
ಸ್ನೇಹಿತನ ಮದುವೆಗೆಂದು ಬಂದವ, ಸ್ನೇಹಿತನ ಹೆಂಡತಿ ಜತೆ ಫಸ್ಟ್ ನೈಟ್ ಕೋಣೆಗೆ ಹೋಗಿ ಆಕೆಯ ಜೊತೆ ಸಂಭೋಗಕ್ಕೆ ಯತ್ನಿಸಿದ್ದ. ಈ ಘಟನೆ ನಡೆದು ಬರೋಬ್ಬರಿ ಏಳು ವರ್ಷಗಳಾಗಿದ್ದು, ಇದೀಗ ಆರೋಪಿಗೆ ಶಿಕ್ಷೆಯಾಗಿದೆ. ಮದುವೆಯ ದಿನ ಮದುಮಗ ಮತ್ತು ಆತನ ಸ್ನೇಹಿತ ಕಂಠಪೂರ್ತಿ ಕುಡಿದಿದ್ದರು. ಅದಾದ ನಂತರ ಮದುಮಗಳು ಕೋಣೆಗೆ ಬಂದು ಮಲಗಿದಳು. ಇತ್ತ ಗಂಡ ಕುಡಿದ ಅಮಲಿನಲ್ಲಿ ಹಾಲ್‌ನಲ್ಲಿ ಗೊರಕೆ ಹೊಡೆಯುತ್ತಿದ್ದರೆ, ಸ್ನೇಹಿತ ಫಸ್ಟ್ ನೈಟ್ ಕೋಣೆಗೆ ಹೋಗಿದ್ದಾನೆ. ಅಲ್ಲಿ ಸ್ನೇಹಿತ ಹೆಂಡತಿಯ ಖಾಸಗಿ ಭಾಗಗಳನ್ನು ಸವರಿದ್ದಾನೆ. ಮಹಿಳೆ ಕೂಡ ತನ್ನ ಗಂಡನೆಂದು ತಿಳಿದು ಮೊದಲು ಸಹಕಾರ ನೀಡಿದ್ದಾಳೆ. ಆದರೆ ಗಂಡ ಧರಿಸಿದ ಜೀನ್ಸ್‌ಗೂ ಈತ ಧರಿಸಿದ ಜೀನ್ಸ್‌ಗೂ ವ್ಯತ್ಯಾಸ ಇರುವ ಬಗ್ಗೆ ಹುಡುಗಿಗೆ ಸಂಶಯ ಬಂದಿದೆ.
ಕತ್ತಲಾದ್ದರಿಂದ ತನ್ನ ಗಂಡನೇ ಹೌದಾ ಎಂದು ತಿಳಿಯಲು ಹೆಸರಿಡಿದು ಕರೆದಿದ್ದಾಳೆ, ಆದರೆ ಆತನ ಮೌನಕ್ಕೆ ಶರಣಾಗಿದ್ದ. ಆದರೆ ಆಕೆಯ ಖಾಸಗಿ ಭಾಗಗಳನ್ನು ಮಾತ್ರ ಮುಟ್ಟುತ್ತಲೇ ಇದ್ದ. ಕಡೆಗೆ ಸಂಶಯ ಹೆಚ್ಚಾಗಿ ರೂಮಿನಿಂದ ಆಚೆ ಬಂದ ಹೆಂಡತಿಗೆ ಗಂಡ ಹಾಲ್‌ನಲ್ಲಿ ಮಲಗಿದ್ದು ಕಂಡಿದೆ. ಗಂಡನನ್ನು ಏಳಿಸಿ ಘಟನೆಯನ್ನು ವಿವರಿಸಿದ್ದಾಳೆ. ರೂಮಿಗೆ ಬಂದು ನೋಡಿದಾಗ ಪ್ರಾಣ ಸ್ನೇಹಿತನೇ ಹೆಂಡತಿ ಜತೆ ಸಂಭೋಗಕ್ಕೆ ಯತ್ನಿಸಿದ್ದು ತಿಳಿದು ಬಂದಿದೆ. ಅಲ್ಲಿಂದ ಸ್ನೇಹಿತನನ್ನು ಆಚೆ ಕಳಿಸಿದ್ದಾನೆ. ಅದಾದ ನಂತರ ಮದುವೆ ನಿಲ್ಲಲಿಲ್ಲ. ಹೆಂಡತಿ ಮರುದಿನವೇ ತವರು ಮನೆ ಸೇರಿದವಳು, ವಿಚ್ಚೇದನ ಕೊಟ್ಟಿದ್ದಾಳೆ.
ಇದಾದ ನಂತರ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಕಳೆದ 6 ವರ್ಷಗಳಿಂದಲೂ ಪ್ರಕರಣದ ವಿಚಾರಣೆ ನಡೆಯುತ್ತಲೇ ಇತ್ತು. ಈ ಕಡೆ ಗಂಡ, ಆ ಕಡೆ ಹೆಂಡತಿ ಇಬ್ಬರೂ ತಾವು ಮಾಡದ ತಪ್ಪಿಗೆ ಬೇರಾಗಿದ್ದರು. ಸ್ನೇಹಿತ ಮಾತ್ರ ತಾನು ತಪ್ಪು ಮಾಡಿಲ್ಲ ಎಂದೇ ವಾದಿಸುತ್ತಿದ್ದ. ಆದರೆ ಆಗಿನ್ನೂ ಮದುವೆಯಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾಗಿದ್ದ ಗಂಡ ಹೆಂಡತಿ ಮದುವೆಯ ಮರು ದಿನವೇ ದೂರವಾಗಿದ್ದರು.
ಈ ಘಟನೆ ನಡೆದಿರುವುದು ಸಿಂಗಾಪುರದಲ್ಲಿ. 2016ರಲ್ಲಿ ಗಂಡ ಮತ್ತು ಆತನ ಸ್ನೇಹಿತ ಮದುವೆಯಾದ ದಿನ ಜೋರು ಪಾರ್ಟಿ ಮಾಡಿದ್ದರು. ಖುಷಿಯಲ್ಲಿದ್ದಾರೆ ಎಂದು ಹೆಂಡತಿ ಕೂಡ ಸುಮ್ಮನಿದ್ದಳು. ಮದುವೆಯ ಪೂಜೆ ಪುನಸ್ಕಾರ ಎಲ್ಲ ಮುಗಿದ ಕೂಡಲೇ ಇಬ್ಬರೂ ಕುಡಿಯಲು ಆರಂಭಿಸಿದ್ದರು. ಪಾರ್ಟಿಯಲ್ಲಿ ಇತರರೂ ಇದ್ದರು, ಆದರೆ ಗಂಡ ಮತ್ತು ಸ್ನೇಹಿತ ಎಲ್ಲರಿಗಿಂದ ಹೆಚ್ಚು ಪಾನಮತ್ತರಾಗಿದ್ದರು. ಸಂತ್ರಸ್ತೆಯ ವಯಸ್ಸು ಈಗ 39 ಮತ್ತು ಆರೋಪಿಯ ವಯಸ್ಸು 42.
ಇದನ್ನೂ ಓದಿ: ಹಸುವನ್ನೂ ಬಿಡದ ಕಾಮುಕ: 22 ವರ್ಷದ ಯುವಕನ ಬಂಧನ
ಸಂತ್ರಸ್ತೆ ಹೇಳಿದ್ದೇನು?:
ಕೋರ್ಟ್‌ನಲ್ಲಿ ಸಾಕ್ಷಿ ಹೇಳಿದ ಸಂತ್ರಸ್ತೆ "ಮದುವೆಯ ದಿನ ನನಗೆ ತುಂಬಾ ಸುಸ್ತಾಗಿತ್ತು. ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತರ ನಾನು ಮೊದಲ ರಾತ್ರಿಯ ಕೋಣೆಗೆ ತೆರಳಿ ಮಲಗಿದೆ. ಆಯಾಸವಾದ್ದರಿಂದ ಬೇಗ ನಿದ್ದೆಯೂ ಬಂತು. ಆದರೆ ಬೆಳಗಿನ ಜಾವ ಎದೆಯ ಭಾಗ ಮತ್ತು ಖಾಸಗಿ ಭಾಗಗಳನ್ನು ಯಾರೋ ಮುಟ್ಟುತ್ತಿರುವುದಾಗಿ ಅನಿಸಿ ಎಚ್ಚರವಾಯಿತು. ಬೆಳಗ್ಗೆ ಸುಮಾರು ಆರು ಗಂಟೆ ಇರಬೇಕು," ಎಂದು ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
"ಕತ್ತಲಾದ್ದರಿಂದ ಅದು ನನ್ನ ಗಂಡನೇ ಇರಬೇಕು ಎಂದುಕೊಂಡೆ. ಬೆಳಗ್ಗೆಯಿಂದ ಮದುವೆ ಮನೆ ಮತ್ತು ಪಾರ್ಟಿಯಲ್ಲಿದ್ದರಿಂದ ಸ್ನಾನ ಮಾಡಿಕೊಂಡು ಬರುವಂತೆ ಕೇಳಿದೆ. ಅದಕ್ಕೆ ಉತ್ತರ ಬರಲಿಲ್ಲ, ಆದರೆ ನನ್ನ ಎದೆ ಮತ್ತು ಖಾಸಗಿ ಭಾಗಗಳ ಮೇಲೆ ಮಾತ್ರ ಸವರುತ್ತಲೇ ಇದ್ದ. ಸ್ವಲ್ಪ ಹೊತ್ತಿನ ನಂತರ ಅದು ನನ್ನ ಗಂಡ ಅಲ್ಲ ಎಂದು ನನಗೆ ಅನಿಸಿತು. ಸಂಶಯದಿಂದ ಜೀನ್ಸ್ ಮುಟ್ಟಿ ನೋಡಿದೆ. ನನ್ನ ಗಂಡ ಧರಿಸಿದ್ದ ಪ್ಯಾಂಟ್ ಮತ್ತು ಈ ಪ್ಯಾಂಟ್ ಬೇರೆ ಬೇರೆ ರೀತಿ ಇರುವಂತೆ ಭಾಸವಾಯಿತು," ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದಾಳೆ ಸಂತ್ರಸ್ತೆ.
ಇದನ್ನೂ ಓದಿ: Ballari; ಆಪ್ತಾಪ್ತೆಯನ್ನು ಪ್ರೀತಿಸಿದ ಯುವಕನ ದುರಂತ ಅಂತ್ಯ!
ಸಂತ್ರಸ್ತೆಗೆ ಸಂಶಯ ಇನ್ನೂ ದಟ್ಟವಾಗುತ್ತ ಹೋದಂತೆ, ಯಾರು ನೀನು, ನೀನು ನನ್ನ ಗಂಡನಲ್ಲ ಎಂದು ಹೇಳಿದ್ದಾಳೆ. ಇದಕ್ಕೂ ಸ್ನೇಹಿತ ಉತ್ತರ ಕೊಟ್ಟಿಲ್ಲ. ಮೌನವಾಗೇ ಇದ್ದರೂ ಖಾಸಗಿ ಭಾಗಗಳನ್ನು ಮಾತ್ರ ಮುಟ್ಟುತ್ತಲೇ ಇದ್ದ. ಅದಾದ ನಂತರ ಬೆಡ್‌ರೂಂನಿಂದ ಸಂತ್ರಸ್ತೆ ಆಚೆ ಹೋಗಿದ್ದಾಗಿ ಮತ್ತು ಗಂಡ ಅಲ್ಲೇ ಹಾಲ್‌ನಲ್ಲಿ ಮಲಗಿದ್ದಾಗಿ ಹೇಳಿದ್ದಾಳೆ. ನಂತರ ಗಂಡನನ್ನು ಏಳಿಸಿ ರೂಮಿಗೆ ಕರೆದೊಯ್ದಾಗ ಅಲ್ಲಿ ಸ್ನೇಹಿತನಿದ್ದ. ಸ್ನೇಹಿತನ ಫಸ್ಟ್‌ನೈಟ್ ದಿನವೇ ಆತನ ಹೆಂಡತಿಯನ್ನು ತಾನು ಅನುಭವಿಸಬೇಕು ಎಂಬ ಕೀಳುಮಟ್ಟದ ಬುದ್ಧಿ ತೋರಿಸಿದ್ದ. ಸ್ನೇಹಿತ ಬೈದು ಕೇಳಿದಾಗ ಮಾಡಿದ ಪ್ರಮಾದವನ್ನು ಒಪ್ಪಿಕೊಂಡು ಕ್ಷಮೆ ಕೇಳಿ ಅಲ್ಲಿಂದ ಕಾಲ್ಕಿತ್ತ.
ಆದರೆ ಇತ್ತ ಸುಂದರ ಸಂಸಾರ ಹುಟ್ಟುವ ಮುನ್ನವೇ ಹಾಳಾಗಿಹೋಗಿತ್ತು. ಸ್ನೇಹಿತ ಮಾಡಿದ ಕೃತ್ಯದಿಂದ ಹೆಂಡತಿ ವಿಚ್ಚೇದನ ನೀಡಿದಳು, ಕೋರ್ಟ್‌ಗೆ ಹೋದಾಗ ಸ್ನೇಹಿತ ಉಲ್ಟಾ ಹೊಡೆದಿದ್ದ. ಆರೋಪಿ ಪರ ವಕೀಲರು ಕೋರ್ಟಿನಲ್ಲಿ ತಮ್ಮ ಕಕ್ಷಿದಾರ ಕುಡಿದ ಮತ್ತಿನಲ್ಲಿ ತನ್ನ ಹೆಂಡತಿ ಅಂದುಕೊಂಡು ಸ್ನೇಹಿತನ ಹೆಂಡತಿ ರೂಮಿಗೆ ತೆರಳಿ ಮಲಗಿದ್ದ. ಆಕೆಯ ಮೇಲೆ ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳ ನೀಡುವ ಉದ್ದೇಶ ಅವನದ್ದಾಗಿರಲಿಲ್ಲ ಎಂದು ವಾದ ಮಂಡಿಸಿದ್ದಾರೆ. ಆದರೆ ಈ ಕಾರಣವನ್ನು ಒಪ್ಪಲು ನ್ಯಾಯಾಧೀಶರು ಸುತಾರಾಂ ಸಿದ್ಧರಿರಲಿಲ್ಲ. ಇವೆಲ್ಲವೂ ಪ್ರಕರಣದಿಂದ ಬಚಾವಾಗಲು ನೀಡುತ್ತಿರುವ ಸಬೂಬು ಎಂದು ಕೋರ್ಟ್ ಖಾರವಾಗಿ ಪ್ರತಿಕ್ರಿಯಿಸಿದೆ. ಜತೆಗೆ ಕುಡಿದು ತನ್ನ ಹೆಂಡತಿ ಯಾರು, ಬೇರೆಯವರ ಹೆಂಡತಿ ಯಾರು ಎಂಬುದನ್ನು ಮರೆಯುತ್ತೀರೆಂದರೆ ಅದು ಶುದ್ಧ ಸುಳ್ಳು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಮರ್ಸಿಡಿಸ್ ಕಾರಲ್ಲಿ ಅಪ್ರಾಪ್ತೆಯ ಗ್ಯಾಂಗ್ ರೇಪ್: ಶಾಸಕನ ಮಗನಿಗಾಗಿ ಹುಡುಕಾಟ
ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆಯ ಪರ ಎಲ್ಲರೂ ಅಭಿಪ್ರಾಯ ಹಂಚಿಕೊಂಡಿದ್ದು 6 ವರ್ಷಗಳ ಕಾನೂನು ಸಮರದ ನಂತರ ಸಿಕ್ಕ ಜಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತು ಘಟನೆಯಿಂದ ಆಕೆ ಅನುಭವಿಸಿದ ನೋವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ