Crime News: ಪೈಪ್‌ಲೈನ್ ವೀಕ್ಷಿಸಲು ಬಂದು ಕಳ್ಳತನ; ಆರೋಪಿಗಳ ಬಂಧನ

Published : Feb 01, 2023, 12:28 PM IST
Crime News: ಪೈಪ್‌ಲೈನ್ ವೀಕ್ಷಿಸಲು ಬಂದು ಕಳ್ಳತನ; ಆರೋಪಿಗಳ ಬಂಧನ

ಸಾರಾಂಶ

ನಾವು ಪುರಸಭೆಯ ಎಂಜಿನಿಯರ್‌ಗಳು. ನಿಮ್ಮ ಮನೆಯ ನೀರಿನ ಪೈಪ್‌ಲೈನ್‌ ವೀಕ್ಷಣೆ ಮಾಡಬೇಕು ಎಂದು ಪಟ್ಟಣದ ಶಬರಿಗಿರಿ ನಗರದ ಮಹಿಳೆಯನ್ನು ಯಾಮಾರಿಸಿ ತಿಜೋರಿಯಲ್ಲಿದ್ದ ನಗದು ಮತ್ತು ಚಿನ್ನಾಭರಣ ಕದ್ದು ಪರಾರಿಯಾಗಿದ್ದ ತಂಡವನ್ನು ಇಲ್ಲಿಯ ಪೊಲೀಸರು ಬಂಧಿಸಿದ್ದಾರೆ.

ಶಿಗ್ಗಾಂವಿ (ಫೆ.1) : ನಾವು ಪುರಸಭೆಯ ಎಂಜಿನಿಯರ್‌ಗಳು. ನಿಮ್ಮ ಮನೆಯ ನೀರಿನ ಪೈಪ್‌ಲೈನ್‌ ವೀಕ್ಷಣೆ ಮಾಡಬೇಕು ಎಂದು ಪಟ್ಟಣದ ಶಬರಿಗಿರಿ ನಗರದ ಮಹಿಳೆಯನ್ನು ಯಾಮಾರಿಸಿ ತಿಜೋರಿಯಲ್ಲಿದ್ದ ನಗದು ಮತ್ತು ಚಿನ್ನಾಭರಣ ಕದ್ದು ಪರಾರಿಯಾಗಿದ್ದ ತಂಡವನ್ನು ಇಲ್ಲಿಯ ಪೊಲೀಸರು ಬಂಧಿಸಿದ್ದಾರೆ.

ಜ. 11ರಂದು ಪುರಸಭೆ ನೌಕರರೆಂದು ಹೇಳಿಕೊಂಡು ಬಂದಿದ್ದ ಇಬ್ಬರು ನಲ್ಲಿ ಕನೆಕ್ಷನ್‌ ವೀಕ್ಷಣೆ ನೆಪದಲ್ಲಿ ಮನೆಯಲ್ಲಿದ್ದ ಮಹಿಳೆಯನ್ನು ಮನೆಯ ಹಿಂಭಾಗಕ್ಕೆ ಕರೆದುಕೊಂಡು ಹೋಗಿದ್ದರು. ಆಗ ಕಳ್ಳರ ಗ್ಯಾಂಗಿನ ಬೇರೆ ಸದಸ್ಯರು ಮನೆಯ ಒಳಗಡೆ ನುಗ್ಗಿ ಬೆಡ್‌ರೂಂನಲ್ಲಿದ್ದ .405000 ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ .80 ಸಾವಿರ ನಗದು ದೋಚಿ ಪರಾರಿ ಆಗಿದ್ದರು.

ಮಂಡ್ಯ: ಬೀಗ ಹಾಕಿರುವ ಮನೆಗಳೇ ಟಾರ್ಗೆಟ್‌, ಖತರ್‌ನಾಕ್‌ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು

ಈ ಕುರಿತು ಮಹಿಳೆ ಶಿಗ್ಗಾಂವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದೇ ದಿನ ಹಾವೇರಿ ನಗರದಲ್ಲೂ ಈ ಖದೀಮರ ತಂಡ ಇದೇ ರೀತಿಯ ಕೃತ್ಯ ಕೈಗೊಂಡು ಪರಾರಿ ಆಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರೆ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷÜ, ಡಿವೈಎಸ್ಪಿ ಮಂಜುನಾಥ ಜಿ. ಅವರ ಮಾರ್ಗದರ್ಶನದಲ್ಲಿ ಸಿಪಿಐಗಳಾದ ಬಸವರಾಜ ಹಳಬನ್ನವರ, ಸುರೇಶ ಸಗರಿ ಮತ್ತು ಪಿಎಸ್‌ಐ ಸಂಪತ್‌ ಆನಿಕಿವಿ ನೇತೃತ್ವದಲ್ಲಿ ಪೊಲೀಸರ ತಂಡ ರಚನೆ ಮಾಡಿದ್ದರು.

ಪ್ರಕರಣ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರ ತಂಡ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ದೊಡ್ಡರಿ ಗ್ರಾಮದವರಾದ ಯೋಗೇಶ ತಂದೆ ನಂಜಪ್ಪ (27 ವರ್ಷ) ಮತ್ತು ಕೆಂಚಪ್ಪ ತಂದೆ ತಿಪ್ಪ (25 ವಷÜರ್‍) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ .8.20 ಲಕ್ಷ ಮೌಲ್ಯದ ಚಿನ್ನಾಭರಣ, 9 ಮೊಬೈಲ್‌ಗಳು, ಒಂದು ಜಿಯೋ ಡಾಂಗಲ್‌ ಮತ್ತು ಎರಡು ಬೈಕ್‌ಗಳನ್ನು ಜಫ್ತಿ ಮಾಡಿದ್ದಾರೆ. ಇನ್ನೋರ್ವ ಆರೋಪಿ ರವಿ ವೆಂಕಟಸ್ವಾಮಿ ಪರಾರಿ ಆಗಿದ್ದು, ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.

ಬೆಳಗಾವಿ: ಮನೆ, ಕಾರು ಕಳವು ಪ್ರಕರಣ: ಮತ್ತಿಬ್ಬರ ಬಂಧನ, 3 ಲಕ್ಷ ಮೌಲ್ಯದ ಸ್ವತ್ತು ವಶ

ಪೊಲೀಸರ ತಂಡದಲ್ಲಿ ಶಿಗ್ಗಾಂವಿ ಪೊಲೀಸ್‌ ಠಾಣೆಯ ಸಿಬ್ಬಂದಿ ವೆಂಕಟೇಶ, ಮಂಜುನಾಥ, ಯಲ್ಲಪ್ಪ ಕುರಿ, ರಾಜೇಸಾಬ ಸುಂಕದ, ಪ್ರಭು ಪಾಟೀಲ, ಹಾವೇರಿ ನಗರ ಪೊಲೀಸ್‌ ಠಾಣೆಯ ಸಿಬ್ಬಂದಿ ಮುತ್ತು, ಮಂಜುನಾಥ, ಪರಶುರಾಮ, ಚಂದ್ರು, ಸತೀಶ ಮಾರಕಟ್ಟಿಮತ್ತು ಮಾರುತಿ ಹಾಲಬಾವಿ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!