Mangaluru: ನಾಲ್ಕು ವರ್ಷಗಳ ಫೇಸ್‌ಬುಕ್ ಲವ್‌ನಲ್ಲಿ ಆಕೆಗೆ ಸಿಕ್ಕಿದ್ದು‌ ಮಂಗಳಮುಖಿ!

By Govindaraj S  |  First Published Jul 23, 2022, 3:16 PM IST

ಆಕೆ ಆತನ ಜೊತೆ ಬಾಳಿ ಬದುಕುವ ಕನಸು ಕಂಡಿದ್ದಳು. ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ ಕಟ್ಟಿದ್ದ ಮಾತಿನ ಮಂಟಪಕ್ಕೆ ಅಕ್ಷರಶಃ ಮರುಳಾಗಿ ಹೋಗಿದ್ದಳು. ಪರಸ್ಪರ ಭೇಟಿಯೇ ಆಗದೇ ನಿರಂತರ ನಾಲ್ಕು ವರ್ಷ ಪ್ರೇಮದ ಗುಂಗಿನಲ್ಲಿದ್ದ ಅವಳು ತನ್ನ ಪ್ರಿಯಕರನ ನಿಜ ರೂಪ ಕಂಡು ಅಕ್ಷರಶಃ ಬೆಚ್ಚಿಬಿದ್ದಿದ್ದಾಳೆ.


ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಬಂಟ್ವಾಳ (ಜು.23): ಆಕೆ ಆತನ ಜೊತೆ ಬಾಳಿ ಬದುಕುವ ಕನಸು ಕಂಡಿದ್ದಳು. ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ ಕಟ್ಟಿದ್ದ ಮಾತಿನ ಮಂಟಪಕ್ಕೆ ಅಕ್ಷರಶಃ ಮರುಳಾಗಿ ಹೋಗಿದ್ದಳು. ಪರಸ್ಪರ ಭೇಟಿಯೇ ಆಗದೇ ನಿರಂತರ ನಾಲ್ಕು ವರ್ಷ ಪ್ರೇಮದ ಗುಂಗಿನಲ್ಲಿದ್ದ ಅವಳು ತನ್ನ ಪ್ರಿಯಕರನ ನಿಜ ರೂಪ ಕಂಡು ಅಕ್ಷರಶಃ ಬೆಚ್ಚಿಬಿದ್ದಿದ್ದಾಳೆ. ದ‌.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದಲ್ಲಿ ನಡೆದ ಈ ಘಟನೆ ನಿಜಕ್ಕೂ ಸಾಮಾಜಿಕ ತಾಣಗಳ ಗೀಳಿಗೆ ಬಿದ್ದ ಈಗಿನ ಯುವ ಸಮುದಾಯಕ್ಕೊಂದು ಎಚ್ಚರಿಕೆಯ ಕರೆಘಂಟೆಯಾಗಿದೆ. 

Tap to resize

Latest Videos

ಫೇಸ್​ಬುಕ್​ನಲ್ಲಿ ಪರಿಚಿತವಾದ ವ್ಯಕ್ತಿಯೊಬ್ಬರ ಜತೆ ಸ್ನೇಹ ಬೆಳೆಸಿಕೊಂಡ ಯುವತಿ, ಆ ವ್ಯಕ್ತಿ ಜತೆ ಪ್ರೀತಿಯ ಬಲೆಗೂ ಬಿದ್ದಿದ್ದಳು. ಸತತ ನಾಲ್ಕು ವರ್ಷದಿಂದ ಫೋನ್​ನಲ್ಲೇ ಮಾತನಾಡುತ್ತಾ, ಪರಸ್ಪರ ಭಾವನೆಗಳನ್ನು ಹಂಚಿಕೊಂಡಿದ್ದರು. ಯುವತಿಗೆ ಮದುವೆ ಆಗುವುದಾಗಿ ಆ ವ್ಯಕ್ತಿ ನೂರಾರು ಆಸೆ-ಕನಸು ಹುಟ್ಟಿಸಿದ್ದ. ಆಕೆಯೂ ಪ್ರಿಯಕರನ ಜತೆ ಬಾಳಲು ಹಾತೊರೆಯುತ್ತಿದ್ದಳು. ತನ್ನ ಪ್ರೀತಿ ಬಗ್ಗೆ ಯುವತಿ ಮನೆಯಲ್ಲಿ ಹೇಳಿಕೊಂಡಿದ್ದಳು. ಫೇಸ್​ಬುಕ್​ ಲವ್​ ಎಲ್ಲ ನಮಗೆ ಸರಿ ಬರಲ್ಲ, ಬೇಡ ಎಂದಿದ್ದಕ್ಕೆ ಯುವತಿ ಮನೆಯವರ ವಿರುದ್ಧವೇ ತಿರುಗಿಬಿದ್ದಿದ್ದಳು. ಅಂತಿಮವಾಗಿ ಈ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದಾಗ ಯುವತಿಗೆ ಆಘಾತಕಾರಿ ವಿಷಯ ಗೊತ್ತಾಗಿದೆ. 

Moral Policing: 'ಬಿರಿಯಾನಿ'ಗಾಗಿ ಮುಸ್ಲಿಂ ಸ್ನೇಹಿತೆ ಮನೆಗೆ ಬಂದಿದ್ದ ಹಿಂದೂ ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ!

ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಯುವತಿಗೆ ನಾಲ್ಕು ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಪ್ರದೀಪ್ ಎಂಬಾತನ ಪರಿಚಯವಾಗಿತ್ತು. ಸಿವಿಲ್ ಇಂಜಿನಿಯರ್ ಎಂದು ಆತ ಪರಿಚಯಿಸಿಕೊಂಡಿದ್ದ. ಆತನ ಮುಖ ನೋಡದೆ ಇದ್ದರೂ, ಆತನ ಪ್ರೀತಿಯ ಮಾತಿಗೆ ಮರುಳಾಗಿ ಪ್ರೇಮಪಾಶಕ್ಕೆ ಸಿಲುಕಿದ್ದಳು. ದಿನಾ ಕರೆ ಮಾಡಿ ಮದುವೆಯಾಗುವುದಾಗಿ ನಂಬಿಸುತ್ತಿದ್ದ. ಈ ವಿಚಾರವಾಗಿ ಯುವತಿ ಮನೆಮಂದಿಯೊಂದಿಗೆ ಜಗಳವಾಡುತ್ತಿದ್ದಳು. ಈ ಬಗ್ಗೆ ಯುವತಿಯ ತಾಯಿ, ವಕೀಲೆ ಶೈಲಜಾ ರಾಜೇಶ್ ಅವರಲ್ಲಿ ವಿಷಯ ತಿಳಿಸಿದ್ದರು. ಅವರು ಕೌನ್ಸೆಲಿಂಗ್ ಮಾಡಿದಾಗ ಯುವತಿ ಸಂಪೂರ್ಣವಾಗಿ ಪ್ರದೀಪ್‌ನ ಮೋಹಕ್ಕೆ ಒಳಗಾಗಿದ್ದಳು. 

National Herald Case: ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರುಪಯೋಗ: ಮಾಜಿ ಸಚಿವ ರಮಾನಾಥ ರೈ ಆರೋಪ

ಮನವರಿಕೆ ಮಾಡಿದರೂ ಮಾತು ಕೇಳದಿದ್ದಾಗ ಶೈಲಜಾ ರಾಜೇಶ್ ಸೂಚನೆಯಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿತ್ತು. ವಿಟ್ಲ ಹಾಗೂ ಉಡುಪಿ ಜಿಲ್ಲೆ ಶಂಕರನಾರಾಯಣ ಠಾಣೆ ಪೊಲೀಸರ ಸಹಕಾರದೊಂದಿಗೆ ಸ್ವತಃ ಶೈಲಜಾ ರಾಜೇಶ್ ಅವರು ಯುವತಿಗೆ ಕರೆ ಮಾಡುತ್ತಿದ್ದಾನೆ. ಸಿದ್ದಾಪುರದ ಸ್ಥಳವನ್ನು ಪತ್ತೆ ಮಾಡಿ ಮನೆಗೆ ಭೇಟಿ ನೀಡಿದಾಗ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಯುವತಿಯೊಂದಿಗೆ ಪ್ರದೀಪ್ ಎಂಬಾತನ ಹೆಸರಿನಲ್ಲಿ ಗಂಡಸಿನ ಧ್ವನಿಯಲ್ಲಿ ಮಾತನಾಡುತ್ತಿದ್ದದ್ದು ಜ್ಯೋತಿ ಎಂಬ ಹೆಸರಿನ ಮಂಗಳಮುಖಿ. ನಾಲ್ಕು ವರ್ಷದಿಂದ ಮನೆಮಂದಿಗೂ ತಲೆನೋವಾಗಿದ್ದ ಯುವತಿಯ ಪ್ರೇಮ ಪ್ರಕರಣ ಅಂತ್ಯ ಕಂಡಿದೆ.

click me!