ರಾತ್ರಿ ವೇಳೆ ಕಳ್ಳತನಕ್ಕೆ ಮನೆಗೆ ನುಗ್ಗಿದ್ದಾರೆ. ಆದರೆ ಕಳ್ಳತನಕ್ಕೂ ಮೊದಲು ಕಿಚನ್‌ಗೆ ತೆರಳು ಪಕೋಡ ತಯಾರಿಸಿ ತಿಂದಿದ್ದಾರೆ. ಬೀಡಿ ಸೇದಿ ಪಾನ್ ತಿಂದಿದ್ದಾರೆ. ಬಳಿಕ ಮನೆಯ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ನೋಯ್ಡಾ(ಜು.26) ಕಳ್ಳತನಕ್ಕೆ ಬಂದು ಮದ್ಯ ಕುಡಿದು ನಿದ್ರೆಗೆ ಜಾರಿದ ಹಲವು ಘಟನೆಗಳು ವರದಿಯಾಗಿದೆ. ಇದೀಗ ಪಕೋಡ ಕಳ್ಳರ ಗ್ಯಾಂಗ್ ಉಪಟಳ ಹೆಚ್ಚಾಗಿದೆ. ಈ ಗ್ಯಾಂಗ್ ಮನೆಗೆ ನುಗ್ಗಿ ಮೊದಲು ಅಡುಗೆ ಕೋಣೆಗೆ ತೆರಳಿ ಪಕೋಡ ಸೇರಿದಂತೆ ಇನ್ನಿತರ ತಿಂಡಿ ತಯಾರಿಸಿ ತಿಂದು ಬಳಿಕ ದೋಚುವ ಪದ್ದತಿ ರೂಡಿಸಿಕೊಂಡಿದೆ. ಇತ್ತೀಚೆಗೆ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 25ರಲ್ಲಿ ಈ ಗ್ಯಾಂಗ್ ಬರೋಬ್ಬರಿ 3 ಲಕ್ಷ ರೂಪಾಯಿ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ.
ಕೆಲ ಮನೆಗಳನ್ನು ಟಾರ್ಗೆಟ್ ಮಾಡುವ ಈ ಗ್ಯಾಂಗ್ ರಾತ್ರಿ ವೇಳೆ ದಾಳಿ ಮಾಡುತ್ತಿದೆ. ಪ್ರಮುಖವಾಗಿ ವಾರಾಂತ್ಯದಲ್ಲೇ ಪ್ರವಾಸ ಅಥವಾ ತುರ್ತು ಅಗತ್ಯಕ್ಕಾಗಿ ದೂರ ತೆರಳಿರುವ ಮನೆಗಳನ್ನು ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿದೆ. ಬಳಿಕ ರಾತ್ರಿ ವೇಳೆ ಮನೆಗೆ ನುಗ್ಗುವ ಈ ಗ್ಯಾಂಗ್, ಮನೆಯ ಪ್ರಮುಖ ವಸ್ತುಗಳು, ನಗದು ದೋಚುತ್ತಿದೆ. ಸೆಕ್ಟರ್ 25ರಲ್ಲಿ ರಾತ್ರಿ ವೇಳೆ ಮನೆಗೆ ನುಗ್ಗಿದ ಈ ಗ್ಯಾಂಗ್ ಮೌಲ್ಯಯುತ ವಸ್ತುಗಳ ಜೊತೆಗೆ ಮನೆಯಲ್ಲಿ ತಿಂಡಿ ತಿನಿಸುಗಳನ್ನು ತಿಂದು ಪರಾರಿಯಾಗಿದೆ.
undefined
ಹಾಸನ: ಅರಸೀಕೆರೆಯಲ್ಲಿ ಚಡ್ಡಿ ಗ್ಯಾಂಗ್ ಮತ್ತೆ ಪ್ರತ್ಯಕ್ಷ, ಆತಂಕದಲ್ಲಿ ಜನತೆ..!
ಸೆಕ್ಟರ್ 25ರಲ್ಲಿ ಮಧ್ಯರಾತ್ರಿ ಮನೆಗೆ ನುಗ್ಗಿದ ಈ ಗ್ಯಾಂಗ್, ನೇರವಾಗಿ ಅಡುಗೆ ಕೋಣೆಗೆ ತೆರಳಿದೆ. ಬಳಿಕ ಅಡುಗೆ ಮನೆಯಲ್ಲಿರುವ ಈರುಳ್ಳಿ ಸೇರಿದಂತೆ ಇತರ ವಸ್ತುಗಳನ್ನು ಬಳಸಿ ಪಕೋಡ ತಯಾರಿಸಿದೆ. ಪಕೋಡ ತಯಾರಿಸಿ ಸವಿದಿದ್ದಾರೆ. ಬಳಿಕ ಫ್ರಿಡ್ಜ್‌ನಲ್ಲಿಟ್ಟ ಪಾನ್ ಬೀಡಾ ತಿಂದಿದ್ದಾರೆ. ನೀರು, ಜ್ಯೂಸ್ ಕುಡಿದು ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದಾರೆ. ಕಾರಣ ಪಾನ್ ಬೀಡಾ ತಿಂದು ಎಲ್ಲೆಂದರಲ್ಲಿ ಉಗುಳಿದ್ದಾರೆ. ಇನ್ನು ಸಿಹಿ ತಿಂಡಿಗಳು ಸೇರಿದಂತೆ ಕೆಲ ವಸ್ತುಗಳನ್ನು ತಿಂದ ಬಳಿಕ ಕಳ್ಳತನಕ್ಕೆ ಇಳಿದಿದ್ದಾರೆ.
ಲಾಕರ್ ಒಡೆದಿರುವ ಕಳ್ಳರ ಗ್ಯಾಂಗ್ ಬರೋಬ್ಬರಿ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಇದರ ಜೊತೆ ನಗದು ಹಣವನ್ನು ದೋಚಿದ್ದಾರೆ. ಈ ಕುರಿತು ಮನೆ ಮಾಲೀಕರು ದೂರು ದಾಖಲಿಸಿದ್ದಾರೆ. ಇದೇ ವೇಳೆ ಸೆಕ್ಟರ್ 82ರಲ್ಲೂ ಕಳ್ಳತನವಾಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಬೆಳ್ಳಂಬೆಳಗ್ಗೆ ಸೆಕ್ಟರ್ 82ರಲ್ಲಿ ಬರೋಬ್ಬರಿ 40 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಲಾಗಿದೆ.ಆದರೆ ಈ ಮನೆಯಲ್ಲಿ ಪಕೋಡ ತಯಾರಿಸಿ ತಿಂದಿಲ್ಲ. ಈ ಎರಡೂ ಕಳ್ಳತನ ಒಂದೇ ಗ್ಯಾಂಗ್ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದೆ.