ಹಸುವಿನ ತಲೆಯನ್ನು ಕಡಿದ ದುಷ್ಕರ್ಮಿಗಳು, ಅದರ ತಲೆ, ಬಾಲ ಮತ್ತು ಕರುಳು ಇನ್ನಿತರೆ ಭಾಗಗಳನ್ನು ತುಂಗಾನದಿಗೆ ಎಸೆದ ಪ್ರಕರಣ ಪಟ್ಟಣದ ರಾಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಡೆದಿದೆ.
ತೀರ್ಥಹಳ್ಳಿ (ಮಾ.24): ಹಸುವಿನ ತಲೆಯನ್ನು ಕಡಿದ ದುಷ್ಕರ್ಮಿಗಳು, ಅದರ ತಲೆ, ಬಾಲ ಮತ್ತು ಕರುಳು ಇನ್ನಿತರೆ ಭಾಗಗಳನ್ನು ತುಂಗಾನದಿಗೆ ಎಸೆದ ಪ್ರಕರಣ ಪಟ್ಟಣದ ರಾಮೇಶ್ವರ ದೇವಸ್ಥಾನ(Rameshwar temple teerthahalli)ದ ಹಿಂಭಾಗದಲ್ಲಿ ನಡೆದಿದೆ.
ಗುರುವಾರ ನದಿಗೆ ಸ್ನಾನಕ್ಕೆ ಹೋದವರಿಗೆ ಕೊಳೆತ ಸ್ಥಿತಿಯಲ್ಲಿರುವ ಹಸುವಿನ ದೇಹದ ಕೆಲ ಭಾಗಗಳು ಗೋಚರವಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಶೆಟ್ಟಿ, ಮುಖ್ಯಾಧಿಕಾರಿ ಕುರಿಯಾಕೋಸ್ ಹಾಗೂ ಪೊಲೀಸರು ಸ್ಥಳ ಪರಿಶೀಲಿಸಿದಾಗ ಹಸುವಿನ ತಲೆಯು ಪತ್ತೆಯಾಗಿದೆ ಅಲ್ಲದೆ ನದಿಯಲ್ಲಿದ್ದ ಹಸುವಿನ ದೇಹದ ಭಾಗಗಳನ್ನು ಎಸೆಯಲಾಗಿದೆ ಎಲ್ಲ ತೆರವುಗೊಳಿಸಿ, ಮಣ್ಣಿನಲ್ಲಿ ಹೂಳಲಾಯಿತು. ಯಾರು ಯಾವ ಕಾರಣಕ್ಕೆ ಹೀಗೆ ಹಸುವನ್ನು ಕತ್ತರಿಸಿ ಎಸೆಯಲಾಗಿದೆ ಎಂಬುದು ಪತ್ತೆಯಾಗಿಲ್ಲ. ಗೋಕಳ್ಳರಿರಬಹುದು ಎಂದು ಶಂಕಿಸಲಾಗಿದೆ.
ರಾತ್ರೋರಾತ್ರಿಸೆಸ್ಕಾಂ ಶಾಖಾ ಕಚೇರಿಯ ತಡೆಗೋಡೆ ಧ್ವಂಸ
ಶನಿವಾರಸಂತೆ : ರಾತ್ರೋ ರಾತ್ರಿಯಲ್ಲಿ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಸೆಸ್ಕಾಂ ಶಾಖಾ ಕಚೇರಿಯ ತಡೆಗೋಡೆಯನ್ನು ದುಷ್ಕರ್ಮಿಗಳು ಸೋಮವಾರ ರಾತ್ರಿ ಧ್ವಂಸಗೊಳಿಸಿರುವ ಕುರಿತು ಸೆಸ್ಕಾಂ ಶಾಖಾ ಕಚೇರಿಯ ಕಿರಿಯ ಅಭಿಯಂತರ ಸುದೀಪ್ ಶನಿವಾರಸಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ನೋಯ್ಡಾದಲ್ಲಿ ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕೊಚ್ಚಿ ಚರಂಡಿಗೆಸೆದ ಪಾತಕಿಗಳು!
ಸೋಮವಾರ ರಾತ್ರಿ ವೇಳೆಯಲ್ಲಿ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಸೆಸ್‌್ಕ ಶಾಖಾ ಕಚೇರಿಯ ತಡೆಗೋಡೆಯನ್ನು ಯಾರೋ ದುಷ್ಕರ್ಮಿಗಳು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ. ತಡೆಗೋಡೆಯು ಧ್ವಂಸಗೊಳಿಸಿರುವುದನ್ನು ಗಮನಿಸಿದರೆ ಉದ್ದೇಶ ಪೂರ್ವಕವಾಗಿ ತಡೆಗೋಡೆಯನ್ನು ಧ್ವಂಸಗೊಳಿಸಿರುವುದು ಗೋಚರವಾಗುತ್ತದೆ. ಈ ಕುರಿತು ಮಂಗಳವಾರ ಬೆಳಗ್ಗೆ ಸೆಸ್‌್ಕ ಕಿರಿಯ ಎಂಜಿನಿಯರ್ ಸುದೀಪ್ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರಸಂತೆ ಎಸ್‌ಐ ಗೋವಿಂದ್‌ರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.