ಇನ್ಸ್‌ಟಾಗ್ರಾಂನಲ್ಲಿ ಕಿವುಡ, ಮೂಗರ ಬಗ್ಗೆ ಅವಮಾನಕರ ವಿಡಿಯೋ; ಇಬ್ಬರ ಬಂಧನ

By Ravi Janekal  |  First Published Jul 26, 2024, 9:51 AM IST

ಕಿವುಡರ ಬಗ್ಗೆ ಸಮಾಜದಲ್ಲಿ ಕೆಟ್ಟ ಭಾವನೆ ಮೂಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಡುತ್ತಿದ್ದ ಇಬ್ಬರು ಯುವಕರನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು (ಜು.25): ಕಿವುಡರ ಬಗ್ಗೆ ಸಮಾಜದಲ್ಲಿ ಕೆಟ್ಟ ಭಾವನೆ ಮೂಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಡುತ್ತಿದ್ದ ಇಬ್ಬರು ಯುವಕರನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ರೋಹನ್ ಕಾರ್ಯಪ್ಪ ಹಾಗೂ ಶರವಣ ಭಟ್ಟಾಚಾರ್ಯ ಬಂಧಿತ ಆರೋಪಿಗಳು. @rohancariyappa ಎಂಬ ಇನ್ಸ್ಟ್ರಾಗ್ರಾಂ ಐಡಿಯಲ್ಲಿ ಕಿವುಡ ಮೂಗರ ಬಗ್ಗೆ ಅಪಹಾಸ್ಯ ಅವಮಾನಕರ ರೀತಿಯಲ್ಲಿ ರೀಲ್ಸ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅಂಗವಿಕಲರ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದ ಆರೋಪಿಗಳು. ವಿಡಿಯೋದಿಂದ ಕಿವುಡರ ಹಾಗೂ ಮೂಖರ ಘನತೆಗೆ ಧಕ್ಕೆ ಹಿನ್ನಲೆ ಬೆಂಗಳೂರಿನ ಸೈಬರ್‌ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ವಿಶೇಷ ಚೇತನರು. ಈ ಬಗ್ಗೆ ದೆಹಲಿ ಪೊಲೀಸರಿಗೂ ಕೂಡ ಆನ್ ಲೈನ್ ಮೂಲಕ ದೂರು ಸಲ್ಲಿಸಲಾಗಿತ್ತು. 

Tap to resize

Latest Videos

ರಾಜ್ಯ ಸರ್ಕಾರದಿಂದ ಅಂಗವಿಕಲರ ನಿರ್ಲಕ್ಷ್ಯ; ಹೊಸಪೇಟೆಯಿಂದ ಬೆಂಗಳೂರಿಗೆ ಪಾದಾಯಾತ್ರೆ ಹೊರಟ ವಿಶೇಷಚೇತನರು   

ಸದ್ಯ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

click me!