
ಬೆವರ್ಟನ್(ಜ.28) ಪಾರ್ಕ್ ಮಾಡಿದ ಕಾರು, ಬೈಕ್ ಕಳ್ಳತನ ಮಾಡುವ ಸಂಖ್ಯೆಗಳು ಹೆಚ್ಚಾಗುತ್ತಿದೆ. ಅದೆಂತಾ ಲಾಕಿಂಗ್ ಸಿಸ್ಟಮ್ ಇದ್ದರೂ ಕಳ್ಳರು ಕೆಲವೇ ಸೆಕೆಂಡ್‌ಗಳಲ್ಲಿ ವಾಹನ ಕಳ್ಳತನ ಮಾಡುತ್ತಾರೆ. ಹೀಗೆ ಕಳ್ಳನೊಬ್ಬ ಪಾರ್ಕ್ ಮಾಡಿದ್ದ ಕಾರನ್ನು ಕಳ್ಳತನ ಮಾಡಿದ್ದಾನೆ. ಬಳಿಕ ವೇಗವಾಗಿ ಕಾರು ಚಲಾಯಿಸಿಕೊಂಡು ಸಾಗಿದ್ದಾನೆ. ಈ ವೇಳೆ ಕಳ್ಳತನ ಮಾಡಿದ ಕಾರಿನ ಹಿಂಬದಿ ಸೀಟಿನಲ್ಲಿ ಪುಟ್ಟ ಮಗುವನ್ನು ಗಮನಿಸಿದ್ದಾನೆ. ಮಲಗಿದ್ದ ಮಗು ಕಾರು ಚಲಿಸುತ್ತಿದ್ದಂತೆ ಎಚ್ಚರವಾಗಿದೆ. ಕಳ್ಳನಿಗೆ ಆಘಾತವಾಗಿದೆ. ಎಂತಾ ತಾಯಿ? ಪಾರ್ಕ್ ಮಾಡಿದ ಕಾರಿನಲ್ಲೇ ಮಗುವನ್ನು ಬಿಟ್ಟು ಹೋಗಿದ್ದಾಳೆ ಎಂದು ಕೋಪಗೊಂಡ ಕಳ್ಳ ಮರಳಿ ಬಂದು ಮಗುವನ್ನು ತಾಯಿಯ ಕೈಗೆ ನೀಡಿ, ಹಿಗ್ಗಾ ಮುಗ್ಗಾ ಝಾಡಿಸಿದ್ದಾನೆ. ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎಂದು ಗೊತ್ತಿಲ್ಲವೇ ಎಂದು ಕೂಗಾಡಿದ್ದಾನೆ. ಆದರೆ ಇಷ್ಟಕ್ಕೇ ಪ್ರಕರಣ ಸುಖಾಂತ್ಯವಾಗಿಲ್ಲ. ಅಂತಿಮ ಕ್ಷಣದಲ್ಲೂ ಕಳ್ಳ ಒಂದು ಟ್ವಿಸ್ಟ್ ನೀಡಿದ್ದಾನೆ.
ಅಮೆರಿಕದ ಬೆವರ್ಟನ್ ಎಂಬಲ್ಲಿ ಈ ಘಟನೆ ನಡೆದಿದಿದೆ 2021ರಲ್ಲಿ ಈ ಘಟನೆ ನಡೆದರೂ, ಇದೀಗ ಅನ್‌ನೋನ್ ಫ್ಯಾಕ್ಟ್ಸ್ ಇನ್‌ಸ್ಟಾ ಅನ್ನೋ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಘಟನೆ ಬಹಿರಂಗಪಡಿಸಲಾಗಿದೆ. ಕಳ್ಳತನ ವೇಳೆ ಹಲವು ಬಾರಿ ಕಳ್ಳರು ವಸ್ತುಗಳನ್ನು ಮರಳಿಸಿದ ಘಟನೆಗಳಿವೆ. ಅಲ್ಲಿಗೆ ಪ್ರಕರಣ ಸುಖಾಂತ್ಯಗೊಂಡ ಸಾಕಷ್ಟು ಪ್ರಕರಣ ವರದಿಯಾಗಿದೆ. ಆದರೆ ಈ ಪ್ರರಕರಣ ಹಾಗಲ್ಲ. ಇಲ್ಲಿ ಕಳ್ಳನ ಕಮಿಟ್‌ಮೆಂಟ್, ಕಾಳಜಿ ಜೊತೆ ಬುದ್ಧಿವಾದ ಮಾತುಗಳು ಭಾರಿ ಸದ್ದು ಮಾಡುತ್ತಿದೆ.
20 ದಿನದಲ್ಲಿ ಮರಳಿಸುವೆ ನನ್ನ ಹುಡುಕಬೇಡಿ, ಮನೆ ದೋಚಿ ಮಾಲೀಕನಿಗೆ ವ್ಯಾಟ್ಸಾಪ್ ಸಂದೇಶ!
ಈ ಪ್ರಕರಣ ಯಾವ ಸಿನಿಮಾಗೂ ಕಡಿಮೆ ಇಲ್ಲ, ಕಾರಣ ಹೆಜ್ಜೆ ಹೆಜ್ಜೆಗೂ ಟ್ವಿಸ್ಟ್, ಕ್ಲೈಮಾಕ್ಸ್ ಮತ್ತಷ್ಟು ರೋಚಕವಾಗಿದೆ.ಒರೆಗಾನ್ ಬಳಿಯ ಬೆವರ್ಟನ್ ಬಳಿಯ ಶಾಪಿಂಗ್ ಮಾರ್ಕೆಟ್‌ಗೆ ಮಹಿಳೆಯೊಬ್ಬರು ಕಾರಿನಲ್ಲಿ ಆಗಮಿಸಿದ್ದಾರೆ. ಬಳಿಕ ಕಾರು ಪಾರ್ಕ್ ಮಾಡಿ ಶಾಪಿಂಗ್‌ಗೆ ತೆರಳಿದ್ದಾರೆ. ಆದರೆ ಕಾರಿನ ಹಿಂಬದಿಯ ಸೀಟಿನಲ್ಲಿದ್ದ ಮಗುವನ್ನು ಅಲ್ಲೆ ಬಿಟ್ಟು ತೆರಳಿದ್ದಾಳೆ. ಕೆಲ ವಸ್ತುಗಳನ್ನು ಖರೀದಿಸಿ ಮರಳಿ ಬರುವ ಉದ್ದೇಶದಿಂದ ಈ ಮಹಿಳೆ ಹೀಗೆ ಮಾಡಿದ್ದಾಳೆ. ಆದರೆ ಶಾಪಿಂಗ್ ಮಾಡುತ್ತಾ ಸ್ವಲ್ಪ ಸಮಯ ಹೆಚ್ಚಾಗಿದೆ.
ಇತ್ತ ಕಾರು ಕಳ್ಳತನ ಬಂದಿದ್ದ ಕಳ್ಳ, ಕಾರಿನ ಗಾಜು ಒಡೆದು ಕೆಲವೇ ಕ್ಷಣಗಳಲ್ಲಿ ಕಾರನ್ನು ಕಳ್ಳತನ ಮಾಡಿದ್ದಾನೆ. ಬಳಿಕ ಅತೀ ವೇಗವಾಗಿ ಕಾರನ್ನು ಚಲಾಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರು ವೇಗವಾಗಿ ಚಲಿಸಲು ಆರಂಭಿಸುತ್ತಿದ್ದಂತೆ ಹಿಂಬದಿ ಸೀಟಿನಲ್ಲಿ ಮಲಗಿದ್ದ ಮಗು ಎಚ್ಚರಗೊಂಡಿದೆ. ಮಗು ಅಳುತ್ತಿರುವುದನ್ನು ಗಮಮಿಸಿದ ಕಳ್ಳ ಅಚ್ಚರಿಗೊಂಡಿದ್ದಾನೆ. ಈಕೆ ಎಂತಾ ತಾಯಿ ಎಂದು ಆಕ್ರೋಶಗೊಂಡಿದ್ದಾನೆ. ಅಷ್ಟರಲ್ಲೇ ಕಳ್ಳ ಕೆಲ ದೂರ ಸಾಗಿದ್ದಾನೆ. ಆದರೆ ತಕ್ಷಣವೇ ಕಾರು ಯೂಟರ್ನ್ ಮಾಡಿ ಮರಳಿ ಬಂದಿದ್ದಾನೆ.
ಮರಳಿ ಕಾರು ಪಾರ್ಕಿಂಗ್ ಸ್ಥಳಕ್ಕೆ ಬಂದಾಗಲೂ ಕಾರಿನಲ್ಲಿ ಬಿಟ್ಟು ಹೋದ ಮಗುವಿನ ತಾಯಿಯ ಶಾಪಿಂಗ್ ಮುಗಿದಿಲ್ಲ. ಕಾರನ್ನು ಕೆಲ ದೂರದಲ್ಲಿ ನಿಲ್ಲಿಸಿದ್ದಾನೆ. ಬಳಿಕ ಮಗುವನ್ನು ಎತ್ತಿಕೊಂಡು ಕಾರು ಪಾರ್ಕ್ ಮಾಡಿದ ಸ್ಥಳಕ್ಕೆ ಆಗಮಿಸಿದ್ದಾನೆ. ಕೆಲ ಹೊತ್ತು ಮಹಿಳೆಗಾಗಿ ಕಾದಿದ್ದಾನೆ. ಅಷ್ಟರಲ್ಲೇ ಮಹಿಳೆ ವಾಪಸ್ ಮರಳಿದ್ದಾನೆ. ಕಾರು ಕಾಣದೆ ಆತಂಕಗೊಂಡಿದ್ದಾಳೆ. ಸುತ್ತ ಮುತ್ತ ನೋಡಿದ್ದಾಳೆ. ಅಷ್ಟರಲ್ಲೇ ಈ ಕಾರಿನ ಮಾಲಕಿ ಈಕೆ ಅನ್ನೋದು ಖಚಿತಗೊಂಡಿದೆ. ಬಳಿಕ ಕಳ್ಳ ಮಗುವನ್ನು ತಾಯಿಗೆ ಮರಳಿಸಿದ್ದಾನೆ. ಮಗು ಸಿಕ್ಕ ಖುಷಿಯಲ್ಲಿ ಮಹಿಳೆ ಕಂದನ ಅಪ್ಪಿ ಅತ್ತಿದ್ದಾಳೆ.
ಇತ್ತ ಕಳ್ಳ, ಮಹಿಳೆ ಮೇಲೆ ರೇಗಾಡಿದ್ದಾನೆ. ಮಗುವನ್ನು ರೀತಿ ಕಾರಿನಲ್ಲಿ ಬಿಟ್ಟು ಹೋಗುತ್ತೀರಲ್ಲ, ನೀವೆಲ್ಲಾ ಮನುಷ್ಯರಾ ಎಂದು ಕೇಳಿದ್ದಾನೆ. ಕಾರಿನ ಗಾಜುಗಳು ಮುಚ್ಚಲಾಗಿತ್ತು. ಸ್ವಲ್ಪ ಹೊತ್ತಾಗಿದ್ದರೆ ಮಗುವಿನ ಪ್ರಾಣಕ್ಕೆ ಅಪಾಯ ಎದುರಾಗುತ್ತಿತ್ತು. ಪುಟ್ಟ ಮಗುವನ್ನು ಎತ್ತಿಕೊಂಡು ಹೋಗಿ ಶಾಪಿಂಗ ಮಾಡಬಹುದಿತ್ತಲ್ಲಾ? ಎಂದು ಹಿಗ್ಗಾ ಮುಗ್ಗಾ ಝಾಡಿಸಿದ್ದಾನೆ. ಕಳ್ಳನ ಮಾತಿನಿಂದ ಮಹಿಳೆಗೆ ಏನು ಹೇಳಬೇಕು ಎಂದು ತೋಚಿಲ್ಲ. ಒಂದು ಕ್ಷಣ ಗಾಬರಿಯಾಗಿ ಹಾಗೆ ನಿಂತಿದ್ದಾಳೆ. ಇತ್ತ ಕಳ್ಳ ಕೆಲ ದೂರದಲ್ಲಿ ನಿಲ್ಲಿಸಿದ್ದ ಈ ಮಹಿಳೆಯ ಕಾರಿನ ಬಳಿ ಬಂದು ಮತ್ತೆ ಕಾರು ಸ್ಟಾರ್ಟ್ ಮಾಡಿ ಪರಾರಿಯಾಗಿದ್ದಾನೆ. ಇತ್ತ ಮಹಿಳೆಗೆ ಏನು ಮಾಡಬೇಕು ಎಂದು ತೋಚಿಲ್ಲ. ತನ್ನ ತಪ್ಪಿನ ಅರಿವಾಗಿದೆ. ಆದರೆ ಕಾರು ಕಳ್ಳತನ ವಾಗಿದೆ. ಈ ಕುರಿತು ದೂರು ದಾಖಲಿಸಲು ಮಹಿಳೆ ಹೋಗಿಲ್ಲ, ಕಾರಣ ಪೊಲೀಸರು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದರೆ ಮಗುವನ್ನು ಬಿಟ್ಟು ಹೋಗಿರುವ ಘಟನೆ ಬಹಿರಂಗವಾಗಲಿದೆ. ಇದು ಪತಿಗೂ ತಿಳಿಯಲಿದೆ ಎಂದು ಮಹಿಳೆ ದೂರು ನೀಡುವ ಗೋಜಿಗೆ ಹೋಗಿಲ್ಲ.
ಗನ್ ತೋರಿಸಿ 32 ಲಕ್ಷ ರೂ ವಾಚ್ ಕಳ್ಳತನ, ಚೇಸ್ ಮಾಡಿದ ಮಾಲೀಕನಿಗೆ ಮತ್ತೊಂದು ಶಾಕ್, ವಿಡಿಯೋ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ