ಕಂಬ ಏರಿ ಗೋಡೆ ಹಾರಿ ಸ್ಪೈಡರ್‌ಮ್ಯಾನ್ ಸ್ಟೈಲಲ್ಲಿ ಕಳ್ಳತನ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

Published : Jun 03, 2022, 04:25 PM IST
ಕಂಬ ಏರಿ ಗೋಡೆ ಹಾರಿ ಸ್ಪೈಡರ್‌ಮ್ಯಾನ್ ಸ್ಟೈಲಲ್ಲಿ ಕಳ್ಳತನ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸಾರಾಂಶ

ಸ್ಟೈಡರ್‌ಮ್ಯಾನ್‌ ಸ್ಟೈಲಲ್ಲಿ ಕಳ್ಳನೋರ್ವ ಕರೆಂಟ್‌ ವೈರ್‌ಲ್ಲಿ ನೇತಾಡಿ, ಕಟ್ಟಡವೇರಿ ಕಳ್ಳತನ ಮಾಡಿದ್ದು ಅದರ ವಿಡಿಯೋ ವೈರಲ್ ಆಗಿದೆ.   

ದೆಹಲಿ: ಸ್ಪೈಡರ್‌ ಮ್ಯಾನ್ (Spider man) ಗೋಡೆ ಏರಿ ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಸಾಹಸ ಮಾಡುವ ಸ್ಪೈಡರ್ ಮ್ಯಾನ್ ಸಿನಿಮಾವನ್ನು ನೀವು ನೋಡಿರಬಹುದು. ಅದೇ ಸಿನಿಮಾ ಶೈಲಿಯಲ್ಲಿ ಕಳ್ಳನೋರ್ವ ಕಳ್ಳತನಕ್ಕೆ ಇಳಿದಿದ್ದು, ಅದರ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ (cctv) ಸೆರೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಘಟನೆ ಇದಾಗಿದೆ. ದೆಹಲಿಯ (delhi)  ಈಶಾನ್ಯ ಭಾಗದ ಜಿಲ್ಲೆಯ ಭದ್ರತಾ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಸ್ಪೈಡರ್ ಮ್ಯಾನ್‌ ಸ್ಟೈಲ್‌ ಅಲ್ಲಿ ಮನೆ ದರೋಡೆಗೆ ಇಳಿದ ಖದೀಮ (thieves) ಮನೆಯಿಂದ ಅತ್ಯಮೂಲ್ಯ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ. 

ಮೇ 31 ಹಾಗೂ ಜೂನ್‌  1 ಸಿಸಿಟಿವಿ ದೃಶ್ಯಾವಳಿಯಲ್ಲಿ ಕಳ್ಳನೋರ್ವ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಏರುತ್ತಾನೆ. ನಂತರ ಇಲೆಕ್ಟ್ರಿಸಿಟಿ ವೈರ್‌ನ್ನು (Electricity wire) ಹಿಡಿದು ನೇತಾಡುವ ಈತ ಅದರಲ್ಲಿ ನೇತಾಡುತ್ತಲೇ ಮನೆಯೊಂದರ ಮಹಡಿ ಮೇಲೆ ಬಂದು ತಲುಪುತ್ತಾನೆ. ಇನ್ನು ಕಳ್ಳ ತನ್ನ ಕೃತ್ಯವೆಸಗುವ ವೇಳೆ ಮನೆಯಲ್ಲಿ ಏಳರಿಂದ ಎಂಟು ಜನ ಇದ್ದರೆಂದು ವರದಿಯಾಗಿದೆ. 

ಮಧ್ಯರಾತ್ರಿ ಮನೆಯೊಳಗೆ ಸದ್ದು ಕೇಳಿ ಬಂದಿದ್ದು, ಇದನ್ನು ಕೇಳಿ ಅವರ ತಾಯಿ ಬೊಬ್ಬೆ ಹೊಡೆದಾಗ ಕಳ್ಳ ಪರಾರಿಯಾಗಿದ್ದಾನೆ ಎಂದು ಮನೆಯ ಮಾಲೀಕ ಹೇಳಿದ್ದಾರೆ. ಕಳ್ಳ ಗೇಟ್‌ ಮೂಲಕ ಎಸ್ಕೇಪ್ ಆಗಿದ್ದು, ಆತ ಒಂದು ಬಂಗಾರದ ಸರ, ಒಂದು ಉಂಗುರ ಹಾಗೂ ಮೊಬೈಲ್ ಫೋನ್ ಹೊತ್ತು ಸಾಗಿದ್ದಾನೆ ಎಂದು ಮನೆ ಮಾಲೀಕ ಸುರೇಂದ್ರ ಸಿಂಗ್ ಹೇಳಿದರು. ದೆಹಲಿಯ ಖಜುರಿ ಖಾಸ್‌ ಪ್ರದೇಶದಲ್ಲಿ(Khajuri Khas area) ಈ ಘಟನೆ ನಡೆದಿದ್ದು, ಮಧ್ಯ ರಾತ್ರಿ ಎರಡು ಗಂಟೆ ಸುಮಾರಿಗೆ ಕಳ್ಳ ಮನೆ ಮುಂದೆ ಕಾಣಿಸಿಕೊಂಡಿದ್ದ ಎಂದು ಮಾಲೀಕ ಸುರೇಂದ್ರ ಸಿಂಗ್ ಹೇಳಿದ್ದಾರೆ. 

ಬರಿಗಾಲಲ್ಲಿ 12 ಅಡಿ ಗ್ರಾನೈಟ್ ಗೋಡೆ ಏರುವ Spider Girls

ಅರ್ಧಗಂಟೆ ಕಾಲ ಈತ ಮನೆಯೊಳಗೆ ಅಮೂಲ್ಯ ವಸ್ತುಗಳಿಗಾಗಿ ತಡಕಾಡಿದ್ದಾನೆ. ಈ ವೇಳೆ ಮನೆಯಲ್ಲಿ ಏಳರಿಂದ ಎಂಟು ಜನರಿದ್ದರು. ನನ್ನ ಅಲ್ಮೇರಾಗೆ ಲಾಕ್‌ ಮಾಡಿರಲಿಲ್ಲ ಹೀಗಾಗಿ ಅದರೊಳಗಿದ್ದ ಒಂದು ಚಿನ್ನದ ಸರ (gold chain) ಹಾಗೂ ಉಂಗುರ (ring) ಹಾಗೂ ಮೊಬೈಲ್ ಫೋನ್ (mobile phone) ಎತ್ತಿಕೊಂಡು ಪರಾರಿಯಾಗಿದ್ದಾನೆ. ಅದೇ ಸಮಯಕ್ಕೆ ಸರಿಯಾಗಿ ನಮ್ಮ ಅಮ್ಮ ಎಚ್ಚರಗೊಂಡಿದ್ದಾರೆ. ಅಲ್ಲದೇ ಏನೋ ಸದ್ದು ಕೇಳಿದಂತಾಗಿ ಮನೆಯಲ್ಲಿದ್ದ ಇತರರನ್ನು ಕರೆದಿದ್ದಾರೆ. ಇದನ್ನರಿತ ಕಳ್ಳ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ನಾವು ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇವೆ ಎಂದು ಸುರೇಂದ್ರ ಸಿಂಗ್ (Surendar Singh) ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ (FIR) ದಾಖಲಿಸಲಾಗಿದೆ.

ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನ: ಬಾಯ್ ಫ್ರೆಂಡ್ ಜತೆ ಸೇರಿ ಯುವತಿಯಿಂದ ರಾಬರಿ
ನೀರಿಗಿಳಿದ ಮೇಲೆ ಈಜಲೇಬೇಕು ಎಂಬಂತೆ ಕಳ್ಳತನಕ್ಕಿಳಿದ ಕಳ್ಳರು ದಿನಕ್ಕೊಂದು ಸ್ಟೈಲಲ್ಲಿ ತಮ್ಮ ಕರಾಮತ್ತು ತೋರಿಸುತ್ತಿದ್ದಾರೆ. ನಂಬಲಸಾಧ್ಯವಾದ ಶೈಲಿಯಲ್ಲಿ ಕೈ ಚಳಕ ತೋರುವ ಕಳ್ಳರ ಅನೇಕ ವಿಡಿಯೋಗಳು ಈಗಾಗಲೇ ವೈರಲ್‌ ಆಗಿವೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ