿಸಿದೆ ಎನ್ನುವುದಕ್ಕೆ ನಿರ್ದಶನ. ಕೇಂದ್ರದ ಕಾಂಗ್ರೆಸ್‌ಗೆ ಇವರು ಸಹ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ವ್ಯವಹಾರದಲ್ಲಿ ಸ್ಪಷ್ಟತೆ ಮತ್ತು ನಿಖರತೆ ಇರಲೆಂದು ದಲ್ಲಾಳಿಗಳ ಕೈಗೆ ರಾಜ್ಯಭಾರ ಕೊಟ್ಟಿದ್ದಾರೆ ಎಂದು ಟೀಕಿಸಿದರು. ಶಾಸಕ ರಾಯರೆಡ್ಡಿ ಅವರು ಪತ್ರ ಕೊಟ್ಟಿದ್ದೇವೆ. ಸಹಿ ಹಾಕಿದ್ದೇವೆ ಎಂದಿದ್ದಾರೆ. ಮುಖ್ಯಮಂತ್ರಿಗಳು ಪತ್ರ ಬಂದಿದೆ. ಶಾಸಕಾಂಗ ಪತ್ರ ಕರೆಯಲಿಕ್ಕೆ ಎಂದರು. ಆದರೆ ಉಪಮುಖ್ಯಮಂತ್ರಿಗಳಿಗೆ ಅದನ್ನು ಒಪ್ಪಿಕೊಳ್ಳುವ ಧೈರ್ಯವೂ ಇಲ್ಲ. ಇದರ ನಿರ್ದೇಶನ ಯಾರದ್ದು, ನಿರ್ಮಾಪಕರು ಯಾರೆಂದು ಗೊತ್ತಾಗಿಲ್ಲ ಅಷ್ಟೇ ನಟರಾರು ಎನ್ನುವುದು ಬಹಿರಂಗವಾಗಿದೆ ಎಂದರು.

ದಾವಣಗೆರೆಯಲ್ಲಿ ಹೆಚ್ಚಾದ ಮಳೆ, ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಕಣ್ಣಿನ ವೈರಸ್ ಸಮಸ್ಯೆ

ಪತ್ರವನ್ನು ಫೋರೆನ್ಸಿಕ್ ಪರೀಕ್ಷೆಗೆ ಕಳಿಸಿಕೊಡಲಿ: 
ಪತ್ರಬರೆದಿರುವುದನ್ನು ಅಲ್ಲಗಳೆಯುವುದಾದರೆ, ಇದು ನಕಲಿ ಪತ್ರ ಎನ್ನುವುದಾದರೆ, ಅದನ್ನು ಫೋರೆನ್ಸಿಕ್ ಪರೀಕ್ಷೆಗೆ ಕಳಿಸಿಕೊಡಲಿ. ನಕಲಿ ಸಹಿ, ಅಸಲಿ ಸಹಿ ಯಾವುದು ಗೊತ್ತಾಗುತ್ತದೆ. ತನಿಖೆಗೊಪ್ಪಿಸಿದರೆ ಇದರ ಅಸಲಿಯತ್ತೇನು ಗೊತ್ತಾಗುತ್ತದೆ ಎಂದರು. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಹಿರಿಯ ಶಾಸಕರು ಅಸಮಾಧಾನಗೊಂಡಿರುವುದು ಸತ್ಯ. ಸರ್ಕಾರ ಮಧ್ಯವರ್ತಿಗಳ  ಮೂಲಕ ಎಲ್ಲದ್ದಕ್ಕೂ ದರ ನಿಗದಿ ಮಾಡಿ ವ್ಯವಹಾರ ನಡೆಸುತ್ತಿರುವುದು ಸತ್ಯ. ಕೆಲವು ಹುದ್ದೆಗಳನ್ನು ಹರಾಜು ಹಾಕಲಾಗುತ್ತಿದೆ. ಹಣ ಮಾಡಲಿಕ್ಕಾಗಿಯೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮನಸ್ಥಿತಿ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಇದನ್ನು ಬಹಳ ದಿನ ಮುಚ್ಚಿಡಲಾಗುವುದಿಲ್ಲ. ಇದೇ ಕಾರಣಕ್ಕೆ ಸಿಂಗಪುರದಲ್ಲಿ ಕುಳಿತು ಸರ್ಕಾರ ಬೀಳಿಸುವ ಪ್ರಯತ್ನ ನಡೆದಿದೆ ಎಂದಿದ್ದಾರೆ. ಅದರಲ್ಲೂ ವಿರೋಧಾಭಾಸವಿದೆ. ಮುಖ್ಯಮಂತ್ರಿಗಳು ಅವೆಲ್ಲ ನಮಗೆ ಗೊತ್ತಿಲ್ಲ ಎಂದಿದ್ದಾರೆ. ಗುಪ್ತಚರ ಇಲಾಖೆ ಇರೋದೆ ಮುಖ್ಯಮಂತ್ರಿಗಳ ಕೈಯಲ್ಲಿ ಅವರಿಗೆ ಮೊದಲು ಮಾಹಿತಿ ಸಿಗಬೇಕು. ಅವರಿಗೇ ಗೊತ್ತಿಲ್ಲ ಎಂದರೆ ಗುಪ್ತಚರ ಇಲಾಖೆ ಬದ್ಧತೆ ಬದಲಾಯಿಸಿದೆಯೇ, ಉಪ ಮುಖ್ಯಮಂತ್ರಿಗಳಿಗೆ ಮಾತ್ರ ಬದ್ಧತೆ ತೋರುತ್ತಿದೆಯಾ ಅವರಿಗೆ ಮಾತ್ರ ಮಾಹಿತಿಗಳನ್ನು ಕೊಡುತ್ತಿದೆಯಾ ಎನ್ನುವ ಅನುಮಾನ ಬರುತ್ತಿದೆ ಎಂದರು. ಸರ್ಕಾರ ಉರುಳಿಸುವ ಸಾಮರ್ಥ್ಯ ಸಿಂಗಾಪುರದವರಿಗೂ ಇಲ್ಲ. ಪಾಕಿಸ್ಥಾನದವರಿಗೂ ಇಲ್ಲ. ಚೈನಾದವರಿಗೂ ಇಲ್ಲ. ಕಾಂಗ್ರೆಸ್ ಒಳಗಿನವರಿಗೆ ಮಾತ್ರ ಸಾಮರ್ಥ್ಯ ಇದೆ. ಅಷ್ಟು ಮಾತ್ರ ಖಾತ್ರಿ  ನೂರಕ್ಕೆ ನೂರು ಕೊಡಲಬಲ್ಲೆ ಎಂದರು.

click me!