
ಕಲಬುರಗಿ ಫೆ.1:- 13 ವರ್ಷದ ಬಾಲಕಿ ಗರ್ಭಿಣಿಯಾಗಿದ್ದು, ಇದಕ್ಕೆ ಆಕೆಯ ಜನ್ಮದಾತನೇ ಕಾರಣ ಎನ್ನುವ ಅಘಾತಕಾರಿ ಸುದ್ದಿ ಕಲಬುರಗಿ ಜಿಲ್ಲೆಯಿಂದ ಬಂದಿದೆ. ಹೌದು ! ತನ್ನ ಅಪ್ರಾಪ್ತ ಮಗಳ ಮೇಲೆ ಸ್ವತಃ ತಂದೆಯೇ ಅತ್ಯಾಚಾರ ನಡೆಸಿರುವ ವಿಚಾರ, ಬಾಲಕಿ ಗರ್ಭ ಧರಿಸುವುದರೊಂದಿಗೆ ಬೆಳಕಿಗೆ ಬಂದಿದೆ.
ಹೊಟ್ಟೆ ನೋವಿಗಾಗಿ ಆಸ್ಪತ್ರೆಗೆ ಬಂದಾಗ ಬೆಳಕಿಗೆ ಬಂತು ನೀಚ ಕೃತ್ಯ!
ಕಲಬುರಗಿ(Kalaburagi) ಜಿಲ್ಲೆ ಜೇವರ್ಗಿಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ನೀಚ ಕೃತ್ಯ ಸಂಭವಿಸಿದೆ. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ 13 ವರ್ಷದ ಬಾಲಕಿ ನಿನ್ನೆ ಜೇವರ್ಗಿಯ ಸರಕಾರಿ ಆಸ್ಪತ್ರೆಗೆ ಬಂದಿದ್ದಳು. ಆ ಬಾಲಕಿಗೆ ತೀವ್ರ ಹೊಟ್ಟೆ ನೋವಿನ ಸಮಸ್ಯೆಯಿತ್ತು. ಜೊತೆಗೆ ವಾಂತಿಯಾಗುತ್ತಿತ್ತು. ಹೊಟ್ಟೆ ನೋವಿನ ಲಕ್ಷಣಗಳನ್ನು ಗಮನಿಸಿ ವೈದ್ಯರು ಸಮಗ್ರ ತಪಾಸಣೆ ನಡೆಸಿದ್ದಾರೆ. ಆಗ ಬಾಲಕಿ ಎರಡು ತಿಂಗಳ ಗರ್ಭಿಣಿ ಎನ್ನುವ ಸತ್ಯ ಬಯಲಾಗಿದೆ.
ಜನ್ಮದಾತನೇ ಮಗಳ ಗರ್ಭಕ್ಕೆ ಕಾರಣ !
13 ವರ್ಷದ ಅಪ್ರಾಪ್ತ ಮತ್ತು ಅವಿವಾಹಿತ ಬಾಲಕಿ ಎರಡು ತಿಂಗಳ ಗರ್ಭಿಣಿ ಎನ್ನುವ ವಿಚಾರ ತಪಾಸಣೆಯಲ್ಲಿ ಗೊತ್ತಾಗುತ್ತಿದ್ದಂತೆಯೇ ಸ್ವತಃ ವೈದ್ಯರೂ ದಂಗಾಗಿದ್ದಾರೆ. ಬಾಲಕಿಗೆ ಈ ಬಗ್ಗೆ ಸಮಾಧಾನದಿಂದ ವಿಚಾರಿಸಿದಾಗ, ಅಮ್ಮ ಹೊಲಕ್ಕೆ ಹೋದಾಗ ಒಂದಿನ ಮಧ್ಯಾಹ್ನ ತನ್ನ ಅಪ್ಪನೇ ಅತ್ಯಾಚಾರ ನಡೆಸಿದ್ದಾನೆ ಎನ್ನುವ ವಿಚಾರ ಬಹಿರಂಗಪಡಿಸಿದ್ದಾಳೆ.
ಖಾಕಿ ಮೊರೆ ಹೋದ ವೈದ್ಯರು
ಪ್ರಕರಣದ ಗಂಭೀರತೆ ಅರಿತ ಜೇವರ್ಗಿ ತಾಲೂಕು ಆಸ್ಪತ್ರೆಯ ವೈದ್ಯರು, ಈ ವಿಚಾರ ಪೊಲೀಸ್ ರಿಗೆ ಮಾಹಿತಿ ನೀಡುತ್ತಾರೆ. ಬಾಲಕಿ ನೀಡಿರುವ ಹೇಳಿಕೆ ಮತ್ತು ವೈದ್ಯರ ವರದಿ ಆಧರಿಸಿ ಜೇವರ್ಗಿ ಪೊಲೀಸರು ಬಾಲಕಿಯ ತಂದೆಯ ವಿರುದ್ದ ಫೋಕ್ಸೋ (Pocso act)ಅಡಿ ದೂರು ದಾಖಲಿಸಿಕೊಂಡಿದ್ದಾರೆ. ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಯಲ್ಲಿ ರಕ್ಷಣೆ ನೀಡಲಾಗಿದೆ.
ತೀರ್ಥಹಳ್ಳಿ; ಬಾಲಕಿ ಕಾಡಿದ ಕಾಮುಕ ಸಾಕುತಂದೆ, ಶಿಕ್ಷಕಿಯಿಂದ ಬೆಳಕಿಗೆ ಬಂದ ಘೋರ ಪ್ರಕರಣ
ಕಾಮುಕ - ಪಾಪಿ ತಂದೆ ನಾಪತ್ತೆ
ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಕಾಮುಕ ತಂದೆ ಸದ್ಯ ನಾಪತ್ತೆಯಾಗಿದ್ದಾನೆ. ಈತನ ಬಂಧನಕ್ಕೆ ಜೇವರ್ಗಿ ಪೊಲೀಸರು ಜಾಲ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ