-ಕಮಿಷನರ್ ಕಚೇರಿ ಮುಂದೇನೆ ಕಾರ್‌ನಲ್ಲಿದ್ದ ಹಣ ಎಗರಿಸಿದ ಖದೀಮರು!

By Ravi Nayak  |  First Published Jul 23, 2022, 5:07 PM IST

ಬೆಂಗಳೂರಿನ ಪೊಲೀಸ್ ಕಮಿಷನರ್ ಮುಂಭಾಗವೇ ಕಾರ್‌ನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ಎಗರಿಸುತ್ತಾರೆಂದರೆ ಕಳ್ಳರಿಗೆ ಪೊಲೀಸರ ಭಯವೇ ಇಲ್ಲವಾ?


ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಜು.23) : ಬೆಂಗಳೂರಿನ ಪೊಲೀಸ್ ಕಮಿಷನರ್  ಹಿಂಭಾಗದಲ್ಲಿ ನಿಂತಿದ್ದ ಕಾರ್ ಗ್ಲಾಸ್ ಹೊಡೆದು ಲಕ್ಷಾಂತರ ಹಣ ದೋಚಿರುವ ಘಟನೆ ನಡೆದಿದೆ.. ನಗರದ ಮಹದೇವಪುರದ ಲಕ್ಷ್ಮೀಶ ತನ್ನ ಮನೆ ಮೇಲಿರೋ ಲೋನ್ EMI ಕಟ್ಟೋಣ ಎಂದು ಕೆನರಾ ಬ್ಯಾಂಕ್(canara bank)ಗೆ ಹೋಗಿದ್ದಾನೆ\. ಆದರೆ  ನಾಲ್ಕೂವರೆ ಲಕ್ಷ ಕಟ್ಬೇಕು ಅಂದ್ರೆ ಪ್ಯಾನ್ ಕಾರ್ಡ್(Pan Card) ಬೇಕಾಗಿದೆ. ಆದರೆ ಲಕ್ಷ್ಮೀಶ(Lakshmeesh) ಪ್ಯಾನ್ ಕಾರ್ಡ್  ತಂದಿರಲಿಲ್ಲ. ತಕ್ಷಣ  ಪ್ಯಾನ್ ಕಾರ್ಡ್ ತರಲೆಂದು ಇಎಂಐ ಹಣವನ್ನು ತನ್ನ ಕಾರ್ ಡ್ಯಾಶ್ ಬೋರ್ಡ್ ಅಲ್ಲಿ ಇಟ್ಕೊಂಡ್ ಮತ್ತೆ ಮನೆ ಕಡೆ ಹೋಗಿದ್ದಾನೆ. ಹೀಗೆ ಹೋಗ್ತಾ  ಕಾನೂನು ಮಾಪನ ಇಲಾಖೆಯಲ್ಲಿ ಕೆಲ್ಸ ಇದೆಯೆಂದು ಅಲ್ಲಿ ಲಕ್ಷ್ಮೀಶ ಮತ್ತು ಅವರ ಫ್ರೆಂಡ್ ರಾಜೇಶ್(Rajesh) ಎಂಬುವವರನ್ನು ಮಾತಾಡಿಸಲು ಕಛೇರಿಗೆ ಹೋಗಿದ್ದಾನೆ ಈ ವೇಳೆ ತಂದಿದ್ದ ಹಣವನ್ನು ಕಾರಿನಲ್ಲಿ ಬಿಟ್ಟುಹೋಗಿದ್ದಾನೆ. 

Tap to resize

Latest Videos

Bangalore Car Thieves: ಟೆಕ್ನಾಲಜಿ ಬಳಸಿ ಕಾರು ಎಗರಿಸುತ್ತಿದ್ದವ ಅಂದರ್‌

ಗೆಳೆಯನ ಮಾತಾಡಿ ವಾಪಸ್ ಬಂದಾಗ ಲಕ್ಷ್ಮೀಶನಿಗೆ ಶಾಕ್ ಆಗಿದೆ. ಕಾರಲ್ಲಿಟ್ಟಿದ್ದ ಹಣವನ್ನು ವಿಂಡೋ ಗಾಜು ಒಡೆದು ಹಣದ ಚೀಲ   ಎತ್ಕೋಂಡ್ ಹೋದ ಖದೀಮನ ದೃಶ್ಯಸಿಸಿಟಿವಿ(CCTV)ಯಲ್ಲಿ ಸೆರೆಯಾಗಿದೆ.  ಹಣ ಲಪಟಾಯಿಸಿದ ಆಸಾಮಿ ಸ್ವಲ್ಪ ದೂರದಲ್ಲಿ ನಿಂತಿದ್ದ ಪಲ್ಸರ್ ಬೈಕ್ ಅಲ್ಲಿದ್ದ ಇನ್ನೊಬ್ಬ ಆಸಾಮಿ ಜೊತೆ  ಎಸ್ಕೇಪ್(Escap) ಆಗ್ಬಿಡ್ತಾನೆ.  ಈ ಘಟನೆ ನಡ್ದಿರೋದ್ ಬೇರೆ ಎಲ್ಲೂ ಅಲ್ಲ ಕಮೀಷನರ್ ಆಫೀಸ್ ಹತ್ರಾನೇ ಅನ್ನೋದು ದುರಂತ. ಕಮೀಷನರ್ ಆಫೀಸ್ ಸಮೀಪವೇ ಈ ಪರಿ ಕಳ್ಳತನವಾದರೆ ಇನ್ನೂ ಬೆಂಗಳೂರಿನ ಇತರೆ ಭಾಗಗಳಲ್ಲಿ ನಡೆಯುವ ಕಳ್ಳತನ, ದರೋಡೆ ಊಹಿಸಿಕೊಳ್ಳುವುದಕ್ಕೇ ಆಗಲ್ಲ.

ಪೊಲೀಸರ ಸೋಗಿನಲ್ಲಿ ಬಂದು ಚಿನ್ನಾಭರಣ ಕದ್ದು ಪರಾರಿಯಾದ ಖದೀಮರು!

ಕಳ್ಳತನ ಆಗಿ ಎರಡು ದಿನ ಆಗಿದ್ರೂ ಕೂಡ ಈ ಖದೀಮರು ಪತ್ತೆ ಆಗಿಲ್ಲ ಎಂದರೆ ಇದರಲ್ಲಿ ಖದೀಮರ ಕೈಚಳಕವೋ, ಪೊಲೀಸರ ಬೇಜವಾಬ್ದಾರಿತನವೋ ತಿಳಿಯುತ್ತಿಲ್ಲ. ಈ ಬಗ್ಗೆ ತನಿಖೆ ಮಾಡ್ತಿರೋ ಪೊಲೀಸ್ರು  ಸಿಸಿ ಟಿವಿ ಫೂಟೇಜ್ ಬಳಸಿಕೊಂಡು ಈ ಕಳ್ಳರನ್ನು ಖೆಡ್ಡಾಕ್ಕೆ ಬೀಳಿಸಲು ಬೆನ್ನತ್ತಿದ್ದಾರೆ...ಏನೇ ಆದ್ರೂ ಬೆಂಗ್ಳೂರಲ್ಲಿ ಎಷ್ಟು ಎಚ್ಚರವಾಗಿದ್ರು ಕಡಿಮೆನೇ ಬಿಡಿ..ಇನ್ನುಬ್ಯಾಂಕ್ ವ್ಯವಹಾರ, ಎಟಿಎಂ ಹಣ ತೆಗೆಯುವಾಗ, ಬೆಲೆ ಬಾಳುವ ವಸ್ತುಗಳು ಇದ್ದಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಯಾಮಾರಿದರೆಂದರೆ ಮೋಸ ಹೋದಂತೆ.  ಇನ್ಮೇಲೆ ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಹೋಗುವರರು ಹುಷಾರಾಗಿರಬೇಕು.

click me!