ಕೃತಿ ಕುಮಾರಿ ಮರ್ಡರ್: ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ರೂ ಸಹಾಯಕ್ಕೆ ಬಾರದ ಯುವತಿಯರು..!

By Girish GoudarFirst Published Jul 25, 2024, 11:43 PM IST
Highlights

ಆರೋಪಿ ಅಭಿಷೇಕ್ ಕೃತಿ ಕುಮಾರಿಯನ್ನ ಎರಡೇ ನಿಮಿಷದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕತ್ತು, ಎದೆ ಹೊಟ್ಟೆ ಭಾಗ ಸೇರಿ ಹಲವು ಕಡೆ ಇರಿದಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಕೃತಿ ಕುಮಾರಿ ಒದ್ದಾಡಿದ್ದಾಳೆ. ರಕ್ತದ ಮಡುವಿನಲ್ಲಿದ್ದ ಕೃತಿ ಕುಮಾರಿ ಸಹಾಯಹಸ್ತ ಚಾಚಿದ್ರೂ ಪಿಜಿಯಲ್ಲಿದ್ದ ಮೂರು ಯುವತಿಯರು ಮಾತ್ರ ಹತ್ತಿರ ಬಂದಿಲ್ಲ.  ಪೀಜಿಯಲ್ಲಿದ್ದ ಯುವತಿಯರು ಮಾತ್ರ ಅಕ್ಷರಶಃ ಮಾನವೀಯತೆಯನ್ನೇ ಮರೆತಿದ್ದಾರೆ. 

ಬೆಂಗಳೂರು(ಜು.25): ಕೋರಮಂಗಲದ ಕೃತಿ ಕುಮಾರಿ ಲೈವ್ ಮರ್ಡರ್ ವಿಡಿಯೋ ವೈರಲ್ ಆಗಿದೆ. ಹೌದು, ಆರೋಪಿ ಅಭಿಷೇಕ್ ಕೃತಿ ಕುಮಾರಿಯನ್ನ ಕೊಲೆ ಮಾಡುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. 

ಘಟನೆ ಹಿನ್ನೆಲೆ: 

Latest Videos

ಜು.23 ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ನಡೆದಿತ್ತು. ರಾತ್ರಿ 11.13 ನಿಮಿಷಕ್ಕೆ ಆರೋಪಿ ಅಭಿಷೇಕ್ ಪಿಜಿಗೆ ಬಂದು ಕೃತಿ ಕುಮಾರಿ ಇದ್ದ ರೂಮ್ ಬಾಗಿಲು ಬಡಿದಿದ್ದಾನೆ. ಈ ವೇಳೆ ಡೋರ್ ಓಪನ್ ಮಾಡುತ್ತಿದ್ದಂತೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಕೃತಿ ಕುಮಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರೂ, ಬಿಡದೇ ಹಲವು ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. 

ಬೆಂಗಳೂರು: ಕೋರಮಂಗಲ ಪಿಜಿಯಲ್ಲಿದ್ದ ಬಿಹಾರ ಯುವತಿ ಕೃತಿ ಕುಮಾರಿ ಕೊಲೆ ಕೇಸ್‌ಗೆ ಮೇಜರ್ ಟ್ವಿಸ್ಟ್!

ಸದ್ಯ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅಭಿಷೇಕ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿ ಅಭಿಷೇಕ್ ಬಟ್ಟೆ ಬದಲಿಸಿಕೊಂಡು ಪರಾರಿಯಾಗಿದ್ದಾನೆ. ಅಭಿಷೇಕ್ ಭೂಪಾಲ್ ಗೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಕೋರಮಂಗಲ ಪೊಲೀಸರು ಭೂಪಾಲ್ ಗೆ ಆರೋಪಿಯನ್ನ ಅರೆಸ್ಟ್ ಮಾಡಲು ತೆರಳಿದ್ದಾರೆ. 

ಎರಡೇ ನಿಮಿಷದಲ್ಲಿ ಕೊಲೆ: 

ಆರೋಪಿ ಅಭಿಷೇಕ್ ಕೃತಿ ಕುಮಾರಿಯನ್ನ ಎರಡೇ ನಿಮಿಷದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕತ್ತು, ಎದೆ ಹೊಟ್ಟೆ ಭಾಗ ಸೇರಿ ಹಲವು ಕಡೆ ಇರಿದಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಕೃತಿ ಕುಮಾರಿ ಒದ್ದಾಡಿದ್ದಾಳೆ. ರಕ್ತದ ಮಡುವಿನಲ್ಲಿದ್ದ ಕೃತಿ ಕುಮಾರಿ ಸಹಾಯಹಸ್ತ ಚಾಚಿದ್ರೂ ಪಿಜಿಯಲ್ಲಿದ್ದ ಮೂರು ಯುವತಿಯರು ಮಾತ್ರ ಹತ್ತಿರ ಬಂದಿಲ್ಲ.  ಪೀಜಿಯಲ್ಲಿದ್ದ ಯುವತಿಯರು ಮಾತ್ರ ಅಕ್ಷರಶಃ ಮಾನವೀಯತೆಯನ್ನೇ ಮರೆತಿದ್ದಾರೆ. 

ರಕ್ತ ಸೋರುತ್ತಿದಾಗ ಕೈ ಚಾಚಿ ಕೃತಿ ಕುಮಾರಿ ಕಾಪಾಡಿ ಅಂತ ಕರೆಯುತ್ತಿದ್ರೂ ಯುವತಿಯರು ಮಾತ್ರ ಹತ್ತಿರ ಕೂಡ ಹೋಗಿಲ್ಲ.  ಕೈಯಲ್ಲಿ ಮೊಬೈಲ್ ಫೋನ್ ನೋಡ್ತಾ ಮೆಟ್ಟಿಲ ಮೇಲಿಂದ ಯುವತಿಯರು ಹೋಗಿದ್ದಾರೆ. ಕರುಣೆಯೇ ಇಲ್ಲದಂತೆ ಪಿಜಿ ಯುವತಿಯರು ವರ್ತಿಸಿದ್ದಾರೆ. ಗಾಬರಿಯಲ್ಲಿ ಏನು ಮಾಡದೇ ಕೃತಿ ಕುಮಾರಿ ಬಳಿಯು ಹೋಗದೇ ಯುವತಿಯರು ನೋಡ್ತಾ ನಿಂತಿದ್ದರು. ಈ ಎಲ್ಲಾ ದೃಶ್ಯಗಳು ಪಿಜಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

click me!