ಕಾಂಗ್ರೆಸ್ಸಿನಿಂದ ನಾಮಪತ್ರ ಸಲ್ಲಿಸಲು ಸಹಸ್ರಾರು ಸಂಖ್ಯೆಯಲ್ಲಿ ಹೊರಟ ಮೆರವಣಿಗೆ ಸಂದರ್ಭದಲ್ಲಿ ರೈತರೊಬ್ಬರ ಬೈಕ್‌ನ ಬ್ಯಾಗನಲ್ಲಿದ್ದ .₹2.30 ಲಕ್ಷ ನಗದನ್ನು ಕಳ್ಳತನ ಮಾಡಿದ ಘಟನೆ ಬುಧವಾರ ಜರುಗಿದೆ.
ಹರಪನಹಳ್ಳಿ (ಏ.20) : ಕಾಂಗ್ರೆಸ್ಸಿನಿಂದ ನಾಮಪತ್ರ ಸಲ್ಲಿಸಲು ಸಹಸ್ರಾರು ಸಂಖ್ಯೆಯಲ್ಲಿ ಹೊರಟ ಮೆರವಣಿಗೆ ಸಂದರ್ಭದಲ್ಲಿ ರೈತರೊಬ್ಬರ ಬೈಕ್‌ನ ಬ್ಯಾಗನಲ್ಲಿದ್ದ .₹2.30 ಲಕ್ಷ ನಗದನ್ನು ಕಳ್ಳತನ ಮಾಡಿದ ಘಟನೆ ಬುಧವಾರ ಜರುಗಿದೆ.
ತಾಲೂಕಿನ ಚೆನ್ನಹಳ್ಳಿ ತಾಂಡಾದ ತಾವರೆನಾಯ್ಕ ಎಂಬವರೇ ಹಣ ಕಳೆದುಕೊಂಡ ರೈತ. ಸಾಲದ ಬಾಕಿ ಹಾಗೂ ಬಡ್ಡಿ ಸೇರಿ ಒಟ್ಟು .2.30 ಲಕ್ಷ ಹಣವನ್ನು ಬಟ್ಟೆಚೀಲದಲ್ಲಿ ಇಟ್ಟುಕೊಂಡು ಪಟ್ಟಣದ ಕೆನರಾ ಬ್ಯಾಂಕ್‌ಗೆ ಪಾವತಿಸಲು ತೆರಳಿದ್ದರು. ಆಗ ವ್ಯವಸ್ಥಾಪಕರು ಈ ದಿನ ಆಗುವುದಿಲ್ಲ, ನಾಳೆ ಬರಲು ತಿಳಿಸಿದ್ದಾರೆ.
undefined
ಸೂಕ್ತ ಬೆಲೆ ಸಿಗದೆ ಎಲೆಕೋಸು ಬೆಳೆ ನಾಶ ಮಾಡಿದ ಬಳ್ಳಾರಿ ರೈತ !
ಆದ್ದರಿಂದ ಆ ಹಣವನ್ನು ಬೈಕ್‌ನ ಬ್ಯಾಗಿನಲ್ಲಿ ಇಟ್ಟುಕೊಂಡು ಬಟ್ಟೆತೆಗೆದುಕೊಂಡು ಹೋಗಲು ಗೌಳೇರಪೇಟೆಯ ಅಶೋಕ ಗಾರ್ಮೆಂಟ್ಸ್ ಬಳಿ ಹೋಗಿ ಬೈಕ್ ನಿಲ್ಲಿಸಿ ಬ್ಯಾಗನಲ್ಲಿದ್ದ ಹಣ ನೋಡಿದಾಗ ಹಣ ಇರಲಿಲ್ಲ.
ಕೋಟೆ ಆಂಜನೇಯ ದೇವಸ್ಥಾನದಿಂದ ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಾಮಪತ್ರ ಸಲ್ಲಿಸಲು ಸಹಸ್ರಾರು ಸಂಖ್ಯೆಯಲ್ಲಿ ಮೆರವಣಿಗೆ ಹೊರಟಿದ್ದರು. ಆಗ ಪುರಸಭಾ ಮುಂದಿನ ವೃತ್ತದಲ್ಲಿ ಮೆರವಣಿಗೆ ದಾಟಿ ಹೋಗುವಾಗ ಬೈಕ್‌ನ ಬ್ಯಾಗನಲ್ಲಿದ್ದ ಹಣವನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ದೂರನ್ನು ಹರಪನಹಳ್ಳಿ ಪಟ್ಟಣದ ಠಾಣೆಯಲ್ಲಿ ಪಿಎಸ್‌ಐ ಶಾಂತಮೂರ್ತಿ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅನ್ನ ಕೊಟ್ಟ ಮನೆಗೆ ಕನ್ನ ಹಾಕಿ, ಸಹಚರರ ಜೊತೆ ಸಿಕ್ಕಿಬಿದ್ದ ಚಾಲಾಕಿ ಕಳ್ಳಿ!