ನೋಟು ಬದಲಿಸಲು ಬಂದವರ ಬಳಿ 10 ಲಕ್ಷ ರೂ. ಎಗರಿಸಿದ್ದ ಮುಖ್ಯಪೇದೆ ಸೆರೆ

Published : Oct 10, 2022, 11:11 AM ISTUpdated : Oct 10, 2022, 11:13 AM IST
ನೋಟು ಬದಲಿಸಲು ಬಂದವರ ಬಳಿ 10 ಲಕ್ಷ ರೂ. ಎಗರಿಸಿದ್ದ ಮುಖ್ಯಪೇದೆ ಸೆರೆ

ಸಾರಾಂಶ

50 ಲಕ್ಷದಲ್ಲಿ .10 ಲಕ್ಷ ಎಗರಿಸಿದ್ದ ಪೊಲೀಸ್‌ ಮುಖ್ಯಪೇದೆ ಸೇವೆಯಿಂದ ಅಮಾನತು ಕಮಿಷನ್‌ ಆಸೆಗಾಗಿ ಹಣ ಬದಲಾವಣೆಗೆ ಯತ್ನ 2 ಸಾವಿರ ಮುಖಬೆಲೆಯ ನೋಟು 500ಕ್ಕೆ ಬದಲಿಸಲು ಯತ್ನ ಈ ವೇಳೆ ಪೊಲೀಸರನ್ನು ಕಂಡು ಪರಾರಿಗೆ ಯತ್ನಿಸಿದಾಗ ಬಂಧನ ಅವರ ಕಾರಿನಲ್ಲಿ ಇದ್ದ ಹಣ ಎಗರಿಸಿದ್ದ ಕಾನ್‌ಸ್ಟೇಬಲ್‌ ಸೆರೆ

ಬೆಂಗಳೂರು (ಅ.10) : ಕಮಿಷನ್‌ ಆಸೆಗೆ ನೋಟು ಬದಲಾವಣೆಗೆ ಬಂದಿದ್ದವರ ಬಳಿ ಜಪ್ತಿ ಮಾಡಿದ್ದ .50 ಲಕ್ಷ ಪೈಕಿ .10 ಲಕ್ಷ ಎಗರಿಸಿದ್ದ ಹೆಡ್‌ ಕಾನ್‌ಸ್ಟೇಬಲ್‌ನನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹೇಂದ್ರಗೌಡ(45) ಬಂಧಿತ ಹೆಡ್‌ ಕಾನ್‌ಸ್ಟೇಬಲ್‌. ರಾಮನಗರ ಜಿಲ್ಲೆ ರಾಮಾಪುರ ಗ್ರಾಮದ ಲಿಂಗೇಶ್‌ ಎಂಬುವವರು ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಜಪ್ತಿ ಮಾಡಿದ .50 ಲಕ್ಷ ಪೈಕಿ .10 ಲಕ್ಷ ಎತ್ತಿಕೊಂಡಿರುವುದು ತನಿಖೆಯಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ಅವರು ಆರೋಪಿ ಮಹೇಂದ್ರಗೌಡನನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

DAVANAGERE: ಹಿರಿಯ ನಾಗರಿಕರಿಗೆ ಎಟಿಮ್ ನಲ್ಲಿ ವಂಚಿಸುತ್ತಿದ್ದ ಕಳ್ಳ ಅಂದರ್!

ಏನಿದು ಪ್ರಕರಣ?

ರಾಮನಗರ ಮೂಲದ ಲಿಂಗೇಶ್‌ ವ್ಯವಸಾಯದ ಜತೆಗೆ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡಿಕೊಂಡಿದ್ದಾರೆ. ಇವರ ಸ್ನೇಹಿತ ಪ್ರದೀಪ್‌ ಇತ್ತೀಚೆಗೆ ಕರೆ ಮಾಡಿ ‘ನನ್ನ ಸೇಹಿತರೊಬ್ಬರ ಬಳಿ .2 ಸಾವಿರ ಮುಖಬೆಲೆಯ ಕೋಟ್ಯಂತರ ರುಪಾಯಿ ಹಣವಿದೆ. ಮುಂದಿನ ದಿನಗಳಲ್ಲಿ .2 ಸಾವಿರ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಸಾಧ್ಯತೆ ಇರುವುದರಿಂದ .2 ಸಾವಿರ ಮುಖಬೆಲೆಯ ನೋಟುಗಳನ್ನು .500 ಮುಖಬೆಲೆಯ ನೋಟುಗಳಿಗೆ ಬದಲಾಯಿಸಲು ತೀರ್ಮಾನಿಸಿದ್ದಾರೆ. .500 ಮುಖ ಬೆಲೆಯ ನೋಟು ನೀಡಿದರೆ, ಶೇ.10ರಷ್ಟುಕಮಿಷನ್‌ ನೀಡಲಿದ್ದಾರೆ’ ಎಂದು ಹೇಳಿದ್ದರು. ಇದಕ್ಕೆ ಒಪ್ಪಿದ ಲಿಂಗೇಶ್‌, .500 ಮುಖಬೆಲೆಯ .50 ಲಕ್ಷವನ್ನು ಪಡೆದುಕೊಂಡಿದ್ದರು.

ಅ.2ರಂದು ಲಿಂಗೇಶ್‌ ಮತ್ತು ಪ್ರದೀಪ್‌ ಕಾರಿನಲ್ಲಿ ಎಲೆಕ್ಟ್ರಾನಿಕ್‌ ಸಿಟಿಯ ಸಮೀಪದ ಸಿಂಗಸಂದ್ರಕ್ಕೆ ಹೋಗಿದ್ದಾರೆ. ಅಲ್ಲಿ ವೆಟ್ರಿವೇಲು ಎಂಬಾತನನ್ನು ಭೇಟಿಯಾಗಿದ್ದಾರೆ. ಬಳಿಕ ಮೂವರು ಚಂದ್ರಾಲೇಔಟ್‌ಗೆ ಬಂದಿದ್ದಾರೆ. ಈ ವೇಳೆ ವೆಟ್ರಿವೇಲು ಸ್ನೇಹಿತ ಶ್ಯಾಮ್‌ ಸಂತೋಷ್‌ ಎಂಬುವವರು ಅಲ್ಲಿಗೆ ಬಂದಿದ್ದು, ನಾಲ್ವರು ಮಾತನಾಡುತಾ ನಿಂತಿದ್ದಾರೆ.

ಈ ವೇಳೆ ಹೆಡ್‌ ಕಾನ್‌ಸ್ಟೇಬಲ್‌ ಮಹೇಂದ್ರಗೌಡ ಹೊಯ್ಸಳ ವಾಹನದಲ್ಲಿ ಆ ಕಡೆಗೆ ಗಸ್ತು ಬಂದಿದ್ದು, ಈ ನಾಲ್ವರನ್ನು ಗಮನಿಸಿದ್ದಾರೆ. ಪೊಲೀಸ್‌ ವಾಹನ ನೋಡಿದ ಈ ನಾಲ್ವರು ಭಯಗೊಂಡು ಕಾರಿನಲ್ಲಿ ಮುಂದೆ ಹೋಗಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಹೆಡ್‌ಕಾನ್‌ಸ್ಟೇಬಲ್‌ ಮಹೇಂದ್ರಗೌಡ ಮತ್ತೊಂದು ಹೊಯ್ಸಳ ವಾಹನ ಕರೆಸಿಕೊಂಡು ನಾಲ್ವರನ್ನು ಆ ವಾಹನದಲ್ಲಿ ಪೊಲೀಸ್‌ ಠಾಣೆಗೆ ಕಳುಹಿಸಿದ್ದಾರೆ.

ಮಾಮಾ ಮಚ್ಚ ಅಂತಿದ್ದವರೇ ಮಚ್ಚು ಬೀಸಿದ್ರು: ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮೂಟೆ ಕಟ್ಟಿದ್ರು..

ಈ ವೇಳೆ ಲಿಂಗೇಶ್‌ ಅವರು ಬಂದಿದ್ದ ಕಾರನ್ನು ಮಹೇಂದ್ರಗೌಡನೇ ಪೊಲೀಸ್‌ ಠಾಣೆಗೆ ತಂದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಬ್ಯಾಗ್‌ ಪರಿಶೀಲಿಸಿದಾಗ .40 ಲಕ್ಷ ಪತ್ತೆಯಾಗಿದೆ. ಲಿಂಗೇಶ್‌, ‘ನಾನು ಮನೆಯಿಂದ .50 ಲಕ್ಷ ಬ್ಯಾಗ್‌ನಲ್ಲಿ ಹಾಕಿಕೊಂಡು ಬಂದಿದ್ದೆ. ಇದೀಗ .40 ಲಕ್ಷ ಎನ್ನಲಾಗುತ್ತಿದೆ. ನಮ್ಮ ಕಾರನ್ನು ಠಾಣೆಗೆ ತಂದ ಹೆಡ್‌ ಕಾನ್‌ಸ್ಟೇಬಲ್‌ ಮಹೇಂದ್ರಗೌಡನೇ .10 ಲಕ್ಷ ಎತ್ತಿಕೊಂಡಿರುವ ಅನುಮಾವಿದೆ’ ಎಂದು ಚಂದ್ರಾಲೇಔಟ್‌ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪ್ರಕರಣ ದಾಖಲಿಸಿ ತನಿಖೆ ಮಾಡಿದಾಗ, ಮಹೇಂದ್ರಗೌಡ .10 ಲಕ್ಷ ಎಗರಿಸಿರುವುದು ಸಾಬೀತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!